
ಜಗತ್ತಿನಲ್ಲಿ ೫೭ ಇಸ್ಲಾಮಿ ದೇಶಗಳಿವೆ, ಹಾಗೆಯೇ ೧೦೦ ಕ್ಕೂ ಹೆಚ್ಚು ಕ್ರೈಸ್ತ ದೇಶಗಳಿವೆ; ಆದರೆ ಒಂದೂ ಹಿಂದೂ ರಾಷ್ಟ್ರವಿಲ್ಲ. ಇಸ್ಲಾಂ ೧ ಸಾವಿರದ ೪೦೦ ವರ್ಷಗಳ ಹಿಂದೆ ಅರಬ್ ದೇಶಗಳಲ್ಲಿ ಉದಯಿಸಿತು ಮತ್ತು ನಂತರ ಕತ್ತಿಯ ಬಲದಿಂದ ಅದು ಜಗತ್ತಿನಾದ್ಯಂತ ಹರಡಿತು. ಇಂದು ಭಾರತದಲ್ಲಿಯೇ ಸುಮಾರು ೨೫ ಕೋಟಿ ಮುಸಲ್ಮಾನರಿದ್ದಾರೆ, ಹಾಗೆಯೇ ಪಾಕಿಸ್ತಾನದಲ್ಲಿ, ಅದು ಭಾರತದ ಹಿಂದಿನ ಭಾಗವಾಗಿತ್ತು, ಅಲ್ಲಿಯೂ ೨೪ ಕೋಟಿ ಮುಸಲ್ಮಾನರಿದ್ದಾರೆ. ಬಾಂಗ್ಲಾದೇಶದಲ್ಲಿಯೂ ಸುಮಾರು ೧೫ ಕೋಟಿ ಮುಸಲ್ಮಾನರಿದ್ದಾರೆ. ಇದರಿಂದ ಭಾರತೀಯ ಉಪಖಂಡ ದಲ್ಲಿಯೇ ೬೫ ಕೋಟಿ ಮುಸಲ್ಮಾನರಿದ್ದಾರೆ. ಹಿಂದೆ ಇವರೆಲ್ಲರೂ ಹಿಂದೂಗಳಾಗಿದ್ದರು. ಇದರ ತುಲನೆಯಲ್ಲಿ ಸದ್ಯ ಭಾರತ ಮತ್ತು ಉಪಖಂಡದಲ್ಲಿ ೧೦೦ ಕೋಟಿ ಹಿಂದೂಗಳಿದ್ದಾರೆ. ಯೂರೋಪ್ ಮತ್ತು ಅಮೇರಿಕದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಮುಸಲ್ಮಾನರಿದ್ದಾರೆ. ಯೂರೋಪ್‌ನಲ್ಲಿ ಮಧ್ಯ-ಪೂರ್ವ ದೇಶಗಳಿಂದ ವಲಸೆ ಬಂದ ಮುಸಲ್ಮಾನರಿಂದ ಅಶಾಂತಿ ಸೃಷ್ಟಿಯಾಗಿದೆ. ಫ್ರಾನ್ಸ್‌ನಂತಹ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ವಲಸೆ ಬಂದ ಮುಸಲ್ಮಾನರು ಹಿಂಸಾಚಾರ ಮಾಡಿ ದೇಶವನ್ನು ಒತ್ತೆಯಾಳುಗಳನ್ನಾಗಿ ಮಾಡುತ್ತಾರೆ. ಬ್ರಿಟನ್‌ನಲ್ಲಿಯೂ ಮೂಲ ಆಂಗ್ಲರು ಅಲ್ಪಸಂಖ್ಯಾತರಾಗಿ ಮುಸಲ್ಮಾನರ ಸಂಖ್ಯೆ ಹೆಚ್ಚುತ್ತಿದೆ. ಒಂದು ಕಡೆ ಈ ಸ್ಥಿತಿ ಇದ್ದರೆ, ಇನ್ನೊಂದು ಕಡೆ ಅನೇಕ ಮುಸಲ್ಮಾನರು ತಮ್ಮ ಧರ್ಮವನ್ನು ತೊರೆಯುತ್ತಿರುವುದು ಕಂಡು ಬರುತ್ತಿದೆ. ಅಮೇರಿಕದ ‘ಪ್ಯೂ ರಿಸರ್ಚ್ ಸೆಂಟರ್’ ಈ ಸಂಸ್ಥೆಯ ಇತ್ತೀಚೆಗೆ ಪ್ರಕಟವಾದ ವರದಿಯಲ್ಲಿ ಅಮೇರಿಕದಲ್ಲಿ ಶೇ. ೨೫ ಕ್ಕಿಂತ ಹೆಚ್ಚು ಮುಸಲ್ಮಾನರು ಇಸ್ಲಾಂ ತೊರೆದು ಕ್ರೈಸ್ತ ಧರ್ಮ ಸ್ವೀಕರಿಸಿದ್ದಾರೆ ಅಥವಾ ನೇರವಾಗಿ ನಾಸ್ತಿಕರಾಗಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಕೇವಲ ಅಮೇರಿಕದಲ್ಲಿ ಮಾತ್ರವಲ್ಲ, ಇತರ ದೇಶಗಳಲ್ಲಿಯೂ ಈ ಸಂಖ್ಯೆ ಹೆಚ್ಚಾಗಿದೆ. ಅನೇಕ ದೇಶಗಳ ಅಂಕಿಅಂಶಗಳು ಹೊರಬರಲು ಸಾಧ್ಯವಾಗುತ್ತಿಲ್ಲ; ಏಕೆಂದರೆ ಅವುಗಳನ್ನು ಘೋಷಿಸುವುದರ ಮೇಲೆ ನಿರ್ಬಂಧಗಳಿವೆ. ವಿದೇಶದಲ್ಲಿ ಮಾತ್ರವಲ್ಲದೆ, ಭಾರತದಲ್ಲಿಯೂ ಮುಸಲ್ಮಾನರು ಇಸ್ಲಾಂ ತೊರೆದು ಒಂದೋ ಇತರ ಧರ್ಮಗಳನ್ನು ಸ್ವೀಕರಿಸುತ್ತಿದ್ದಾರೆ ಅಥವಾ ತಮ್ಮನ್ನು ನಾಸ್ತಿಕರೆಂದು ಘೋಷಿಸಿಕೊಳ್ಳುತ್ತಿದ್ದಾರೆ. ಕೇರಳದಲ್ಲಿ ‘ಎಕ್ಸ್ ಮುಸ್ಲಿಮ್ಸ್’ ಎಂಬ ಒಂದು ಸಂಘಟನೆಯೇ ಕಾರ್ಯನಿರತವಾಗಿದೆ. ವಿದೇಶದಲ್ಲಿಯೂ ಇಂತಹ ಸಂಘಟನೆ ಗಳಿವೆ. ಇಸ್ಲಾಂ ತೊರೆಯಲು ಮುಖ್ಯ ಕಾರಣಗಳು ಎಂದರೆ ಇಸ್ಲಾಂನಲ್ಲಿನ ತಾರತಮ್ಯ ಮತ್ತು ಕಟ್ಟರತೆ. ಇದರಲ್ಲಿ ಇತರ ಕಾರಣಗಳೂ ಇವೆ. ಕೆಲವು ವ್ಯಕ್ತಿಗಳಿಗೆ ಇಸ್ಲಾಂನ ತತ್ತ್ವಜ್ಞಾನದಲ್ಲಿ ತರ್ಕಬದ್ಧತೆಯ ಕೊರತೆ ಕಂಡುಬಂದಿತು. ಅನೇಕರಿಗೆ ಇಸ್ಲಾಂನ ಮೂಲಭೂತ ವಿಷಯಗಳ ಬಗ್ಗೆ ಪ್ರಶ್ನೆಗಳಿದ್ದವು; ಆದರೆ ಅವರಿಗೆ ಉತ್ತರಗಳು ಸಿಗಲಿಲ್ಲ. ಕೆಲವು ಜನರಿಗೆ ಇಸ್ಲಾಂನಲ್ಲಿ ಮಹಿಳೆಯರ ಸ್ಥಾನದ ಬಗ್ಗೆ ಅಸಮಾಧಾನವಿತ್ತು. ಕೇರಳದ ಒಬ್ಬ ಮಹಿಳಾ ಪತ್ರಕರ್ತೆ ಇಸ್ಲಾಂ ತೊರೆಯುವಾಗ, ‘ನನಗೆ ಮಹಿಳೆಯರ ವಿಷಯದಲ್ಲಿರುವ ತಾರತಮ್ಯ ಸಹಿಸಲು ಸಾಧ್ಯವಾಗಲಿಲ್ಲ’ ಎಂದು ಹೇಳಿದ್ದರು. ಸಮಾಜದ ಕೆಲವು ಜನರ ವರ್ತನೆಯಿಂದ ಕೆಲವು ವ್ಯಕ್ತಿಗಳು ಇಸ್ಲಾಂ ತೊರೆದರು, ಹಾಗೆಯೇ ಕೆಲವು ಜನರಿಗೆ ಇಸ್ಲಾಂನ ಕಾನೂನುಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಉದಾಹರಣೆಗಳು ಕಂಡುಬಂದವು.

ಭಾರತದ ಉತ್ತರಪ್ರದೇಶ ಸೆಂಟ್ರಲ್ ಶಿಯಾ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ವಸೀಂ ರಿಜ್ವಿ ಅವರು ಇಸ್ಲಾಂ ತೊರೆದು ಹಿಂದೂ ಧರ್ಮ ಸ್ವೀಕರಿಸಿದರು. ಇಂದು ಅವರು ಜಿತೇಂದ್ರ ತ್ಯಾಗಿ ಎಂದು ಜೀವನ ನಡೆಸುತ್ತಿದ್ದಾರೆ. ಅವರು ಧರ್ಮ ತೊರೆದು ಮತ್ತೆ ಹಿಂದೂ ಧರ್ಮಕ್ಕೆ ಬರುವಾಗ ಇಸ್ಲಾಂನ ಬೋಧನೆಗಳ ಮೇಲೆ ತೀವ್ರ ಟೀಕೆ ಮಾಡಿದ್ದರು. ಅವರು ಕುರಾನ್‌ನ ೨೬ ಆಯತಗಳ (ವಾಕ್ಯಗಳ) ಮೇಲೆ ಆಕ್ಷೇಪ ವ್ಯಕ್ತಪಡಿಸಿ ಅವುಗಳನ್ನು ಅದರಿಂದ ತೆಗೆದುಹಾಕಲು ನ್ಯಾಯಾಲಯದಲ್ಲಿ ಅರ್ಜಿಯನ್ನು ಸಹ ಸಲ್ಲಿಸಿದ್ದರು. ಇದು ಭಾರತದ ದೊಡ್ಡ ಉದಾಹರಣೆಯಾಗಿದೆ. ಇನ್ನೊಂದು ಕಡೆ ಈ ರೀತಿ ಇಸ್ಲಾಂ ತೊರೆಯುವವರು ವಿರೋಧವನ್ನೂ ಎದುರಿಸಬೇಕಾಗುತ್ತದೆ. ಕುಟುಂಬದವರಿಂದಾಗುವ ಬಹಿಷ್ಕಾರ ಮತ್ತು ಸಾಮಾಜಿಕ ಬಹಿಷ್ಕಾರವನ್ನು ಎದುರಿಸಬೇಕಾ ಗುತ್ತದೆ. ಜೀವಬೆದರಿಕೆಗಳು ಬರುತ್ತವೆ. ಮೂಲತಃ ಕತ್ತಿಯ ಬಲದಿಂದ ಇಸ್ಲಾಂ ಸ್ವೀಕರಿಸಲು ಒತ್ತಾಯಿಸಲ್ಪಟ್ಟಿದ್ದರಿಂದ ಬೆಳೆದ ಈ ಧರ್ಮದ ಮತಾಂತರಗೊಂಡವರು ಈಗ ಕಟ್ಟರ ಮನಸ್ಸಿನವ ರಾಗಿದ್ದಾರೆ ಮತ್ತು ಅವರು ಇತರ ಧರ್ಮೀಯರನ್ನು ವಿವಿಧ ಮಾಧ್ಯಮದಿಂದ ಮತಾಂತರಿಸಲು ಅಥವಾ ಕೊಲ್ಲಲು ಪ್ರಯತ್ನಿಸುತ್ತಿರುತ್ತಾರೆ. ಜಿಹಾದಿ ಭಯೋತ್ಪಾದನೆ ಅದರಲ್ಲಿ ಒಂದು ವಿಧವಾಗಿದೆ. ಭಾರತದಲ್ಲಿ ‘ಲವ್ ಜಿಹಾದ್’, ‘ಭೂಮಿ ಜಿಹಾದ್’ ಇತ್ಯಾದಿ ಪ್ರಕಾರದ ಜಿಹಾದ್‌ಗಳು ನಡೆಯುತ್ತಲೇ ಇವೆ. ಕೇವಲ ಇಸ್ಲಾಂ ತೊರೆಯುವವರನ್ನು ಮಾತ್ರವಲ್ಲ, ಇಸ್ಲಾಂಅನ್ನು ಟೀಕಿಸುವವರು ಸಹ ಇಂತಹ ವಿರೋಧವನ್ನು ಎದುರಿಸ ಬೇಕಾಗುತ್ತದೆ. ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ಇದರ ಮುಖ್ಯ ಉದಾಹರಣೆಯಾಗಿದ್ದಾರೆ. ಅವರು ನೇರವಾಗಿ ಹೇಳಿದ್ದಾರೆಂದರೆ, ‘ಇಸ್ಲಾಂ ಇರುವವರೆಗೂ ಜಗತ್ತಿನಲ್ಲಿ ಜಿಹಾದಿ ಭಯೋತ್ಪಾದನೆ ಶಾಶ್ವತವಾಗಿ ಇರಲಿದೆ’. ಅವರ ಈ ಹೇಳಿಕೆಯನ್ನು ಒಂದೇ ಒಂದು ಇಸ್ಲಾಮಿ ಸಂಘಟನೆಯೂ ವಿರೋಧಿಸಿಲ್ಲ ಎಂಬುದನ್ನೂ ಗಮನಿಸಬೇಕು.
ಸರಕಾರ ಯೋಜನೆ ಆರಂಭಿಸಬೇಕು !
ಭಾರತದ ಅನೇಕ ಮುಸಲ್ಮಾನರಿಗೆ ತಮ್ಮ ಪೂರ್ವಜರು ಹಿಂದೂಗಳಾಗಿದ್ದರು ಮತ್ತು ಅವರ ಹೆಸರುಗಳೂ ತಿಳಿದಿವೆ. ಇವರಲ್ಲಿ ಕೆಲವರು ಹಿಂದೂ ಧರ್ಮಕ್ಕೆ ಮರುಪ್ರವೇಶವನ್ನೂ ಮಾಡಿದ್ದಾರೆ. ಇಸ್ಲಾಂ ತೊರೆಯುವವರಿಗೆ ಸಹಾಯ ಮಾಡುವ ಸಂಘಟನೆಗಳೂ ಕಾರ್ಯನಿರತವಾಗಿವೆ. ‘ಎಕ್ಸ್ ಮುಸ್ಲಿಂ ಇನ್ ಕೇರಳ’ ಈ ಸಂಘಟನೆ ಇಸ್ಲಾಂ ತೊರೆಯುವವರಿಗೆ ಬೆಂಬಲ ಮತ್ತು ಮಾರ್ಗದರ್ಶನ ನೀಡುತ್ತದೆ. ‘ಕೌನ್ಸಿಲ್ ಆಫ್ ಎಕ್ಸ್ ಮುಸ್ಲಿಮ್ಸ್ ಆಫ್ ಬ್ರಿಟನ್’ ಇದು ಇಸ್ಲಾಂ ತೊರೆಯುವವರಿಗಾಗಿ ಸುರಕ್ಷಿತ ಆಶ್ರಯ ಮತ್ತು ಬೆಂಬಲವನ್ನು ನೀಡುತ್ತದೆ. ‘ಸೆಂಟ್ರಲ್ ಕೌನ್ಸಿಲ್ ಆಫ್ ಎಕ್ಸ್ ಮುಸ್ಲಿಮ್ಸ್’ ಜರ್ಮನಿಯ ಈ ಸಂಘಟನೆಯೂ ಇದೇ ರೀತಿಯ ಸಹಾಯ ಮಾಡುತ್ತದೆ. ಇಸ್ಲಾಂ ತೊರೆಯುವುದು ಸುಲಭದ ವಿಷಯವಲ್ಲದಿದ್ದರೂ, ಅನೇಕ ಜನರು ಆ ಪ್ರಯತ್ನ ಮಾಡುತ್ತಿರುವುದು ಕಂಡುಬರುತ್ತಿದೆ. ಭಾರತದಲ್ಲಿ ಅನೇಕ ಜನರಿದ್ದಾರೆ, ಯಾರಿಗೆ ಇಸ್ಲಾಂ ತೊರೆಯಬೇಕೆಂದಿದೆ; ಆದರೆ ಕಟ್ಟರ್‌ವಾದಿಗಳಿಂದ ಮತ್ತು ಸಮಾಜದಲ್ಲಿನ ಅಭದ್ರತೆಯಿಂದ ಅವರು ಹಾಗೆ ಮಾಡಲು ಧೈರ್ಯ ಮಾಡುತ್ತಿಲ್ಲ. ಇವರಲ್ಲಿ ಹೆಚ್ಚಿನವರಿಗೆ ತಾವು ಹಿಂದಿನ ಹಿಂದೂಗಳೆಂದು ತಿಳಿದಿದೆ. ಅಂತಹ ಮುಸಲ್ಮಾನರಿಗಾಗಿ ಭಾರತ ಸರಕಾರವು ಯೋಜನೆಗಳನ್ನು ಜಾರಿಗೊಳಿಸುವುದು ಆವಶ್ಯಕ. ಕೇವಲ ಮುಸಲ್ಮಾನರು ಮಾತ್ರವಲ್ಲ, ವಿವಿಧ ಕಾರಣಗಳಿಂದ ಹಿಂದೂ ಧರ್ಮ ತೊರೆದು ಇತರ ಧರ್ಮಗಳನ್ನು ಸ್ವೀಕರಿಸಿದವರೆಲ್ಲರಿಗೂ ಆ ಯೋಜನೆ ಇರಬೇಕು. ಗೋವಾದಲ್ಲಿ ಪೋಚ್ಯುಗೀಸರ ಕಾಲದಲ್ಲಿ ಬಲವಂತವಾಗಿ ಮತಾಂತರಗೊಂಡ ಕ್ರೈಸ್ತರಿಗೆ ತಾವು ಹಿಂದೂಗಳಾಗಿದ್ದೆವೆಂದು ತಿಳಿದಿದೆ ಮತ್ತು ಇಂದಿಗೂ ಅವರು ದರ್ಶನಕ್ಕಾಗಿ ದೇವಸ್ಥಾನಕ್ಕೆ ಬರುತ್ತಾರೆ. ಆದ್ದರಿಂದ ಅಂತಹ ಜನರು ಸರಕಾರದ ಯೋಜನೆಯಿಂದ ತಮ್ಮ ಮೂಲ ಹಿಂದೂ ಧರ್ಮಕ್ಕೆ ಮರಳಲು ಸಾಧ್ಯವಾಗುತ್ತದೆ ಮತ್ತು ಸರಕಾರ ಅವರಿಗೆ ರಕ್ಷಣೆ ನೀಡಲು ಅವರ ಮುಂದಿನ ಸಾಮಾಜಿಕ ಜೀವನಕ್ಕೆ ಸಹಾಯ ಮಾಡುತ್ತದೆ. ಭಾರತದಲ್ಲಿ ಮುಸಲ್ಮಾನರ ಹೆಚ್ಚುತ್ತಿರುವ ಸಂಖ್ಯೆಯನ್ನು ಕಡಿಮೆ ಮಾಡಲು ಈ ಯೋಜನೆ ಲಾಭದಾಯಕವಾಗಬಹುದು. ಆದ್ದರಿಂದ ಜಿಹಾದಿ ಮನಸ್ಥಿತಿ, ಕಟ್ಟರ್‌ವಾದ, ಗಲಭೆ ಇತ್ಯಾದಿ ವಿಷಯಗಳಿಗೆ ಕಡಿವಾಣ ಹಾಕಬಹುದು. ಭಾರತ ಧರ್ಮನಿರಪೇಕ್ಷ ದೇಶವಾಗಿರುವುದರಿಂದ ಇಂತಹದ್ದೇನಾದರೂ ಆಗುತ್ತದೆಯೇ ಅಥವಾ ಯಾವುದೇ ಅಧಿಕಾರದಲ್ಲಿರುವ ರಾಜಕೀಯ ಪಕ್ಷ ಇಂತಹ ಧೈರ್ಯ ಮಾಡುತ್ತದೆಯೇ ಎಂಬ ಸಂಭವನೀಯತೆ ಇಲ್ಲದಿದ್ದರೂ, ಈ ದೃಷ್ಟಿಯಿಂದ ವಿಚಾರ ಮಾಡುವುದು ಆವಶ್ಯಕವಾಗಿದೆ ಎಂದು ಅನಿಸುತ್ತಿದೆ.
ಇದರ ಬಗ್ಗೆ ಚರ್ಚೆ ನಡೆಯಬೇಕು. ೫೦ ರಿಂದ ೬೦ ವರ್ಷಗಳ ಹಿಂದೆ ಈಶಾನ್ಯ ಭಾರತದಲ್ಲಿ ಕ್ರೈಸ್ತರು ಅತ್ಯಂತ ಕಡಿಮೆ ಇದ್ದರು; ಆದರೆ ಇಂದು ಈಶಾನ್ಯ ಭಾರತದ ಅನೇಕ ರಾಜ್ಯಗಳು ಕ್ರೈಸ್ತ ಪ್ರಾಬಲ್ಯದ ರಾಜ್ಯಗಳಾಗಿವೆ. ಇದಕ್ಕೆ ಅಂದಿನ ಕಾಂಗ್ರೆಸ್ ಸರಕಾರವೇ ಜವಾಬ್ದಾರವಾಗಿದೆ. ಒಂದು ವೇಳೆ ಸರಕಾರದಿಂದ ಇಂತಹ ಬದಲಾವಣೆ ಆಗುತ್ತಿದ್ದರೆ, ಈಗಿನ ಸರಕಾರವು ಅಂತಹ ನೀತಿಗಳನ್ನು ಜಾರಿಗೊಳಿಸಿ ಅದರ ವಿರುದ್ಧ ಮಾಡುವುದು ಅಷ್ಟೇ ಆವಶ್ಯಕವಾಗಿದೆ ಎಂದು ಅನಿಸಲಾರಂಭಿಸಿದೆ. ಇದಕ್ಕಾಗಿ ಅವರು ಹಿಂದೂಗಳ ಧಾರ್ಮಿಕ ಸಂಘಟನೆಗಳ, ಸಂತರು, ಮಹಂತರು ಮುಂತಾದವರ ಸಹಾಯ ಪಡೆಯಬೇಕು. ಅಂತಹವರಿಗೆ ಹಿಂದೂ ಧರ್ಮಾಚರಣೆ ಕಲಿಸಲು ಶಿಕ್ಷಣ ನೀಡುವುದನ್ನು ಪ್ರಾರಂಭಿಸಬೇಕು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಬ್ರಿಟಿಷ್ ಸಂಸತ್ತಿನಲ್ಲಿ ಸಂಸದರಿಂದ ‘ಗ್ರೂಮಿಂಗ್ ಗ್ಯಾಂಗ್’ ವಿಷಯ ಪ್ರಸ್ತಾಪ
ಇಸ್ಲಾಮಿಕ್ ಹಬ್ಬಗಳ ಸಮಯದಲ್ಲಿ ಹಸು ಮತ್ತು ಕರುಗಳ ಹತ್ಯೆಯಾಗದಂತೆ ಜಾಗ್ರತೆ ವಹಿಸಿ! : Madras High Court
ಆರ್ಥಿಕ ಶಿಸ್ತು
ಸಂಪಾದಕೀಯ : ಜಿರಳೆ ಮತ್ತು ಬೋಧನೆ
ಭೋಜಶಾಲಾ ಸಂಕೀರ್ಣದಲ್ಲಿರುವ ಇಸ್ಲಾಮಿಕ್ ಚಿಹ್ನೆಗಳನ್ನು ತೆಗೆದುಹಾಕಲು ಮತ್ತು ಉತ್ಖನನ ನಡೆಸಲು ಸುಪ್ರೀಂ ಕೋರ್ಟ್ನಲ್ಲಿ ಆಗ್ರಹ