|

ನವ ದೆಹಲಿ – ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಇಸ್ಲಾಮಿಕ್ ಕಟ್ಟರವಾದಿ ಸಂಘಟನೆಗಳು ಟಾಟಾ ಸಮೂಹದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ‘ಇಂಡಿಯನ್ ಪೀಪಲ್ ಇನ್ ಸಾಲಿಡಾರಿಟಿ ವಿತ್ ಪ್ಯಾಲೆಸ್ಟೈನ್’ (ಐ.ಪಿ.ಎಸ್.ಪಿ.) ಎಂಬ ಸಂಘಟನೆಯು ಇದರ ನೇತೃತ್ವ ವಹಿಸಿದೆ. ಈ ಸಂಘಟನೆಯು ಹಮಾಸ್ ಮತ್ತು ಅನೇಕ ಪ್ಯಾಲೆಸ್ಟೈನ್ ಬೆಂಬಲಿಗರನ್ನು ಬೆಂಬಲಿಸುತ್ತದೆ. ಟಾಟಾ ಸಮೂಹವು ಇಸ್ರೇಲನೊಂದಿಗೆ ಹೊಂದಿರುವ ವ್ಯಾಪಾರ ಸಂಬಂಧಗಳ ವಿರುದ್ಧ ಈ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ. ಟಾಟಾ ಸಮೂಹದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಲಾಗಿದೆ. ದೇಶದ ವಿವಿಧೆಡೆ ಈ ಆಂದೋಲನ ನಡೆಯುತ್ತಿದ್ದು, ಇದರ ಉದ್ದೇಶ ಪ್ಯಾಲೆಸ್ಟೈನ್‌ಗೆ ಬೆಂಬಲ ನೀಡುವುದಾಗಿದೆ.

1. ಕೇರಳದ ಕ್ಯಾಲಿಕಟನಲ್ಲಿ ಮೇ 28 ರಂದು ಜಮಾತ್-ಎ-ಇಸ್ಲಾಮಿ ಹಿಂದ್ ವಿದ್ಯಾರ್ಥಿ ಶಾಖೆಯ ‘ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್’ (‘ಎಸ್.ಐ.ಒ.’) ಟಾಟಾ ಒಡೆತನದ ಫ್ಯಾಷನ್ ಬ್ರ್ಯಾಂಡ್ ‘ಝುಡಿಯೋ’ ಅಂಗಡಿಯ ಹೊರಗೆ ಪ್ರತಿಭಟನೆ ನಡೆಸಿತ್ತು.
2. ಈ ಸಂಘಟನೆಗಳು ದೆಹಲಿ, ಚಂಡೀಗಢ, ರೋಹತಕ್, ಪಾಟಲಿಪುತ್ರ, ಮುಂಬಯಿ, ಪುಣೆ, ವಿಜಯವಾಡ ಮುಂತಾದ ದೇಶದ ವಿವಿಧೆಡೆ ಟಾಟಾ ಸಮೂಹದ ಒಡೆತನದ ಬ್ರ್ಯಾಂಡ್‌ಗಳ ಮಳಿಗೆಗಳ ಹೊರಗೆ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಗಳನ್ನು ನಡೆಸಿದವು. ಅಲ್ಲದೆ, ಅವರು ಆನ್‌ಲೈನ್ ಅಭಿಯಾನವನ್ನೂ ಪ್ರಾರಂಭಿಸಿದರು. ಇದರ ಮೂಲಕ ಟಾಟಾ ಸಮೂಹದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಲಾಯಿತು.
ಟಾಟಾ ಸಮೂಹದ ವಿರುದ್ಧವೇ ಏಕೆ ಪ್ರತಿಭಟನೆ?
ಎಸ್.ಐ.ಒ. ಸಂಘಟನೆಯ ಕ್ಯಾಲಿಕಟ್ ಅಧ್ಯಕ್ಷ ಮಹಮ್ಮದ್ ಶಫಾಕ್ ಅವರ ಪ್ರಕಾರ, ಟಾಟಾ ಗ್ರೂಪ್ ಇಸ್ರೇಲ್ ಗೆ ಶಸ್ತ್ರಸಜ್ಜಿತ ವಾಹನಗಳನ್ನು ಪೂರೈಸುತ್ತದೆ. ಇದನ್ನು ಗಾಜಾದಲ್ಲಿ ಮಾತ್ರ ಬಳಸಲಾಗುತ್ತದೆ.
ಟಾಟಾ ಕಾರ್ಖಾನೆಗಳಲ್ಲಿ ತಯಾರಿಸಿದ ಕ್ಷಿಪಣಿಗಳನ್ನು ಇಸ್ರೇಲ್ ಗಾಜಾದಲ್ಲಿ ಬಳಸುತ್ತಿದೆ, ಇದು ಭಾರತೀಯ ಬ್ರ್ಯಾಂಡ್ ಗಳಿಗೆ ಅತ್ಯಂತ ಕಳವಳಕಾರಿ ವಿಷಯವಾಗಿದೆ. ಅದು ಗಾಜಾ ಆಗಿರಲಿ ಅಥವಾ ಅಮೆರಿಕ ಆಗಿರಲಿ ಎಸ್.ಐ.ಒ. ದ ವಿರುದ್ಧವಾಗಿದೆ. |
3. ಟಾಟಾ ಮತ್ತು ಇತರ ಬ್ರ್ಯಾಂಡ್ ಗಳ ವಿರುದ್ಧದ ದೇಶವ್ಯಾಪಿ ಬಹಿಷ್ಕಾರ ಅಭಿಯಾನವು ಇಸ್ರೇಲ್ ವಿರುದ್ಧ ನಡೆಯುತ್ತಿರುವ ‘ಬಿ.ಡಿ.ಎಸ್.’ (ಬಾಯ್‌ಕಾಟ್, ಡಿವೆಸ್ಟ್‌ಮೆಂಟ್, ಸ್ಯಾಂಕ್ಷನ್ಸ್, ಅಂದರೆ ಬಹಿಷ್ಕಾರ, ಹೂಡಿಕೆ ಹಿಂತೆಗೆತ ಮತ್ತು ನಿರ್ಬಂಧಗಳು) ಚಳುವಳಿಯಿಂದ ಪ್ರೇರಿತವಾಗಿದೆ ಎಂದು ಹೇಳಲಾಗಿದೆ. ಈ ಚಳುವಳಿಯನ್ನು ಯಹೂದಿ ವಿರೋಧಿ ಎಂದು ಪರಿಗಣಿಸಲಾಗಿದೆ.
ಸಂಪಾದಕೀಯ ನಿಲುವು
|



‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein