ಪ್ರಭು ಶ್ರೀರಾಮ ಮತ್ತು ಭಗವಾನ ಶ್ರೀಕೃಷ್ಣರ ಆದರ್ಶವನ್ನು ಇಟ್ಟುಕೊಂಡು ಕೃತಿಗಳನ್ನು ಮಾಡುವುದು ಮುಖ್ಯ !

ಪ್ರಸ್ತುತ ನಡೆಯುತ್ತಿರುವ ಭಾರತ-ಪಾಕಿಸ್ತಾನ ಯುದ್ಧದ ಹಿನ್ನೆಲೆಯಲ್ಲಿ…

ಸದ್ಯಕ್ಕೆ ಭಯೋತ್ಪಾದಕರ ವಿರುದ್ಧ ಭಾರತವು ಶಸ್ತ್ರವನ್ನು ಎತ್ತಿದೆ. ಈ ಶಸ್ತ್ರವನ್ನು ಎತ್ತಿದ್ದರೂ, ನಾವು ನೀತಿಶಾಸ್ತ್ರದ ಮಿತಿಯಲ್ಲಿಯೇ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದೇವೆ. ನಮ್ಮ ಶತ್ರು ದುಷ್ಟ ಮನಸ್ಸಿನವನು ಅತ್ಯಂತ ಕಪಟಿ, ಕುತಂತ್ರಿ ಯಾಗಿದ್ದಾನೆ. ಕ್ರೌರ್ಯವು ಅವನ ಸಹಜ ಸ್ವಭಾವವಾಗಿದೆ. ಅಂತಹ ಶತ್ರುವಿನೊಂದಿಗೆ ಹೋರಾಡುವಾಗ ನಾವು ಅತ್ಯಂತ ಎಚ್ಚರಿಕೆಯಿಂದ ಇರುವುದು ಅತ್ಯವಶ್ಯಕ; ಏಕೆಂದರೆ ಶತ್ರುವಿನ ಕೈಯಲ್ಲಿ ಶಸ್ತ್ರಾಸ್ತ್ರಗಳಿದ್ದರೂ, ಅವನಿಗೆ ನೀತಿಶಾಸ್ತ್ರ, ನ್ಯಾಯಶಾಸ್ತ್ರ ಮತ್ತು ಮಾನವಿಯತೆಯೊಂದಿಗೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ ನೀತಿಶಾಸ್ತ್ರ, ನ್ಯಾಯಶಾಸ್ತ್ರ ಮತ್ತು ಮಾನವೀಯತೆಗಳನ್ನು ಗಾಳಿಗೆ ತೂರಿ ಈ ರಾಕ್ಷಸನು ನಮ್ಮೊಂದಿಗೆ ಯಾವುದೇ ಹಂತಕ್ಕೆ ಇಳಿದು ಹೋರಾಡಲಿದ್ದಾನೆ ಎಂಬುದನ್ನು ನಾವು ಗಮನದಲ್ಲಿಡ ಬೇಕು. ಸದ್ಯಕ್ಕೆ ನಾವು ಅದರ ಅನುಭವ ಪಡೆಯುತ್ತಿದ್ದೇವೆ.

ಶ್ರೀ. ದುರ್ಗೇಶ ಜಯವಂತ ಪರೂಳಕರ

ಪ್ರಯಾಣಿಕ ವಿಮಾನಗಳ ಆಧಾರವನ್ನು ಪಡೆದು ಅವನು ನಮ್ಮೊಂದಿಗೆ ಹೋರಾಡುತ್ತಿದ್ದಾನೆ. ನಾವು ಎಲ್ಲಾ ನಿಯಮಗಳ ಮಿತಿಯಲ್ಲಿಯೇ ಯುದ್ಧ ಮಾಡುತ್ತಿದ್ದೇವೆ. ಈ ನಿಯಮಗಳು ಪ್ರಯಾಣಿಕ ವಿಮಾನಗಳ ಮೇಲೆ ಆಕ್ರಮಣ ಮಾಡಲು ನಮಗೆ ಅನುಮತಿ ನೀಡುವುದಿಲ್ಲ, ಹಾಗೆಯೇ ನಾವು ಸಭ್ಯತೆ ಮತ್ತು ಮಾನವೀಯತೆಯನ್ನು ಹಿಡಿದುಕೊಂಡು ರಣರಂಗಕ್ಕೆ ಇಳಿದಿದ್ದೇವೆ. ನಮ್ಮ ಶತ್ರುವು ನಮ್ಮ ಸೈನಿಕರೊಂದಿಗೆ ಹೋರಾಡುವ ಬದಲು ನಿರಾಯುಧರಾದ ನಾಗರಿಕರ ವಾಸಸ್ಥಾನಗಳ ಮೇಲೆ ಆಕ್ರಮಣ ಮಾಡುತ್ತಿದ್ದಾನೆ. ಇದರರ್ಥ ಅವನು ನ್ಯಾಯಶಾಸ್ತ್ರ, ನೀತಿಶಾಸ್ತ್ರ ಮತ್ತು ಮಾನವೀಯತೆಗಳನ್ನು ಬದಿಗೊತ್ತಿ ಮಾನವೀಯತೆಯ ಮುಖವಾಡದ ಹಿಂದೆ ತನ್ನ ರಾಕ್ಷಸೀ ಮಹತ್ವಾಕಾಂಕ್ಷೆಯನ್ನು ಪೂರೈಸಲು ಪ್ರಯತ್ನಿಸುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಈ ಮಿತಿಯಲ್ಲಿಯೇ ಯುದ್ಧ ಮಾಡಲು ನಾವು ಪ್ರಯತ್ನಿಸಿದರೆ, ಅದರಲ್ಲಿ ನಮಗೆ ಯಶಸ್ಸು ಸಿಗುತ್ತದೆ ಎಂದು ಅನಿಸುವುದಿಲ್ಲ.

೧. ಪಾಕ್‌ನ ಮನಸ್ಥಿತಿ ಮತ್ತು ಭಾರತವು ಎಲ್ಲಾ ನೀತಿ ನಿಯಮಗಳನ್ನು ಮೀರಿ ಯುದ್ಧ ಮಾಡುವ ಅವಶ್ಯಕತೆ ಇದೆ. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಇವರು, ”ಭಾರತೀಯ ಸೈನ್ಯದೊಂದಿಗೆ ಯುದ್ಧ ಮಾಡಲು ಮದರಸಾಗಳಲ್ಲಿನ ಮಕ್ಕಳ ರಕ್ಷಣಾ ಕೋಟೆಯನ್ನು ರಚಿಸಲಾಗುವುದು”, ಎಂದು ತಮ್ಮ ಸಂಸತ್ತಿನಲ್ಲಿ ಸ್ಪಷ್ಟವಾಗಿ ಹೇಳಿದರು. ಇದರ ಅರ್ಥ ಸ್ಪಷ್ಟವಾಗಿದೆ, ‘ಪಾಕಿಸ್ತಾನದ ಸೈನ್ಯ, ಸರ್ಕಾರ, ಭಯೋತ್ಪಾದಕ ಸಂಘಟನೆಗಳು, ಮದರಸಾಗಳು ಮತ್ತು ಜಿಹಾದಿ ಸಂಘಟನೆಗಳ ಹೆಸರುಗಳು ವಿಭಿನ್ನವಾಗಿದ್ದರೂ, ಇವೆಲ್ಲವೂ ಜಿಹಾದಿಗಳೇ ಎಂದು ಸಾಬೀತಾಗುತ್ತದೆ, ಹಾಗೆಯೇ ‘ಮದರಸಾಗಳಿಂದ ನೀಡಲಾಗುವ ಶಿಕ್ಷಣವು ಜಿಹಾದಿಯಾಗಿದೆ’ ಎಂಬುದು ಸಹ ಸ್ಪಷ್ಟವಾಯಿತು.

ಪಾಕಿಸ್ತಾನದ ರಕ್ಷಣಾ ಸಚಿವರ ಹೇಳಿಕೆಯಿಂದ ಏನು ಸ್ಪಷ್ಟ ವಾಗುತ್ತದೆಯೆಂದರೆ, ಅಲ್ಲಿ ಸೈನ್ಯ ಎಂಬ ಯಾವುದೇ ಪ್ರಕಾರವಿಲ್ಲ, ಇರುವವರೆಲ್ಲ ಜಿಹಾದಿಗಳು ಮತ್ತು ಅವರು ಎಂದಿಗೂ ಭಾರತೀಯ ಸೈನ್ಯದೊಂದಿಗೆ ಹೋರಾಡಿಲ್ಲ. ಅವರು ಯಾವಾಗಲೂ ನಾಗರಿಕ ವಾಸಸ್ಥಾನಗಳ ಮೇಲೆ ಆಕ್ರಮಣ ಮಾಡಿದ್ದಾರೆ. ಜಿಹಾದಿಗಳು ಬಹಿರಂಗವಾಗಿ ಯುದ್ಧ ಮಾಡುವುದಿಲ್ಲ, ಅವರು ಕದ್ದುಮುಚ್ಚಿಯೇ ಯುದ್ಧ ಮಾಡುತ್ತಾರೆ. ಭಾರತೀಯ ಸೈನ್ಯವು ಯುದ್ಧಕ್ಕೆ ಬಹಿರಂಗ ಸವಾಲು ಹಾಕಿತು; ಆದರೆ ಆ ಸವಾಲನ್ನು ಸ್ವೀಕರಿಸದೆ ಜಿಹಾದಿ ಮನಸ್ಥಿತಿಗನುಸಾರ ಅದು ತನ್ನ ವರ್ತನೆಯನ್ನು ಮುಂದುವರೆಸಿದೆ; ಆದ್ದರಿಂದಲೇ ನಾಗರಿಕ ಜಗತ್ತಿನ ಯಾವುದೇ ಬಂಧನದಲ್ಲಿರದೆ ಎಲ್ಲಾ ಗಡಿಗಳನ್ನು ಉಲ್ಲಂಘಿಸಿ ನಾವು ಹೋರಾಡಬೇಕು. ಇದನ್ನೆಲ್ಲಾ ಪರಿಗಣಿಸಿದಾಗ, ಭಾರತೀಯ ಸೇನೆಯು ಮಾನವ ಸೈನ್ಯದೊಂದಿಗೆ ಹೋರಾಡುತ್ತಿಲ್ಲ, ಬದಲಾಗಿ ಅದು ಅಮಾನವೀಯ ಸೈನ್ಯದ ವಿರುದ್ಧ ಹೋರಾಡುತ್ತಿದೆ. ಈ ಅಮಾನವೀಯ ಸೈನ್ಯಕ್ಕೂ ನಾಗರಿಕತೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆದ್ದರಿಂದ ನಾಗರಿಕತೆಯ ಚೌಕಟ್ಟಿನಲ್ಲಿದ್ದು ಅಸಭ್ಯ ಅಮಾನವೀಯ ಸಮಾಜದೊಂದಿಗೆ ಹೋರಾಡಿ ವಿಜಯ ಸಾಧಿಸಲು ಸಾಧ್ಯವಿಲ್ಲ.

ಸಂಕ್ಷಿಪ್ತದಲ್ಲಿ, ನಾವು ಸಹ ಎಲ್ಲಾ ರೀತಿಯ ನೀತಿ ನಿಯಮಗಳನ್ನು ಮೀರಿ ಯುದ್ಧ ಮಾಡಬೇಕಾಗುತ್ತದೆ. ಅಂತಹ ಯುದ್ಧ ಮಾಡುವುದು ಸರಿಯೋ ಅಥವಾ ತಪ್ಪೋ ? ಎಂಬ ಪ್ರಶ್ನೆ ನಮಗೆ ಖಂಡಿತ ಉದ್ಭವಿಸುತ್ತದೆ. ಈ ಪ್ರಶ್ನೆಯನ್ನು ಪರಿಗಣಿಸಿ, ಈಗ ನಾವು ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.

೨. ಶಸ್ತ್ರಧಾರಿಗಳನ್ನು ಕೊಲ್ಲುವುದು ನ್ಯಾಯ ಮತ್ತು ನೀತಿ !

ನಿಜ ಹೇಳಬೇಕೆಂದರೆ ಇಂತಹ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಉದ್ಭವಿಸಲು ಕಾರಣವಿಲ್ಲ. ದುರಹಂಕಾರಿಯೊಂದಿಗೆ ದುರಹಂಕಾರ ದಿಂದಲೇ ವರ್ತಿಸಬೇಕಾಗುತ್ತದೆ. ಸಭ್ಯ ಮನುಷ್ಯನೊಂದಿಗೆ ಸಭ್ಯತೆಯಿಂದಲೇ ವರ್ತಿಸಬೇಕಾಗುತ್ತದೆ. ಅಸಭ್ಯ ಮನುಷ್ಯನೊಂದಿಗೆ ಅಸಭ್ಯತೆಯಿಂದಲೇ ವರ್ತಿಸಬೇಕಾಗುತ್ತದೆ. ನಿಯಮಗಳ ಬಂಧನ ದಲ್ಲಿದ್ದು ವ್ಯವಹರಿಸುವವನಿಗೆ ನಿಯಮಗಳ ಬಂಧನದಲ್ಲಿದ್ದೇ ಉತ್ತರಿಸಬೇಕಾಗುತ್ತದೆ; ಆದರೆ ನಿಯಮಗಳ ಬಂಧನವನ್ನು ಮುರಿದು ವರ್ತಿಸುವವನಿಗೆ ನೈತಿಕತೆ, ನ್ಯಾಯ ಮತ್ತು ಮಾನವೀಯತೆಯ ಮಿತಿಯಲ್ಲಿರದೇ ವರ್ತಿಸುವವನಿಗೆ ನೈತಿಕತೆ, ನ್ಯಾಯ ಮತ್ತು ಮಾನವೀಯತೆಯ ಮಿತಿಯಲ್ಲಿದ್ದು ಶಿಕ್ಷಿಸಲು ಸಾಧ್ಯವಿಲ್ಲ. ಯಾರು ನೈತಿಕತೆಯನ್ನು ಪಾಲಿಸುವುದಿಲ್ಲ, ಯಾರಿಗೆ ನ್ಯಾಯ ತಿಳಿದಿಲ್ಲ ಮತ್ತು ಯಾರು ಮಾನವೀಯತೆಯ ಬಗ್ಗೆ ಯೋಚಿಸುವುದೂ ಇಲ್ಲ, ಅಂತಹ ಪ್ರವೃತ್ತಿಯ ಜನರೊಂದಿಗೆ ನಾವು ನೈತಿಕತೆ, ನ್ಯಾಯ ಮತ್ತು ಮಾನವೀಯತೆಯ ಬಗ್ಗೆ ಯೋಚಿಸಿ ಹೋರಾಡಲು ನಿರ್ಧರಿಸಿದರೆ, ನಮ್ಮ ಸೋಲು ಖಚಿತ. ಆ ಸೋಲನ್ನು ನಾವು ಒಪ್ಪಿಕೊಳ್ಳುವುದು ಎಂದರೆ, ನೈತಿಕತೆ, ನ್ಯಾಯಶಾಸ್ತ್ರ ಮತ್ತು ಮಾನವೀಯತೆಗೆ ನಾವೇ ನಮ್ಮ ಕೈಯಿಂದ ತಿಲಾಂಜಲಿ ನೀಡಿದಂತೆ.

ಶಸ್ತ್ರಧಾರಿಯು ಸಹ ಶಾಸ್ತ್ರದ ಬಗ್ಗೆ ಯೋಚಿಸದೆ ಹೋರಾಡು ತ್ತಿದ್ದರೆ, ಅವನ ಸ್ಪರ್ಧಿಯು ಸಹ ಶಾಸ್ತ್ರದ ಬಗ್ಗೆ ಯೋಚಿಸದೆ ತನ್ನ ಮೇಲೆ ಬಂದ ಶಸ್ತ್ರಧಾರಿಯನ್ನು ಕೊಲ್ಲುವುದು ನ್ಯಾಯ, ನೀತಿ ಮತ್ತು ಮಾನವೀಯತೆಯಾಗುತ್ತದೆ. ನಾವು ಇತಿಹಾಸವನ್ನು ಅವಲೋಕಿಸಿದರೂ, ನಮ್ಮ ಈ ನಿರ್ಧಾರವು ತಪ್ಪಾಗುವುದಿಲ್ಲ, ಹಾಗೆಯೇ ನ್ಯಾಯ, ನೈತಿಕತೆ ಮತ್ತು ಮಾನವೀಯತೆಯ ದೃಷ್ಟಿಯಿಂದ ನಮ್ಮ ಈ ನಿರ್ಧಾರವು ಅಯೋಗ್ಯವಾಗುವುದಿಲ್ಲ.

೩. ರಾಕ್ಷಸೀ ಪ್ರವೃತ್ತಿಯನ್ನು ನಿರ್ನಾಮ ಮಾಡುವುದೇ ನ್ಯಾಯ !

ನಾವು ನಮ್ಮ ರಾಷ್ಟ್ರವನ್ನು ರಕ್ಷಿಸಬೇಕು. ನಮ್ಮ ಜನರನ್ನು ರಕ್ಷಿಸಬೇಕು. ಪ್ರಯಾಣಿಕ ವಿಮಾನಗಳನ್ನು ಬಳಸಿಕೊಂಡು ನಮ್ಮ ಶತ್ರುವು ನಮ್ಮ ಮೇಲೆ ಆಕ್ರಮಣ ಮಾಡಿದರೆ, ನಾವು ಮೊದಲು ಯೋಚಿಸಬೇಕಾಗಿರುವುದು ಆ ಪ್ರಯಾಣಿಕ ವಿಮಾನದಲ್ಲಿ ನಿಜ ವಾಗಿಯೂ ಸಾಮಾನ್ಯ ನಾಗರಿಕರು ಪ್ರಯಾಣಿಸುತ್ತಿದ್ದಾರೆಯೇ ?

ಆ ವಿಮಾನದಲ್ಲಿ ಭಯೋತ್ಪಾದಕರು ಅಥವಾ ಜಿಹಾದಿಗಳು ಇರುವುದಿಲ್ಲ ಎಂದು ನಮಗೆ ಖಚಿತವಿದೆಯೇ ? ನಾಗರಿಕರನ್ನು ವಿಮಾನದಲ್ಲಿಟ್ಟುಕೊಂಡು ಅವರು ನಮ್ಮ ಮೇಲೆ ಆಕ್ರಮಣ ಮಾಡಿ ನಮ್ಮ ನಾಗರಿಕರನ್ನು ಕೊಂದರೆ, ನಮ್ಮ ನಾಗರಿಕರನ್ನು ರಕ್ಷಿಸಲು, ಅವರ ನಾಗರಿಕರನ್ನು ಕೊಂದು ಮತ್ತು ನಂತರ ಆ ಭಯೋತ್ಪಾದಕರನ್ನು ಕೊಲ್ಲಬೇಕಾಗುತ್ತದೆ. ಇಲ್ಲದಿದ್ದರೆ ನಮ್ಮ ಸೈನಿಕರೂ ಸಾಯುತ್ತಾರೆ ಮತ್ತು ನಮ್ಮ ನಾಗರಿಕರೂ ಸಾಯುತ್ತಾರೆ. ನ್ಯಾಯ, ನೈತಿಕತೆ ಮತ್ತು ಮಾನವೀಯತೆಯನ್ನು ಆತ್ಮಹತ್ಯೆಯ ಮೂಲಕ ಸಾಧಿಸಬೇಕು ಎಂದು ಹೇಳುವುದು ಅನಾಗರಿಕತೆಯಾಗಿದೆ. ವಾಸ್ತವವಾಗಿ ನ್ಯಾಯ, ನೈತಿಕತೆ ಮತ್ತು ಮಾನವೀಯತೆಯ ರಕ್ಷಣೆಗಾಗಿಯೇ ಅಂತಹ ದುಷ್ಟ ಪ್ರವೃತ್ತಿಯ, ರಾಕ್ಷಸೀ ಪ್ರವೃತ್ತಿಯ ಜನರನ್ನು ನಿರ್ನಾಮ ಮಾಡುವುದೇ ನ್ಯಾಯ, ಅದೇ ನೀತಿ ಮತ್ತು ಅದೇ ಮಾನವೀಯತೆಯಾಗಿದೆ.

೪. ರಾಷ್ಟ್ರವನ್ನು ರಕ್ಷಿಸುವುದು ರಾಷ್ಟ್ರ ಧರ್ಮ ಮತ್ತು ಕರ್ತವ್ಯ

ಕೇವಲ ಕೃತಿ ಮುಖ್ಯವಲ್ಲ, ಆ ಕೃತಿಯ ಹಿಂದಿನ ಉದ್ದೇಶ ಮುಖ್ಯವಾಗಿರುತ್ತದೆ. ಪ್ರಯಾಣಿಕ ವಿಮಾನಗಳನ್ನು ಗುರಾಣಿಯನ್ನಾಗಿ ಬಳಸಿ ನಮ್ಮ ನಾಗರಿಕರ ಮೇಲೆ ಆಕ್ರಮಣ ಮಾಡಲು, ನಮ್ಮ ಸೈನಿಕರನ್ನು ಕೊಲ್ಲಲು ಜಿಹಾದಿ ಪ್ರವೃತ್ತಿಯು ಪ್ರಯತ್ನಿಸಿದರೆ, ಅವರ ಉದ್ದೇಶ ನಮ್ಮನ್ನು ನಾಶಪಡಿಸುವುದೇ ಆಗಿದೆ. ಆದುದರಿಂದಲೇ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ನೈಸರ್ಗಿಕ ಹಕ್ಕು ನಮಗಿದೆ. ಅದೇ ರೀತಿ ನಮ್ಮ ರಾಷ್ಟ್ರವನ್ನು ರಕ್ಷಿಸುವುದು, ನಮ್ಮ (ಭಾರತೀಯರ) ರಾಷ್ಟ್ರಧರ್ಮ ಮತ್ತು ರಾಷ್ಟ್ರೀಯ ಕರ್ತವ್ಯವಾಗಿದೆ. ಈ ಕರ್ತವ್ಯಕ್ಕೆ ಅಡ್ಡಿಯಾಗುವ ಎಲ್ಲವನ್ನೂ ನಾಶಪಡಿಸಿ ನಮ್ಮ ಕರ್ತವ್ಯವನ್ನು ಪೂರೈಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆ ಕರ್ತವ್ಯ ವನ್ನು ಪೂರೈಸಲು ಜಿಹಾದಿಗಳು ಎಲ್ಲಾ ನಿಯಮಗಳನ್ನು ಗಾಳಿಗೆತೂರಿದ್ದರೆ, ನಾವು ಸಹ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನಮ್ಮ ಗುರಿಯನ್ನು ಸಾಧಿಸಲೇಬೇಕಾಗುತ್ತದೆ. ನಿರಪರಾಧಿ ಸಮಾಜದ ಮೇಲೆ ಅನ್ಯಾಯ ಮಾಡುವ ಸಮಾಜವನ್ನು ನಾಶಪಡಿಸುವುದರ ಮೂಲಕವೇ ನಾವು ನ್ಯಾಯವನ್ನು ಸ್ಥಾಪಿಸಬೇಕಾಗುತ್ತದೆ. ನಮ್ಮ ಮೇಲೆ ಅನ್ಯಾಯವಾಗಿದೆ ಮತ್ತು ನಮ್ಮ ಮೇಲೆ ಅನ್ಯಾಯ ಮಾಡಿದವನನ್ನು ರಕ್ಷಿಸಲು ಅವನೇನು ಧರ್ಮಾತ್ಮನಲ್ಲ.

೫. ಜಿಹಾದಿಗಳ ತಂತ್ರಗಳನ್ನು ಗುರುತಿಸಿ ಅವರನ್ನು ನಿರ್ನಾಮ ಮಾಡುವುದೊಂದೇ ದಾರಿ !

ಇತಿಹಾಸದಲ್ಲಿ ಮುಸಲ್ಮಾನರು ಮತ್ತು ಹಿಂದೂಗಳ ಮುಖಾಮುಖಿ ರಣರಂಗದಲ್ಲಿ ನಡೆದಾಗ, ಹಿಂದೂಗಳ ದೃಷ್ಟಿಯಲ್ಲಿ ತಾಯಂದಿರಂತಿರುವ ಹಸುಗಳ ಹಿಂಡನ್ನು ಮುಂದೆ ತಂದು ನಮ್ಮ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಲಾಯಿತು. ಆ ಸಮಯದಲ್ಲಿ ಮುಸಲ್ಮಾನರ ಮೇಲೆ ಆಕ್ರಮಣ ಮಾಡದೆ ನಾವು ಸುಮ್ಮನೆ ಕುಳಿತೆವು. ಅದರಿಂದ ನಮ್ಮ ಸೋಲಾಯಿತು. ಆದರೆ ಹರಿಸಿಂಗ್‌ ನಲ್ವಾ ಹಸುಗಳನ್ನು ಕೊಂದನು ಮತ್ತು ನಂತರ ಹಸುಗಳ ಹಿಂದೆ ಅಡಗಿದ್ದ ಮುಸಲ್ಮಾನರನ್ನು ಸಹ ಕೊಂದನು ಮತ್ತು ವಿಜಯ ಸಾಧಿಸಿದನು. ಜಿಹಾದಿಗಳು ಇಲ್ಲಿ ಹಸುಗಳ ಬದಲಿಗೆ ನಾಗರಿಕರನ್ನು ಮುಂದೆ ಮಾಡಿ ನಮ್ಮ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದ್ದಾರೆ.

ತಮ್ಮನ್ನು ರಕ್ಷಿಸಿಕೊಳ್ಳಲು ಈ ಕುತಂತ್ರದ ತಂತ್ರವನ್ನು ರಚಿಸಲಾಗಿದೆ. ಈ ಕುತಂತ್ರದ ತಂತ್ರವನ್ನು ವಿಫಲಗೊಳಿಸಲು ಜಿಹಾದಿಗಳು ನಮ್ಮ ಮೇಲೆ ಆಕ್ರಮಣ ಮಾಡುತ್ತಾರೆ. ಅವರ ಆ ತಂತ್ರವನ್ನು ಮೊದಲು ನಾಶಪಡಿಸಿ ಜಿಹಾದಿಗಳನ್ನು ನಿರ್ನಾಮ ಮಾಡುವುದು ಈಗ ನಮಗೆ ತೆರೆದಿರುವ ಏಕೈಕ ಮಾರ್ಗ. ಇತರ ಎಲ್ಲಾ ಮಾರ್ಗಗಳು ಮುಚ್ಚಿವೆ.

೬. ಯುದ್ಧದಲ್ಲಿ ಶ್ರೀರಾಮ ಮತ್ತು ಶ್ರೀಕೃಷ್ಣರ ಯುದ್ಧನೀತಿಗಳನ್ನು ಬಳಸಿ ಪ್ರಯತ್ನಿಸುವುದು ಮುಖ್ಯ !

ಈ ಜಿಹಾದಿಗಳು ಕೇವಲ ಭಾರತೀಯರಿಗೆ ಮಾತ್ರವಲ್ಲ, ಆದರೆ ಜಗತ್ತಿನ ಎಲ್ಲಾ ನಾಗರಿಕ ಸಮಾಜಕ್ಕೂ ತೊಂದರೆ ನೀಡುವವರಾಗಿದ್ದಾರೆ. ಆದ್ದರಿಂದ ಇವರೆಲ್ಲರ ರಕ್ಷಣೆಗಾಗಿ ಈ ಜಿಹಾದಿಗಳನ್ನು ಕೊಲ್ಲುವುದು ನಮ್ಮ ಉದ್ದೇಶವಾಗಿದೆ. ಜಗತ್ತಿನ ನೈತಿಕತೆ, ನ್ಯಾಯ ಮತ್ತು ಮಾನವೀಯತೆಯ ಕಲ್ಯಾಣಕ್ಕಾಗಿ, ರಕ್ಷಣೆಗಾಗಿ ನಾವು ಮಾಡುತ್ತಿರುವ ಕೃತ್ಯವು ಖಂಡಿತವಾಗಿಯೂ ಸಮರ್ಥನೀಯವಾಗಿದೆ; ಏಕೆಂದರೆ ‘ಗೂಜ ಚಿಛಿಣೈಒಟಿ ತೀಣಹ್ ಬ್ಚಿಜ ಮೊಣೈವೆ ಚಿಡಿಎ ಬ್ಚಿಜ ಚಿಟಿಜ ಬ್ಚಿಜ ಚಿಛಿಣೈಒಟಿ ತೀಣಹ್ ಗೂಜ ಮೊಣೈವೆ ಚಿಡಿಎ ಗೂಜ’ (ಕೆಟ್ಟ ಉದ್ದೇಶದಿಂದ ಮಾಡಿದ ಒಳ್ಳೆಯ ಕಾರ್ಯ ಕೆಟ್ಟದು ಮತ್ತು ಒಳ್ಳೆಯ ಉದ್ದೇಶದಿಂದ ಮಾಡಿದ ಕೆಟ್ಟ ಕಾರ್ಯವು ಒಳ್ಳೆಯದಾಗಿರುತ್ತದೆ)’ ಎಂಬ ಜಾಗತಿಕ ಸಿದ್ಧಾಂತವನ್ನು ಪರಿಗಣಿಸಿ ದರೆ ನಾವು ಏನಾದರೂ ತಪ್ಪು ಮಾಡುತ್ತಿದ್ದೇವೆ ಎಂದು ನಮಗೆ ಅನಿಸಬಾರದು.

ಸಂಕ್ಷಿಪ್ತದಲ್ಲಿ ‘ಶಸ್ತ್ರಧಾರಿಯು ಶಾಸ್ತ್ರದ ಬಗ್ಗೆ ಯೋಚಿಸದೆ ನಮ್ಮೊಂದಿಗೆ ಯುದ್ಧ ಮಾಡುತ್ತಿದ್ದರೆ, ನಮಗೂ ಶಸ್ತ್ರವನ್ನು ಕೈಯಲ್ಲಿ ಹಿಡಿದುಕೊಂಡು ಶಾಸ್ತ್ರವನ್ನು ಬದಿಗಿಟ್ಟು ಅವನನ್ನು ನಾಶಪಡಿಸುವುದು’ ಇದೇ ನಮ್ಮ ಕರ್ತವ್ಯವಾಗುತ್ತದೆ. ಈ ಕೃತಿಯ ಹಿಂದೆ ನಮ್ಮ ಮುಗ್ಧ ನಾಗರಿಕರನ್ನು ರಕ್ಷಿಸುವ ಮತ್ತು ನಮ್ಮ ರಾಷ್ಟ್ರವನ್ನು ರಕ್ಷಿಸುವ ಉದ್ದೇಶವಿದೆ. ಪ್ರಭು ಶ್ರೀರಾಮನು ಸಹ ಅಡಗಿ ನಿಂತು ವಾಲಿಯನ್ನು ಬಾಣದಿಂದ ವಧಿಸಿದನು; ಏಕೆಂದರೆ ಅವನು ಕೃತಿಯ ಹಿಂದಿನ ಉದ್ದೇಶವನ್ನು ಗಮನಿಸಿ ನೈತಿಕತೆ, ನ್ಯಾಯ ಮತ್ತು ಮಾನವೀಯತೆಗೆ ತಿಲಾಂಜಲಿ ನೀಡಿದ್ದನು. ಭಗವಾನ ಶ್ರೀಕೃಷ್ಣನು ಸಹ ಕೌರವ-ಪಾಂಡವರ ಯುದ್ಧದಲ್ಲಿ ಕೌರವರು ಎಲ್ಲಾ ರೀತಿಯ ನಿಯಮಗಳನ್ನು ಉಲ್ಲಂಘಿಸಿದಾಗ, ತಾನೂ ಎಲ್ಲ ರೀತಿಯ ನಿಯಮಗಳನ್ನು ಉಲ್ಲಂಘಿಸಿ ಕೌರವ ರನ್ನು ಸೋಲಿಸಿದನು. ಇಲ್ಲಿಯೂ ನಾವು ‘ಕೃತಿಗಿಂತ ಕೃತಿಯ ಹಿಂದಿನ ಉದ್ದೇಶವು ಮುಖ್ಯವಾದುದು’ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ಇದನ್ನು ಗಮನದಲ್ಲಿಟ್ಟರೆ, ನಮಗೆ ಯಾವುದೇ ಅಪರಾಧ ಪ್ರಜ್ಞೆ ಬರುವುದಿಲ್ಲ. ಇದು ಶ್ರೀರಾಮ ಮತ್ತು ಶ್ರೀಕೃಷ್ಣರ ಯುದ್ಧನೀತಿಯಿಂದ ಖಚಿತವಾಗುತ್ತದೆ.

– ಶ್ರೀ. ದುರ್ಗೇಶ ಜಯವಂತ ಪರುಳಕರ, ಹಿಂದುತ್ವವಾದಿ ಲೇಖಕರು ಮತ್ತು ವ್ಯಾಖ್ಯಾನಕಾರರು, ಡೊಂಬಿವಲಿ. (೧೦.೫.೨೦೨೫)