
೧. ಸರ್ವಧರ್ಮ ಸಭೆಯ ಸಂದರ್ಭದಲ್ಲಿ ವಾಸ್ಕೋದಲ್ಲಿನ ಗುರುದ್ವಾರದಲ್ಲಿ ಪಂಜಾಬಿ ಭಾಷೆಯ ಒಂದು ಗ್ರಂಥದ ಪ್ರಕಾಶನ ಮಾಡಲು ಹಾಗೂ ಸಭೆಯಲ್ಲಿ ವಕ್ತಾರರೆಂದು ಮಾತನಾಡಬೇಕೆಂದು ಆಮಂತ್ರಣ ನೀಡುವುದು
‘ಕೆಲವು ವರ್ಷಗಳ ಹಿಂದೆ ಗೋವಾದಲ್ಲಿ ಒಂದು ‘ಸರ್ವಧರ್ಮ ಸಭೆ’ಯನ್ನು ಆಯೋಜಿಸಲಾಗಿತ್ತು. ಸಭೆಗಾಗಿ ಇತರ ಧರ್ಮ ಮತ್ತು ಪಂಥದ ಮಾರ್ಗದರ್ಶಕರನ್ನು ಅಥವಾ ಗುರುಗಳನ್ನು ವಕ್ತಾರರೆಂದು ಆಮಂತ್ರಿಸುವ ಸೇವೆಯನ್ನು ನನಗೆ ಒಪ್ಪಿಸಲಾಗಿತ್ತು. ಅದೇ ರೀತಿ ವಾಸ್ಕೋದಲ್ಲಿನ ಗುರುದ್ವಾರದ ಪ್ರಮುಖರನ್ನು ಆಮಂತ್ರಿಸಲು ನಾನು ಮತ್ತು ಶ್ರೀ. ಸುಚೇಂದ್ರ ಅಗ್ನಿ ಹೋಗಿದ್ದೆವು. ನಾವು ಪಂಜಾಬಿ ಭಾಷೆಯ ‘ಅಧ್ಯಾತ್ಮದ ಪ್ರಸ್ತಾವಿಕ ವಿವೇಚನೆ’ ಗ್ರಂಥವನ್ನು ತೆಗೆದುಕೊಂಡು ಹೋಗಿದ್ದೆವು. ‘ಈ ಗ್ರಂಥವನ್ನು ಗುರುದ್ವಾರದ ಆಮಂತ್ರಿತ ವಕ್ತಾರರು ಪ್ರಕಾಶನ ಮಾಡಬೇಕೆಂದು’ ನಿರ್ಧರಿಸಲಾಗಿತ್ತು.
೨. ಗುರುದ್ವಾರದಲ್ಲಿ ಸಭೆಯ ಆಮಂತ್ರಣ ನೀಡಲು ಹೋದಾಗ ಅಲ್ಲಿನ ಸಮಿತಿಯವರು ನಿರಾಕರಿಸುವುದು
ನಾವು ವಾಸ್ಕೋದಲ್ಲಿನ ಗುರುದ್ವಾರಕ್ಕೆ ಹೋದೆವು. ಅಲ್ಲಿನ ಪ್ರಮುಖರನ್ನು ಸಭೆಗೆ ವಕ್ತಾರರಾಗಿ ಬರಬೇಕೆಂದು ಆಮಂತ್ರಣ ನೀಡಿದೆವು ಹಾಗೂ ‘ಈ ಮೇಲಿನ ಗ್ರಂಥವನ್ನು ಅವರು ಸಭೆಯಲ್ಲಿ ಪ್ರಕಾಶನ ಮಾಡಬೇಕು’, ಎಂದು ವಿನಂತಿಸಿದೆವು. ಆ ಸಂದರ್ಭದಲ್ಲಿ ಗುರುದ್ವಾರದಲ್ಲಿ ೫-೬ ಸಿಕ್ಖರು ಗೋಲಾಕಾರವಾಗಿ ಕುಳಿತಿದ್ದರು. ಅವರು ಅಲ್ಲಿನ ಸಮಿತಿಯವರು ನಮ್ಮ ಸಂಸ್ಥೆಯ ಬಗ್ಗೆ ವಿಚಾರಿಸಿದರು ಹಾಗೂ ಮರುದಿನ ನಮ್ಮನ್ನು ಪುನಃ ಕರೆದರು.
ಮರುದಿನ ಗುರುದ್ವಾರಕ್ಕೆ ಹೋದೆವು. ಅಲ್ಲಿ ಎಲ್ಲರೂ ನಮಗೆ ನಮ್ಮ ಸಂಸ್ಥೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು ಹಾಗೂ ‘ಈ ಗ್ರಂಥವನ್ನು ಬರೆದವರು ಯಾರು ? ನಮ್ಮ ಧರ್ಮದಲ್ಲಿ ‘ಕುಲದೇವಿ’ ಇಲ್ಲ; ನೀವು ಅದರಲ್ಲಿ ಹಾಗೇಕೆ ಬರೆದಿದ್ದೀರಿ ?’, ಇತ್ಯಾದಿ ಅನೇಕ ಪ್ರಶ್ನೆಗಳನ್ನು ಕೇಳಿದರು. ಕೊನೆಗೆ ಅವರು ಸಭೆಗೆ ಬರುವುದಿಲ್ಲವೆಂದು ಎಂದರು. ಈ ಗ್ರಂಥವನ್ನು ಪ್ರಕಾಶನ ಮಾಡಬಾರದು’, ಎಂದು ಹೇಳುತ್ತಾ ‘ಪ್ರಕಾಶನ ಮಾಡಿದರೆ ಅದರ ಗಂಭೀರ ಪರಿಣಾಮವಾಗಬಹುದು’, ಎಂದರು.

೩. ಪರಾತ್ಪರ ಗುರು ಡಾ. ಆಠವಲೆಯವರಿಗೆ ಇದೆಲ್ಲವನ್ನೂ ಹೇಳಿದಾಗ ಅವರು ‘ಸಭೆಯ ದಿನ ನೋಡೋಣ’, ಎಂದು ಹೇಳಿ ಸಭೆಯ ಸಿದ್ಧತೆ ಮಾಡಲು ಹೇಳಿದರು
ಗುರುದ್ವಾರದಲ್ಲಿ ನಡೆದಿರುವ ಘಟನೆಯನ್ನು ಆಗ ಸಭೆಯ ವ್ಯವಸ್ಥಾಪನೆಯನ್ನು ನೋಡುತ್ತಿದ್ದ ಸಾಧಕ ಡಾ. ಸಾಮಂತರಿಗೆ ಹೇಳಿದೆವು. ಡಾ. ಸಾಮಂತರು ಈ ವಿಷಯವನ್ನು ವಿಸ್ತಾರವಾಗಿ ಪರಾತ್ಪರ ಗುರು ಡಾ. ಆಠವಲೆಯವರಿಗೆ ಹೇಳಲು ನನ್ನನ್ನು ಅವರ ಕೋಣೆಗೆ ಕರೆದುಕೊಂಡು ಹೋದರು. ನಾವು ಎಲ್ಲ ವಿಷಯವನ್ನು ವಿಸ್ತಾರವಾಗಿ ಗುರುದೇವರಿಗೆ ಹೇಳಿದೆವು. ಅವರು ಎಲ್ಲವನ್ನೂ ಶಾಂತವಾಗಿ ಕೇಳಿಸಿಕೊಂಡರು ಹಾಗೂ ಅವರು ಒಂದೇ ಪ್ರಶ್ನೆ ಕೇಳಿದರು, ”ಸಭೆಗೆ ಎಷ್ಟು ದಿನ ಬಾಕಿಯಿದೆ ?” ನಾವು ಸಭೆಯ ದಿನಾಂಕವನ್ನು ಹೇಳಿದಾಗ ಅವರು, ”ಸರಿ. ನಾವು ಸಭೆಯ ದಿನ ನೋಡೋಣ. ನೀವು ಮುಂದಿನ ಸಿದ್ಧತೆ ಮಾಡಿ,” ಎಂದರು.

೪. ಸಭೆಗೆ ಬಂದ ಒಬ್ಬ ಸಿಕ್ಖ್ ಪಂಥದ ವ್ಯಕ್ತಿಯಿಂದ ಪಂಜಾಬಿ ಭಾಷೆಯ ಗ್ರಂಥದ ಪ್ರಕಾಶನವಾಗುವುದು
ಸಭೆಯ ದಿನ ಸಭೆಯ ಸ್ಥಳದಲ್ಲಿ ನಮ್ಮ ಸೇವೆ ಎಂದಿನಂತೆ ನಡೆಯುತ್ತಿತ್ತು, ಸ್ವಲ್ಪ ಹೊತ್ತಿನಲ್ಲಿಯೇ ಸಭೆ ಆರಂಭವಾಗಲಿಕ್ಕಿತ್ತು. ಜಿಜ್ಞಾಸುಗಳು ಸಭೆಗೆ ಬರಲಾರಂಭಿಸಿದ್ದರು. ಅಷ್ಟರಲ್ಲಿ ನನಗೆ ಒಬ್ಬ ಸಿಕ್ಖ್ ವ್ಯಕ್ತಿ ಸಭೆಗೆ ಬರುತ್ತಿರುವುದು ಕಾಣಿಸಿತು. ನನ್ನ ಮನಸ್ಸಿನಲ್ಲಿ ಕಳವಳವಾಗುತ್ತಿತ್ತು. ‘ಏನು ಮಾಡ ಬೇಕೆಂದು’ ಹೊಳೆಯುತ್ತಿರಲಿಲ್ಲ. ಮನಸ್ಸಿನಲ್ಲಿ ಅನೇಕ ವಿಚಾರಗಳು ಬರುತ್ತಿದ್ದವು. ‘ಒಬ್ಬ ಸಿಕ್ಖ್ ವ್ಯಕ್ತಿ ಸಭಾಸ್ಥಳಕ್ಕೆ ಬಂದಿರುವ ಬಗ್ಗೆ ಜವಾಬ್ದಾರ ಸಾಧಕರಿಗೆ ಸೂಚಿಸಬೇಕೆಂದು’ ಅನಿಸುತ್ತಿತ್ತು; ಆದರೆ ನನಗೆ ಚಿತ್ರೀಕರಣದ ಮೇಜನ್ನು ಹಿಡಿದು ಕೊಳ್ಳುವ ಸೇವೆ ಇತ್ತು. ಆ ಮೇಜು ಅಲುಗಾಡುತ್ತಿದ್ದ ಕಾರಣ ಚಿತ್ರೀಕರಣದಲ್ಲಿ ಅಡಚಣೆಯಾಗುತ್ತಿತ್ತು. ಸಭೆಯ ಚಿತ್ರೀಕರಣ ಮುಗಿಯುವ ವರೆಗೆ ಆ ಮೇಜನ್ನು ಅಲುಗಾಡದಂತೆ ಹಿಡಿದು ಕೊಳ್ಳುವ ಸೇವೆ ನನ್ನಲ್ಲಿತ್ತು. ಆದ್ದರಿಂದ ನನಗೆ ಅಲ್ಲಿಂದ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆ ಸಿಕ್ಖ್ ವ್ಯಕ್ತಿ ಸಭೆಯ ಸ್ಥಳಕ್ಕೆ ಬಂದು ಅಲ್ಲಿ ಡಾ. ಸಾಮಂತರನ್ನು ಭೇಟಿಯಾದರು. ಆ ವ್ಯಕ್ತಿ ‘ನಾನು ಎಲ್ಲಿ ಕುಳಿತುಕೊಳ್ಳಬೇಕೆಂದು’ ಡಾ. ಸಾಮಂತರ ಬಳಿ ಕೇಳಿದರು. ಡಾ. ಸಾಮಂತರು ಆ ವ್ಯಕ್ತಿಗೆ ಕುಳಿತುಕೊಳ್ಳಲು ಕುರ್ಚಿಯನ್ನು ತೋರಿಸಿದರು. ಆ ವ್ಯಕ್ತಿ ಡಾ. ಸಾಮಂತರನ್ನು ಭೇಟಿಯಾಗಿದ್ದರಿಂದ ನನ್ನ ಒತ್ತಡ ಸ್ವಲ್ಪ ಕಡಿಮೆಯಾಯಿತು, ಆದರೂ ನಾನು ಆ ಸಿಕ್ಖ್ ವ್ಯಕ್ತಿಯ ನಿರೀಕ್ಷಣೆ ಮಾಡುತ್ತಿದ್ದೆನು. ಸ್ವಲ್ಪ ಹೊತ್ತಿನಲ್ಲಿ ವೇದಿಕೆಯ ಮೇಲೆ ಇನ್ನೊಂದು ಕುರ್ಚಿಯನ್ನು ಇಡಲಾಯಿತು ಹಾಗೂ ಆ ಸಿಕ್ಖ್ ವ್ಯಕ್ತಿಯನ್ನು ವೇದಿಕೆಯ ಮೇಲೆ ಕೂರಿಸಲಾಯಿತು. ಆ ವ್ಯಕ್ತಿ ಸಭೆಯನ್ನು ಉದ್ದೇಶಿಸಿ ಮಾರ್ಗದರ್ಶನವನ್ನೂ ಮಾಡಿದರು ಹಾಗೂ ಪಂಜಾಬಿ ಭಾಷೆಯ ಗ್ರಂಥದ ಪ್ರಕಾಶನವನ್ನೂ ಮಾಡಿದರು.
೫. ‘ಸಿಕ್ಖ್ ವ್ಯಕ್ತಿ ಸಭೆಗೆ ಹೇಗೆ ಬಂದರು ?’, ಎನ್ನುವ ಬಗ್ಗೆ ವ್ಯಕ್ತಿಯು ಹೇಳುವುದು
ಸಭೆಯ ಮರುದಿನ ನನಗೆ ಆ ಸಿಕ್ಖ್ ವ್ಯಕ್ತಿಗೆ ಧಾಮಸೆ ಸೇವಾಕೇಂದ್ರವನ್ನು ತೋರಿಸುವ ಸೇವೆ ಸಿಕ್ಕಿತು. ಮರುದಿನ ನಾನು ಆ ವ್ಯಕ್ತಿಯೊಂದಿಗೆ ಧಾಮಸೆಗೆ ಹೋಗಲು ಹೊರಟೆನು. ಕುತೂಹಲದಿಂದ ನಾನು ಆ ವ್ಯಕ್ತಿಯ ಬಳಿ ಕೇಳಿದೆ, ”ನೀವು ಸಭೆಗೆ ಹೇಗೆ ಬಂದಿರಿ ?” ಆಗ ಆ ವ್ಯಕ್ತಿ ಹೀಗೆಂದರು, ”ಸಭೆಯ ಆಮಂತ್ರಣವನ್ನು (ಸಭೆಯ ಆಮಂತ್ರಣ, ಸ್ಥಳ, ಸಮಯ, ಇತ್ಯಾದಿ ಬರೆದಿರುವ ಸಣ್ಣ ಒಂದು ಚೀಟಿಯನ್ನು ಪ್ರಸಾರದಲ್ಲಿನ ಸಾಧಕರು ಪ್ರತಿಯೊಂದು ಮನೆಮನೆಗೆ ಅಥವಾ ಪರಿಸರದಲ್ಲಿ ಪ್ರಸಾರ ಮಾಡುವಾಗ ಸಾಧಕರು ಹಂಚುತ್ತಿದ್ದರು) ಯಾರೊ ನನಗೆ ನೀಡಿದ್ದರು. ಅದನ್ನು ನೋಡಿ ನನಗೆ ‘ಈ ಸಭೆಗೆ ಹೋಗಬೇಕೆಂದು ಅನಿಸುತ್ತಿತ್ತು; ಆದ್ದರಿಂದ ನಾನು ಬಂದೆನು’. ನಂತರ ಆ ವ್ಯಕ್ತಿ ”ನಾನು ಗೋವಾದಲ್ಲಿ ಹೊಸಬನಾಗಿದ್ದೇನೆ. ‘ಸಭೆಗೆ ಹೇಗೆ ಹೋಗುವುದು’ ಎಂಬ ವಿಚಾರದಿಂದ ನಾನು ಪಣಜಿ ಬಸ್‌ನಿಲ್ದಾಣಕ್ಕೆ ಬಂದೆನು. ಅಲ್ಲಿ ಒಂದು ಬಸ್ ನಿಂತಿತ್ತು. ಅವರಿಗೆ ಸಭೆಯ ಸ್ಥಳದ ಬಗ್ಗೆ ಕೇಳಿದಾಗ, ಅಲ್ಲಿದ್ದವರು, ”ಈ ಬಸ್ ನೇರ ಸಭೆಯ ಸ್ಥಳಕ್ಕೆ ಹೋಗುತ್ತದೆ” ಎಂದರು.
೬. ಪ್ರತಿಯೊಂದು ಪ್ರಸಂಗವೂ ‘ಭಗವಂತನ ಇಚ್ಛೆಯಿಂದಲೇ ನಡೆಯುತ್ತಿದೆ’, ಎನ್ನುವ ಭಾವ ಆ ವ್ಯಕ್ತಿಯಲ್ಲಿತ್ತು
ನಾನು ಸಭೆಗೆ ತಲುಪಿದ ನಂತರ ಅಲ್ಲಿ ಒಬ್ಬ ವ್ಯಕ್ತಿಗೆ ”ನಾನು ಎಲ್ಲಿ ಕುಳಿತುಕೊಳ್ಳಲಿ ?” ಎಂದು ಕೇಳಿದೆ. ಅವರು ನನಗೆ ಒಂದು ಕುರ್ಚಿಯನ್ನು ತೋರಿಸಿದರು. ಅಲ್ಲಿ ನಾನು ಕುಳಿತುಕೊಂಡೆನು. ಸ್ವಲ್ಪ ಸಮಯದ ನಂತರ ನನಗೆ ಕುರ್ಚಿಯನ್ನು ತೋರಿಸಿದ ವ್ಯಕ್ತಿ ”ನೀವು ವೇದಿಕೆಯ ಮೇಲೆ ಬರುವಿರಾ ?’, ಎಂದು ಕೇಳಿದರು. ನಾನು ಮನಸ್ಸಿನಲ್ಲಿಯೆ ಹೇಳಿದೆ, ‘ದೇವರ ಇಚ್ಛೆ !’ ಹಾಗೆಯೆ ವೇದಿಕೆಯ ಮೇಲೆ ಹೋಗಿ ಕುಳಿತುಕೊಂಡೆನು. ಅಲ್ಲಿ ಕುಳಿತುಕೊಂಡ ನಂತರ ನನಗೆ ಸಭೆಯನ್ನು ಉದ್ದೇಶಿಸಿ ನಾಲ್ಕು ಮಾತುಗಳನ್ನಾಡಬೇಕೆಂದು ವಿನಂತಿಸಿದರು. ನಾನು ಮನಸ್ಸಿನಲ್ಲಿಯೆ ಹೇಳಿದೆ, ‘ಭಗವಂತನ ಇಚ್ಛೆ !’ ಅದೇ ರೀತಿ ಭಗವಂತನು ಸೂಚಿಸಿದ ನಾಲ್ಕು ಮಾತುಗಳನ್ನು ಆಡಿದೆನು. ಸಭೆ ಮುಗಿದ ನಂತರ ನನಗೆ ಆಶ್ರಮ (ಆಗ ಸುಖಸಾಗರದಲ್ಲಿ ಆಶ್ರಮವಿತ್ತು) ತೋರಿಸಲಾಯಿತು ಹಾಗೂ ಇಂದು ನನಗೆ ಇಲ್ಲಿ ಧಾಮಸೆ ಸೇವಾಕೇಂದ್ರವನ್ನು ತೋರಿಸುತ್ತಿದ್ದಾರೆ. ನನ್ನನ್ನು ಯಾರೂ ಇಲ್ಲಿಗೆ ಕಳುಹಿಸಿರಲಿಲ್ಲ. ಆ ಆಮಂತ್ರಣದ ಚೀಟಿಯನ್ನು ಓದಿ ನನಗೆ ಇಲ್ಲಿಗೆ ಬರಬೇಕೆಂದು ಅನಿಸಿತು. ಮುಂದಿನದೆಲ್ಲವೂ ಭಗವಂತನ ಇಚ್ಛೆಗನುಸಾರ ನಡೆಯುತ್ತಾ ಹೋಯಿತು !” ಇದು ಕೇಳಿ ‘ಪರಾತ್ಪರ ಗುರು ಡಾಕ್ಟರ್ ‘ಸಭೆಯ ದಿನ ನೋಡೋಣ’, ಎಂದೇಕೆ ಹೇಳಿದರು’, ಎಂದು ಅರಿವಾಯಿತು.
– ಶ್ರೀ. ನಾರಾಯಣ ನಾಡಕರ್ಣಿ, ಫೋಂಡಾ ಗೋವಾ. (೨೦.೫.೨೦೧೭)
ರಾಜಮಾತಂಗಿ ಯಜ್ಞದಿಂದ ಗೋವಾದ ರಾಮನಾಥಿಯ ಸನಾತನದ ಆಶ್ರಮ ಪರಿಸರದಲ್ಲಿ ಅನುಭವವಾದ ಅಂಶಗಳು
‘ನಾವು ಮಾಡುತ್ತಿರುವ ಪ್ರತಿಯೊಂದು ವಿಚಾರ, ಕೃತಿ ಅಥವಾ ನಮ್ಮ ಬಾಯಿಯಿಂದ ಬರುವ ಪ್ರತಿಯೊಂದು ಮಾತು’ ಇವುಗಳ ದಾಖಲೆಯನ್ನು ಭಗವಂತನು ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯಲ್ಲಿ ಇಡುತ್ತಾನೆ !’
ಅನಂತಪುರದ (ಶಿವಮೊಗ್ಗ ಜಿಲ್ಲೆ) ಶ್ರೀ. ನಾಗಪ್ಪ ಅವರಿಗೆ ಬಂದ ವಿವಿಧ ಅನುಭೂತಿಗಳು !
ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡ ರಾಮನಾಥಿ ಆಶ್ರಮದ ಶ್ರೀಮತಿ ಕ್ಷಮಾ ರಾಣೆ (ವಯಸ್ಸು ೭೫ ವರ್ಷಗಳು), ಸೌ. ವಿಜಯಲಕ್ಷ್ಮೀ ದಂಡಮುಡಿ (ವಯಸ್ಸು ೬೯ ವರ್ಷಗಳು) ಮತ್ತು ಡಾ. (ಸೌ.) ಸಂಗೀತಾ ಚೌಧರಿ (ವಯಸ್ಸು ೪೫ ವರ್ಷಗಳು) !
ದೆಹಲಿಯಲ್ಲಿ ನಡೆದ ಸನಾತನ ರಾಷ್ಟ್ರ ಶಂಖನಾದದ ನಿಮಿತ್ತ ಸನಾತನ ಸಂಸ್ಥೆಯ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರಿಗೆ ಅಗ್ನಿಹೋತ್ರ ಮಾಡುವಾಗ ದೇವರು ನೀಡಿದ ಸಾಕ್ಷಿ !
‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಸಾಧಕರಿಗೆ ಅರಿವಾದ ಅಂಶಗಳು ಮತ್ತು ಬಂದ ಅನುಭೂತಿಗಳು