
೧. ಭವಿಷ್ಯದಲ್ಲಿ ಘಟಿಸುವ ಘಟನೆಗಳ ಬಗ್ಗೆ ಮುಂಚಿತವಾಗಿ ತಿಳಿದುಕೊಂಡು ಮಹರ್ಷಿಗಳು ಹೇಳಿದ ಉಪಾಯಗಳು ‘ಒಮ್ಮೆ ಮಹರ್ಷಿಗಳು ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ವಾಸಿಸುತ್ತಿರುವ ಕಾಂಚಿಪುರಮ್ (ತಮಿಳುನಾಡು)ನ ಸೇವಾಕೇಂದ್ರದ ಸುತ್ತಲೂ ಆಕಸ್ಮಿಕವಾಗಿ ಕೆಂಪುಮಣ್ಣಿನ ಮಂಡಲವನ್ನು ಹಾಕಲು ಹೇಳಿದರು ಮತ್ತು ಆ ಸೇವಾಕೇಂದ್ರದ ಮುಖ್ಯ ಬಾಗಿಲಿನ ಮಧ್ಯಭಾಗದಲ್ಲಿ ಅನಾನಸನ್ನು ಕಟ್ಟಿಡಲು ಹೇಳಿದರು. ಅವರು ‘ಏಕೆ ಹೀಗೆ ಮಾಡಲು ಹೇಳಿದರು ?’, ಎಂಬುದರ ಬಗ್ಗೆ ನಮಗೆ ತಿಳಿಯಲಿಲ್ಲ.
೨. ಕಾಂಚೀಪುರಮ್ ಸೇವಾಕೇಂದ್ರದ ಮುಂಭಾಗದ ರಸ್ತೆಯ ಮೇಲೆ ಕಪ್ಪು ದಾರದಿಂದ ಸುತ್ತಿದಂತಹ ಒಂದು ವಸ್ತು ಕಾಣಿಸುವುದು ಮಹರ್ಷಿಗಳು ಹೇಳಿದಂತೆ ನಾವು ಎರಡೂ ಉಪಾಯಗಳನ್ನು ಮಾಡಿದೆವು. ಮರುದಿನ ನಾವೆಲ್ಲರೂ ಸೇವೆಗಾಗಿ ಸೇವಾಕೇಂದ್ರದಿಂದ ಹೊರಗೆ ಬಂದೆವು. ಆ ದಿನ ಸಾಯಂಕಾಲ ಸುಮಾರು ೬ ಗಂಟೆಗೆ ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೮, ವಯಸ್ಸು ೪೨ ವರ್ಷ) ಇವರಿಗೆ ಕಾಂಚೀಪುರಂ ಸೇವಾಕೇಂದ್ರದ ಮುಂಭಾಗದ ರಸ್ತೆಯ ಮೇಲೆ ಕಪ್ಪು ದಾರದಿಂದ ಸುತ್ತಿದಂತೆ ಕಾಣುವ ಒಂದು ವಸ್ತು ಕಾಣಿಸಿತು. ನಮಗೆ ಆ ವಸ್ತುವಿನ ಕಡೆಗೆ ನೋಡಿ ಒಳ್ಳೆಯದೆನಿಸುತ್ತಿರಲಿಲ್ಲ. ನಿಜ ಹೇಳುವುದಾದರೆ ಕಾಂಚೀಪುರಂ ಸೇವಾಕೇಂದ್ರವು ಕೊನೆಯ ಓಣಿಯಲ್ಲಿರುವುದರಿಂದ ಇಲ್ಲಿ ಸಹಜವಾಗಿ ಯಾರೂ ಬರುವುದಿಲ್ಲ. ‘ಆ ವಸ್ತು ಇಲ್ಲಿ ಹೇಗೆ ಬಂದಿತು ?’, ಎಂಬುದು ನಮ್ಮ ಗಮನಕ್ಕೆ ಬರಲಿಲ್ಲ.
೩. ಮಹರ್ಷಿಗಳು ಅಭಯ ನೀಡುವುದು ನಂತರ ನಾವು ಮಹರ್ಷಿಗಳಿಗೆ (ಪೂ. ಡಾ. ಓಂ ಉಲಗನಾಥನ್ ಇವರಿಗೆ) ಸಂಚಾರವಾಣಿಯಿಂದ ಹೇಳಿದಾಗ ಅವರು, ‘ಇದು ಮಾಟದ ಪ್ರಕಾರವಾಗಿದೆ; ಆದರೆ ನಾವು ಮುಂಚಿತವಾಗಿ ಉಪಾಯ ಮಾಡಿದ್ದರಿಂದ ಮಾಟದ ಯಾವುದೇ ಪರಿಣಾಮವಾಗಲಾರದು. ಕಾಳಜಿ ಮಾಡಬೇಡಿ. ಅದನ್ನು ವಿಸರ್ಜಿಸಿ’ ಎಂದು ಹೇಳಿದರು. ‘ಮಹರ್ಷಿಗಳು ತ್ರಿಕಾಲಜ್ಞಾನಿಗಳಾಗಿದ್ದಾರೆ’, ಎಂಬುದು ಗಮನಕ್ಕೆ ಬಂದಿತು. ಅವರು ಮುಂಚಿತವಾಗಿಯೇ ಉಪಾಯ ಮಾಡಲು ಹೇಳಿದ್ದರಿಂದ ಯಾರಿಗೂ ತೊಂದರೆಯಾಗಲಿಲ್ಲ.’
– ಶ್ರೀ. ವಿನೀತ ದೇಸಾಯಿ, ತಿರುವಣ್ಣಾಮಲೈ, ತಮಿಳುನಾಡು. (೧೩.೧೨.೨೦೨೪)
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !