‘ಜ್ಞಾನಗುರು’, ‘ಗ್ರಂಥಗುರು’ ಮತ್ತು ‘ಮೋಕ್ಷಗುರು’ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ‘ಮನುಕುಲದ ಸರ್ವತೋಮುಖ ಉದ್ಧಾರದ’ ದೈವೀ ಕಾರ್ಯದ ಆಧ್ಯಾತ್ಮಿಕ ವಿವೇಚನೆ !

‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅತ್ಯಂತ ಶ್ರೇಷ್ಠವಾಗಿರುವ ಗುರುಪದವಿಯಲ್ಲಿ ಆರೂಢರಾಗಿದ್ದಾರೆ. ಈ ಪದವಿಯಲ್ಲಿದ್ದು ಅವರು ಧರ್ಮನಿಷ್ಠರಿಗೆ ಧರ್ಮಗುರು, ಸಾಧಕರಿಗೆ ಮಾರ್ಗದರ್ಶಕ ಗುರು, ಸಾಧಕರಿಗೆ ಸದ್ಗುರು, ಶಿಷ್ಯರಿಗೆ ಆತ್ಮಗುರು ಮತ್ತು ಇಡೀ ವಿಶ್ವಕ್ಕೆ ವಿಶ್ವಗುರು ಎಂದು ನಿರಂತರವಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರು ಇಡೀ ವಿಶ್ವಕ್ಕೆ ಆತ್ಮಜ್ಞಾನ ಮತ್ತು ಬ್ರಹ್ಮಜ್ಞಾನವನ್ನು ನೀಡುವ ಜ್ಞಾನಗುರು ಮತ್ತು ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡುವ ಜೀವಗಳಿಗೆ ಜೀವನ್ಮುಕ್ತಿಯನ್ನು ಮತ್ತು ಮೋಕ್ಷವನ್ನು ಪ್ರದಾನಿಸುವ ‘ಮೋಕ್ಷಗುರು’ಗಳಾಗಿದ್ದಾರೆ. ಸನಾತನ ಸಂಸ್ಥೆಯ ಗ್ರಂಥಗಳಿಗೆ ಸಂಬಂಧಿಸಿದಂತೆ ಕಾರ್ಯ ಮಾಡುತ್ತಿರುವಾಗ ಅವರು ‘ಜ್ಞಾನಗುರು’ವಾಗಿ ಈ ಅವತಾರಿ ಕಾರ್ಯವನ್ನು ಪೂರ್ಣತ್ವಕ್ಕೆ ಕೊಂಡೊಯ್ಯುತ್ತಾರೆ. ಅವರ ‘ಜ್ಞಾನಗುರು’ ಈ ರೂಪದ ದೈವೀ ಕಾರ್ಯದ ಸವಿಸ್ತಾರ ವಿವೇಚನೆಯನ್ನು ಈ ಲೇಖನದಲ್ಲಿ ಮಾಡಲಾಗಿದೆ.

೧. ಪ್ರಶ್ನೆ : ನನ್ನಿಂದ ಗ್ರಂಥ ಬರವಣಿಗೆಯ ಕಾರ್ಯವು ಬಹಳ ಹೆಚ್ಚಾಗಬೇಕೆಂದು ದೇವರು ನನಗೆ ಸೂಕ್ಷ್ಮದಿಂದ ಜ್ಞಾನವನ್ನು ನೀಡುವ ಬದಲು ಸಾಧಕರ ಮಾಧ್ಯಮದಿಂದ ನೀಡುತ್ತಿದ್ದಾನೆ, ಹೀಗೇಕೆ ? – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨.೨.೨೦೨೫)

೨. ಉತ್ತರ

೨ ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ‘ಜ್ಞಾನಗುರು ಮತ್ತು ಗ್ರಂಥಗುರು’ಗಳಾಗಿ ಅಖಿಲ ಮನುಕುಲದ ಸರ್ವತೋಮುಖ ಉತ್ಕರ್ಷವನ್ನು ಮಾಡಲಿರುವರು : ಸದ್ಯ ಪೃಥ್ವಿಯಲ್ಲಿ ಹೆಚ್ಚಿನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಜ್ಞಾನವು ನಾಶವಾಗಿದೆ. ಆದುದರಿಂದ ಸ್ಥೂಲ ಜಗತ್ತಿನೊಂದಿಗೆ ಸೂಕ್ಷ್ಮ ಜಗತ್ತಿನ ಬಗ್ಗೆಯೂ ಜ್ಞಾನವು ಲಯವಾಗಿದೆ.

‘ಪೃಥ್ವಿಯಲ್ಲಿ ಹಿಂದೂ ರಾಷ್ಟ್ರವನ್ನು ನಿರ್ಮಿಸಿ ಧರ್ಮಸಂಸ್ಥಾಪನೆಯ ಅವತಾರಿ ಕಾರ್ಯಕ್ಕೆ ಜ್ಞಾನಶಕ್ತಿಯ ಬೆಂಬಲ ದೊರಕಿ ಆ ಅವತಾರಿ ಕಾರ್ಯವು ಬೇಗ ಪೂರ್ಣತ್ವಕ್ಕೆ ಹೋಗಬೇಕು’, ಎಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ಸನಾತನದ ಗ್ರಂಥಗಳ ಬರವಣಿಗೆ ಮತ್ತು ಸಂಕಲನ ಮಾಡಿ ಇಡೀ ಜಗತ್ತಿಗೆ ಧರ್ಮಜ್ಞಾನ, ಆತ್ಮಜ್ಞಾನ ಮತ್ತು ಬ್ರಹ್ಮಜ್ಞಾನವನ್ನು ನೀಡುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ಶ್ರೀಗಣೇಶನು ಪ್ರತಿಭೆ, ಪ್ರಜ್ಞೆ, ಮೇಧಾ ಇತ್ಯಾದಿ ದೈವೀ ಬುದ್ಧಿಗಳ ಸ್ವರೂಪದಲ್ಲಿ ಮತ್ತು ಸಾಕ್ಷಾತ್‌ ಮಾತೆ ಸರಸ್ವತಿಯು ಜ್ಞಾನಗಂಗೆಯ ರೂಪದಲ್ಲಿ ಅವತರಿಸಿ ಈ ಸನಾತನದ ಗ್ರಂಥಗಳನ್ನು ಸಿದ್ಧಪಡಿಸುತ್ತಿದ್ದಾರೆ. ಆದುದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲಿಯುಗದಲ್ಲಿ ಅಜರಾಮರವಾಗಿರುವ ಸನಾತನದ ಗ್ರಂಥಗಳ ರೂಪದಲ್ಲಿ ‘ಗ್ರಂಥಗುರು’ವಾಗಿ ಕೇವಲ ವರ್ತಮಾನಕಾಲದಲ್ಲಷ್ಟೇ ಅಲ್ಲ; ಭವಿಷ್ಯಕಾಲದಲ್ಲಿಯೂ ಅನೇಕ ಪೀಳಿಗೆಗಳಿಗೆ ಗ್ರಂಥರೂಪ ದಿಂದ ಧರ್ಮ ಮತ್ತು ಅಧ್ಯಾತ್ಮದ ಮಾರ್ಗದರ್ಶನ ಮಾಡಲಿದ್ದಾರೆ. ಆದುದರಿಂದ ಜಿಜ್ಞಾಸು, ಮುಮುಕ್ಷು, ಧರ್ಮಾಭಿಮಾನಿ, ಸಾಧಕರು, ಶಿಷ್ಯ, ಸಂತ, ಸದ್ಗುರು ಮತ್ತು ಪರಾತ್ಪರ ಗುರು ಇವರಿಂದ ‘ಗುರುಕೃಪಾಯೋಗಾನುಸಾರ’ ಅಷ್ಟಾಂಗಯೋಗದ ಸಾಧನೆಯಾಗಿ ವ್ಯಷ್ಟಿ ಸ್ತರದಲ್ಲಿ ಅವರ ಆಧ್ಯಾತ್ಮಿಕ ಉನ್ನತಿಯಾಗಲಿದೆ. ಅದೇ ರೀತಿ ಅವರಿಗೆ ಪೃಥ್ವಿಯಲ್ಲಿ ಸ್ಥಾಪನೆಯಾದ ರಾಮರಾಜ್ಯರೂಪಿ ಧರ್ಮರಾಜ್ಯ ಅಥವಾ ಹಿಂದೂ ರಾಷ್ಟ್ರವನ್ನು ನಡೆಸುವ ಮಾರ್ಗದರ್ಶನವನ್ನು ಗ್ರಂಥಗಳ ಮೂಲಕ ನೀಡಿ ಅವರಿಂದ ಸಮಷ್ಟಿ ಸಾಧನೆಯನ್ನು ಮಾಡಿಸಿಕೊಳ್ಳಲಿದ್ದಾರೆ. ಈ ರೀತಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಜ್ಞಾನಗುರು ಮತ್ತು ಗ್ರಂಥಗುರುವಾಗಿ ಅಖಿಲ ಮನುಕುಲದ ಸರ್ವತೋಮುಖ ಉನ್ನತಿಗೆ ಕಾರಣವಾಗಲಿದ್ದಾರೆ.

ಸುಶ್ರೀ (ಕು.) ಮಧುರಾ ಭೋಸಲೆ

೨ ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪ್ರಶ್ನೆ ಕೇಳಿದಾಗ, ಅವರು ಸೂಕ್ಷ್ಮ ಜ್ಞಾನಪ್ರಾಪ್ತಿಮಾಡಿಕೊಳ್ಳುವ ಸಾಧಕರಲ್ಲಿ ಪ್ರಶ್ನೆಯ ರೂಪದಲ್ಲಿ ಜ್ಞಾನಬೀಜವನ್ನು ಬಿತ್ತುತ್ತಾರೆ, ಆ ಜ್ಞಾನಬೀಜವು ಮೊಳಕೆಯೊಡೆದು ಅದರ ಉತ್ತರ ರೂಪದ ಜ್ಞಾನವೃಕ್ಷವು ತಯಾರಾಗುತ್ತದೆ ! : ಶ್ರೀ ಗುರುಕೃಪೆಯಿಂದ ಸನಾತನದ ಕೆಲವು ಸಾಧಕರ ಬುದ್ಧಿ ಸಾತ್ತ್ವಿಕವಾಗಿ ಅವರಲ್ಲಿ ಪ್ರತಿಭೆ, ಪ್ರಜ್ಞೆ ಮತ್ತು ಮೇಧಾ ಈ ಸೂಕ್ಷ್ಮ ಬುದ್ಧಿಯ ಪ್ರಕಾರಗಳು ಜಾಗೃತವಾಗು ತ್ತಿವೆ. ಆದುದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸೂಕ್ಷ್ಮ ಜ್ಞಾನಪ್ರಾಪ್ತಿ ಮಾಡಿಕೊಳ್ಳುವ ಸಾಧಕರಿಗೆ ಪ್ರಶ್ನೆ ಕೇಳಿದಾಗ, ಅವರು ಆ ಸಾಧಕರಲ್ಲಿ ಪ್ರಶ್ನೆಯ ರೂಪದಲ್ಲಿ ಜ್ಞಾನಬೀಜವನ್ನು ಬಿತ್ತುತ್ತಾರೆ ಮತ್ತು ಆ ಜ್ಞಾನಬೀಜವು ಮೊಳಕೆಯೊಡೆದು ಅದರ ಉತ್ತರ ರೂಪದ ಜ್ಞಾನವೃಕ್ಷವು ಸಿದ್ಧವಾಗುತ್ತದೆ. ಶ್ರೀ ಗುರುಕೃಪೆಯಿಂದಲೇ ವಿಶ್ವಮನಸ್ಸಿನೊಂದಿಗೆ ಅನುಸಂಧಾನ ವಾಗಿ ಯಾವುದಾದರೂ ಕಾರ್ಯಕ್ರಮ, ಘಟನೆ ಅಥವಾ ಧಾರ್ಮಿಕ ವಿಧಿಯ ಸೂಕ್ಷ್ಮ ಪರೀಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಹಾಗೆಯೇ ಸೂಕ್ಷ್ಮ ಜ್ಞಾನಪ್ರಾಪ್ತಮಾಡಿಕೊಳ್ಳುವ ಸಾಧಕರು ವಿಶ್ವಬುದ್ಧಿ ಯೊಂದಿಗೆ ಅನುಸಂಧಾನ ಸಾಧಿಸಿ ಧರ್ಮ ಮತ್ತು ಅಧ್ಯಾತ್ಮದ ಬಗೆಗಿನ ಪ್ರಶ್ನೆಗಳಿಗೆ ಸೂಕ್ಷ್ಮದಿಂದ ಉತ್ತರಗಳು ಸಿಗತೊಡಗುತ್ತವೆ. ಯಾವ ರೀತಿ ದ್ವಾಪರಯುಗದಲ್ಲಿ ಭಗವಾನ ಶ್ರೀಕೃಷ್ಣನು ಅರ್ಜುನನಿಗೆ ಗೀತೆಯನ್ನು ಹೇಳಿ ದನೋ ಮತ್ತು ಮಹರ್ಷಿ ವ್ಯಾಸರು ಶ್ರೀ ಗಣೇಶನ ಮಾಧ್ಯಮ ದಿಂದ ಬರೆದರೋ, ಅದೇ ರೀತಿ ಕಲಿಯುಗದಲ್ಲಿ ಶ್ರೀಕೃಷ್ಣನ ಅಂಶಾವತಾರ ವಾಗಿರುವ ಜ್ಞಾನಗುರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಸ್ಥೂಲದಲ್ಲಿ ಪ್ರಶ್ನೆ ಕೇಳುತ್ತಾರೆ ಮತ್ತು ಅವರೇ ಸೂಕ್ಷ್ಮದಿಂದ ಜ್ಞಾನವನ್ನು ನೀಡಿ ಅದೇ ಪ್ರಶ್ನೆಗಳಿಗೆ ಉತ್ತರಗಳನ್ನು ಅವರಿಗೆ ನೀಡುತ್ತಾರೆ. ಆದುದರಿಂದ ಸ್ಥೂಲದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಒಂದು ವೇಳೆ ಸೂಕ್ಷ್ಮ ಜ್ಞಾನವನ್ನು ಪ್ರಾಪ್ತಿಮಾಡಿಕೊಳ್ಳುತ್ತಿದ್ದಾರೆ’, ಎಂದು ಕಂಡು ಬಂದರೂ, ಅವರೇ ಸಾಧಕರಿಗೆ ಸೂಕ್ಷ್ಮದಿಂದ ಜ್ಞಾನವನ್ನು ನೀಡುತ್ತಾರೆ. ಸೂಕ್ಷ್ಮ-ಜ್ಞಾನಪ್ರಾಪ್ತಿಮಾಡಿಕೊಳ್ಳುವ ಸಾಧಕರು ಕೇವಲ ಗುರುದೇವರು ಸೂಕ್ಷ್ಮದಿಂದ ನೀಡಿದ ಜ್ಞಾನವನ್ನು ಗ್ರಹಣ ಮಾಡುವ ಮಾಧ್ಯಮವಾಗಿದ್ದಾರೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಯಾವಾಗ ಪ್ರಶ್ನೆ ಕೇಳುತ್ತಾರೆಯೋ, ಆಗ ಅವರು ‘ಭಕ್ತನ’ (ದ್ವೈತದ) ಸ್ಥಿತಿಯಲ್ಲಿರುತ್ತಾರೆ, ಯಾವಾಗ ಅವರು ಜ್ಞಾನದ ಸತ್ಯತೆಯನ್ನು ಪರಿಶೀಲಿಸುತ್ತಾರೆ, ಆಗ ಅವರು ದ್ವೈತ-ಅದ್ವೈತದ ಸ್ಥಿತಿಯಲ್ಲಿರುತ್ತಾರೆ, ಅಂದರೆ ಅವರು ಭಕ್ತ ಮತ್ತು ಭಗವಂತ ಇವರ ನಡುವಿನ ‘ಕೈವಲ್ಯ ಮುಕ್ತಿಯ’ ಸ್ಥಿತಿಯಲ್ಲಿರುತ್ತಾರೆ. ಹಾಗೆಯೇ ಯಾವಾಗ ಅವರು ಪ್ರಶ್ನೆಗಳ ಉತ್ತರಗಳನ್ನು ಪರಿಶೀಲಿಸಿ ಗ್ರಂಥಗಳ ಸಂಕಲನ ಮಾಡುತ್ತಾರೆಯೋ, ಆಗ ಅವರು ‘ಭಗವಂತನ’ (ಅದೆವ್ ತದ ಸ್ಥಿತಿ ) ಸ್ಥಿತಿಯಲ್ಲಿರುತ್ತಾರೆ.’

೨ ಇ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸೂಕ್ಷ್ಮ-ಜ್ಞಾನಕ್ಕೆ ಸಂಬಂಧಿಸಿದಂತೆ ಮಾಡಿದ ವಿವಿಧ ಕೃತಿಗಳಿಗನುಸಾರ ಇರುವ ಅವರ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳು

೨ ಈ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆರೂಪಿ ಜ್ಞಾನಾವತಾರದ ‘ಜ್ಞಾನಗುರುವಾಗಿ ಮಾರ್ಗದರ್ಶನ ಮಾಡು ವುದು, ಗ್ರಂಥಗುರುವಾಗಿ ಚಿರಕಾಲ ಅನುಭೂತಿ ನೀಡುವುದು ಮತ್ತು ಮೋಕ್ಷಗುರುವಾಗಿ ಸಾಧಕರನ್ನು ಜೀವನ್ಮುಕ್ತ ಮಾಡಿ ಮೋಕ್ಷವನ್ನು ಪ್ರದಾನಿಸುವುದು’, ಈ ಕಾರ್ಯವು ಕಲಿಯುಗದ ಅಂತ್ಯದವರೆಗೆ ಕಾರ್ಯನಿರತವಾಗಿರುವುದು ! : ‘ಪ್ರಶ್ನೆ ಕೇಳುವುದು’ ಈ ಮಾಧ್ಯಮದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಂದ ಕಾಲಾನುಸಾರ ಕ್ರಿಯಾಶಕ್ತಿಯ ಸ್ತರದಲ್ಲಿ ಆವಶ್ಯಕವಾಗಿರುವ ಗುರುತತ್ತ್ವದ ಮತ್ತು ಅವತಾರಿ ಕಾರ್ಯವಾಗುತ್ತಿದೆ. ಅವರಿಂದ ಜ್ಞಾನಶಕ್ತಿಯ ಸ್ತರದ ‘ಉತ್ತರಗಳನ್ನು ಪಡೆಯುವುದು’ ಈ ಕಾರ್ಯವು ಅಪೇಕ್ಷಿತ ಇಲ್ಲದ ಕಾರಣ ಅವರಿಗೆ ಜ್ಞಾನದಿಂದ ಉತ್ತರಗಳು ಸಿಗದೇ ಅವು ಸನಾತನದ ಸೂಕ್ಷ್ಮ-ಜ್ಞಾನಪ್ರಾಪ್ತಿಮಾಡಿಕೊಳ್ಳುವ ಸಾಧಕರಿಗೆ ಸಿಗುತ್ತಿವೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಂದ ಕಾಲಾನುಸಾರ ಕ್ರಿಯಾಶಕ್ತಿಯ ಸ್ತರದ ಕಾರ್ಯವು ನಡೆದಿರುವುದರಿಂದ ಅವರು ಗ್ರಂಥಗಳ ಬರವಣಿಗೆ ಮತ್ತು ಅವುಗಳ ಸಂಕಲನ ಮಾಡುವ ಮಹತ್ವಪೂರ್ಣ ಅವತಾರಿ ಕಾರ್ಯವನ್ನು ಮಾಡುತ್ತಿದ್ದಾರೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆರೂಪಿ ಜ್ಞಾನಾವತಾರವು ‘ಜ್ಞಾನಗುರು’ವಾಗಿ ಮಾರ್ಗದರ್ಶನ ಮಾಡುವುದು, ಗ್ರಂಥಗುರುವಾಗಿ ಚಿರಕಾಲ ಅನಭೂತಿ ನೀಡುವುದು ಮತ್ತು ಮೋಕ್ಷಗುರುವಾಗಿ ಸಾಧಕರನ್ನು ಜೀವನ್ಮುಕ್ತ ಮಾಡಿ ಮೋಕ್ಷ ನೀಡುವುದು’ ಈ ಕಾರ್ಯವು ಕಲಿಯುಗದ ಅಂತ್ಯದ ವರೆಗೆ ಮಾಡುತ್ತದೆ.

(ಮುಂದುವರಿಯುವುದು)

ಸುಶ್ರೀ. (ಕು.) ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೨.೨೦೨೫)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.