
ಸನಾತನದ ರಾಮನಾಥಿ (ಗೋವಾ) ಆಶ್ರಮದಲ್ಲಿ ಸಾಧಕರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅಮೂಲ್ಯ ಸತ್ಸಂಗ ಲಭಿಸಿತು. ಆ ಸಂದರ್ಭದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನದ ಸೂತ್ರ ಗಳನ್ನು ಇಲ್ಲಿ ಕೊಡಲಾಗಿದೆ. ‘೨೬/೩೬ ರಂದು ಈ ಮಾರ್ಗದರ್ಶನದ ಕೆಲವು ಸೂತ್ರಗಳನ್ನು ನೋಡಿದೆವು. ಇಂದು ಅದರ ಮುಂದಿನ ಅಂಶಗಳನ್ನು ನೋಡೋಣ. (ಭಾಗ ೨)
೫. ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳಲ್ಲಿ ಕಾಲಕ್ಕನುಸಾರ ಬದಲಾವಣೆ ಮಾಡಲಾಗುತ್ತದೆ !
ಓರ್ವ ಸಾಧಕ : ಮಹಾಶಿವರಾತ್ರಿಯಂದು ಸನಾತನದ ಗ್ರಂಥಪ್ರದರ್ಶನ ಏರ್ಪಡಿಸಲಾಗಿತ್ತು. ಆಗ ಓರ್ವ ಜಿಜ್ಞಾಸು ‘ಶ್ರೀಕೃಷ್ಣ’ ಮತ್ತು ‘ದತ್ತ’ ಈ ಗ್ರಂಥಗಳನ್ನು ನೋಡಿದರು. ಆ ಚಿತ್ರದಲ್ಲಿ ಹಸುವಿನ ಮುಖ ಎಡ ಬದಿಗಿತ್ತು, ಈಗ ಚಿತ್ರವನ್ನು ಬದಲಾಯಿಸಿದಾಗ ಹಸುವಿನ ಮುಖ ಬಲ ಬದಿಗೆ ಆಗಿದೆ. ಅವರು ಆ ವಿಷಯದಲ್ಲಿ ವಿಚಾರಿಸಿದಾಗ ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಹಸುವಿನ ಮುಖ ಬಲಬದಿಗಿದ್ದರೆ ಅದು ದೇವರ ಮಾರಕ ರೂಪವಾಗಿರುತ್ತದೆ ಹಾಗೂ ಎಡಬದಿಗಿದ್ದರೆ ಅದು ತಾರಕ ರೂಪವಾಗಿರುತ್ತದೆ. ಸನಾತನ ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳಲ್ಲಿ ಕಾಲಾನುಸಾರ ಹೀಗೆ ಬದಲಾವಣೆ ಮಾಡಲಾಗುತ್ತದೆ.
೬. ನಾವು ಯಾವ ಆಧ್ಯಾತ್ಮಿಕ ಸ್ತರದಲ್ಲಿರುತ್ತೇವೆಯೊ, ನಮಗೆ ಆ ಸ್ತರದ ಅನುಭೂತಿ ಬರುತ್ತದೆ !
ಓರ್ವ ಸಾಧಕ : ಸೇವೆ ಮಾಡುವಾಗ ನನಗೆ ಭಾವಜಾಗೃತಿಯಾಗುತ್ತದೆ ಹಾಗೂ ನನಗೆ ತುಂಬಾ ಚೈತನ್ಯದ ಅರಿವಾಗುತ್ತದೆ. ಆಗ ನನಗೆ ದುರ್ಗಾದೇವಿಯ ಮತ್ತು ನಿಮ್ಮ ದರ್ಶನವಾಗುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ದೇವಿಯ ಸ್ತರವೆಂದರೆ ಶಕ್ತಿಯ ಸ್ತರ, ಭಾವ, ಚೈತನ್ಯ, ಆನಂದ ಹಾಗೂ ಶಾಂತಿ, ಇವು ಅನುಭೂತಿಗಳ ಸ್ತರ ಆಗಿರುತ್ತವೆ. ನಾವು ಯಾವ ಸ್ತರದಲ್ಲಿರುತ್ತೇವೆಯೊ, ಆ ಸ್ತರದ ಅನುಭೂತಿ ನಮಗೆ ಬರುತ್ತದೆ. ಶಕ್ತಿಯ ಸ್ತರದಲ್ಲಿರುವಾಗ ಏನಾದರೂ ಕೃತಿ ಮಾಡಬೇಕಾಗುತ್ತದೆ. ಆಧ್ಯಾತ್ಮಿಕ ಭಾವದ ಸ್ತರದಲ್ಲಿರುವಾಗ ‘ದೇವರೆ ನಮಗಾಗಿ ಎಲ್ಲವನ್ನೂ ಮಾಡುತ್ತಾನೆ’, ಎನ್ನುವ ಅನುಭೂತಿ ಬರುತ್ತದೆ. ಚೈತನ್ಯದ ಸ್ತರದಲ್ಲಿ ಎರಡೂ ಆಗುತ್ತದೆ, ಅಂದರೆ ದೇವರ ಸಹಾಯವೂ ಸಿಗುತ್ತದೆ, ನಾವು ಕೂಡ ಪ್ರಯತ್ನ ಮಾಡಬೇಕು. ಚೈತನ್ಯದ ಸ್ತರದಲ್ಲಿರುವಾಗ ಶಾರೀರಿಕ, ಮಾನಸಿಕ ಹಾಗೂ ಬೌದ್ಧಿಕ, ಈ ಮೂರೂ ಸ್ತರಗಳಲ್ಲಿ ಕಾರ್ಯ ಮಾಡಲು ಸಾಧ್ಯವಾಗುತ್ತದೆ. ಆನಂದದ ಸ್ತರದಲ್ಲಿರುವಾಗ ಏನೂ ಮಾಡಲಿಕ್ಕಿರುವುದಿಲ್ಲ. ಬ್ರಹ್ಮನಿಗೆ ಸಚ್ಚಿದಾನಂದ ಎನ್ನುತ್ತಾರಲ್ಲವೆ ! ನಾವು ಆ ಸ್ಥಿತಿಗೆ ಹೋದಾಗ ಎಲ್ಲವೂ ತನ್ನಿಂತಾನೇ ಆಗುತ್ತದೆ. ಶಾಂತಿ ಎಂದರೆ ನಿರ್ಗುಣ ಸ್ಥಿತಿಯಾಗಿರುತ್ತದೆ. ಅಲ್ಲಿ ಏನೂ ಆಗುವುದಿಲ್ಲ. ಕೇವಲ ಬ್ರಹ್ಮವೆ ಇರುತ್ತದೆ.
ಓರ್ವ ಸಾಧಕ : ನೀವು ಸಮಯಕ್ಕೆ ಮಹತ್ವವಿದೆ ಎನ್ನುತ್ತೀರಿ; ಆದ್ದರಿಂದ ನಾನು ಸಮಯಕ್ಕನುಸಾರ ಸತ್ಸಂಗದ ಸ್ಥಳಕ್ಕೆ ಹೋಗಿ ನಿರ್ದಿಷ್ಟ ಸಮಯದಲ್ಲಿ ಸತ್ಸಂಗ ಆರಂಭಿಸುತ್ತೇನೆ, ಸಮಯಕ್ಕೆ ಮುಗಿಸುತ್ತೇನೆ. ಸತ್ಸಂಗಕ್ಕೆ ಹೋಗುವಾಗ ಹಾಗೂ ಅಲ್ಲಿಗೆ ಹೋದ ನಂತರವೂ ನನಗೆ ಚೈತನ್ಯದ ಅರಿವಾಗುತ್ತದೆ; ಆದರೆ ಸತ್ಸಂಗ ಮುಗಿದ ನಂತರ ಅಲ್ಲಿ ಏನೂ ಅರಿವಾಗುವುದಿಲ್ಲ. ಅಲ್ಲಿ ನನ್ನಿಂದ ಏನಾದರೂ ತಪ್ಪಾಗುತ್ತಿದೆಯೆ ?’, ಎಂದು ಅನಿಸುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ನಿಮ್ಮ ದೃಷ್ಟಿಯಲ್ಲಿ ‘ಸತ್ಸಂಗ ತೆಗೆದುಕೊಳ್ಳುವುದೆಂದರೆ ಪೂಜೆಯಾಗಿದೆ. ಪೂಜೆ ಮಾಡುವಾಗ ನಿಜವಾದ ಭಕ್ತನಿಗೆ ಭಾವಜಾಗೃತಿಯಾಗುತ್ತದೆ, ಅದೇ ರೀತಿ ಅವನಿಗೆ ಚೈತನ್ಯ ಸಿಗುತ್ತದೆ. ಪೂಜೆ ಮುಗಿದಾಗ ಅದೆಲ್ಲವೂ ಮುಗಿಯುತ್ತದೆ. ನಿಮ್ಮದೂ ಹಾಗೆಯೆ ಇದೆ. ಇದು ಒಳ್ಳೆಯ ಅನುಭೂತಿಯಾಗಿದೆ.
೭. ದೇವರು ಅನುಭೂತಿಯಿಂದ ಕಲಿಸುತ್ತಾರೆ !
೭ ಅ. ಮಹಾಲಕ್ಷ್ಮಿಯ ಮಂದಿರಕ್ಕೆ ಹೋದಾಗ ಶ್ರೀಕೃಷ್ಣನ ನಾಮಜಪ ತನ್ನಿಂತಾನೇ ಆರಂಭವಾಗುತ್ತದೆ
ಓರ್ವ ಸಾಧಕ : ಬೆಳಗ್ಗೆ ನಾವು ಮಹಾಲಕ್ಷ್ಮಿಯ ಮಂದಿರಕ್ಕೆ ಹೋಗಿದ್ದೆವು. ಆಗ ನನ್ನಲ್ಲಿ ದೇವಿಯ ನಾಮಜಪ ಆಗುತ್ತಿತ್ತು; ಆದರೆ ನಂತರ ಶ್ರೀಕೃಷ್ಣನ ನಾಮಜಪ ತನ್ನಿಂತಾನೇ ಆರಂಭವಾಯಿತು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಅನುಭೂತಿ ಚೆನ್ನಾಗಿದೆ. ದೇವಿಯ ಮಂದಿರಕ್ಕೆ ಹೋದಾಗ ನಿಮ್ಮಲ್ಲಿ ಕೃಷ್ಣನ ನಾಮಜಪ ನಡೆಯಿತು. ಯಾರಿಗಾದರೂ ಜಪ ಮಾಡುವ ತಳಮಳವಿದ್ದರೆ, ಅವರಿಗೆ ಯಾವ ಜಪ ಮಾಡಬೇಕೆಂದು ಮನಸ್ಸು ಮತ್ತು ಬುದ್ಧಿಯಿಂದ ನಿರ್ಧರಿಸಲು ಸಾಧ್ಯವಾಗುವುದಿಲ್ಲ. ನಿಮ್ಮಲ್ಲಿ ನಿಮಗೆ ಆವಶ್ಯಕವಿರುವ ನಾಮಜಪ ನಡೆಯಿತು. ದೇವರು ಅದನ್ನು ನಿಮಗೆ ಕಲಿಸಿದರು. ದೇವರು ನಮಗೆ ಅನುಭೂತಿಯಿಂದ ಕಲಿಸುತ್ತಾರೆ.
೮. ಶರೀರದ ಯಾವ ನಾಡಿ ಕಾರ್ಯನಿರತವಿರುತ್ತದೆಯೋ, ಆ ಬದಿಯಿಂದ ಮೊದಲು ಸುವಾಸನೆ ಬರುತ್ತದೆ !
ಓರ್ವ ಸಾಧಕ : ಸ್ವಲ್ಪ ಸಮಯದ ಹಿಂದೆ ನಾನು ಸತ್ಸಂಗಕ್ಕೆ ಬರಲು ಸಿದ್ಧನಾಗುತ್ತಿದ್ದೆ. ಆಗ ನೀವು ಬರುವ ಮೊದಲು ನನ್ನ ಒಂದು ಕೈಯಲ್ಲಿ ಸುವಾಸನೆ ಬರುತ್ತಿತ್ತು. ಆಗ ಊದುಬತ್ತಿ ಹಚ್ಚಿರಲಿಲ್ಲ. ಈಗ ನಿಮ್ಮ ಮಾರ್ಗದರ್ಶನ ಕೇಳಿದನಂತರ ನನ್ನ ಇನ್ನೊಂದು ಕೈಯ ಬೆರಳುಗಳಲ್ಲಿ ಸುವಾಸನೆ ಬರುತ್ತಿದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಶಬ್ಬಾಸ್ ! ಯಾವಾಗ ಯಾವ ನಾಡಿ ಕಾರ್ಯನಿರತವಾಗಿರುತ್ತದೊ, ಅಲ್ಲಿಂದ ಮೊದಲು ಸುವಾಸನೆ ಬರುತ್ತದೆ.
೯. ಪ್ರತಿಯೊಂದು ಕೃತಿ ಮಾಡುವಾಗ ಭಾವಪೂರ್ಣ ನಾಮಜಪ ಮಾಡಿದರೆ ಪ್ರಗತಿಯಾಗಿ ದೇವರು ಸಮಷ್ಟಿ ಸಾಧನೆಯಲ್ಲಿನ ಅಡಚಣೆಗಳನ್ನು ದೂರಗೊಳಿಸುತ್ತಾರೆ !
ಓರ್ವ ಸಾಧಕಿ : ನನ್ನ ತಾಯಿಗೆ ತೀವ್ರ ಆಧ್ಯಾತ್ಮಿಕ ತೊಂದರೆಯಿದೆ. ಆದ್ದರಿಂದ ನಮ್ಮ ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ. ನನ್ನ ತಂದೆಯವರಿಗೂ ವ್ಯಸನವಿದೆ. ಈ ಕಾರಣದಿಂದಾಗಿ ನನ್ನ ಅಕ್ಕ ಹೆಚ್ಚು ಕಲಿಯಲಿಲ್ಲ. ನಾನೊಬ್ಬಳೇ ಕಲಿಯುತ್ತಿದ್ದೇನೆ. ನಾನು ಎಮ್.ಕಾಮ್.ನ ಎರಡನೆಯ ವರ್ಷದಲ್ಲಿದ್ದೇನೆ. ನನಗೆ ಸಾಧನೆ ಮಾಡುವ ಇಚ್ಛೆ ಇದೆ; ಆದರೆ ಮನೆಯ ಪರಿಸ್ಥಿತಿಯಿಂದಾಗಿ ಸಾಧನೆಯಲ್ಲಿ ಅಡಚಣೆಗಳು ಬರುತ್ತವೆ. ಅದಕ್ಕಾಗಿ ಮಾರ್ಗದರ್ಶನ ಮಾಡಬೇಕು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ನಿಮಗೆ ಸಮಷ್ಟಿ ಸಾಧನೆ ಮಾಡಲು ಸಾಧ್ಯವಾಗದಿದ್ದರೂ, ಮನಸ್ಸು ನಿಮ್ಮ ವಶದಲ್ಲಿದೆಯಲ್ಲವೆ !
ನೀವು ಏನೂ ಮಾಡದಿರುವಾಗ, ಸ್ನಾನ ಮಾಡುವಾಗ, ಬಟ್ಟೆ ಒಗೆಯುವಾಗ ಹಾಗೂ ಹೊರಗೆ ಹೋಗುವಾಗ ಭಾವಪೂರ್ಣ ನಾಮಜಪ ಮಾಡಿರಿ ! ಅದರಿಂದ ವ್ಯಷ್ಟಿ ಸಾಧನೆಯಾಗಿ ನೀವು ಮುಂದೆ ಹೋದರೆ ನಿಮ್ಮ ಸಮಷ್ಟಿ ಸಾಧನೆಯಲ್ಲಿನ ಅಡಚಣೆಗಳನ್ನು ದೇವರು ತಾನಾಗಿಯೆ ದೂರ ಮಾಡುವರು.
೧೦. ‘ದೇವರು ನನಗಾಗಿ ಏನೆಲ್ಲ ಮಾಡುತ್ತಾರೆ’, ಎನ್ನುವ ಅರಿವು ನಿರಂತರ ಇರಬೇಕು !
೧೦ ಅ. ಚಿಕ್ಕಂದಿನಿಂದ ಮೈಮೇಲಿದ್ದ ಬಿಳಿಕುಷ್ಠ (ಚರ್ಮರೋಗ) ದೇವರ ಕೃಪೆಯಿಂದ ದೂರವಾಗುವುದು
ಓರ್ವ ಸಾಧಕಿ : ನಾನು ಚಿಕ್ಕವಳಿರುವಾಗ ನೀವು ನಮ್ಮ ಮನೆಗೆ ಬಂದಿದ್ದೀರಿ. ಆಗ ನನ್ನ ಬೆನ್ನಿನಲ್ಲಿ ಒಂದು ಸ್ಥಳದಲ್ಲಿ ಬಿಳಿ ಕುಷ್ಠವಿತ್ತು, ನÀಂತರ ‘ಇದು ಎಲ್ಲ ಕಡೆಗೆ ಹರಡಿದಾಗ ನಾನು ಹೇಗೆ ಕಾಣಿಸುವೆನೊ ?’, ಅದಕ್ಕಾಗಿ ನಾನು ನನ್ನ ಮನಸ್ಸಿನ ಸಿದ್ಧತೆ ಮಾಡಿಕೊಂಡಿದ್ದೆನು. ತಾಯಿ-ತಂದೆಯರ ಮನಸ್ಸಿನ ಸಿದ್ಧತೆಯೂ ಆಗಿತ್ತು. ಆಗ ನನ್ನ ಮುಖ, ಕಣ್ಣುಗಳು ಮತ್ತು ಶರೀರದ ಮುಂಭಾಗದಲ್ಲಿ ಎಲ್ಲ ಕಡೆ ಹರಡಿತ್ತು; ಆದರೆ ಈಗ ಅದು ಎಲ್ಲವೂ ಮಾಯವಾಗಿದೆ. ಈಗ ಕೇವಲ ಕಾಲಿನಲ್ಲಿ ಸ್ವಲ್ಪ ಉಳಿದಿದೆ. ‘ನನ್ನಿಂದ ಸಾಧನೆಯ ಪ್ರಯತ್ನ ಕಡಿಮೆಯಾಗುತ್ತದೆ, ಆದರೂ ದೇವರು ನನಗಾಗಿ ಬಹಳಷ್ಟು ಮಾಡುತ್ತಾರೆ’, ಎಂದು ಅನಿಸುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಇದೇ ಅರಿವು ನಿರಂತರ ಇರಬೇಕು. ಆಗ ಅಡಚಣೆಗಳು ಕೂಡ ದೂರವಾಗುತ್ತವೆ ಹಾಗೂ ಮನಸ್ಸು ಪ್ರಸನ್ನವಾಗುತ್ತದೆ. ಈಗ ನಿಮ್ಮ ಸುಧಾರಣೆಯ ಪ್ರಕ್ರಿಯೆ ನಡೆಯುತ್ತಿದೆ. ಅದು ಹಾಗೆಯೆ ಮುಂದುವರಿಯಲಿ. ಚೆನ್ನಾಗಿದೆ !
೧೧. ನಾವು ದೇವರ ಭಕ್ತಿ ಮಾಡಿದರೆ, ದೇವರು ನಮ್ಮ ಎಲ್ಲ ಅಡಚಣೆಗಳನ್ನು ದೂರಗೊಳಿಸುತ್ತಾನೆ !
೧೧ ಅ. ಅಧಿಕಾರಿಗಳು ವೇತನವನ್ನು ಹೆಚ್ಚಿಸುವುದು ಹಾಗೂ ಅವರು ತಮ್ಮ ‘ಟ್ರಸ್ಟ್’ನಿಂದ (ನ್ಯಾಸದಿಂದ) ಕಣ್ಣುಗಳ ಶಸ್ತ್ರಚಿಕಿತ್ಸೆ ಮಾಡಿಸಲು ಸಹಾಯ ಮಾಡುವುದು
ಓರ್ವ ಸಾಧಕ : ನಾನು ಎಲ್ಲಿ ನೌಕರಿ ಮಾಡುತ್ತೇನೊ, ಅಲ್ಲಿ ನನ್ನ ಮೊದಲ ವರ್ಷದಲ್ಲಿ ಮಾತ್ರ ವೇತನ ಸ್ವಲ್ಪ ಹೆಚ್ಚಾಗಿತ್ತು; ಆಗ ನಾನು ಮೇಲಧಿಕಾರಿಗಳೊಂದಿಗೆ ಮಾತನಾಡಿದೆನು. ಅವರು ನೇರವಾಗಿ ಕಾರ್ಯಾಲಯಕ್ಕೆ ಹೋಗಿ ನನ್ನ ವೇತನವನ್ನು ಹೆಚ್ಚಿಸಲು ಹೇಳಿದರು. ಅಧಿಕಾರಿಗಳು ಹೇಳಿರುವುದರಿಂದ ಅವರು ಪರ್ಯಾಯವಿಲ್ಲದೆ ನನ್ನ ವೇತನ ಹೆಚ್ಚಿಸಬೇಕಾಯಿತು. ನಂತರ ಅಧಿಕಾರಿಗಳು ನನಗೆ ಕೇಳಿದರು, ”ನಿನಗೆ ಇನ್ನೂ ಏನಾದರೂ ಅಡಚಣೆಯಿದೆಯೇ ?’’ ಆಗ ನಾನು ಹೇಳಿದೆ, ”ಕಣ್ಣುಗಳ ಶಸ್ತ್ರಚಿಕಿತ್ಸೆ ಮಾಡಿಸಲಿಕ್ಕಿದೆ. ಅದಕ್ಕೆ ದೊಡ್ಡ ಪ್ರಮಾಣದಲ್ಲಿ ಖರ್ಚಾಗುತ್ತದೆ.’’ ಆ ಮೇಲೆ ಅವರು ಶಸ್ತ್ರಚಿಕಿತ್ಸೆಯ ಖರ್ಚನ್ನು ತಮ್ಮ ಟ್ರಸ್ಟ್‌ನಿಂದ ನೀಡಿದರು. ಆದ್ದರಿಂದ ನನ್ನ ಎರಡೂ ಕಣ್ಣುಗಳ ಶಸ್ತ್ರಚಿಕಿತ್ಸೆ ೧೭ ಸಾವಿರ ರೂಪಾಯಿಗಳಲ್ಲಿ ಪೂರ್ಣವಾಯಿತು. ನಂತರ ಅಧಿಕಾರಿಗಳು ಕಾರ್ಯಾಲಯದಿಂದ ಶಸ್ತ್ರಚಿಕಿತ್ಸೆಯ ಬಿಲ್ ಅನ್ನು ಕೂಡ ಕೊಡಿಸಿ ನನಗೆ ತುಂಬಾ ಸಹಾಯ ಮಾಡಿದರು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ನೋಡಿದಿರಾ ದೇವರು ಎಷ್ಟು ಸಹಾಯ ಮಾಡುತ್ತಾರೆ ! ನಾವು ಕೇವಲ ಭಕ್ತಿ ಮಾಡಿದರೆ ಸಾಕು.
(ಮುಂದುವರಿಯುವುದು)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !