೯.೧೧.೨೦೧೯ ರಂದು ಸರ್ವೋಚ್ಚ ನ್ಯಾಯಾಲಯವು ಸಮಸ್ತ ರಾಮಭಕ್ತರು ನಿರೀಕ್ಷಿಸಿದ್ದ ರಾಮಜನ್ಮಭೂಮಿ ಪ್ರಕರಣದ ಐತಿಹಾಸಿಕ ತೀರ್ಪನ್ನು ನೀಡಿತು. ಈ ಪ್ರಕರಣದಲ್ಲಿ ತಮಿಳುನಾಡಿನ ಹಿರಿಯ ನ್ಯಾಯವಾದಿ ಕೆ. ಪರಾಶರನ್ (ವಯಸ್ಸು ೯೭) ಅವರ ಪಾತ್ರವು ಅತ್ಯಂತ ಮಹತ್ವದ್ದಾಗಿತ್ತು. ಅವರು ‘ರಾಮಲಲ್ಲಾ ವಿರಾಜಮಾನ್’ ಪರವಾಗಿ ೪೦ ವರ್ಷಗಳ ಕಾಲ ಅತ್ಯಂತ ಅಧ್ಯಯನಶೀಲವಾಗಿ ಮತ್ತು ಗಂಭೀರವಾಗಿ ವಾದ ಮಂಡಿಸಿದರು. ನ್ಯಾಯವಾದಿ ಕೆ. ಪರಾಶರನ್ ಅವರ ವಿಶೇಷತೆಯೆಂದರೆ, ಅವರಲ್ಲಿ ಕಾನೂನು ಕೌಶಲ್ಯದೊಂದಿಗೆ ಹಿಂದೂ ಶಾಸ್ತ್ರಗಳು ಮತ್ತು ಪುರಾಣಗಳ ಜ್ಞಾನವೂ ಇದೆ. ಅದಕ್ಕಾಗಿಯೇ ಅವರನ್ನು ಭಾರತದ ನ್ಯಾಯಾಂಗ ಕ್ಷೇತ್ರದಲ್ಲಿ ‘ಭಾರತೀಯ ಬಾರ್ ಕೌನ್ಸಿಲ್‌ನ ಪಿತಾಮಹ’ ಎಂದು ಕರೆಯಲಾಗುತ್ತದೆ. ‘ರಾಮ ಜನ್ಮಭೂಮಿ’ ಮತ್ತು ‘ಶಬರಿಮಲೆಯಲ್ಲಿ ೧೦ ರಿಂದ ೫೦ ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನಿಷೇಧ’ ಈ ಎರಡು ಪ್ರಕರಣಗಳು ಅವರ ಜೀವನದ ಐತಿಹಾಸಿಕ ಪ್ರಕರಣಗಳಾಗಿವೆ. ಅಂತಹ ನ್ಯಾಯವಾದಿ ಕೆ. ಪರಾಶರನ್ ಅವರ ಗುಣ ಪರಿಚಯವನ್ನು ಇಲ್ಲಿ ನೀಡಲಾಗಿದೆ.

ವಿಶೇಷ ಮಾಲಿಕೆ

ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು
೧. ಭಗವಾನ್ ಶ್ರೀರಾಮನ ಬಗ್ಗೆ ಆಧ್ಯಾತ್ಮಿಕ ಒಲವು!
ನ್ಯಾಯವಾದಿ ಕೆ. ಪರಾಶರನ್ ಅವರು ೯ ಅಕ್ಟೋಬರ್ ೧೯೨೭ ರಂದು ತಮಿಳುನಾಡಿನ ಶ್ರೀರಂಗಂನಲ್ಲಿ ಜನಿಸಿದರು. ಅವರ ತಂದೆ ಕೇಶವ ಅಯ್ಯಂಗಾರ್ ಅವರು ಸಹ ನ್ಯಾಯವಾದಿ ಮತ್ತು ವೈದಿಕ ವಿದ್ವಾಂಸರಾಗಿದ್ದರು. ನ್ಯಾಯವಾದಿ ಕೆ. ಪರಾಶರನ್ ಅವರಿಗೆ ಚಿಕ್ಕಂದಿನಿಂದಲೂ ಭಗವಾನ್ ಶ್ರೀರಾಮನ ಬಗ್ಗೆ ಆಧ್ಯಾತ್ಮಿಕ ಒಲವಿತ್ತು. ಅವರು ೭ ನೇ ವಯಸ್ಸಿನಿಂದ ನಿರಂತರವಾಗಿ ರಾಮಾಯಣ ಪಠಣ ಮಾಡುತ್ತಿದ್ದರು. ಭಗವಾನ್ ಶ್ರೀರಾಮನ ಮೇಲಿನ ಭಕ್ತಿ ಮತ್ತು ಸಮರ್ಪಣೆಯಿಂದಾಗಿ ಅವರು ೨೦೧೯ ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದದ ಪ್ರಕರಣವನ್ನು ಹೋರಾಡಿದರು. ಆಗ ಅವರಿಗೆ ೯೨ ವರ್ಷ ವಯಸ್ಸಾಗಿತ್ತು.
ನ್ಯಾಯವಾದಿ ಕೆ. ಪರಾಶರನ್ ಅವರ ಯುಕ್ತಿವಾದ

ರಾಮ ಜನ್ಮಭೂಮಿ ಪ್ರಕರಣದ ವಿಚಾರಣೆಯ ಸಮಯದಲ್ಲಿ ನ್ಯಾಯವಾದಿ ಕೆ. ಪರಾಶರನ್ ಅವರು ವಾದಿಸುತ್ತಾ, ‘ಯಾವುದೇ ಸ್ಥಳವನ್ನು ದೇವಾಲಯವೆಂದು ಪರಿಗಣಿಸಲು ಅಲ್ಲಿ ಮೂರ್ತಿ ಇರಬೇಕಾಗಿಲ್ಲ. ಅಯೋಧ್ಯೆಯಲ್ಲಿ ಮೂರ್ತಿ ಸ್ಥಾಪಿಸುವ ಮೊದಲು ಮತ್ತು ದೇವಾಲಯ ನಿರ್ಮಾಣವಾಗುವ ಮೊದಲಿನಿಂದಲೂ ಅಲ್ಲಿ ಶ್ರೀರಾಮನ ಪೂಜೆ ನಡೆಯುತ್ತಿತ್ತು. ಹಿಂದೂ ಧರ್ಮದಲ್ಲಿ ಸೂರ್ಯ, ನದಿಗಳು ಮತ್ತು ಪರ್ವತಗಳನ್ನು ಸಹ ಪೂಜಿಸಲಾಗುತ್ತದೆ’ ಎಂದರು.
ಪ್ರಚಾರದಿಂದ ದೂರವಿರುವುದು!
ರಾಮ ಜನ್ಮಭೂಮಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಗೆಲುವು ಸಾಧಿಸಿದ್ದರ ಕುರಿತು ಅವರನ್ನು ಕೇಳಿದಾಗ, ‘‘ನಾನು ಈ ಪ್ರಕರಣದಲ್ಲಿ ನನ್ನ ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ. ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಸ್ವತಃ ತೀರ್ಪು ನೀಡಿದೆ. ನನಗೆ ಹೆಚ್ಚೇನೂ ಹೇಳಲು ಇಷ್ಟವಿಲ್ಲ’’ ಎಂದವರು ಹೇಳಿದರು.
೨. ನ್ಯಾಯವಾದಿ ಪರಾಶರನ್ ಅವರ ಕಾರ್ಯದ ಪರಿಚಯ
ಕೆ. ಪರಾಶರನ್ ಅವರು ಪ್ರಖ್ಯಾತ ಹಿಂದೂ ವಿದ್ವಾಂಸರು ಮತ್ತು ಅತ್ಯುತ್ತಮ ಸರಕಾರಿ ನ್ಯಾಯವಾದಿಯಾಗಿದ್ದಾರೆ. ೧೯೭೬ ರಲ್ಲಿ ಅವರು ತಮಿಳುನಾಡು ರಾಜ್ಯದ ‘ಅಡ್ವೊಕೇಟ್ ಜನರಲ್’ ಆಗಿದ್ದರು. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸರಕಾರದ ಅವಧಿಯಲ್ಲಿ ಅವರು ಭಾರತ ಸರಕಾರದ ‘ಅಡ್ವೊಕೇಟ್ ಜನರಲ್’ ಆಗಿದ್ದರು. ಅವರ ಕೊಡುಗೆಯನ್ನು ಪರಿಗಣಿಸಿ, ಕೇಂದ್ರ ಸರಕಾರವು ಅವರನ್ನು ೨೦೦೩ ರಲ್ಲಿ ‘ಪದ್ಮಭೂಷಣ’ ಮತ್ತು ೨೦೧೧ ರಲ್ಲಿ ‘ಪದ್ಮವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಿತು. ೨೦೧೨ ರಲ್ಲಿ ರಾಷ್ಟ್ರಪತಿಗಳು ಅವರನ್ನು ೬ ವರ್ಷಗಳ ಕಾಲ ರಾಜ್ಯಸಭೆಯ ಸದಸ್ಯರನ್ನಾಗಿ ನೇಮಿಸಿದರು. ೨೦೧೬ ರ ನಂತರ ವಯೋಸಹಜ ಕಾರಣಗಳಿಂದ ಕೆಲವು ಅಪವಾದಗಳನ್ನು ಹೊರತುಪಡಿಸಿ, ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ವಿರಳವಾಗಿ ಹಾಜರಾಗುತ್ತಿದ್ದರು.
ವಾಜಪೇಯಿ ಸರಕಾರವು ಸಂವಿಧಾನದ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ನ್ಯಾಯವಾದಿ ಕೆ. ಪರಾಶರನ್ ಅವರನ್ನು ‘ಕರಡು ಮತ್ತು ಸಂಪಾದಕೀಯ ಸಮಿತಿ’ಯ ಸದಸ್ಯರನ್ನಾಗಿ ನೇಮಿಸಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಹ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣದ ಮೇಲ್ವಿಚಾರಣೆಗಾಗಿ ‘ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ಅನ್ನು ಸ್ಥಾಪಿಸುವುದಾಗಿ ಘೋಷಿಸಿದರು. ನಂತರ ಕೂಡಲೇ ಹಿರಿಯ ನ್ಯಾಯವಾದಿ ಕೆ. ಪರಾಶರನ್ ಅವರನ್ನು ಈ ಟ್ರಸ್ಟ್‌ನ ಮೊದಲ ಟ್ರಸ್ಟಿಯಾಗಿ ನೇಮಿಸಲಾಯಿತು.
ನ್ಯಾಯವಾದಿ ಕೆ. ಪರಾಶರನ್ ಅವರು ರಾಮ ಜನ್ಮಭೂಮಿ ವಿಚಾರಣೆಯ ಸಮಯದಲ್ಲಿ ಅನುಭವಿಸಿದ ಕೆಲವು ದೈವೀ ಅನುಭವಗಳು

ವಿರೋಧಿ ಪಕ್ಷದ ಪ್ರಶ್ನೆಗೆ ಉತ್ತರಿಸಲು ಅನೇಕ ಕಡತಗಳಿದ್ದರೂ, ಒಂದೇ ಕಡತದ ಅಗತ್ಯವಿದ್ದ ಪುಟ ತೆರೆದುಕೊಳ್ಳುವುದು: ಒಮ್ಮೆ ವಿರೋಧಿ ಪಕ್ಷವು ವಿಚಾರಣೆಯ ಸಮಯದಲ್ಲಿ ‘ದಶರಥನ ಅರಮನೆಯಲ್ಲಿ ಹೆರಿಗೆ ಕೊಠಡಿ ಇತ್ತೇ?’ ಎಂದು ಪ್ರಶ್ನಿಸಿತು. ನ್ಯಾಯಾಧೀಶರು ನನಗೆ ವಿವರಗಳನ್ನು ಸಲ್ಲಿಸಲು ಹೇಳಿದರು.
|
ಪ್ರಕರಣದ ಅನೇಕ ಕಡತಗಳು ಜೋಡಿಸಲ್ಪಟ್ಟಿದ್ದವು. ಆದ್ದರಿಂದ ಈ ಪ್ರಶ್ನೆಗೆ ಉತ್ತರವನ್ನು ಹೇಗೆ ಕಂಡುಹಿಡಿಯುವುದು ಎಂದು ಯೋಚಿಸುತ್ತಿದ್ದಾಗ, ಎಲ್ಲಾ ಕಡತಗಳನ್ನು ಲಂಬವಾಗಿ ಜೋಡಿಸಲಾಗಿದೆ ಎಂದು ಗಮನಕ್ಕೆ ಬಂದಿತು. ಅವುಗಳಲ್ಲಿ ಒಂದು ಕಡತವು ಅಡ್ಡಲಾಗಿತ್ತು. ನಾನು ಸಹಾಯಕನಿಗೆ ಅಡ್ಡಲಿದ್ದ ಕಡತವನ್ನು ತೆಗೆಯಲು ಹೇಳಿದೆ. ನನ್ನಿಂದ ನಿಖರವಾಗಿ ಅಗತ್ಯವಿದ್ದ ಪುಟವೇ ತೆರೆದುಕೊಂಡಿತು. (ಇದರ ಬಗ್ಗೆ ಭಾವಪೂರ್ಣವಾಗಿ ಹೇಳುವಾಗ ನ್ಯಾಯವಾದಿ ಕೆ. ಪರಾಶರನ್ ಅವರು, ಅದನ್ನು ವಿವರಿಸಲು ಸಾಧ್ಯವಿಲ್ಲ; ಆದರೆ ಅನುಭವಿಸಬಹುದು ಎಂದರು. – ಸಂಗ್ರಹಕಾರರು) ಮರುದಿನವೇ ವಿಚಾರಣೆಯಲ್ಲಿ ನ್ಯಾಯಾಲಯವು ಹಿಂದೂಗಳ ಪರವಾಗಿ, ಅಂದರೆ ‘ಶ್ರೀರಾಮ ಜನ್ಮಭೂಮಿಯು ಪ್ರಭು ಶ್ರೀರಾಮನಿಗೆ ಸೇರಿದ್ದು’ ಎಂದು ತೀರ್ಪು ಪ್ರಕಟಿಸಿತು.
೩. ನ್ಯಾಯವಾದಿ ಕೆ. ಪರಾಶರನ್ ಅವರ ಛಲ, ನಿಷ್ಠೆ ಮತ್ತು ಪ್ರಕರಣದ ಸಂಪೂರ್ಣ ಅಧ್ಯಯನ!

ಪರಾಶರನ್ ಅವರಿಗೆ ಅಯೋಧ್ಯೆ ಪ್ರಕರಣದ ಬಗ್ಗೆ ಎಷ್ಟೊಂದು ಅಧ್ಯಯನವಿತ್ತೆಂದರೆ, ಅವರು ಅನೇಕ ಬಾರಿ ನ್ಯಾಯಾಲಯದ ಮುಂದೆ ಈ ಪ್ರಕರಣದ ಪ್ರಮುಖ ದಿನಾಂಕಗಳನ್ನು ಮಾತನಾಡುತ್ತಲೇ ಸುಲಭವಾಗಿ ಹೇಳುತ್ತಿದ್ದರು. ‘ಯಾವ ದಿನ ಏನು ನಡೆದಿತ್ತು?’ ಎಂಬುದನ್ನು ಪರಾಶರನ್ ಕೈಬೆರಳಿನ ಲೆಕ್ಕ ಹಾಕಿ ಹೇಳುತ್ತಿದ್ದರು. ಅವರು ‘ಅಯೋಧ್ಯೆ’ ವಿಷಯದ ಮೇಲೆ ಎಷ್ಟು ಸಂಶೋಧನೆ ಮತ್ತು ಅಧ್ಯಯನ ನಡೆಸಿದ್ದಾರೆಂದರೆ, ಅದರ ಮೇಲೆ ಒಂದು ಪುಸ್ತಕವನ್ನೇ ಬರೆಯಬಹುದು.
|
|
ನ್ಯಾಯವಾದಿ ಕೆ. ಪರಾಶರನ್ ಅವರ ಸಹಾಯಕ್ಕಾಗಿ ಇದ್ದ ಯುವ ನ್ಯಾಯವಾದಿಗಳ ತಂಡವು ರಾಮ ಜನ್ಮಭೂಮಿ ಪ್ರಕರಣದಲ್ಲಿ ಕೆಲಸ ಮಾಡಿತು. ಆ ಯುವಕರು ಹೇಳುವಂತೆ, ೯೨ ವರ್ಷ ವಯಸ್ಸಿನ ನ್ಯಾಯವಾದಿ ಕೆ. ಪರಾಶರನ್ ಅವರ ಮೊಕದ್ದಮೆಯ ವಿಚಾರಣೆ ಸಮಯದಲ್ಲಿ ಜಿದ್ದು, ಜಿಗುಟುತನ ಮತ್ತು ಅಧ್ಯಯನ ನೋಡಿ ಅವರಿಗೂ ಕೂಡ ಉತ್ಸಾಹ ಬರುತ್ತದೆ. ಪರಾಶರನ್ ಅವರು ಕಳೆದ ೪೦ ವರ್ಷಗಳಿಂದ ಈ ಮೊಕದ್ದಮೆಗಾಗಿ ಕೆಲಸ ಮಾಡುತ್ತಿದ್ದಾರೆ ; ಆದರೆ ಅವರು ಒಮ್ಮೆಯೂ ಕೂಡ ಸೋಲು ಅನುಭವಿಸಿಲ್ಲ. ಆದ್ದರಿಂದ ಸರ್ವೋಚ್ಚ ನ್ಯಾಯಾಲಯದ ಬಾರ್ ಅಸೋಸಿಯೇಷನ್ ಬಹಳಷ್ಟು ಸದಸ್ಯ ನ್ಯಾಯವಾದಿಗಳು ಪರಾಶರನ್ ಅವರನ್ನು ತಮ್ಮ ‘ಗುರು’ ಎಂದು ಗೌರವಿಸುತ್ತಾರೆ.
೪. ಶಾಂತ ಮತ್ತು ಸಂಯಮ ವೃತ್ತಿಯ ವಕೀಲ ಕೆ. ಪರಾಶರನ್ !

ರಾಮ ಜನ್ಮಭೂಮಿ ಪ್ರಕರಣದ ಕುರಿತು ಪರಾಶರನ್ ಮತ್ತು ಅವರ ತಂಡಕ್ಕೆ ಅನೇಕ ಜನರು ‘ಇ-ಮೇಲ್’, ‘ವಾಟ್ಸ್ ಆ್ಯಪ್’ ಮತ್ತು ‘ಸಂದೇಶ’ಗಳ ಮೂಲಕ ವಿವಿಧ ಸಲಹೆಗಳನ್ನು ನೀಡುತ್ತಿದ್ದರು. ಇದರಿಂದ ಅವರ ಕೆಲವು ಸಹೋದ್ಯೋಗಿಗಳು ಕೋಪಗೊಂಡು, ‘ಇಂತಹ ಜನರನ್ನು ನ್ಯಾಯಾಲಯದಲ್ಲಿ ವಾದ ಮಂಡಿಸಲು ನಿಲ್ಲಿಸಬೇಕು’ ಎನ್ನುತ್ತಿದ್ದರು. ಆಗ ಪರಾಶರನ್ ಅವರು ಯಾವಾಗಲೂ, ‘ಜನರು ಅಯೋಧ್ಯೆ ಪ್ರಕರಣವನ್ನು ತಮ್ಮ ಸ್ವಂತ ಪ್ರಕರಣವೆಂದು ಭಾವಿಸುತ್ತಾರೆ. ಅವರ ಸಲಹೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಿ’ ಎನ್ನುತ್ತಿದ್ದರು. ನಂತರ ‘ಜನರು ಏನೂ ತಪ್ಪಾಗಿ ಹೇಳುತ್ತಿರಲಿಲ್ಲ’ ಎಂದು ಸಹೋದ್ಯೋಗಿಗಳ ಗಮನಕ್ಕೆ ಬಂದಿತು. ಅಯೋಧ್ಯೆ ವಿಚಾರಣೆಯ ಸಮಯದಲ್ಲಿ ವಕೀಲ ಕೆ. ಪರಾಶರನ್ ಮತ್ತು ಮುಸ್ಲಿಂ ಪಕ್ಷದ ಪರ ವಕೀಲ ರಾಜೀವ್ ಧವನ್ ಅವರ ನಡುವೆ ವಾದ ನಡೆದಿತ್ತು. ಪ್ರಕರಣದ ಕೊನೆಯ ವಿಚಾರಣೆಯ ಸಮಯದಲ್ಲಿ ಧವನ್ ಅವರು ಹಿಂದೂ ಪಕ್ಷದ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಶ್ರೀರಾಮ ಮಂದಿರದ ನಕ್ಷೆಯ ಪ್ರತಿಯನ್ನು ನ್ಯಾಯಾಲಯದಲ್ಲಿ ಹರಿದು ಹಾಕಿದಾಗಲೂ ವಕೀಲ ಕೆ. ಪರಾಶರನ್ ಶಾಂತ ಮತ್ತು ಸಂಯಮದಿಂದಿದ್ದರು.

೫. ಶ್ರೀರಾಮ ಜನ್ಮಭೂಮಿ ಪ್ರಕರಣದ ಕುರಿತು ಸಮರಸತೆ
ರಾಮ ಜನ್ಮಭೂಮಿ ಪ್ರಕರಣದಲ್ಲಿ ತಮ್ಮ ವಾದವನ್ನು ಮಂಡಿಸುವ ಮೊದಲು ಪರಾಶರನ್ ಅವರು ಪ್ರಕರಣದ ಆಳವಾದ ಅಧ್ಯಯನ ಮಾಡಿದರು. ಅವರು ಪ್ರಕರಣಕ್ಕೆ ಸಂಬಂಧಿಸಿದ ಓದು, ಅಧ್ಯಯನ ಮತ್ತು ಕಾರ್ಯವನ್ನು ಪ್ರತಿದಿನ ಬೆಳಿಗ್ಗೆ ೧೦.೩೦ ರಿಂದ ತಡರಾತ್ರಿಯವರೆಗೆ ಮಾಡುತ್ತಿದ್ದರು. ವಿಚಾರಣೆಯ ಸಮಯದಲ್ಲಿ ಅವರಿಗೆ ಪ್ರಭು ಶ್ರೀರಾಮ ಎಲ್ಲೆಡೆ ಇರುವಂತೆ ಭಾಸವಾಗುತ್ತಿತ್ತು. ಶ್ರೀರಾಮನ ಬಗ್ಗೆ ಅಪಾರ ಶ್ರದ್ಧೆಯಿದ್ದ ಕಾರಣ ಅವರು ವಿಚಾರಣೆಯ ಸಮಯದಲ್ಲಿ ಕುಳಿತುಕೊಳ್ಳಲು ನಿರಾಕರಿಸುತ್ತಿದ್ದರು ಮತ್ತು ಪಾದರಕ್ಷೆಗಳನ್ನು ಧರಿಸದೆ ಸತತ ೫ ದಿನಗಳ ಕಾಲ ಪ್ರತಿದಿನ ೪ ಗಂಟೆಗಳಿಗಿಂತ ಹೆಚ್ಚು ಕಾಲ ಪರಿಣಾಮಕಾರಿಯಾಗಿ ವಾದ ಮಂಡಿಸಿದರು. ಸುನ್ನಿ ವಕ್ಫ್ ಬೋರ್ಡ್ ಪರವಾಗಿ ವಾದ ಮಂಡಿಸುತ್ತಿದ್ದ ಹಿರಿಯ ವಕೀಲ ರಾಜೀವ್ ಧವನ್ ಅವರು, ಪ್ರಕರಣದ ದೈನಂದಿನ ವಿಚಾರಣೆಯು ವಕೀಲ ಪರಾಶರನ್ ಅವರಿಗೆ ಬೇಸರ ತರಿಸಬಹುದು ಎಂದು ಸೂಚಿಸಿದರು. ಆಗ ಪರಾಶರಾನ್ ಅವರು, ‘‘ನಾನು ಸಾಯುವ ಮೊದಲು ಈ ಪ್ರಕರಣದ ವಾದವನ್ನು ಪೂರ್ಣಗೊಳಿಸಬೇಕು ಎನ್ನುವುದು ನನ್ನ ಏಕೈಕ ಆಸೆ’’ ಎಂದು ಉತ್ತರಿಸಿದರು.
ನ್ಯಾಯವಾದಿ ಕೆ. ಪರಾಶರನ್ ಅವರ ಮುಖದಲ್ಲಿ ಕೃತಜ್ಞತೆಯ ಭಾವ ನೋಡಿ!![]()
|
ಪರಾಶರನ್ ಅವರ ಸಹೋದ್ಯೋಗಿ ವಕೀಲ ಶ್ರೀಧರ್ ಪೊತ್ರಾಜು ಅವರು,

‘‘ರಾಮಜನ್ಮಭೂಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ೪೦ ದಿನಗಳ ವಾದದಲ್ಲಿ ಪರಾಶರನ್ ಅವರ ಈ ಪ್ರಕರಣದ ಬದ್ಧತೆಯು ಮಹರ್ಷಿಯೊಬ್ಬರು ಮಾಡಿದ ಯಾಗದಂತಿತ್ತು.’’ ಅವರ ಮನಸ್ಸಿನಲ್ಲಿ ಸತತ ೨೪ ಗಂಟೆಗಳ ಕಾಲ ಕಾನೂನು ಪ್ರಸ್ತಾಪಗಳು ಮತ್ತು ತಂತ್ರಗಳ ಆಲೋಚನೆಗಳು ನಡೆಯುತ್ತಿದ್ದವು. ಶಬರಿಮಲೈ ಪ್ರಕರಣದಲ್ಲಿ ಭಗವಾನ್ ಅಯ್ಯಪ್ಪನ ಪರವಾಗಿ ವಾದ ಮಂಡಿಸುವಾಗ ಪರಾಶರನ್ ಅವರು ಧರ್ಮಗ್ರಂಥಗಳ ಉಲ್ಲೇಖಗಳನ್ನು ನೀಡಿದರು.’’ ಒಮ್ಮೆ ತಮಾಷೆ ಮಾಡುತ್ತಾ, ‘‘೧೯೪೯ ರಲ್ಲಿ ನಾನು ನನ್ನ ಮೊದಲ ಪತ್ನಿ ಸರೋಜಾ ಅವರನ್ನು ಮದುವೆಯಾದದ್ದು ನಿಜ; ಆದರೆ ವಕೀಲರಾಗಿ ನೋಂದಾಯಿಸಿಕೊಂಡ ನಂತರ ನಾನು ‘ಕಾನೂನು’ ಎಂಬ ಎರಡನೇ ಪತ್ನಿಯನ್ನು ಮದುವೆಯಾದೆ’’ ಎಂದು ಹೇಳಿದರು.


ಸುಪ್ರೀಂ ಕೋರ್ಟ್ಗೆ 5 ಹೊಸ ನ್ಯಾಯಾಧೀಶರ ಸೇರ್ಪಡೆ; ಒಂದು ಹುದ್ದೆ ಮಾತ್ರ ಖಾಲಿ!
ಉಚ್ಚ ನ್ಯಾಯಾಲಯಗಳು 3 ತಿಂಗಳಿಗಿಂತ ಹೆಚ್ಚು ಕಾಲ ತೀರ್ಪನ್ನು ಕಾಯ್ದಿರಿಸಬಾರದು! – ಸರ್ವೋಚ್ಚ ನ್ಯಾಯಾಲಯ
ಸಿ.ಬಿ.ಎಸ್.ಇ.ಯ ತ್ರಿಭಾಷಾ ನಿಯಮದ ಅನುಷ್ಠಾನದ ಕುರಿತು ತನಿಖೆ ನಡೆಯಲಿದೆ! – ಸರ್ವೋಚ್ಚ ನ್ಯಾಯಾಲಯ : CBSE Three Language Rule
ಅಕ್ರಮ ವಲಸೆ ಸಮಸ್ಯೆ ಎದುರಿಸಲು ಕೇಂದ್ರ ಸರಕಾರದಿಂದ ಸಮಿತಿ ಸ್ಥಾಪನೆ
ಮತದಾರರ ಪಟ್ಟಿಯ ವಿಶೇಷ ಆಳವಾದ ಪರಿಶೀಲನೆ ಮಾಡುವುದು ಚುನಾವಣಾ ಆಯೋಗದ ಅಧಿಕಾರ! – ಸುಪ್ರೀಂ ಕೋರ್ಟ್
ಕೇರಳಮ್ನ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ನಾಪತ್ತೆ ! : Temple Gold Theft