ರಾಷ್ಟ್ರ-ಧರ್ಮ ರಕ್ಷಣೆಯ ಕಾರ್ಯ ಮಾಡಿದ ಮಹಾನ್‌ ಸಂತರು ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮಕುಂಡಲಿಗಳಲ್ಲಿ ಕಂಡುಬಂದ ಸಮಾನ ಗ್ರಹಯೋಗಗಳು

‘ಭಾರತವು ಸಂತರ ಭೂಮಿಯಾಗಿದೆ. ‘ಅಧ್ಯಾತ್ಮಜ್ಞಾನ’ವು ಭಾರತದ ಸರ್ವೋತ್ತಮ ವೈಶಿಷ್ಟ್ಯ ವಾಗಿದೆ. ಭಾರತದಲ್ಲಿ ಅನೇಕ ಶ್ರೇಷ್ಠ ಸಂತರು ಜನ್ಮ ತಾಳಿದರು. ಅವರು ಜನರಿಗೆ ‘ಜೀವನವನ್ನು ಆನಂದ ದಲ್ಲಿ ಹೇಗೆ ಬದುಕುವುದು ?’ ಎಂದು ಕಲಿಸಿದರು. ಕಳೆದ ೪೦೦ ವರ್ಷಗಳ ವಿಚಾರ ಮಾಡಿದರೆ ೧೭ ನೇ ಶತಮಾನದಲ್ಲಿ ಸಮರ್ಥ ರಾಮದಾಸಸ್ವಾಮಿಗಳು, ೧೯ ನೇ ಶತಮಾನದಲ್ಲಿ ಸ್ವಾಮಿ ವಿವೇಕಾನಂದರು ಮತ್ತು ೨೦ ನೇ ಶತಮಾನದಲ್ಲಿ ಮಹರ್ಷಿ ಅರವಿಂದರು ಈ ಸಂತರು ಜನರಿಗೆ ಸಾಧನೆ ಕಲಿಸುವುದರೊಂದಿಗೆ ರಾಷ್ಟ್ರ-ಧರ್ಮರಕ್ಷಣೆಯ ದೊಡ್ಡ ಕಾರ್ಯ ಮಾಡಿದರು. ಈ ಸಂತರಂತೆಯೇ ಸದ್ಯದ ೨೧ ನೇ ಶತಮಾನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ರಾಷ್ಟ್ರ-ಧರ್ಮರಕ್ಷಣೆಯ ಕಾರ್ಯವನ್ನು ಮಾಡುತ್ತಿ ದ್ದಾರೆ. ಈ ೪ ಸಂತರ ಜನ್ಮಕುಂಡಲಿಗಳ ಅಧ್ಯಯನ ಮಾಡಿದಾಗ ಅವರ ಜನ್ಮಕುಂಡಲಿಗಳಲ್ಲಿನ ಅನೇಕ ಗ್ರಹಯೋಗಗಳಲ್ಲಿ ಸಾಮ್ಯತೆ ಇರುವುದು ನಮಗೆ ತಿಳಿಯಿತು. ಈ ೪ ಸಂತರುಗಳ ಜನ್ಮಕುಂಡಲಿಗಳಲ್ಲಿನ ಗ್ರಹಯೋಗಗಳ ವಿಶ್ಲೇಷಣೆಯನ್ನು ಇಲ್ಲಿ ನೀಡಲಾಗಿದೆ.

೧. ಆಧ್ಯಾತ್ಮಿಕ ಕಾರ್ಯ

ಕುಂಡಲಿಯಲ್ಲಿನ ‘ರವಿ’, ಬುಧ’, ‘ಗುರು’ ಮತ್ತು ‘ಶನಿ’ ಇವುಗಳಲ್ಲಿ ಪರಸ್ಪರ ಮಹತ್ವದ ಶುಭಯೋಗವಿರುವುದು, ಈ ಶುಭಯೋಗ ಆಧ್ಯಾತ್ಮಿಕ ಸ್ಥಾನಗಳಲ್ಲಿ ಅಥವಾ ಆಧ್ಯಾತ್ಮಿಕ ರಾಶಿಗಳಲ್ಲಿ ಇರುವುದು ಇತ್ಯಾದಿ ಗ್ರಹಯೋಗ ತತ್ತ್ವಜ್ಞಾನ, ಆಧ್ಯಾತ್ಮಿಕ ಲೇಖನ, ಸಾಧನೆಯ ಬೋಧನೆ ಮುಂತಾದ ಆಧ್ಯಾತ್ಮಿಕ ಕಾರ್ಯಗಳನ್ನು ದರ್ಶಿಸುತ್ತವೆ. ‘ಸಮಾಜಕ್ಕೆ ಅಧ್ಯಾತ್ಮದ ಬೋಧನೆ ನೀಡುವುದು’ ಮನುಕುಲದ ಸರ್ವೋತ್ತಮ ಸೇವೆಯಾಗಿದೆ. ಅಧ್ಯಾತ್ಮದಿಂದಲೆ ಮಾನವನಿಗೆ ಜೀವನದ ಸಾರ್ಥಕತೆ ತಿಳಿಯುತ್ತದೆ ಮತ್ತು ಅದನ್ನು ಸಾಧಿಸಲು ಅವನು ಪ್ರಯತ್ನಿಸುತ್ತಾನೆ.

೧ ಅ. ಸಮರ್ಥ ರಾಮದಾಸಸ್ವಾಮಿಗಳು

೧ ಅ ೧. ಆಧ್ಯಾತ್ಮಿಕ ವಾಙ್ಮಯ ಬರೆಯುವುದು ಹಾಗೆಯೇ ಅಧ್ಯಾತ್ಮ ಪ್ರಸಾರಕ್ಕಾಗಿ ಸಂಪ್ರದಾಯ ವನ್ನು ಸ್ಥಾಪಿಸುವುದು : ಸಮರ್ಥ ರಾಮದಾಸಸ್ವಾಮಿಯವರ ಕುಂಡಲಿಯಲ್ಲಿ ‘ರವಿ’, ‘ಬುಧ’ ಮತ್ತು ‘ಗುರು’ ಇವುಗಳ ದಶಮ (ಕರ್ಮ) ಸ್ಥಾನದಲ್ಲಿ ಯುತಿ ಇದೆ, ಅದೇ ರೀತಿ ಅವರ ‘ಶನಿ’ ಗ್ರಹದೊಂದಿಗೆ ಯೋಗವಿದೆ. ಈ ಯೋಗ ತತ್ತ್ವಜ್ಞಾನ, ಆಧ್ಯಾತ್ಮಿಕ ಲೇಖನ ಹಾಗೂ ಅಧ್ಯಾತ್ಮ ಪ್ರಸಾರದ ಕಾರ್ಯವನ್ನು ತೋರಿಸುತ್ತದೆ. ಸಮರ್ಥರು ಭಾರತದಾದ್ಯಂತ ಸಂಚಾರಿಸಿ ಜನರಿಗೆ ಶ್ರೀರಾಮಭಕ್ತಿಯನ್ನು ಉಪದೇಶಿಸಿದರು. ಅವರು ‘ಶ್ರೀಮದ್‌ ದಾಸಬೋಧ’, ‘ಆತ್ಮಾರಾಮ’, ‘ಮನಾಚೆ ಶ್ಲೋಕ’ ಇತ್ಯಾದಿ ಆಧ್ಯಾತ್ಮಿಕ ವಾಙ್ಮಯಗಳನ್ನು ಬರೆದರು. ಆ ಮೂಲಕ ಸಾಧಕನಿಗೆ ತನ್ನಲ್ಲಿನ ದೋಷಗಳ ನಿರ್ಮೂಲನೆ ಮಾಡಿ ಸದಾಚರಣೆಯ ವಿಷಯದಲ್ಲಿ ಮಾರ್ಗದರ್ಶನ ಸಿಗುತ್ತದೆ. ಅವರು ಅನೇಕ ಆರತಿಗಳನ್ನು, ಸ್ತೋತ್ರಗಳನ್ನು ರಚಿಸಿದರು. ಸಮರ್ಥರು ಅಧ್ಯಾತ್ಮಪ್ರಸಾರಕ್ಕಾಗಿ ‘ಸಮರ್ಥ ಸಂಪ್ರದಾಯ’ವನ್ನು ಸ್ಥಾಪಿಸಿದರು. ಅವರು ಭಾರತದಾದ್ಯಂತ ೭೦೦ ಕ್ಕೂ ಹೆಚ್ಚು ಸ್ಥಳಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಇಂದೂ ‘ಸಮರ್ಥ ಸಂಪ್ರದಾಯ’ ಅಧ್ಯಾತ್ಮಪ್ರಸಾರದ ಕಾರ್ಯ ಮಾಡುತ್ತಿದೆ.

೧ ಆ. ಸ್ವಾಮಿ ವಿವೇಕಾನಂದರು 

೧ ಅ ೧. ಆಧುನಿಕ ಶೈಲಿಯಲ್ಲಿ ಅದ್ವೈತ ತತ್ತ್ವಜ್ಞಾನವನ್ನು ಪುರಸ್ಕರಿಸುವುದು ಹಾಗೂ ಅಧ್ಯಾತ್ಮದ ಬಗ್ಗೆ ಬಹಳಷ್ಟು ಲೇಖನಗಳನ್ನು ಬರೆಯುವುದು : ಸ್ವಾಮಿ ವಿವೇಕಾನಂದರ ಕುಂಡಲಿಯಲ್ಲಿ ‘ರವಿ’ ಮತ್ತು ‘ಗುರು’ ಹಾಗೂ ‘ಬುಧ’ ಹಾಗೂ ‘ಶನಿ’ ಇವುಗಳ ನಡುವೆ ಶುಭಯೋಗವಿದೆ. ಈ ಯೋಗವು ಜ್ಞಾನಶಕ್ತಿ, ಆಳವಾದ ಚಿಂತನೆ, ತತ್ತ್ವಜ್ಞಾನ, ಆಧ್ಯಾತ್ಮಿಕ ಲೇಖನ ಹಾಗೂ ಅಧ್ಯಾತ್ಮಪ್ರಸಾರ ಈ ಪರಿಣಾಮಗಳನ್ನು ದರ್ಶಿಸುತ್ತದೆ. ಸ್ವಾಮಿ ವಿವೇಕಾನಂದರು ಆಧುನಿಕ ಶೈಲಿಯಲ್ಲಿ ಅದ್ವೈತ ತತ್ತ್ವಜ್ಞಾನವನ್ನು ಪುರಸ್ಕರಿಸಿದರು. ಪ್ರತಿಯೊಂದು ಪ್ರಾಣಿಮಾತ್ರರಲ್ಲಿ ಒಂದೇ ಈಶ್ವರೀತತ್ತ್ವವಿದೆ. ಈ ಸುಪ್ತ ಈಶ್ವರೀತತ್ತ್ವವನ್ನು ಪ್ರಕಟಗೊಳಿಸುವುದೇ ನಮ್ಮ ಧ್ಯೇಯವಾಗಿದೆ; ಇದೇ ನಿಜವಾದ ಧರ್ಮ’, ಎಂದು ಹೇಳಿ ಅವರು ವೈಶ್ವಿಕ-ಒಮ್ಮತದ ಸಂದೇಶ ನೀಡಿದರು. ಅವರು ಅಧ್ಯಾತ್ಮದ ಬಗ್ಗೆ ಬಹಳಷ್ಟು ಲೇಖನಗಳನ್ನು ಬರೆದರು; ಅವುಗಳಲ್ಲಿ ಅವರ ‘ರಾಜಯೋಗ’, ‘ಜ್ಞಾನಯೋಗ’, ‘ಭಕ್ತಿಯೋಗ ಕರ್ಮಯೋಗ’ ಇತ್ಯಾದಿ ಗ್ರಂಥಗಳು ಪ್ರಸಿದ್ಧವಾಗಿವೆ. ಅವರು ಅಧ್ಯಾತ್ಮ ಪ್ರಸಾರಕ್ಕಾಗಿ ‘ರಾಮಕೃಷ್ಣ ಮಠ’ವನ್ನು ಸ್ಥಾಪಿಸಿದರು. ಇಂದು ಕೂಡ ‘ರಾಮಕೃಷ್ಣ ಮಠ’ಗಳ ಮೂಲಕ ಅಧ್ಯಾತ್ಮಪ್ರಸಾರ ಹಾಗೂ ಸಮಾಜ ಪ್ರಬೋಧನೆಯ ಕಾರ್ಯ ನಡೆಯುತ್ತಿದೆ.

ಶ್ರೀ. ರಾಜ ಕರ್ವೆ

೧ ಇ. ಮಹರ್ಷಿ ಅರವಿಂದ

೧ ಇ ೧. ವಿಶ್ವದ ಅಸ್ತಿತ್ವದ ರಹಸ್ಯವನ್ನು ತೆರೆದಿಡುವ ಮಹತ್ವದ ವಾಙ್ಮಯವನ್ನು ರಚಿಸುವುದು ಹಾಗೂ ‘ಆಂತರಿಕ ಯೋಗ’ ಎಂಬ ಸಾಧನೆಯ ಪದ್ಧತಿಯನ್ನು ವಿಕಾಸಗೊಳಿಸುವುದು : ಮಹರ್ಷಿ ಅರವಿಂದರ ಕುಂಡಲಿಯಲ್ಲಿ ‘ರವಿ’, ‘ಗುರು’ ಹಾಗೂ ‘ಹರ್ಷಲ’ ಇವುಗಳಲ್ಲಿ ಸಂಯೋಗವಿದೆ, ಅದೇ ರೀತಿ ‘ಬುಧ’ ಹಾಗೂ ‘ಶನಿ’ ಇವುಗಳಲ್ಲಿ ಶುಭಯೋಗವಿದೆ. ಈ ಯೋಗವು ಚಿಂತನಶೀಲತೆ, ತತ್ತ್ವಜ್ಞಾನ ವಿಚಾರ, ಆಧ್ಯಾತ್ಮಿಕ ಲೇಖನ ಹಾಗೂ ಅಧ್ಯಾತ್ಮ ಪ್ರಸಾರ ಇಂತಹ ಪರಿಣಾಮವನ್ನು ದರ್ಶಿಸುತ್ತದೆ. ಮಹರ್ಷಿ ಅರವಿಂದರು ಆಂಗ್ಲರ ಸೆರೆಮನೆಯಿಂದ ಮುಕ್ತರಾದ ನಂತರ ಪುದುಚೇರಿ (ಪಾಂಡಿಚೇರಿ)ಗೆ ಬಂದರು. ಅಲ್ಲಿ ಅವರು ‘ಆರ್ಯಾ’ ಹೆಸರಿನ ಅಧ್ಯಾತ್ಮಿಕ ನಿಯತಕಾಲಿಕೆ ಆರಂಭಿಸಿದರು. ಅದರಲ್ಲಿ ಅವರು ಈಶ್ವರನ ಸ್ವರೂಪ ಹೇಗಿದೆ ? ವಿಶ್ವ ಹೇಗೆ ಮತ್ತು ಏಕೆ ನಿರ್ಮಾಣವಾಯಿತು ?  ವಿಶ್ವ ಚೇತನದ ಸ್ತರದಲ್ಲಿ ಹೇಗೆ ವಿಕಾಸ ಹೊಂದುತ್ತದೆ ?’ ಇತ್ಯಾದಿ ಮೂಲಭೂತ ಪ್ರಶ್ನೆಗಳಿಗೆ ಸಂಬಂಧಿಸಿದ ಬಹಳಷ್ಟು ಲೇಖನಗಳನ್ನು ಬರೆದರು; ಅವರ ‘ದಿವ್ಯ ಜೀವನ’, ‘ಯೋಗ-ಸಮನ್ವಯ’, ‘ಯೋಗದ ಮೂಲತತ್ತ್ವಗಳು, ‘ಗೀತಾ-ಪ್ರಬಂಧ’, ‘ವೇದ-ರಹಸ್ಯ’ ಇತ್ಯಾದಿ ಗ್ರಂಥಗಳು ಅಮೂಲ್ಯವಾಗಿವೆ. ಈಶ್ವರನ ದಿವ್ಯ ಚೇತನವು ಮಾನವನ ಮೂಲಕ ಕಾರ್ಯ ಮಾಡಿದರೆ ಪೃಥ್ವಿಯ ಮೇಲೆ ದಿವ್ಯ ಜೀವನ ಅವತರಿಸುವುದು’, ಎನ್ನುವ ಸಿದ್ಧಾಂತವನ್ನು ಅವರು ಮಂಡಿಸಿದರು. ಈ ಧ್ಯೇಯವನ್ನು ಸಾಧಿಸುವ ಪ್ರಕ್ರಿಯೆಗೆ ಅವರು ‘ಆಂತರಿಕ ಯೋಗ’ ಎಂದು ಹೆಸರನ್ನು ನೀಡಿದರು.

೧ ಈ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ  

೧ ಈ ೧. ಕಾಲಾನುಸಾರ ಯೋಗ್ಯವಿರುವ ಸಾಧನೆಯನ್ನು ಪ್ರಾಯೋಗಿಕ ಸ್ತರದಲ್ಲಿ ಕಲಿಸು ವುದು, ಬಹಳಷ್ಟು ಗ್ರಂಥಗಳನ್ನು ನಿರ್ಮಿಸುವುದು : ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಕುಂಡಲಿಯಲ್ಲಿ ೧೨ ನೇ (ಮೋಕ್ಷ) ಸ್ಥಾನದಲ್ಲಿ ‘ಬುಧ’, ‘ಶನಿ’ ಮತ್ತು ‘ಹರ್ಷಲ’ ಇವುಗಳ ಯುತಿ ಇದೆ. ಅದೇ ರೀತಿ ೧೨ ನೇ ಸ್ಥಾನದ ಕೊನೆಗೆ ‘ಗುರು’ ಗ್ರಹ ಸ್ಥಿರವಾಗಿದೆ. ಇವು ಯೋಗ ಸಾಧನೆಯನ್ನು ಕಲಿಸುವುದು, ಗ್ರಂಥಗಳ-ನಿರ್ಮಿತಿ, ಆಶ್ರಮಗಳ ನಿರ್ಮಾಣ, ಆಧ್ಯಾತ್ಮಿಕ ಸಂಶೋಧನೆ, ಅಧ್ಯಾತ್ಮಪ್ರಸಾರ ಇತ್ಯಾದಿ ಪರಿಣಾಮವನ್ನು ದರ್ಶಿಸುತ್ತವೆ. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ‘ಸನಾತನ ಸಂಸ್ಥೆ’ಯ ಮೂಲಕ ಸಾಧಕರಿಗೆ ಪ್ರಾಯೋಗಿಕ ಸ್ತರದಲ್ಲಿ ಸಾಧನೆ ಕಲಿಸಿದರು. ‘ಗುರುಕೃಪೆಯಿಂದಲೇ ಶಿಷ್ಯನ ನಿಜವಾದ ಆಧ್ಯಾತ್ಮಿಕ ಉನ್ನತಿಯಾಗುತ್ತದೆ’, ಎಂಬ ಸಿದ್ಧಾಂತವನ್ನು ಮಂಡಿಸಿ ಗುರುಕೃಪೆಯ ಲಾಭ ನಿರಂತರ ಆಗಬೇಕೆಂದು ಅವರು ‘ಗುರುಕೃಪಾಯೋಗ’ ಈ ಸಾಧನಾಮಾರ್ಗವನ್ನು ಹೇಳಿದರು. ಸಾಧನೆಯ ಪ್ರಮುಖ ತತ್ತ್ವಗಳು, ಸಾಧನೆಯಲ್ಲಾಗುವ ಮೂಲಭೂತ ತಪ್ಪುಗಳು, ಸಾಧನೆಯ ವಿಧಗಳು ಮತ್ತು ಸಾಧನೆಯ ಹಂತಗಳನ್ನು ಅವರು ಸುಲಭ ಭಾಷೆಯಲ್ಲಿ ಕಲಿಸಿದರು. ಸನಾತನದ ಇಷ್ಟರವರೆಗಿನ ಅಧ್ಯಾತ್ಮ, ಸಾಧನೆ, ಧಾರ್ಮಿಕ ಕೃತಿಗಳ ಹಿಂದಿನ ಶಾಸ್ತ್ರ, ದೇವತೆಗಳ ಉಪಾಸನೆ ಇತ್ಯಾದಿಗಳ ೩೬೬ ಗ್ರಂಥಗಳು ಮಾರ್ಚ್ ೨೦೨೫ ರ ವರೆಗೆ ಪ್ರಕಾಶನವಾಗಿವೆ. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಕ್ಷ್ಮ-ಜಗತ್ತಿಗೆ ಸಂಬಂಧಿಸಿ ಅನೇಕ  ಸಂಶೋಧನೆ ಹಾಗೂ ಲೇಖನಗಳನ್ನು ಮಾಡಿದ್ದಾರೆ. ಅವರ ಸಂಶೋಧನಾತ್ಮಕ ಬುದ್ಧಿಯಿಂದ ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗಾಗಿ ಹೊಸತಾದ ಹಾಗೂ ಸುಲಭ ಆಧ್ಯಾತ್ಮಿಕ ಉಪಾಯಗಳನ್ನು ಕಂಡು ಹಿಡಿದಿದ್ದಾರೆ. ಇಂದು ಸನಾತನದ ಸಾವಿರಾರು ಸಾಧಕರು ಸಮರ್ಪಣಾಭಾವದಿಂದ ಅಧ್ಯಾತ್ಮ ಪ್ರಸಾರದ ಕಾರ್ಯ ಮಾಡುತ್ತಿದ್ದಾರೆ.

– ಶ್ರೀ. ರಾಜ ಕರ್ವೆ, ಜ್ಯೋತಿಷ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೪.೪.೨೦೨೫)

(ಮುಂದುವರಿಯುವುದು)