
ಅಮೆರಿಕದ ಎಫ್-೩೫ ಯುದ್ಧ ವಿಮಾನವನ್ನು ತಿರಸ್ಕರಿಸಿ, ರಷ್ಯಾದ ಎಸ್.ಯು-೫೭ ಯುದ್ಧ ವಿಮಾನವನ್ನು ಖರೀದಿಸುವ ಭಾರತದ ನಿರ್ಧಾರದ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ. ಈ ಒಪ್ಪಂದದಿಂದ ಇಡೀ ಜಗತ್ತು ಬೆಚ್ಚಿ ಬಿದ್ದಿದೆ. ಈ ನಿರ್ಧಾರದಿಂದ ಅಮೆರಿಕಕ್ಕೆ ಸಿಡಿಲಾಘಾತವಾಗಿದೆ; ಏಕೆಂದರೆ ಅಮೆರಿಕ ತನ್ನ ಎಫ್-೩೫ ವಿಮಾನಗಳನ್ನು ಭಾರತಕ್ಕೆ ಮಾರಾಟ ಮಾಡಲು ಆಗ್ರಹದಲ್ಲಿತ್ತು. ಈ ಮೂಲಕ ಭಾರತವು ಯಾವುದೇ ನಿರ್ಧಾರವನ್ನು ಯಾವುದೇ ದೇಶದ ಒತ್ತಡಕ್ಕೆ ಮಣಿದು ತೆಗೆದುಕೊಳ್ಳದೆ, ಕೇವಲ ಸ್ವಾವಲಂಬನೆ ಮತ್ತು ಸ್ವಾಭಿಮಾನದ ಆಧಾರದಲ್ಲಿ ತೆಗೆದುಕೊಳ್ಳುತ್ತಿದೆ ಎಂದು ಜಗತ್ತಿಗೆ ತೋರ್ಪಡಿಸಿದೆ. ರಷ್ಯಾದ ಎಸ್.ಯು-೫೭ ಖರೀದಿಸುವ ನಿರ್ಧಾರವನ್ನು ಭಾರತ ತೆಗೆದುಕೊಂಡ ನಂತರ, ಅಮೆರಿಕವು ತಕ್ಷಣವೇ ಎಫ್-೩೫ ಯುದ್ಧ ವಿಮಾನಗಳ ಮಾರಾಟಕ್ಕಾಗಿ ಮಾತುಕತೆ ನಡೆಸುವ ‘ಲಾಕ್‌ಹೀಡ್ ಮಾರ್ಟಿನ್’ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಭಾರತಕ್ಕೆ ಕಳುಹಿಸಲು ನಿರ್ಧರಿಸಿತು; ಆದರೆ ಭಾರತವು ‘ಸದ್ಯ ನಮಗೆ ಸಮಯವಿಲ್ಲ’ ಎಂದು ಸ್ಪಷ್ಟಪಡಿಸಿ ಅವರ ಪ್ರವಾಸವನ್ನು ಮುಂದೂಡಿದೆ.
ಭಾರತವು ಅಮೆರಿಕದೊಂದಿಗೆ ಹಿಂದೆಂದೂ ಹೀಗೆ ಮಾಡಿರಲಿಲ್ಲ; ಆದರೆ ಈಗ ಭಾರತವು ಅಮೆರಿಕದ ದ್ವೇಷಪೂರಿತ ಕೃತ್ಯಗಳಿಗೆ ಆಸ್ಪದ ನೀಡದಿರುವ ಒಂದು ಸಂಕೇತವನ್ನೇ ಈ ಮೂಲಕ ನೀಡಿದೆ. ಅಮೆರಿಕಗೆ ಭಾರತದ ಬಗ್ಗೆ ಎಷ್ಟೇ ಒಳ್ಳೆಯ ಅಭಿಪ್ರಾಯ ಇದ್ದರೂ ಅದರ ಭಾರತದೊಂದಿಗಿನ ಯುದ್ಧನೀತಿ ಬೇರೆಯೇ ಇದೆ. ಒಂದೆಡೆ ಭಾರತದ ಶತ್ರು ಪಾಕಿಸ್ತಾನಕ್ಕೆ ಎಫ್-೧೬ ನಂತಹ ಯುದ್ಧ ವಿಮಾನ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ನೀಡಿ ಭಾರತದ ವಿರುದ್ಧ ಹೋರಾಡಲು ಪಾಕಿಸ್ತಾನಕ್ಕೆ ಸಹಾಯ ಮಾಡುವುದು, ಮತ್ತೊಂದೆಡೆ ಭಾರತದಿಂದ ಹೆಚ್ಚು ವ್ಯಾಪಾರಿ ಮತ್ತು ಶಸ್ತ್ರಾಸ್ತ್ರಗಳು, ವಿಮಾನಗಳನ್ನು ಮಾರಾಟ ಮಾಡುವ ಬಗ್ಗೆ ಮಾತುಕತೆ ನಡೆಸುವುದು, ಹೀಗಿದೆ ಅಮೆರಿಕದ ನೀತಿ. ಭಾರತವು ‘ನಮಗೆ ನಮ್ಮ ಅವಶ್ಯಕತೆಗಳ ಬಗ್ಗೆ ತಿಳಿದಿವೆ ಮತ್ತು ನಾವು ವಿದೇಶಿ ಒತ್ತಡಕ್ಕೆ ಮಣಿದು ಯಾವುದೇ ಒಪ್ಪಂದ ಮಾಡಿಕೊಳ್ಳಲ್ಲ’, ಎಂಬುದನ್ನು ಅಮೆರಿಕದಂತಹ ಅಹಂಕಾರಿ ದೇಶಕ್ಕೆ ಪರೋಕ್ಷವಾಗಿ ತೋರಿಸಿಕೊಟ್ಟಿದೆ. ಅಮೆರಿಕದ ವಿರುದ್ಧ ಭಾರತ ತೆಗೆದುಕೊಂಡ ನಿಲುವಿನ ಬಗ್ಗೆ ಜಗತ್ತಿನಾದ್ಯಂತ ಚರ್ಚೆ ನಡೆಯುತ್ತಿದೆ.
ರಷ್ಯಾದ ಎಸ್.ಯು-೫೭ ರ ಪ್ರಾಮುಖ್ಯತೆ
ರಷ್ಯಾದೊಂದಿಗೆ ಒಪ್ಪಂದವಾದರೆ, ಅದರ ಐದನೇ ತಲೆಮಾರಿನ ಸ್ಟೆಲ್ತ್ ಫೈಟರ್ ಎಸ್-೫೭ ಭಾರತೀಯ ವಾಯುಪಡೆಯ ಶಕ್ತಿಸ್ಥಾನವಾಗಲಿದೆ. ಭಾರತ ಇಂತಹ ಒಟ್ಟು ೨೪ ವಿಮಾನಗಳನ್ನು ಖರೀದಿಸುವ ಯೋಚನೆಯಲ್ಲಿದೆ. ಈ ಯುದ್ಧ ವಿಮಾನವು ಶತ್ರುಗಳ ರಾಡಾರ್ ವ್ಯವಸ್ಥೆಯ ಕಣ್ತಪ್ಪಿಸುತ್ತದೆ, ಹಾಗೆಯೇ ಅದರಲ್ಲಿ ಆಧುನಿಕ AI (ಕೃತಕ ಬುದ್ಧಿಮತ್ತೆ) ಆಧಾರಿತ ವ್ಯವಸ್ಥೆ, ಸೂಪರ್‌ಕ್ರೂಜ್ ಸಾಮರ್ಥ್ಯ ಮತ್ತು ಬಹು-ಗುರಿ ಆಕ್ರಮಣ ಮಾಡುವ ಸಾಮರ್ಥ್ಯ ಇವುಗಳೂ ಅದರ ವೈಶಿಷ್ಟ್ಯಗಳಾಗಿವೆ. ಈ ಯುದ್ಧ ವಿಮಾನದ ತಂತ್ರಜ್ಞಾನವನ್ನು ರಷ್ಯಾವು ಅತ್ಯಂತ ರಹಸ್ಯವಾಗಿಟ್ಟಿತ್ತು. ಈಗ ಭಾರತವು ಅದರ ಮೊದಲ ದೊಡ್ಡ ಅಂತಾರಾಷ್ಟ್ರೀಯ ಖರೀದಿದಾರನಾಗುವ ಸಿದ್ಧತೆಯಲ್ಲಿದೆ. ಇದರ ಜೊತೆಗೆ, ಭಾರತವು ರಷ್ಯಾದಿಂದ ‘ಎಸ್-೫೦೦ ಡಿಫೆನ್ಸ್ ಸಿಸ್ಟಮ್’ಅನ್ನು ಸಹ ಖರೀದಿಸಲಿದೆ. ರಷ್ಯಾವು ಈ ಉಪಕರಣವನ್ನು ಭಾರತವನ್ನು ಬಿಟ್ಟು ಬೇರೆ ಯಾವುದೇ ದೇಶಕ್ಕೆ ಮಾರಾಟ ಮಾಡದಿರಲು ನಿರ್ಧರಿಸಿದೆ. ಭಾರತವು ಉತ್ತಮ ಸ್ನೇಹಿತ ನಾಗಿರುವುದರಿಂದ ರಷ್ಯಾವು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಎಫ್-೩೫ ಗಿಂತ ಎಸ್-೫೭ ವಿಮಾನಗಳು ಉತ್ತಮ !
ಈ ಹಿಂದೆ ಅಮೆರಿಕದ ಎಫ್-೩೫ ವಿಮಾನಗಳನ್ನು ಖರೀದಿಸುವ ಬಗ್ಗೆ ಚರ್ಚೆ ಶುರುವಾದಾಗ, ಭಾರತವು ಅಮೆರಿಕದ ಮುಂದೆ ಕೆಲವು ಷರತ್ತುಗಳನ್ನು ಇಟ್ಟಿತ್ತು. ‘ಈ ವಿಮಾನಗಳನ್ನು ಭಾರತದಲ್ಲಿ ತಯಾರಿಸಬೇಕು, ಹಾಗೆಯೇ ಅಮೆರಿಕದಲ್ಲಿ ಯಾವ ಬೆಲೆಗೆ ಈ ವಿಮಾನಗಳನ್ನು ಮಾರಾಟ ಮಾಡಲಾಗುತ್ತದೆಯೋ, ಅದೇ ಬೆಲೆಗೆ ಭಾರತಕ್ಕೂ ಈ ವಿಮಾನಗಳು ಮತ್ತು ಅದರ ತಂತ್ರಜ್ಞಾನವನ್ನು ಹಸ್ತಾಂತರಿಸಬೇಕು’ ಎಂಬುದು ಈ ಕೆಲವು ಷರತ್ತುಗಳಾಗಿದ್ದವು; ಆದರೆ ಈ ಷರತ್ತುಗಳು ಅಮೆರಿಕಕ್ಕೆ ಒಪ್ಪಿಗೆಯಾಗಲಿಲ್ಲ. ಆದ್ದರಿಂದ ಹಲವು ದಿನಗಳಿಂದ ಈ ವಿಮಾನಗಳ ಖರೀದಿಯ ಬಗ್ಗೆ ಚರ್ಚೆ ಮುಂದುವರಿಯುತ್ತಿರಲಿಲ್ಲ. ಅಂತಿಮವಾಗಿ, ಭಾರತವು ರಷ್ಯಾದ ಮೇಲೆ ವಿಶ್ವಾಸವಿಟ್ಟು ಎಸ್-೫೭ ಯುದ್ಧ ವಿಮಾನಗಳನ್ನು ಖರೀದಿಸುವ ನೀತಿಯನ್ನು ನಿಶ್ಚಯಿಸಿತು. ಈ ಯುದ್ಧ ವಿಮಾನ ಗಳು ಅಮೆರಿಕದ ಎಫ್-೩೫ ಗಿಂತ ಹೆಚ್ಚು ಉನ್ನತ ಮತ್ತು ತಂತ್ರಜ್ಞಾನದಲ್ಲಿ ಪ್ರಗತಿ ಹೊಂದಿವೆ. ಭಾರತ ಯಾರ ಮೇಲೆಯೂ ಅವಲಂಬಿತವಾಗಿಲ್ಲ. ಯಾವುದೇ ಒಪ್ಪಂದವನ್ನು ತನ್ನದೇ ಆದ ಷರತ್ತುಗಳ ಮೇಲೆ ಮಾಡಿಕೊಳ್ಳÀÄತ್ತದೆ. ಒಂದು ವೇಳೆ ಅಮೆರಿಕ ತಂತ್ರಜ್ಞಾನದ ವಿನಿಮಯ ಮಾಡಿಕೊಳ್ಳದಿದ್ದರೆ, ಭಾರತವು ಅದರ ಯುದ್ಧ ವಿಮಾನಗಳನ್ನು ಅರ್ಧ ಬೆಲೆಗೂ ಖರೀದಿಸುವುದಿಲ್ಲ ಎಂಬ ದಿಟ್ಟತನವನ್ನು ಭಾರತ ತೋರಿಸಿದೆ ಮತ್ತು ಇದೇ ನಿಜವಾದ ಯುದ್ಧನೀತಿಯಾಗಿದೆ.
ಭಾರತದ ಬಗ್ಗೆ ಅಮೆರಿಕದ ದ್ವಿಮುಖ ನೀತಿ !
ಚೀನಾವನ್ನು ಮಣಿಸುವ ಉದ್ದೇಶದಿಂದ ಎಫ್-೩೫ ವಿಮಾನ ವನ್ನು ಅಮೆರಿಕವು ಭಾರತಕ್ಕೆ ನೀಡಲು ಮುಂದಾಗಿದ್ದರೂ, ಅದು ಅತಿ ದುಬಾರಿಯಾಗಿದೆ. ಅದಕ್ಕೆ ಹೋಲಿಸಿದರೆ ಅಗ್ಗದ ರಷ್ಯನ್ ವಿಮಾನಗಳ ಆಯ್ಕೆ ಭಾರತದ ಮುಂದಿತ್ತು. ಎಫ್-೩೫ ವಿಮಾನಗಳು ಹಲವು ಬಾರಿ ಅಪಘಾತಕ್ಕೊಳಗಾಗಿವೆ. ಹಾಗಾಗಿ ಇದರ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡಿದೆ. ಈ ವಿಮಾನಗಳನ್ನು ಬಳಸಲು ತಗಲುವ ವೆಚ್ಚ ಹೆಚ್ಚಿದೆ ಮತ್ತು ಕಳೆದ ಕೆಲವು ವರ್ಷಗಳಲ್ಲಿ ಅವುಗಳಲ್ಲಿ ತಾಂತ್ರಿಕ ತೊಂದರೆಗಳು ಕಂಡುಬಂದಿವೆ. ಯುದ್ಧ ವಿಮಾನಗಳ ಖರೀದಿ ಇರಲಿ ಅಥವಾ ವ್ಯಾಪಾರನೀತಿಯಲ್ಲಿ ಇರಲಿ, ಇಲ್ಲಿಯ ವರೆಗಿನ ಅಮೆರಿಕವು ಭಾರತದೊಂದಿಗೆ ತಾರತಮ್ಯ ಮಾಡಿದೆ, ಹಾಗೆಯೇ ಅಮೆರಿಕ ಕುತಂತ್ರದಿಂದ ಭಾರತವನ್ನು ಮಣಿಸಲು ಪ್ರಯತ್ನಿಸುತ್ತಿರುತ್ತದೆ.
ಭಾರತವು ೧೯೯೦ ರ ದಶಕದಿಂದ ಭಯೋತ್ಪಾದನೆಯ ಸಂಕಷ್ಟವನ್ನು ಅನುಭವಿಸುತ್ತಿದೆ. ಭಾರತವು ಸಾವಿರಾರು ಅಮಾಯಕ ನಾಗರಿಕರನ್ನು ಇದರಲ್ಲಿ ಕಳೆದುಕೊಂಡಿದೆ. ಅಮೆರಿಕದಲ್ಲಿ ೨೦೦೧ ರಲ್ಲಿ ೯/೧೧ ಆಕ್ರಮಣವಾಯಿತು. ಅನಂತರ ಅಮೆರಿಕವು ಸಂಯಮವನ್ನು ಕಾಯ್ದುಕೊಂಡಿತ್ತೇ ? ಇರಾನ್‌ನ ಉನ್ನತ ಸೇನಾಧಿಕಾರಿ ಖಾಸಿಂ ಸುಲೇಮಾನಿಯನ್ನು ಡ್ರೋನ್ ಆಕ್ರಮಣದಲ್ಲಿ ಹತ್ಯೆ ಮಾಡುವಾಗ ಯೋಚಿಸಿತ್ತೇ ? ಅಮೆರಿಕದ ಜನರ ಜೀವ ಅಪಾಯದಲ್ಲಿದ್ದಾಗ, ಅಮೆರಿಕ ಎಂದಾದರೂ ಸಂಯಮ ತೋರಿಸಿತ್ತೇ ? ಆದರೆ ಭಾರತದ ಮೇಲೆ ಭಯೋತ್ಪಾದಕ ಆಕ್ರಮಣವಾದಾಗ ಅಮೆರಿಕವು ಭಾರತಕ್ಕೆ ಸಂಯಮವಿಡಲು ಸಲಹೆ ನೀಡುತ್ತದೆ. ಇಡೀ ಜಗತ್ತು ಭಯೋತ್ಪಾದನೆಯ ನೆರಳಿನಲ್ಲಿದೆ ಎಂದು ಅಮೆರಿಕಕ್ಕೆ ತಿಳಿದಿದೆ. ಪಾಕಿಸ್ತಾನವೇ ಅದರ ಪ್ರಾಯೋಜಕ ಎಂದು ಸಹ ಅದಕ್ಕೆ ಗೊತ್ತಿದೆ. ಆದರೂ ಅಮೆರಿಕವು ಪಾಕಿಸ್ತಾನಕ್ಕೆ ಎಫ್-೧೬ ಯುದ್ಧ ವಿಮಾನಗಳನ್ನು ಏಕೆ ನೀಡಿತು ? ಇದೇ ವಿಮಾನಗಳನ್ನು ಪಾಕಿಸ್ತಾನವು ೨೦೧೯ ರಲ್ಲಿ ಭಾರತದ ವಿರುದ್ಧ ಬಳಸಿಕೊಂಡಿತ್ತು. ಮೂಲತಃ ಅಮೆರಿಕಕ್ಕೆ ಯಾರೊಂದಿಗೂ ಯಾವುದೇ ಸಂಬಂಧ ಇಲ್ಲ. ಅದು ಯಾವಾಗಲೂ ತನ್ನ ಲಾಭ ಮತ್ತು ಹಿತಾಸಕ್ತಿಯನ್ನು ನೋಡುತ್ತದೆ. ಚೀನಾದ ಹೆಚ್ಚುತ್ತಿರುವ ಪ್ರಾಬಲ್ಯಕ್ಕೆ ಕಡಿವಾಣ ಹಾಕಲು ಅಮೆರಿಕಕ್ಕೆ ಭಾರತದ ಅಗತ್ಯವಿದೆ. ಆದ್ದರಿಂದ ಭಾರತವು ಸ್ವಾರ್ಥಿ ಅಮೆರಿಕದ ಕುತಂತ್ರಗಳನ್ನು ಗುರುತಿಸಿ, ಅದಕ್ಕೆ ಅದರ ಭಾಷೆಯಲ್ಲಿಯೇ ಪಾಠ ಕಲಿಸುವ ಅಗತ್ಯವಿದೆ. ಹೀಗೆ ಮಾಡಿದಾಗಲೇ ಅಮೆರಿಕವು ಸರಿದಾರಿಗೆ ಬರಬಹುದು. ಭಾರತವು ಮುತ್ಸದ್ದಿತನವನ್ನು ಬಳಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿರುವುದು ಒಳ್ಳೆಯದೇ; ಆದರೆ ಇದರ ಜೊತೆಗೆ ಆರ್ಥಿಕವಾಗಿ ಮತ್ತು ಸಾಮರಿಕ ದೃಷ್ಟಿಯಿಂದ ಸುಸಜ್ಜಿತವಾಗುವುದು, ಭಾರತಕ್ಕೆ ಮುಂಬರುವ ದಿನಗಳಲ್ಲಿ ಸವಾಲಾಗಲಿದೆ. ಒಮ್ಮೆ ಭಾರತವು ಸರ್ವಾಂಗೀಣವಾಗಿ ಸುಸಜ್ಜಿತವಾದರೆ, ಅದಕ್ಕೆ ಅಮೆರಿಕ ಅಥವಾ ರಷ್ಯಾ ಯಾರನ್ನೂ ಅವಲಂಬಿಸಬೇಕಾದ ಅಗತ್ಯ ಇರುವುದಿಲ್ಲ. ಆ ದಿನ ಆದಷ್ಟು ಬೇಗ ಬರಲು ಸರಕಾರ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕ !
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !
ಟೆಕ್ಸಾಸ್ (ಅಮೆರಿಕ) ನಲ್ಲಿ ಭಾರತದ ರಾಷ್ಟ್ರಧ್ವಜ ಹರಿದ ಅಮೆರಿಕನ್ ಯುವಕ
ಸುಪ್ರೀಂ ಕೋರ್ಟ್ಗೆ 5 ಹೊಸ ನ್ಯಾಯಾಧೀಶರ ಸೇರ್ಪಡೆ; ಒಂದು ಹುದ್ದೆ ಮಾತ್ರ ಖಾಲಿ!