ಇಟಲಿಯ ‘ಇಟಾಲಿಯನ್ ಹಿಂದೂ ಯೂನಿಯನ್’ ಸಂಘಟನೆಯ ಘೋಷಣೆ

ರೋಮ್ (ಇಟಲಿ) – ಭಾರತದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ. ನಾವು ಭಯೋತ್ಪಾದನೆಯ ವಿರುದ್ಧ ಭಾರತದೊಂದಿಗೆ ನಿಲ್ಲುತ್ತೇವೆ. ‘ಆಪರೇಷನ್ ಸಿಂದೂರ್’ ಬಗ್ಗೆ ನಾವು ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ಭಯೋತ್ಪಾದನೆಯ ವಿರುದ್ಧ ಹೋರಾಡುವುದು ಮತ್ತು ತಮ್ಮ ನಾಗರಿಕರನ್ನು ಸುರಕ್ಷಿತವಾಗಿಡುವುದು ಪ್ರತಿಯೊಂದು ದೇಶದ ಸರಕಾರ ಮತ್ತು ಸೇನೆಯ ಕರ್ತವ್ಯವಾಗಿದೆ ಎಂದು ಇಟಲಿಯ ‘ಇಟಾಲಿಯನ್ ಹಿಂದೂ ಯೂನಿಯನ್’ನ ಅಧ್ಯಕ್ಷ ಫ್ರಾಂಕೋ ಡಿ ಮರಿಯಾ ಜಯೇಂದ್ರನಾಥ್ ಅವರು ಎ.ಎನ್.ಐ. (ಏಷ್ಯನ್ ನ್ಯೂಸ್ ಇಂಟರನ್ಯಾಷನಲ್) ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ನೀಡಲು ಭಾರತದ ನಿಯೋಗವೊಂದು ರೋಮ್ ತಲುಪಿದೆ. ಇದನ್ನು ಇಟಾಲಿಯನ್ ಹಿಂದೂ ಯೂನಿಯನ್ ಸ್ವಾಗತಿಸಿತು. ಈ ವೇಳೆ ಜಯೇಂದ್ರನಾಥ್ ಅವರು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಿದ್ದರು.
#WATCH | Rome, Italy: Franco Di Maria Jayendranatha, President, Italian Hindu Union, says, “… More than 200,000 Italians are Hindus and we signed an agreement with the Italian Republic. We are a recognised religion, which means we can financially assist our religion… We are… pic.twitter.com/R0KX5GEqh6
— ANI (@ANI) May 28, 2025
ಹಿಂದೂ ಧರ್ಮಕ್ಕೆ ಮಾನ್ಯತೆ ದೊರೆತ ಯುರೋಪಿನ ಏಕೈಕ ದೇಶ ಇಟಲಿ!
ಜಯೇಂದ್ರನಾಥ ಅವರು ಮಾತು ಮುಂದುವರೆಸಿ, ಇಟಲಿಯಲ್ಲಿ ಹಿಂದೂ ಧರ್ಮವು ಮಾನ್ಯತೆ ಪಡೆದ ಧರ್ಮವಾಗಿದೆ. ಇಟಲಿಯಲ್ಲಿರುವ 2 ಲಕ್ಷಕ್ಕೂ ಹೆಚ್ಚು ಹಿಂದೂಗಳಾದ ನಾವು ಇಟಲಿಯ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಈ ಒಪ್ಪಂದದಿಂದಾಗಿ, ನಾವು ದೇಶದಲ್ಲಿ ನಮ್ಮ ಧಾರ್ಮಿಕ ಆಚರಣೆಗಳನ್ನು ನಡೆಸಬಹುದು. ನಮ್ಮ ಧರ್ಮಕ್ಕೆ ಆರ್ಥಿಕವಾಗಿ ಸಹಾಯ ಮಾಡಬಹುದು. ಇತರ ಧರ್ಮದ ಜನರು ತಮ್ಮ ಧರ್ಮಕ್ಕಾಗಿ ದಾನ ಮಾಡುವುದು ಅಥವಾ ತೆರಿಗೆಗಳನ್ನು ಪಾವತಿಸುವಂತೆ, ನಾವು ಸಹ ನಮ್ಮ ಧರ್ಮಕ್ಕೆ ಕೊಡುಗೆ ನೀಡಬಹುದು. ಈ ರೀತಿಯಲ್ಲಿ ಹಿಂದೂ ಧರ್ಮಕ್ಕೆ ಗುರುತಿಸುವಿಕೆ ಮತ್ತು ಮಾನ್ಯತೆ ದೊರೆತ ಯುರೋಪಿನ ಏಕೈಕ ದೇಶ ಇಟಲಿಯಾಗಿದೆ ಎಂದು ಹೇಳಿದರು.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು