
ಬೀಜಿಂಗ್ (ಚೀನಾ) – ‘ಆಪರೇಷನ್ ಸಿಂದೂರ’ ವೇಳೆ ಪಾಕಿಸ್ತಾನವು ಭಾರತದ ಮೇಲೆ ಕ್ಷಿಪಣಿಗಳನ್ನು ಮತ್ತು ಡ್ರೋನ್‌ಗಳನ್ನು ಉಡಾಯಿಸಿತ್ತು. ಇವುಗಳಲ್ಲಿ ಕೆಲವು ಕ್ಷಿಪಣಿಗಳು ಚೀನಾ ನಿರ್ಮಿತವಾಗಿದ್ದವು. ಭಾರತವು ಅವುಗಳನ್ನು ಗಾಳಿಯಲ್ಲೇ ನಾಶಪಡಿಸಿತು, ಇನ್ನು ಕೆಲವು ಬಿದ್ದರೂ ಸಿಡಿಯಲಿಲ್ಲ. ಸಿಡಿಯದೇ ಕೆಳಗುರುಳಿದ ಕ್ಷಿಪಣಿಗಳಲ್ಲಿ ‘ಪಿಎಲ್-15 ಇ’ ಕ್ಷಿಪಣಿಯೂ ಸೇರಿತ್ತು. ಈ ಬಗ್ಗೆ ಚೀನಾದ ರಕ್ಷಣಾ ಸಚಿವಾಲಯದ ವಕ್ತಾರರಾದ ಹಿರಿಯ ಕರ್ನಲ್ ಝಾಂಗ್ ಜಿಯಾವೋಗಾಂಗ್ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ, ಅವರು ಬೇರೆಯದೇ ಉತ್ತರ ನೀಡಿ ಜಾರಿಕೊಂಡರು.
ಝಾಂಗ್ ಜಿಯಾವೋಗಾಂಗ್ ಅವರು ಮಾತನಾಡಿ, “ನೀವು ಉಲ್ಲೇಖಿಸುತ್ತಿರುವ ಕ್ಷಿಪಣಿಯು ರಫ್ತು ಮಾಡಲಾಗುವ ಶಸ್ತ್ರಾಸ್ತ್ರವಾಗಿದೆ. ಈ ಕ್ಷಿಪಣಿಯನ್ನು ದೇಶ-ವಿದೇಶಗಳಲ್ಲಿ ಅನೇಕ ರಕ್ಷಣಾ ಪ್ರದರ್ಶನಗಳಲ್ಲಿ ಪ್ರದರ್ಶಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನವು ಅಕ್ಕ-ಪಕ್ಕದಲ್ಲಿವೆ ಅವುಗಳನ್ನು ಬೇರ್ಪಡಿಸಲಾಗುವುದಿಲ್ಲ. ಎರಡೂ ಕಡೆಯವರು ಶಾಂತ ಮತ್ತು ಸಂಯಮದಿಂದ ಇರುತ್ತಾರೆಂದು ನಿರೀಕ್ಷಿಸಲಾಗಿದೆ” ಎಂದು ಹೇಳಿ ಪ್ರಶ್ನೆಗೆ ಉತ್ತರಿಸಿವುದನ್ನು ತಪ್ಪಿಸಿಕೊಂಡರು.
ಸಂಪಾದಕೀಯ ನಿಲುವುಚೀನೀ ಉತ್ಪನ್ನಗಳು ಅತ್ಯಂತ ಕಳಪೆ ಗುಣಮಟ್ಟದ್ದಾಗಿರುತ್ತವೆ. ಆದ್ದರಿಂದ ಅವುಗಳನ್ನು ಭಾರತದಲ್ಲಿ ಯಾವಾಗಲೂ ಗೇಲಿ ಮಾಡಲಾಗುತ್ತದೆ. ಅದೇ ರೀತಿ ಅವರ ಶಸ್ತ್ರಾಸ್ತ್ರಗಳು ಸಹ ಕಳಪೆಯದ್ದಾಗಿವೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ! |
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump