
ಪರಶುರಾಮ ಭೂಮಿ ಗೋವಾದಲ್ಲಿ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವು ಉತ್ಸಾಹ, ಭಾವಪೂರ್ಣ ಮತ್ತು ಕ್ಷಾತ್ರತೇಜಯುಕ್ತ ವಾತಾವರಣದಲ್ಲಿ ನಡೆಯಿತು. ಈ ಮಹೋತ್ಸವವು ಅದ್ವಿತೀಯ, ದೈವೀ ಮತ್ತು ಹಿಂದೂಗಳಿಗಾಗಿ ನಿಜವಾದ ಅರ್ಥದಲ್ಲಿ ಮಾರ್ಗದರ್ಶಕವಾಗಿತ್ತು. ರಾಷ್ಟ್ರ ಮತ್ತು ಧರ್ಮಕ್ಕೆ ಸಂಬಂಧಿಸಿದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಿರುವ ಗಣ್ಯರು ವೀರಶ್ರೀಯುಕ್ತ ಮತ್ತು ಧ್ಯೇಯನಿಷ್ಠ ಮಾರ್ಗದರ್ಶನ ಮಾಡಿ ಭಾಗವಹಿಸಿದ್ದ ಹಿಂದೂಗಳಲ್ಲಿ ಕ್ಷಾತ್ರತೇಜವನ್ನು ಜಾಗೃತಗೊಳಿಸಿದರು. ಛತ್ರಪತಿ ಶಿವಾಜಿ ಮಹಾರಾಜರ ಕಾಲದ ಯುದ್ಧಕಲೆಗಳ ಪ್ರದರ್ಶನ, ಆಗಿನ ಶಸ್ತ್ರ ಪ್ರದರ್ಶನ, ಸನಾತನ ಧರ್ಮದ ಧ್ವಜವನ್ನು ಹಾರಿಸುವುದು, ‘ಯುದ್ಧಾಯ ಕೃತ ನಿಶ್ಚಯ’ ಎಂಬ ವಿಷಯದ ಕುರಿತಾದ ಕೀರ್ತನೆ, ‘ಹಿಂದೂ ರಾಷ್ಟ್ರ ರತ್ನ’, ‘ಸನಾತನ ಧರ್ಮಶ್ರೀ’ ಪ್ರಶಸ್ತಿಗಳ ವಿತರಣೆ ಇವುಗಳಿಂದಾಗಿ ನಿಜವಾದ ಅರ್ಥದಲ್ಲಿ ಸನಾತನ ರಾಷ್ಟ್ರದ ಸ್ಥಾಪನೆಯ ಈ ಶಂಖನಾದವಾಗಿದೆ. ಯುದ್ಧವನ್ನು ಪ್ರಾರಂಭಿಸುವ ಸಮಯ ಬಂದಾಗ ಮಾತ್ರ ಶಂಖನಾದ ಮಾಡಲಾಗುತ್ತದೆ. ಯುದ್ಧವನ್ನು ಪ್ರಾರಂಭಿಸುವ ಸಮಯ ಬರುವುದು ಯಾವಾಗೆಂದರೆ, ಒಂದು ಮಾನವ ಸಮುದಾಯದ ಮೇಲೆ ಅತ್ಯಾಚಾರಗಳು ಮಿತಿಮೀರಿದಾಗ ಮತ್ತು ಅಸ್ತಿತ್ವಕ್ಕಾಗಿ ಹೋರಾಡಬೇಕಾದಾಗ. ಹಾಗೆಯೇ, ಎಲ್ಲಾ ಹಂತಗಳಲ್ಲಿ ಸಿದ್ಧತೆಗಳು ಪೂರ್ಣಗೊಂಡಾಗ ಮಾತ್ರ ಯುದ್ಧವನ್ನು ಮಾಡಬಹುದು. ಇದರಿಂದ ಈಗ ಕಾಲವು ಸನ್ನಿಹಿತವಾಗಿದೆ ಎಂದು ತಿಳಿಯುತ್ತದೆ. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ೧೯೯೮ ರಲ್ಲಿಯೇ, ೨೦೨೫ ರಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯು ಪ್ರಾರಂಭವಾಗುತ್ತದೆ ಎಂದು ಹೇಳಿದ್ದರು. ಅದರ ಪ್ರತ್ಯಕ್ಷ ಅನುಭವವು ಸನಾತನ ರಾಷ್ಟ್ರ ಮಹೋತ್ಸವದ ನಿಮಿತ್ತದಿಂದ ಬಂದಿದೆ. ಇದು ಒಂದು ಪ್ರಾರಂಭವಾಗಿದೆ ಮತ್ತು ಭವಿಷ್ಯದಲ್ಲಿ ಇದು ವ್ಯಾಪಕ ಚಳುವಳಿಯಾಗಿ ರೂಪಾಂತರಗೊಳ್ಳಬಹುದು. ‘ಹಿಂದೂ ರಾಷ್ಟ್ರ ಅಥವಾ ಸನಾತನ ರಾಷ್ಟ್ರ ಬೇಕು’, ‘ಒಳ್ಳೆಯ ವ್ಯವಸ್ಥೆ ಬೇಕು’, ‘ಸುರಾಜ್ಯ ಬೇಕು’ ಎಂಬ ಇಚ್ಛೆಯು ಪ್ರತಿಯೊಬ್ಬ ಹಿಂದೂವಿಗೂ ಇರುತ್ತದೆ, ಹಾಗೆಯೇ ಅದು ಇರುವುದು ಆವಶ್ಯಕವೂ ಆಗಿದೆ; ಆದರೆ ಅದಕ್ಕಾಗಿ ಏನು ಮಾಡಬೇಕು ?
ಎಂಬ ಸ್ಪಷ್ಟತೆ ಹಿಂದೂ ಸಮಾಜಕ್ಕೆ, ಹಿಂದೂ ಜನರಿಗೆ ಇರುವುದು ಆವಶ್ಯಕವಾಗಿದೆ. ಸಂತರು ಮತ್ತು ಗಣ್ಯರು ಮಾಡಿದ ಭಾಷಣ ಗಳಲ್ಲಿ, ಪೂ. ಸ್ವಾಮಿ ಗೋವಿಂದದೇವ ಗಿರಿ ಅವರು, ಈಗ ಶಾಸ್ತ್ರದೊಂದಿಗೆ ಶಸ್ತ್ರ ತರಬೇತಿಯೂ ಆವಶ್ಯಕ ಎಂದು ಹೇಳಿದರು. ಕೇವಲ ಜಪ, ಚಿಂತನೆ ಮಾಡುವುದರಿಂದಲ್ಲ, ಬದಲಾಗಿ ತರಬೇತಿ ಪಡೆಯುವುದು ಆವಶ್ಯಕವಾಗಿದೆ. ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ ಅವರು ಬ್ರಿಟಿಷ್ ಕಾಲದ ಮತ್ತು ನಂತರ ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಆದ ಕಾನೂನುಗಳು ನಿಜವಾಗಿ ಹಿಂದೂ ಧರ್ಮ, ಪರಂಪರೆ, ಹಿಂದೂ ಜನರ ವಿರುದ್ಧ ಆದ ಕಾನೂನುಗಳಾಗಿದ್ದು ‘ತಾರೀಖ್ ಪೇ ತಾರೀಖ್’ ಬದಲಾಯಿಸಲು ಪ್ರಸ್ತುತ ಕಾನೂನು ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಹಿಂದೂ ಧರ್ಮಾಧಾರಿತ ಹೊಸ ಕಾನೂನುಗಳನ್ನು ನಿರ್ಮಿಸಬೇಕು ಎಂದು ಹೇಳಿದರು. ಸುಪ್ರಸಿದ್ಧ ಕಥಾವಾಚಕ ಪೂ. ದೇವಕೀನಂದನ ಠಾಕೂರ ಅವರು ‘ಸನಾತನ ಬೋರ್ಡ್’ನ ಬೇಡಿಕೆಯನ್ನು ಮಾಡಿದರು, ‘ಸುದರ್ಶನ ನ್ಯೂಸ್’ ವಾರ್ತಾವಾಹಿನಿಯ ಮುಖ್ಯ ಸಂಪಾದಕರಾದ ಡಾ. ಸುರೇಶ ಚವ್ಹಾಣಕೆ ಅವರು ತಮ್ಮ ವಾರ್ತಾವಾಹಿನಿಯ ಮೂಲಕ ಮಾಡುತ್ತಿರುವ ಹಿಂದುತ್ವ ಪ್ರಚಾರದ ಕಾರ್ಯವನ್ನು ಹೆಚ್ಚಿಸುವುದಾಗಿ ಹೇಳಿದರು, ಕೆಲವರು ಗೋರಕ್ಷಣೆಗಾಗಿ ಆಹ್ವಾನಿಸಿದರು, ಹಾಗೆಯೇ ಕೆಲವರು ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವಂತೆ ಬೇಡಿಕೆ ಯನ್ನೂ ಮಾಡಿದರು. ಒಟ್ಟಾರೆ, ಈ ವೇಳೆ ಅತ್ಯಂತ ವ್ಯಾಪಕ ಸ್ವರೂಪದಲ್ಲಿ ನಡೆದ ಈ ಮಹೋತ್ಸವದಿಂದ ಖಂಡಿತವಾಗಿಯೂ ಹಿಂದೂಗಳಿಗೆ ಕೃತಿಗಾಗಿ ಕೆಲವು ದಿಕ್ಕುಗಳು ದೊರೆತವು.

ಹಿಂದೂಗಳಿಗೆ ಸುರಕ್ಷಿತ ಎನಿಸಬೇಕು !
ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ಭಯೋತ್ಪಾದಕರು ಮಾಡಿದ ಆಕ್ರಮಣ ಮತ್ತು ಅದರಲ್ಲಿ ಪ್ರವಾಸಿಗರ ‘ಧರ್ಮ’ವನ್ನು ಕೇಳಿ ಅವರನ್ನು ಹತ್ಯೆ ಮಾಡಿದ್ದು, ಭಾರತ-ಪಾಕ್ ನಡುವೆ ನಡೆದ ಯುದ್ಧ ಮತ್ತು ಅದರಿಂದ ಉಂಟಾದ ಒತ್ತಡ ಈ ಹಿನ್ನೆಲೆಯಲ್ಲಿ ನಡೆದ ಈ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಹೆಚ್ಚು ಪ್ರಾಮುಖ್ಯತೆ ಇತ್ತು. ದೇಶದ ತಳಮಟ್ಟದ ಪ್ರತಿಯೊಬ್ಬ ಹಿಂದೂವಿಗೂ, ಪ್ರತಿಯೊಬ್ಬ ಹಿಂದೂ ಹೆಣ್ಣುಮಗಳು, ಮಹಿಳೆಗೂ ಸುರಕ್ಷಿತ ಎನಿಸುವವರೆಗೆ, ಹಿಂದೂಗಳ ಧಾರ್ಮಿಕ ಯಾತ್ರೆಗಳು, ಉತ್ಸವಗಳ ಮೇಲೆ ಜಿಹಾದಿ ಆಕ್ರಮಣಗಳು ನಿಲ್ಲುವ ವರೆಗೆ, ಯಾವುದಾದರೊಂದು ರಾಜ್ಯದಲ್ಲಿ ಹಿಂದೂಗಳ ಭೂಮಿ ಯಾವುದಾದರೂ ಪಂಥಕ್ಕೆ ಸಂಬಂಧಿಸಿದ ಕಾನೂನಿನಿಂದ ಕದಿಯುವುದು ನಿಲ್ಲುವವರೆಗೆ, ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಪ್ರಸಾರ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು, ಪ್ರಗತಿಪರರು ಅಪಹಾಸ್ಯ ಮಾಡುವುದು ನಿಲ್ಲುವವರೆಗೆ, ಹಿಂದೂಗಳು ಈಗ ನಿಲ್ಲಬಾರದು. ಇದನ್ನು ಗಮನದಲ್ಲಿಟ್ಟುಕೊಂಡು ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವು ಈಗ ಕೊನೆಗೊಂಡಿಲ್ಲ, ಬದಲಾಗಿ ನಿಜವಾದ ಅರ್ಥದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವು ಪ್ರಾರಂಭವಾಗಿದೆ.
ದೇಶದ ವ್ಯವಸ್ಥೆ ಸನಾತನ ಧರ್ಮಕ್ಕೆ ಅನುಕೂಲಕರವಾಗುವ ವರೆಗೆ, ಹಿಂದೂ ಪರಂಪರೆ, ಹಿಂದೂ ಧರ್ಮೀಯರ ರಕ್ಷಣೆ ಅಸಾಧ್ಯವೇ ಸರಿ. ಭಾರತದಲ್ಲಿ ಹಿಂದೂಗಳ ಸಂಖ್ಯೆ ಬಹುಸಂಖ್ಯೆಯಲ್ಲಿದ್ದರೂ, ಭಾರತದ ಕೆಲವು ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ; ಆದರೆ ಅಲ್ಪಸಂಖ್ಯಾತರ ಹೆಸರಿನಲ್ಲಿ ಅಲ್ಲಿನ ಅನ್ಯಧರ್ಮೀಯರು ಬಹುಸಂಖ್ಯಾತರ ಸವಲತ್ತು ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆಡಳಿತದಿಂದ ಹಿಂದೂಗಳ ದೇವಾಲಯಗಳನ್ನು ಸ್ವಾಧೀನಪಡಿಸಿಕೊಂಡು ದೇವಾಲಯದ ಆಸ್ತಿಯನ್ನು ಲೂಟಿ ಮಾಡುವುದು ಮತ್ತು ಇತರ ಧರ್ಮೀಯರಿಗೆ ಮುಕ್ತ ಸೌಲಭ್ಯ ನೀಡುವುದು, ಈ ಪರಿಸ್ಥಿತಿ ಭಯಾನಕವಲ್ಲವೇ ? ಒಂದು ರಾಜ್ಯದಲ್ಲಿ ಹಿಂದೂಗಳಾಗಿ ಹಿಂದೂಗಳ ಮೇಲೆ ಸರಕಾರ ಪ್ರಾಯೋಜಿತವಾಗಿ ಮತಾಂಧರಿಂದ ದೌರ್ಜನ್ಯಗಳಾಗುತ್ತವೆ, ಸಂಪೂರ್ಣ ವ್ಯವಸ್ಥೆ ಹಿಂದೂಗಳ ವಿರುದ್ಧವಾಗಿರುತ್ತದೆ, ಅಲ್ಲಿ ಹಿಂದೂಗಳು ಸುರಕ್ಷಿತವಾಗಿ ಹೇಗೆ ಇರಲು ಸಾಧ್ಯ ? ಹಿಂದೂಗಳು ಭಯದಲ್ಲಿ ಬದುಕಬೇಕಾಗಿದ್ದರೆ, ಪೊಲೀಸರು ಮತ್ತು ಆಡಳಿತ ಹಿಂದೂಗಳನ್ನು ರಕ್ಷಿಸಲು ಅಸಮರ್ಥರಾದರೆ, ಅಲ್ಲಿ ಹಿಂದೂಗಳ ಅಸ್ತಿತ್ವ ಉಳಿಯುತ್ತದೆಯೇ ? ಕಾಶ್ಮೀರದಿಂದ ದೌರ್ಜನ್ಯಕ್ಕೊಳಗಾಗಿ ಓಡಿಸಲ್ಪಟ್ಟ ಹಿಂದೂಗಳು ಈಗಲೂ ಅಲ್ಲಿ ಮತ್ತೆ ಹೋಗಿ ಸುರಕ್ಷಿತವಾಗಿ ಇರಲು ಸಾಧ್ಯವಿಲ್ಲ. ಅಲ್ಲಿನ ಮತಾಂಧರು, ‘ಇಲ್ಲಿ ಹಿಂದೂ ದೇವಾಲಯ ನಿರ್ಮಿಸಿದರೆ, ಅದನ್ನು ನಾವು ಕೆಡವುತ್ತೇವೆ. ನಮಗೆ ಹಿಂದೂ ದೇವಾಲಯ, ಪರಂಪರೆ ಸಹಿಸಲು ಸಾಧ್ಯವಿಲ್ಲ’ ಎಂದು ಹೇಳುತ್ತಾರೆ. ಅಂದರೆ ಹಿಂದೂ ಧರ್ಮ ಮತ್ತು ಹಿಂದೂ ಧರ್ಮೀಯರೂ ಕಾಶ್ಮೀರದಲ್ಲಿ ಮತಾಂಧರಿಗೆ ಸಹನೀಯರಲ್ಲ, ಹಾಗಿದ್ದಲ್ಲಿ ಇಂತಹ ಪರಿಸ್ಥಿತಿಯಲ್ಲಿ ಅವರೊಂದಿಗೆ ಹಿಂದೂಗಳು ಸಹಜೀವನವನ್ನು ಹೇಗೆ ನಡೆಸಲು ಸಾಧ್ಯ ? ಸುಮ್ಮನೆ ಹಿಂದೂಗಳನ್ನು ಭ್ರಮೆಯಲ್ಲಿಟ್ಟು ಸರ್ವಧರ್ಮಸಮಭಾವವನ್ನು ಹಿಂದೂಗಳ ಮೇಲೆ ಏಕೆ ಹೇರಲಾಗುತ್ತದೆ ?
ಹಿಂದೂಗಳನ್ನು ಒಂದೇ ದಾರದಲ್ಲಿ ಬಂಧಿಸಲು ಸಾಧ್ಯವಿರುವ ಏಕೈಕ ವಿಷಯವೆಂದೆ ಧರ್ಮ. ಒಂದು ಸಂಸ್ಕೃತ ಸುಭಾಷಿತದ ಪ್ರಕಾರ, ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ. ರಾಷ್ಟ್ರ ಮತ್ತು ಧರ್ಮ ರಕ್ಷಣೆಯ ಕಾರ್ಯವನ್ನು ಸಾಧನೆ ಎಂದು ಮಾಡುವುದು ಮತ್ತು ಭಾವನಾತ್ಮಕವಾಗಿ ಮಾಡುವುದರಲ್ಲಿ ಬಹಳಷ್ಟು ವ್ಯತ್ಯಾಸವಿದೆ. ರಾಷ್ಟ್ರ-ಧರ್ಮ ರಕ್ಷಣೆಯ ಕಾರ್ಯವನ್ನು ಸಮಷ್ಟಿ ಸಾಧನೆ, ಉಪಾಸನೆ ಎಂದು ಮಾಡಿದರೆ, ಅದರಿಂದ ವ್ಯಷ್ಟಿ-ಸಮಷ್ಟಿ ಮಟ್ಟದಲ್ಲಿ ಅನೇಕ ಪಟ್ಟು ಗಳಲ್ಲಿ ಲಾಭವಾಗುತ್ತದೆ. ಕೆಲವು ಇತರ ಪಂಥಗಳಲ್ಲಿ ಸಾಮೂಹಿಕ ಉಪಾಸನೆ ಇರುತ್ತದೆ. ಆ ಸಾಮೂಹಿಕ ಉಪಾಸನೆಯ ಬಲದಲ್ಲಿ ಅವರು ಒಂದು ಸ್ಥಳದಲ್ಲಿ ಅಲ್ಪಸಂಖ್ಯಾತರಾಗಿದ್ದರೂ, ಅಲ್ಲಿನ ಬಹುಸಂಖ್ಯಾತರನ್ನು, ಅಲ್ಲಿನ ಆಡಳಿತವನ್ನು ಹತ್ತಿಕ್ಕಬಹುದು, ಅವರನ್ನು ಭಯದಲ್ಲಿ ಇರಿಸಬಹುದು. ಹಿಂದೂ ವೈಯಕ್ತಿಕ ಮಟ್ಟದಲ್ಲಿ ಎಷ್ಟೇ ಉಪಾಸನೆ, ಸಾಧನೆ ಮಾಡುತ್ತಿದ್ದರೂ, ಅವನು ಸಮಷ್ಟಿ ಉಪಾಸನೆ ಮಾಡುವವರೆಗೆ, ಅವನಲ್ಲಿ ಧರ್ಮಬಂಧುತ್ವ ಬರುವುದಿಲ್ಲ, ಇತರ ಹಿಂದೂಗಳು, ಹಿಂದೂ ಧರ್ಮದ ಬಗ್ಗೆ ತನ್ನತನ ಮೂಡುವುದಿಲ್ಲ. ಯುದ್ಧದಲ್ಲಿ ಇತರ ಬಲದೊಂದಿಗೆ ಸಂಖ್ಯಾಬಲ ಮತ್ತು ಅದರಲ್ಲೂ ಜಾಗೃತ ಸಂಖ್ಯಾಬಲವೂ ಮುಖ್ಯ ವಾಗಿರುತ್ತದೆ. ಮುಂಬರುವ ಯುದ್ಧ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಯ ಕಾಲವನ್ನು ಪರಿಗಣಿಸಿದರೆ, ಹಿಂದೂಗಳು ಸಂಘಟಿತರಾಗಿರುವುದು, ಸಮೂಹವಾಗಿ ಸಾಧನಾರತರಾಗಿರು ವುದು ಆವಶ್ಯಕ. ಧರ್ಮದ ಮೇಲಿನ ಪ್ರತಿ ಆಕ್ರಮಣವನ್ನು ಪ್ರತಿರೋಧಿಸುತ್ತಾ, ರಾಜಸತ್ತೆಯನ್ನು ಹಿಂದೂ ಧರ್ಮವಿರೋಧಿ ಮತ್ತು ರಾಷ್ಟ್ರವಿರೋಧಿ ಘಟನೆಗಳ ವಿರುದ್ಧ ಕೃತಿ ಮಾಡಲು ಒತ್ತಾಯಿಸುವುದು ಆವಶ್ಯಕ. ಮುಂಬರುವ ದಿನಗಳಲ್ಲಿ ಬಾಹ್ಯ ಯುದ್ಧವಾದರೆ, ಆಗ ಗೃಹಯುದ್ಧದ ಸಾಧ್ಯತೆಯನ್ನು ಗಮನಿಸಿದರೆ, ಪೊಲೀಸರು ಮತ್ತು ಇತರ ಭದ್ರತಾ ವ್ಯವಸ್ಥೆಗಳು ಹಿಂದೂಗಳನ್ನು ರಕ್ಷಿಸಲು ಅಸಮರ್ಪಕವಾಗಬಹುದು ಅಥವಾ ತಲುಪಲೂ ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಹಿಂದೂಗಳು ತಮ್ಮ ಜೀವ, ಆಸ್ತಿಗಳ ರಕ್ಷಣೆಯ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳಬೇಕಾಗುತ್ತದೆ. ಹಿಂದೂಗಳು ಬಲೋಪಾಸನೆ ಮಾಡುವುದರೊಂದಿಗೆ ಶತ್ರುಬೋಧವನ್ನು ಮಾಡಿಕೊಂಡರೆ, ಅವರು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥರಾಗುತ್ತಾರೆ ಎಂಬುದು ಖಚಿತ !
ಆರ್ಥಿಕ ಶಿಸ್ತು
ಸಂಪಾದಕೀಯ : ಜಿರಳೆ ಮತ್ತು ಬೋಧನೆ
ಬಂಗಾಳದಲ್ಲಿ ಅನಿವಾರ್ಯ ಸಂಘರ್ಷ !
ಬಹಿರಂಗ ಸತ್ಯ: ಭೋಜಶಾಲೆ ಮುಕ್ತ!
ಗೋಹತ್ಯೆ ಮತ್ತು ಸರ್ವೋಚ್ಚ ನ್ಯಾಯಾಲಯ !
ಥಾಪರ್ ಅವರ ‘ವೋಕಿಸಂ’ !