
ನಮಗೆ ವೆಬ್ (ಮಾಯಾಜಾಲ), ವೆಬ್‌ಸೈಟ್ (ಜಾಲತಾಣ), ಇಂಟರ್‌ನೆಟ್ ಇತ್ಯಾದಿ ಶಬ್ದಗಳ ಪರಿಚಯವಿದೆ. ಇದೇ ಇಂಟರ್‌ನೆಟ್‌ನಲ್ಲಿನ ಮಾಯಾಜಾಲದಲ್ಲಿ ಒಂದು ದೊಡ್ಡ ಕ್ಷೇತ್ರ ವ್ಯಾಪಿಸಿಕೊಂಡಿದೆ, ಅದೇ ‘ಡಾರ್ಕ್ ವೆಬ್’ ! ಇಂಟರ್‌ನೆಟ್‌ನಲ್ಲಿನ ಈ ಭಾಗ ಹೆಸರಿಗನುಸಾರ ಅಜ್ಞಾತವಾಗಿರುತ್ತದೆ; ಆದರೆ ಅಲ್ಲಿ ಇಂತಹ ಅನೇಕ ದುಷ್ಕೃತ್ಯಗಳು ನಡೆಯುತ್ತವೆ, ಅದರ ಸುಳಿವೇ ನಮಗೆ ಸಿಗುವುದಿಲ್ಲ. ಜಾಲತಾಣದಲ್ಲಿ ಸಹಜವಾಗಿ ಕಾಣಿಸುವ ಹಾಗೂ ನಾವು ಸಹಜವಾಗಿ ತಲುಪಲು ಸಾಧ್ಯವಿರುವ ಮಾಹಿತಿಯ ವರೆಗೆ ನಮ್ಮ ವಿಚಾರವಿರುತ್ತದೆ; ಆದರೆ ಈ ಜಗತ್ತು ಅದರ ಆಚೆಗೆ ಇರುತ್ತದೆ, ಅದರ ಕಡೆಗೆ ವಿಶಿಷ್ಟ ಗಣಕೀಯ ಪದ್ಧತಿಯ ಸಹಾಯದಿಂದ ಹೋಗಬೇಕಾಗುತ್ತದೆ.

೧. ಡಾರ್ಕ್ ವೆಬ್ ಎಂದರೇನು ?
ಡಾರ್ಕ್ ವೆಬ್ ಇದು ‘ವರ್ಲ್ಡ್ ವೈಡ್ ವೆಬ್’ನ (ವ್ವ್ವ್) ಒಂದು ಭಾಗವಾಗಿರುತ್ತದೆ, ಅದಕ್ಕೆ ನಿಯಮಿತ ‘ಗೂಗಲ್’ನಂತಹ ‘ಸರ್ಚ್ ಇಂಜಿನ್’ನಲ್ಲಿ ನೋಂದಾಯಿಸಿರುವುದಿಲ್ಲ. ಇದು ಕೆಲವೇ ವಿಶಿಷ್ಟ ‘ನೆಟ್ವರ್ಕ್’ಗಳೊಂದಿಗೆ ಸಂಪರ್ಕದಲ್ಲಿರುತ್ತದೆ, ಅದಕ್ಕೆ ‘ಡಾರ್ಕ್‌ನೆಟ್ಸ್’ ಎನ್ನುತ್ತಾರೆ ಹಾಗೂ ಅಲ್ಲಿಗೆ ಹೋಗಲು ವಿಶಿಷ್ಟ ಗಣಕೀಯ ಪದ್ಧತಿ, ಕೆಲವು ವಿಶಿಷ್ಟ ಮಾಹಿತಿ ಅಥವಾ ಅನುಮತಿಯ ಆವಶ್ಯಕತೆಯಿರುತ್ತದೆ. ಇದರಲ್ಲಿ ‘ಡೀಪ್ ವೆಬ್’ ಎನ್ನುವ ಸಂಕಲ್ಪನೆ ಇದೆ, ಅಂದರೆ ನಾವು ಸಾಮಾನ್ಯವಾಗಿ ಉಪಯೋಗಿಸುವ ಇಂಟರ್‌ನೆಟ್‌ನಲ್ಲಿ ಕೆಲವು ‘ಬ್ರೌಸರ್’ ಉಪಯೋಗಿಸಿ ಮಾಹಿತಿಯನ್ನು ನೋಡಬಹುದು. ಈ ಮಾಹಿತಿ ಯೆಂದರೆ, ಸಮುದ್ರದಲ್ಲಿ ಮುಳುಗಿದ ಹಿಮದ ಗಡ್ಡೆಯ ಒಂದು ತುದಿಯಾಗಿರುತ್ತದೆ. ಈ ಸಮುದ್ರದಲ್ಲಿನ ಎಲ್ಲ ಹಿಮಗಡ್ಡೆಗಳೆಂದರೆ, ‘ಡೀಪ್ ವೆಬ್’ ಆಗಿವೆ ಹಾಗೂ ‘ಡಾರ್ಕ್ ವೆಬ್’, ಎಂದರೆ ಈ ಹಿಮಗಡ್ಡೆಗಳ ಸಮುದ್ರದ ತಳದಲ್ಲಿನ ಬುಡಗಳಾಗಿವೆ, ಅಂದರೆ ಸಾಮಾನ್ಯವಾಗಿ ಇಂಟರ್‌ನೆಟ್ ಉಪಯೋಗಿಸುವವರು ಮೇಲಿನ ಸ್ತರದಲ್ಲಿನ ಮಾಹಿತಿಯನ್ನು ನೋಡಬಹುದು, ನಿಯಂತ್ರಿಸ ಬಹುದು. ಅದರಲ್ಲಿ ಪ್ರಾಮುಖ್ಯವಾಗಿರುವ ಮಾಹಿತಿಯೆಂದರೆ ಇ-ಮೇಲ್ ಅಕೌಂಟ, ಅನೇಕ ಬ್ಯಾಂಕ್‌ಗಳು, ಆರ್ಥಿಕ ಸಂಸ್ಥೆಗಳ ‘ಡಾಟಾಬೇಸ್’ (ಮಾಹಿತಿ ಸಂಗ್ರಹ), ಸಾಮಾಜಿಕ ಮಾಧ್ಯಮಗಳ ಖಾತೆಗಳು, ಖಾಸಗಿ ಉದ್ಯೋಗಗಳ ಮಾಹಿತಿ, ಕಾನೂನಿಗೆ ಸಂಬಂಧಿಸಿದ ಕಡತಗಳು, ಕೆಲವು ಮಹತ್ವಪೂರ್ಣ ಹಾಗೂ ಸಂವೇದನಾಶೀಲ ವೈದ್ಯಕೀಯ ಮಾಹಿತಿಗಳ ಸಮಾವೇಶವಿದೆ. ಇದರ ಆಚೆಗಿರುವುದು ‘ಡಾರ್ಕ್ ವೆಬ್’ನಲ್ಲಿನ ಮಾಹಿತಿ ಅಂದರೆ ಅದರಲ್ಲಿ ಕೇವಲ ಅನಧಿಕೃತ ವ್ಯವಹಾರ, ಅಮಲು ಪದಾರ್ಥಗಳ ವ್ಯವಹಾರ, ಕೆಲವು ಅತ್ಯಂತ ರಹಸ್ಯ ಮಾಹಿತಿ, ರಹಸ್ಯ ವ್ಯವಹಾರ, ರಹಸ್ಯ ಕಾಗದಪತ್ರಗಳು, ಕೆಲವು ಭಯೋತ್ಪಾದಕ ಷಡ್ಯಂತ್ರಗಳ ಚಟುವಟಿಕೆಗಳು, ಅನೇಕ ಅಜ್ಞಾತ ವಿಷಯಗಳ ಬಗ್ಗೆ ನಡೆಯುವ ಚರ್ಚೆ, ಇಂತಹ ಅನೇಕ ವಿಷಯಗಳ ಸಮಾವೇಶವಿರುತ್ತದೆ. ಇದರಲ್ಲಿನ ಕೆಲವು ಮಾಹಿತಿ ಎಷ್ಟು ಆಘಾತ ಕಾರಿಯಾಗಿರುತ್ತವೆಯೆಂದರೆ, ಇಂಟರ್‌ನೆಟ್ ಜಗತ್ತಿನಲ್ಲಿ ಹೀಗೂ ನಡೆಯುತ್ತದೆ ಎಂಬುದನ್ನು ನಂಬಲು ಸಾಧ್ಯವಾಗುವುದಿಲ್ಲ.
೨. ಈ ಮಾಹಿತಿಯನ್ನು ಹೇಗೆ ನೋಡುತ್ತಾರೆ ?
ಡಾರ್ಕ್ ವೆಬ್‌ನಲ್ಲಿನ ಮಾಹಿತಿಯನ್ನು ಹಾಗೆ ನೋಡಲು ಸಾಧ್ಯವಿಲ್ಲ; ಆದರೆ ಸದ್ಯ ‘ಟಾರ್’ (ಖಿಒಡಿ) ನಂತಹ ‘ಬ್ರೌಸರ್’ ಉಪಯೋಗಿಸಿ ಡಾರ್ಕ್ ವೆಬ್‌ನಲ್ಲಿ ಪ್ರವೇಶಿಸಲು ಸಾಧ್ಯವಿದೆ; ಆದರೆ ಇದರಲ್ಲಿ ಕೆಲವು ಆಪಾಯಗಳೂ ಇರುತ್ತವೆ. ‘ಟಾರ್’ನಂತಹ ‘ಬ್ರೌಸರ್’ ಉಪಯೋಗಿಸಿ ನಾವು ಡಾರ್ಕ್ ವೆಬ್‌ನಲ್ಲಿನ ಮಾಹಿತಿಯನ್ನು ಹುಡುಕುವಾಗ ಅನೇಕ ‘ವೈರಸ್’ ಅಥವಾ ಅಜ್ಞಾತ ಕಡತಗಳು ನಮ್ಮ ಗಣಕಯಂತ್ರದಲ್ಲಿ ನಮಗೆ ತಿಳಿಯದಂತೆಯೇ ‘ಡೌನ್‌ಲೋಡ್’ ಆಗಬಹುದು. ಈ ಕಡತಗಳೆಂದರೆ ಬೇರೆ ಏನೂ ಆಗಿರದೆ ನಮ್ಮ ಗಣಕಯಂತ್ರದ ಮಾಹಿತಿಯನ್ನು ಕಳ್ಳತನ ಮಾಡಲು, ಕಡತಗಳನ್ನು ನಷ್ಟಗೊಳಿಸಲು ಸಿದ್ಧಪಡಿಸಿರುವ ‘ಪ್ರೋಗ್ರಾಮ್’ ಆಗಿರಬಹುದು. ಉದ್ದೇಶ ಪೂರ್ವಕ ಬಿಟ್ಟಿರುವ ವೈರಸ್ ಆಗಿರಬಹುದು, ಅಂದರೆ ಡಾರ್ಕ್ ವೆಬ್‌ನಲ್ಲಿರುವ ಮಾಹಿತಿಯನ್ನು ನೋಡುವಾಗ ಅಪಾಯವೂ ಇದೆ. ಇಲ್ಲಿ ನಿಜವಾಗಿಯೂ ಏನು ನಡೆಯುತ್ತದೆ ? ಎಂಬುದನ್ನು ನೋಡಲು ಹೋಗುವುದೆಂದರೆ, ಕೆಲವೊಮ್ಮೆ ನಮ್ಮ ಗಣಕಯಂತ್ರ ಹಾಗೂ ಮಾಹಿತಿಗೆ ಅಡಚಣೆ ತಂದೊಡ್ಡಿದಂತಾಗುವುದು.
ಡಾರ್ಕ್ ವೆಬ್ ಉಪಯೋಗಿಸುವವರೆಂದರೆ ತಮ್ಮ ರಹಸ್ಯ ಹಾಗೂ ಅನಧಿಕೃತ ಕೃತ್ಯಗಳಿಗಾಗಿ ಉಪಯೋಗಿಸುವವರು ತಮ್ಮ ಪರಿಚಯವನ್ನು ಅಡಗಿಸಲು, ತಮ್ಮನ್ನು ಇತರರ ‘ಸರ್ಚ್’ನಿಂದ ಅಲಿಪ್ತವಾಗಿಡಲು ಸಂಬಂಧಪಟ್ಟ ಗಣಕೀಯ ಪದ್ಧತಿಗಳನ್ನು ಉಪಯೋಗಿಸುತ್ತಾರೆ. ‘ಹ್ಯಾಕರ್’ ಕೂಡ (ಮಾಹಿತಿ ಕದಿಯುವವರು) ಈ ವಿಶ್ವದಲ್ಲಿಯೇ ಕಾರ್ಯ ನಿರ್ವಹಿಸುತ್ತಿರುತ್ತಾರೆ, ಅವರು ಕೂಡ ನಮ್ಮ ಗಣಕಯಂತ್ರ ಹಾಗೂ ಮಾಹಿತಿಯನ್ನು ಕದಿಯಲು ಅಡಗಿ ಕುಳಿತುಕೊಂಡಿರುತ್ತಾರೆ.
೩. ಅಮೇರಿಕಾದ ಸೈನ್ಯದಿಂದ ನಿರ್ಮಾಣ
ಆನ್‌ಲೈನ್ ಹತ್ಯೆ ಮಾಡಲು ಸುಪಾರಿ ಕೊಡುವುದು, ಡ್ರಗ್ಸ್ ಖರೀದಿ, ಮಾನವ ಅವಯವಗಳ ಕಳ್ಳಸಾಗಾಟ, ನಕಲಿ ಪಾಸ್ ಪೋರ್ಟ್ ತಯಾರಿಸುವುದು, ಇತ್ಯಾದಿಗಳನ್ನು ಮಾಡುತ್ತಾರೆ. ‘ಚೈಲ್ಡ್ ಪೊರ್ನೋಗ್ರಾಫಿ’ (ಸಣ್ಣ ಮಕ್ಕಳ ಅಶ್ಲೀಲ ವಿಡಿಯೋ) ಇದು ಡಾರ್ಕ್ ವೆಬ್‌ನಲ್ಲಿನ ಸಾಮಾನ್ಯ ಚಟುವಟಿಕೆಯಾಗಿದೆ. ಡಾರ್ಕ್ ವೆಬ್‌ನ ನಿರ್ಮಾಣ ಅಮೇರಿಕಾದ ಸೈನ್ಯ ಮಾಡಿದೆ ಎಂದು ಹೇಳಲಾಗುತ್ತದೆ. ತಜ್ಞರ ಅಭಿಪ್ರಾಯಕ್ಕನುಸಾರ ಎಂದಿನಿಂದ ಇಂಟರ್‌ನೆಟ್ ಅಸ್ತಿತ್ವಕ್ಕೆ ಬಂದಿದೆಯೊ, ಅಂದಿನಿಂದ ಡಾರ್ಕ್ ವೆಬ್ ಕಾರ್ಯನಿರತವಾಗಿದೆ. ಅಮೇರಿಕಾದ ಸೈನ್ಯಕ್ಕೆ ತನ್ನ ಜಾಲತಾಣ ಗಳನ್ನು, ತನ್ನ ಮಾಹಿತಿಯನ್ನು ಜನರಿಂದ ರಹಸ್ಯವಾಗಿಡಲಿಕ್ಕಿತ್ತು, ಅವರಿಗೆ ತಮ್ಮ ನಿಯಮಿತ ಸಂಭಾಷಣೆಯನ್ನು ಯಾರಿಗೂ ತಿಳಿಯದಂತೆ ಮಾಡಲಿಕ್ಕಿತ್ತು; ಜಗತ್ತಿನಾದ್ಯಂತ ಹರಡಿರುವ ಅಮೇರಿಕಾದ ಗೂಢಚಾರರಿಗೆ ಅಮೇರಿಕಾದ ಸೈನ್ಯದ ಜೊತೆಗೆ ನಿಯಮಿತ ಸಂಪರ್ಕದಲ್ಲಿರಲು ಸಾಧ್ಯವಾಗಬೇಕು, ಚರ್ಚೆ ಮಾಡಲು ಸಾಧ್ಯವಾಗಬೇಕು, ಕಾರ್ಯದ ಆದೇಶ ನೀಡಲು ಸಾಧ್ಯವಾಗಬೇಕು, ಎಂಬ ಉದ್ದೇಶದಿಂದ ೧೯೯೦ ರಲ್ಲಿ ‘ಟಾರ್’ ಬ್ರೌಸರ್ ನಿರ್ಮಾಣವಾಯಿತು. ಪ್ರಾರಂಭದಲ್ಲಿ ಕೇವಲ ಅಮೇರಿಕನ್ ಸೈನ್ಯ ಮತ್ತು ಗೂಢಚಾರರಿಗೆ ಮಾತ್ರ ಇದ್ದ ಈ ಗಣಕೀಯ ಪದ್ಧತಿ ನಂತರ ಸಾಮಾನ್ಯ ನಾಗರಿಕರಿಗಾಗಿ ತೆರೆಯಲಾಯಿತು, ಅದರಿಂದ ಸಾಮಾನ್ಯ ನಾಗರಿಕರೂ ರಹಸ್ಯವಾಗಿ ಹಾಗೂ ಅಜ್ಞಾತರಾಗಿದ್ದು ತಮ್ಮ ರಹಸ್ಯ ಚಟುವಟಿಕೆಗಳನ್ನು ಯಾವುದೇ ಸರ್ಚ್ ಇಂಜಿನ್‌ನ ಸಂಪರ್ಕ ಮಾಡದೆ ಮಾಡಲು ಸಾಧ್ಯವಾಗಬೇಕು. ಆದ್ದರಿಂದ ನಂತರ ಇದರ ಉಪಯೋಗ ಸಾಮಾನ್ಯ ನಾಗರಿಕರಲ್ಲಿಯೂ ಆರಂಭವಾಯಿತು. ಸಾಮಾನ್ಯ ನಾಗರಿಕರ ದೃಷ್ಟಿಯಲ್ಲಿ ಈ ಸೌಲಭ್ಯವನ್ನು ತೆರೆಯಲಾಯಿತು ಎಂದು ಅಮೇರಿಕಾದ ಸೈನ್ಯ ಹೇಳುತ್ತಿದ್ದರೂ, ಅದರ ಉದ್ದೇಶ ಬೇರೆಯೆ ಆಗಿತ್ತು. ಅಮೇರಿಕನ್ ಅಧಿಕಾರಿ ಅಥವಾ ಆಡಳಿತದಲ್ಲಿನ ಅಧಿಕಾರಿಗಳ ರಹಸ್ಯ ಸಂಭಾಷಣೆ ಯಾವುದೇ ಹ್ಯಾಕರ್‌ಗೆ ಸಿಕ್ಕಿದರೂ, ಅದು ನಿಜವಾಗಿಯೂ ಯಾರದ್ದಾಗಿದೆ ? ಸತ್ಯವೋ ಅಥವಾ ಸುಳ್ಳೋ, ಎಂಬುದರ ಸುಳಿವು ಸಿಗಲು ಸಾಧ್ಯವಿಲ್ಲ.
ಆಸ್ಟ್ರೇಲಿಯಾದ ಜ್ಯುಲಿಯನ್ ಅಸಾಂಜೆ ಎಂಬ ಗಣಕಯಂತ್ರ ತಜ್ಞನು ಅಮೇರಿಕನ್ ಅಧಿಕಾರಿ, ಸೈನ್ಯದ ಜಗತ್ತಿನಾದ್ಯಂತದಲ್ಲಿರುವ ಅವರ ಪತ್ತೆದಾರರಿಗೆ ಕಳುಹಿಸುವ ರಹಸ್ಯ ಸಂದೇಶಗಳನ್ನು ವಶ ಪಡಿಸಿಕೊಂಡಿದ್ದನು ಹಾಗೂ ಅದನ್ನು ಅವನ ‘ವಿಕಿಲಿಕ್ಸ್’ ಈ ಜಾಲತಾಣದಲ್ಲಿ ಪ್ರಕಟಿಸಿದ್ದ. ಅಮೇರಿಕಾ ಜಗತ್ತಿನಲ್ಲಿ ನಿಜವಾಗಿಯೂ ಏನೇನು ‘ಉದ್ಯೋಗ’ ಮಾಡುತ್ತಿದೆ, ಎಂಬುದನ್ನು ಅಸಾಂಜೆ ಈ ಸಂದೇಶವನ್ನು ಇಟ್ಟುಕೊಂಡು ಬಹಿರಂಗಪಡಿಸಿದ್ದನು. ಆದ್ದರಿಂದ ಅವನ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಮೇರಿಕಾದಿಂದ ಪ್ರಯತ್ನವಾಗಿತ್ತು; ಆದರೆ ಅವರು ತಪ್ಪಿಸಿಕೊಂಡನು.
೪. ಡಾರ್ಕ್ ವೆಬ್‌ನ ಅಪಾಯಗಳು
ಡಾರ್ಕ್ ವೆಬ್‌ನಲ್ಲಿ ಉದ್ದೇಶಪೂರ್ವಕವಾಗಿ ಮಾಹಿತಿಯನ್ನು ಅಡಗಿಸಿಡಲಾಗುತ್ತದೆ. ಇಲ್ಲಿ ಅಜ್ಞಾತರಿಂದ ನಡೆಯುವ ಚರ್ಚೆಯಲ್ಲಿ ಕಾನೂನುಬಾಹಿರ ವಸ್ತು ಹಾಗೂ ಸೇವೆಗಳ ಕೊಡು-ಕೊಳ್ಳುವಿಕೆ ಆಗಬಹುದು, ಶಸ್ತ್ರಾಸ್ತ್ರಗಳ ಖರೀದಿ-ಮಾರಾಟದ ವ್ಯವಹಾರ, ಕಳ್ಳತನದ ಕ್ರೆಡಿಟ್ ಕಾರ್ಡ್‌ನ ವಿವರಣೆಯನ್ನು ಹೊಂದಾಣಿಕೆ ಮಾಡುವುದು ಹಾಗೂ ಇತರ ಅನಧಿಕೃತ ವಿಷಯ ಗಳಿರುತ್ತವೆ. ಕೆಲವು ವಿಷಯಗಳಲ್ಲಿ ಭಯಹುಟ್ಟಿಸುವ ಚರ್ಚೆ
ಉದಾ. ಮಾನವನ ಚರ್ಮದ ಬೆಲೆ ಎಷ್ಟು ? ಎಲ್ಲಿ ಸಿಗಬಹುದು ? ಮಾನವನ ಅವಯವಗಳ ಕಳ್ಳಸಾಗಾಟದ ಚರ್ಚೆ ಇಂತಹ ಬಹಳಷ್ಟು ಭಯಂಕರ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತದೆ. ಯಾರನ್ನಾದರೂ ‘ಮುಗಿಸುವುದರ’ ಚರ್ಚೆ ನಡೆಯುತ್ತದೆ. ಆದ್ದರಿಂದ ಜಾಲತಾಣ ದಲ್ಲಿನ ಈ ಅಜ್ಞಾತ ವಿಶ್ವದ ಮೆಲೆ ನಿಜವಾಗಿಯೂ ನಿರ್ಬಂಧ ಹೇರಬೇಕು; ಆದರೆ ಅದು ಆಗಲಿಕ್ಕಿಲ್ಲ; ಏಕೆಂದರೆ, ಅದರ ಹಿಂದೆ ಮೇಲೆ ಉಲ್ಲೇಖಿಸಿರುವ ಹಾಗೆ ಅಮೇರಿಕಾದ ಹಾಗೂ ಇನ್ನಿತರ ಕೆಲವು ಪಾಶ್ಚಾತ್ಯ ದೇಶಗಳ ಹಿತಸಂಬಂಧವಿದೆ. ಅವರೇ ಈ ಅಜ್ಞಾತ ವಿಶ್ವವನ್ನು ನಡೆಸುತ್ತಾರೆ.
ಡಾರ್ಕ್ ವೆಬ್ ಅನಧಿಕೃತ ಕೃತ್ಯಗಳಿಗಾಗಿ, ಮಾನವನ ಅವಯವಗಳ ಕಳ್ಳಸಾಗಾಣಿಕೆಗಾಗಿ ಉಪಯೋಗವಾಗುತ್ತಿದ್ದರೂ ಅದರ ಲಾಭವೂ ಸೈಬರ್ ಪೊಲೀಸರಿಗೆ ಆಗುತ್ತದೆ. ಯಾವುದಾದರೂ ದೊಡ್ಡ ಷಡ್ಯಂತ್ರ ನಡೆಯುತ್ತಿದ್ದರೆ, ಮಾನವನ ಕಳ್ಳಸಾಗಾಟದ ಚರ್ಚೆ ನಡೆಯುತ್ತಿದ್ದರೆ, ಯಾರನ್ನಾದರೂ ಕೊಲೆ ಮಾಡುವ ಯೋಜನೆ ನಡೆಯುತ್ತಿದ್ದರೆ, ತಜ್ಞ ಪೊಲೀಸ್ ಅಧಿಕಾರಿಗಳು ಈ ಮಾಹಿತಿಯನ್ನು ಉಪಯೋಗಿಸಿ ಸಂಬಂಧಪಟ್ಟ ಅಯೋಗ್ಯ ಕೃತಿಯನ್ನು ತಡೆಗಟ್ಟಬಹುದು ಹಾಗೂ ಅದನ್ನು ನಿಲ್ಲಿಸಬಹುದು. ಆದ್ದರಿಂದ ಡಾರ್ಕ್ ವೆಬ್‌ನ ಮೇಲೆ ನಿರ್ಬಂಧ ಬರುವುದಿಲ್ಲ.
ಡಾರ್ಕ್ ವೆಬ್ ನು ಮೋಜಿಗಾಗಿಯೂ ಉಪಯೋಗಿಸಬಾರದು ಹಾಗೂ ಕೆಲವರಿಗೆ ಗಣಕಯಂತ್ರದ ಜ್ಞಾನವಿರುವ ಮಿತ್ರರಿಂದ, ಪರಿಚಯದವರಿಂದ ಈ ವಿಷಯದ ಮಾಹಿತಿ ಸಿಕ್ಕಿದರೆ ಹಾಗೂ ಜಿಜ್ಞಾಸು ಎಂದು ಈ ವಿಶ್ವವನ್ನು ಅನು ಭವಿಸಲಿಕ್ಕಿದ್ದರೆ, ಉಪಯೋಗಿಸುವಾಗ ಅತ್ಯಂತ ಜಾಗರೂಕತೆ ವಹಿಸುವುದು ಅವಶ್ಯಕತೆಯಿದೆ. ಇಲ್ಲಿ ತನ್ನ ಮಾಹಿತಿಯನ್ನು ಸುರಕ್ಷಿತವಾಗಿಡು ವುದು ಹಾಗೂ ಯಾವುದೇ ಕಾನೂನುಬಾಹಿರ ಚರ್ಚೆಯಲ್ಲಿ ಅಥವಾ ಸಂಶಯಾಸ್ಪದ ವಿಷಯಗಳಲ್ಲಿ ಭಾಗವಹಿಸಬಾರದು.
‘ಡಿಜಿಟಲ್ ಅರೆಸ್ಟ್’ನಲ್ಲಿನ (ನಕಲಿ ಬಂಧನದಲ್ಲಿನ) ಅಪರಾಧಿಗಳು !
‘ಡಿಜಿಟಲ್ ಅರೆಸ್ಟ್’ ಈ ವಿಷಯವನ್ನು ನಾವು ಕೇಳಿರುತ್ತೇವೆ. ಇದರಲ್ಲಿ ವಿಡಿಯೋ ಕಾಲ್ ಮಾಡುವ ಪೊಲೀಸ್, ಕೇಂದ್ರೀಯ ತನಿಖಾ ವಿಭಾಗದ ಅಧಿಕಾರಿ, ಆದಾಯ ತೆರಿಗೆ ವಿಭಾಗದ ಅಧಿಕಾರಿಗಳ ಹೆಸರನ್ನು ಹೇಳಿಕೊಳ್ಳುವವರು ಹಾಗೂ ಹಾಗೆಯೆ ಉಡುಪು ಧರಿಸಿಕೊಳ್ಳುವ ಅಪರಾಧಿಗಳು ಇವರನ್ನೇಕೆ ಬಂಧಿಸುವುದಿಲ್ಲ ? ಎಂದು ಕೆಲವರಿಗೆ ಅನಿಸಬಹುದು. ಇದರ ಕಾರಣವೆಂದರೆ, ಹೆಚ್ಚಿನ ಅಪರಾಧಿಗಳು ಕಂಬೋಡಿಯಾ, ಕೊಲ್ಲಿ ರಾಷ್ಟ್ರಗಳಲ್ಲಿ ಕುಳಿತು ಈ ಉದ್ಯೋಗ ಮಾಡುತ್ತಿರುತ್ತಾರೆ, ಎಂಬುದು ಗಣಕಯಂತ್ರ ತಜ್ಞರ ಅಭಿಪ್ರಾಯವಾಗಿದೆ. ಅಲ್ಲಿಂದಲೇ ಅವರು ಎಲ್ಲ ‘ನೆಟ್‌ವರ್ಕ್’ಗಳನ್ನು ಉಪಯೋಗಿಸುತ್ತಿರುವುದರಿಂದ ಭಾರತೀಯ ಸುರಕ್ಷಾ ವ್ಯವಸ್ಥೆಯ ಕೈಗೆ ಅವರು ಸಿಗುವುದಿಲ್ಲ. ಎಲ್ಲಿಯವರೆಗೆ ಆ ದೇಶಗಳಿಗೆ ಹೋಗಿ ಈ ಅಪರಾಧಿಗಳನ್ನು ಹಿಡಿದು ಭಾರತಕ್ಕೆ ತಂದು ಅವರ ವಿರುದ್ಧ ಕಠೋರ ಕ್ರಮ ತೆಗೆದುಕೊಳ್ಳುವುದಿಲ್ಲವೋ, ಅಷ್ಟರ ವರೆಗೆ ಈ ಸಮಸ್ಯೆ ಮೂಲದಿಂದ ನಿವಾರಣೆಯಾಗುವುದಿಲ್ಲ !
– ಶ್ರೀ. ಯಜ್ಞೇಶ ಸಾವಂತ, ಸನಾತನ ಸಮುಚ್ಚಯ, ದೇವದ, ಪನವೇಲ (೨೬.೧೨.೨೦೨೪)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು