ಭಾರತದ ಆಯೋಗದ ಕಾರ್ಯಕ್ರಮ ರದ್ದುಪಡಿಸಲು ಪಾಕಿಸ್ತಾನದ ಮನವಿಯನ್ನು ತಿರಸ್ಕಾರ

ಕೌಲಾಲಂಪುರ್ (ಮಲೇಷ್ಯಾ) – ಭಾರತೀಯ ಸಂಸದರ ಸರ್ವಪಕ್ಷಗಳ ನಿಯೋಗಗಳು ವಿವಿಧ ದೇಶಗಳಿಗೆ ಭೇಟಿ ನೀಡಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಮತ್ತು ‘ಆಪರೇಷನ್ ಸಿಂದೂರ್’ ಕುರಿತು ಭಾರತದ ನಿಲುವನ್ನು ವಿವರಿಸುತ್ತಿವೆ. ಭಾರತದ ಒಂದು ನಿಯೋಗ ಇಸ್ಲಾಮಿಕ್ ರಾಷ್ಟ್ರ ಮಲೇಷ್ಯಾಕ್ಕೆ ಭೇಟಿ ನೀಡುತ್ತಿದ್ದಾಗ ಪಾಕಿಸ್ತಾನ ಅದಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿತು. ‘ಕಾಶ್ಮೀರ ವಿಷಯ ವಿಶ್ವಸಂಸ್ಥೆಯಲ್ಲಿದೆ. ಆದ್ದರಿಂದ, ಭಾರತೀಯ ನಿಯೋಗದ ಎಲ್ಲಾ ಪ್ರಸ್ತಾವಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕು’ ಎಂದು ಪಾಕಿಸ್ತಾನ ಮಲೇಷ್ಯಾವನ್ನು ವಿನಂತಿಸಿತು; ಆದರೆ ಮಲೇಷ್ಯಾ ಪಾಕಿಸ್ತಾನದ ವಿನಂತಿಯನ್ನು ನಿರ್ಲಕ್ಷಿಸಿತು.
‘ನಾವು ಇಸ್ಲಾಮಿಕ್ ರಾಷ್ಟ್ರ. ನೀವು ಭಾರತೀಯ ನಿಯೋಗದ ಮಾತನ್ನು ಕೇಳಬೇಡಿ. ಮಲೇಷ್ಯಾದಲ್ಲಿ ಅವರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ’ ಎಂದು ಪಾಕಿಸ್ತಾನಿ ರಾಯಭಾರ ಕಚೇರಿ ಮಲೇಷ್ಯಾ ಸರಕಾರಕ್ಕೆ ತಿಳಿಸಿತು; ಆದರೆ ಸರಕಾರ ಅವರ ಮಾತನ್ನು ಕೇಳಲಿಲ್ಲ. 9 ಸದಸ್ಯರ ನಿಯೋಗಕ್ಕೆ ಎಲ್ಲಾ 10 ಪ್ರಸ್ತಾವಿತ ಕಾರ್ಯಕ್ರಮಗಳನ್ನು ಆಯೋಜಿಸಲು ಸರಕಾರ ಅನುಮತಿ ನೀಡಿತು.
ಸಂಪಾದಕೀಯ ನಿಲುವು‘ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಮತ್ತು ಸೌಹಾರ್ದತೆ ಇರಬೇಕು’ ಎಂದು ಹಗಲುಗನಸು ಕಾಣುವ ಭಾರತದ ಮಹನೀಯರು ಈಗ ಇದರ ಬಗ್ಗೆ ಏನು ಹೇಳುತ್ತಾರೆ? ಪಾಕಿಸ್ತಾನವು ಭಾರತವನ್ನು ಇಸ್ಲಾಂನ ಶತ್ರು ಎಂದು ನೋಡುತ್ತದೆ ಎಂಬುದು ಈ ಉದಾಹರಣೆಯಿಂದ ಸ್ಪಷ್ಟವಾಗುತ್ತದೆ. |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು