ಅಸಿಮ್ ಮುನೀರ್ ಅವರನ್ನು ಟೀಕಿಸಿದ ಅಸದುದ್ದೀನ್ ಓವೈಸಿ

ರಿಯಾದ್ (ಸೌದಿ ಅರೇಬಿಯಾ) – ಅಸಿಮ್ ಮುನೀರ್ ಅವರನ್ನು ಪಾಕಿಸ್ತಾನದಲ್ಲಿ ಫೀಲ್ಡ್ ಮಾರ್ಷಲ್ (ಸೇನೆಯಲ್ಲಿ ಅತ್ಯುನ್ನತ ಹುದ್ದೆ) ಆಗಿ ನೇಮಿಸಿದಾಗ, ಅಮೇರಿಕಾದಿಂದ ‘ಭಯೋತ್ಪಾದಕ’ ಎಂದು ಘೋಷಿಸಲ್ಪಟ್ಟ ಮೊಹಮ್ಮದ್ ಎಹ್ಸಾನ್, ಈ ಫೀಲ್ಡ್ ಮಾರ್ಷಲ್ ಪಕ್ಕದಲ್ಲಿ ಕುಳಿತಿರುವುದು ಕಂಡುಬಂದಿದೆ. ಈ ಫೀಲ್ಡ್ ಮಾರ್ಷಲ್‌ನೊಂದಿಗೆ ಕೈಕುಲುಕುತ್ತಿರುವ ಅವನ ಚಿತ್ರಗಳೂ ಸಹ ಇವೆ. ಇದು ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆಗೆ ಸ್ಪಷ್ಟ ಪುರಾವೆಯಾಗಿದೆ. ಈ ಭಯೋತ್ಪಾದಕ ಗುಂಪುಗಳು ಪಾಕ್ ನಲ್ಲಿ ವಿಜೃಂಭಿಸುತ್ತಿವೆ. ಉಗ್ರರಿಗೆ ಅಲ್ಲಿ ತರಬೇತಿ ನೀಡಲಾಗುತ್ತಿದೆ. ಭಾರತದಲ್ಲಿ ಹೆಚ್ಚೆಚ್ಚು ಹಿಂದೂ-ಮುಸ್ಲಿಂ ಗಲಭೆಗಳನ್ನು ನಡೆಸುವುದು ಮತ್ತು ಭಾರತವನ್ನು ಅಸ್ಥಿರಗೊಳಿಸುವುದು ಅವರ ಏಕೈಕ ಗುರಿಯಾಗಿದೆ ಎಂದು ಎ.ಐ.ಎಮ್.ಐ.ಎಮ್. (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್, ಅಖಿಲ ಭಾರತ ಮುಸ್ಲಿಂ ಏಕತಾ ಸಂಘ) ಪಕ್ಷದ ಸಂಸದ ಅಸದುದ್ದೀನ್ ಓವೈಸಿ ಅವರು ಅಸಿಮ್ ಮುನೀರ್ ಅವರನ್ನು ತೀವ್ರವಾಗಿ ಟೀಕಿಸಿದರು. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ‘ಆಪರೇಷನ್ ಸಿಂದೂರ್’ ಬಗ್ಗೆ ಮಾಹಿತಿ ನೀಡಲು ಭಾರತದ ನಿಯೋಗವೊಂದು ಸೌದಿ ಅರೇಬಿಯಾಗೆ ತಲುಪಿದ್ದು, ಓವೈಸಿ ಕೂಡ ಈ ನಿಯೋಗದಲ್ಲಿದ್ದಾರೆ. ಓವೈಸಿ ಅವರು ಭಾರತೀಯ ರಾಯಭಾರ ಕಚೇರಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
“इनका मकसद भारत में हिंदू-मुस्लिम दंगे भड़काना है।” रियाद, सऊदी अरब में बैरिस्टर @asadowaisi ने पाकिस्तान को बेनक़ाब करते हुए बताया कि वह किस तरह आतंकियों को समर्थन देता है। #AllPartyDelegation #SaudiArabia #AsaduddinOwaisi #owaisi #IndiaPakistanWar #AIMIM pic.twitter.com/TBwJ8rVtWO
— AIMIM (@aimim_national) May 29, 2025
ಪಾಕಿಸ್ತಾನವು ಈ ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡುವುದನ್ನು ನಿಲ್ಲಿಸಿದರೆ, ದಕ್ಷಿಣ ಏಷ್ಯಾದಲ್ಲಿ ಸ್ಥಿರತೆ ಬರಬಹುದು. ಇದರಿಂದ ಇಡೀ ಪ್ರದೇಶದಲ್ಲಿ ಪ್ರಗತಿ ಮತ್ತು ಅಭಿವೃದ್ಧಿಗೆ ಉತ್ತೇಜನ ಸಿಗುತ್ತದೆ; ಆದರೆ ದುರದೃಷ್ಟವಶಾತ್, ಪಾಕಿಸ್ತಾನವು ಇನ್ನೂ ಭಯೋತ್ಪಾದನೆಯ ಹಾದಿಯಲ್ಲಿದೆ ಮತ್ತು ಭಾರತವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಓವೈಸಿ ಹೇಳಿದರು.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು