
೧. ಪ್ರವಚನ ನಡೆಯುವಾಗ ಒಬ್ಬ ವ್ಯಕ್ತಿಯು ಅಡ್ಡಿಪಡಿಸಲು ಪ್ರಯತ್ನಿಸುವುದು ಪ್ರಾರ್ಥನೆ ಮಾಡಿದಾಗ ಅದು ನಿವಾರಣೆಯಾಗುವುದು
೨೫.೧೦.೨೦೨೫ ರಂದು ನಮ್ಮ ಗ್ರಾಮದ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ‘ದೀಪೋತ್ಸವ’ದ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಾವು ಸನಾತನ ಸಂಸ್ಥೆಯ ಪ್ರವಚನವನ್ನು ಆಯೋಜಿಸಿದ್ದೆವು. ಪ್ರವಚನ ನಡೆಯುತ್ತಿದ್ದಾಗ ಒಬ್ಬ ವ್ಯಕ್ತಿಯು ‘ಇದು ದೇವಸ್ಥಾನದ ಕೆಲಸ. ಇಲ್ಲಿ ರಾಜಕೀಯ ತರಬೇಡಿ’, ಎಂದು ಹೇಳಿ ಅಡ್ಡಿಪಡಿಸಲು ಪ್ರಯತ್ನಿಸಿದನು. ಆಗ ನಾನು ಭಗವಂತನನ್ನು ಪ್ರಾರ್ಥಿಸಿದೆ. ನಂತರ ನಾನು ಆ ವ್ಯಕ್ತಿಗೆ ತಿಳಿಸಿ ಹೇಳಿದ ನಂತರ ಅವರು ಪ್ರವಚನವನ್ನು ಮುಂದುವರಿಸಲು ಅನುಮತಿ ನೀಡಿದರು.
೨. ಶ್ರೀಕೃಷ್ಣನು ಸೂಕ್ಷ್ಮ ರೂಪದಲ್ಲಿ ದರ್ಶನ ನೀಡಿ ‘ನಾನಿದ್ದೇನೆ, ಹೆದರಬೇಡ’ ಎನ್ನುವುದು
ಈ ಘಟನೆಯ ಮರುದಿನ ಎಂದಿನಂತೆ ಮುಂಜಾನೆ ೩.೪೫ ರಿಂದ ೪.೨೫ ರ ಅವಧಿಯಲ್ಲಿ ನಾನು ಧ್ಯಾನಕ್ಕೆ ಕುಳಿತಿದ್ದೆ. ಆ ಸಮಯದಲ್ಲಿ ಕೈಯಲ್ಲಿ ಸುದರ್ಶನ ಚಕ್ರ ಹಿಡಿದ ಭಗವಾನ್ ಶ್ರೀಕೃಷ್ಣನು ನನ್ನ ಮುಂದೆ ಕಾಣಿಸಿಕೊಂಡಂತೆ ನನಗೆ ಅನಿಸಿತು. ಆಗ ಶ್ರೀಕೃಷ್ಣನು ಸೂಕ್ಷ್ಮರೂಪದಲ್ಲಿ ನನಗೆ ‘ನಾನಿದ್ದೇನೆ, ಹೆದರಬೇಡ’ ಎಂದು ಆಶೀರ್ವದಿಸಿದನು.
೩. ಎಲ್ಲಿಯೂ ನಾಮಜಪ ಹಾಕದಿದ್ದರೂ ‘ಶ್ರೀ ಗುರುದೇವ ದತ್ತ’ ಎಂಬ ನಾಮಜಪ ೨ ಬಾರಿ ಕೇಳಿಸುವುದು
‘ಅಕ್ಟೋಬರ್ ೨೦೨೫ ರಲ್ಲಿ ನಾನು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಪೂಜೆಗಾಗಿ ಹೋಗಿದ್ದೆ. ಅಲ್ಲಿ ಎಲ್ಲಿಯೂ ಶ್ರೀದತ್ತರ ಜಪ ಹಾಕಿರಲಿಲ್ಲ, ಆದರೂ ನನಗೆ ‘ಶ್ರೀ ಗುರುದೇವ ದತ್ತ’ ಎಂಬ ನಾಮಜಪ ಕೇಳಿಸುತ್ತಿತ್ತು. ಸ್ವಲ್ಪ ಸಮಯದ ನಂತರ ಆ ಧ್ವನಿ ನಿಂತಿತು. ತದನಂತರ ೫.೧೧.೨೦೨೫ ರಂದು ನಾನು ಮುದ್ದೇಬಹಾಳದಲ್ಲಿ (ವಿಜಾಪುರ ಜಿಲ್ಲೆ) ಪೂ. ರಮಾನಂದ ಗೌಡರ (ಸನಾತನದ ೭೫ ನೇಯ ಸಂತರು, ವಯಸ್ಸು ೪೯) ಜೊತೆಗಿದ್ದೆನು. ಆಗ ಮನೆಯಲ್ಲಿ ಎಲ್ಲಿಯೂ ನಾಮಜಪ ಹಾಕದಿದ್ದರೂ ನನಗೆ ಮತ್ತೆ ‘ಶ್ರೀ ಗುರುದೇವ ದತ್ತ’ ಎಂಬ ನಾಮಜಪ ಕೇಳಿಸುತ್ತಿತ್ತು. ಇಂದಿಗೂ ಆ ಪ್ರಸಂಗದ ನೆನಪಾದರೆ, ನನ್ನ ಮೈ ರೋಮಾಂಚನಗೊಳ್ಳುತ್ತದೆ. ಈ ಅನುಭೂತಿಗಳನ್ನು ನೀಡಿದ ಭಗವಂತನ ಚರಣಗಳಲ್ಲಿ ನಾನು ಕೋಟಿ ಕೋಟಿ ಕೃತಜ್ಞತೆಗಳು’
– ಶ್ರೀ. ನಾಗಪ್ಪ (ವಯಸ್ಸು ೬೬ ವರ್ಷ), ಅನಂತಪುರ, ಶಿವಮೊಗ್ಗ ಜಿಲ್ಲೆ, (೪.೧.೨೦೨೬)
|
ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು. ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |
ರಾಜಮಾತಂಗಿ ಯಜ್ಞದಿಂದ ಗೋವಾದ ರಾಮನಾಥಿಯ ಸನಾತನದ ಆಶ್ರಮ ಪರಿಸರದಲ್ಲಿ ಅನುಭವವಾದ ಅಂಶಗಳು
‘ನಾವು ಮಾಡುತ್ತಿರುವ ಪ್ರತಿಯೊಂದು ವಿಚಾರ, ಕೃತಿ ಅಥವಾ ನಮ್ಮ ಬಾಯಿಯಿಂದ ಬರುವ ಪ್ರತಿಯೊಂದು ಮಾತು’ ಇವುಗಳ ದಾಖಲೆಯನ್ನು ಭಗವಂತನು ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯಲ್ಲಿ ಇಡುತ್ತಾನೆ !’
ಪ.ಪ. ಶ್ರೀಧರಸ್ವಾಮೀಜಿಯವರ ಬೋಧಾಮೃತ ಮತ್ತು ಆಶೀರ್ವಚನ !
‘ವ್ಯಕ್ತಿಗಳಷ್ಟು ಪ್ರಕೃತಿಗಳು ಮತ್ತು ಅಷ್ಟೇ ಸಾಧನಾ ಮಾರ್ಗಗಳು’, ಈ ತತ್ತ್ವದಂತೆ ಅನೇಕ ಸಾಧನಾ ಮಾರ್ಗಗಳಲ್ಲಿ ಸಾಧನಾನಿರತ ಸನಾತನದ ಸಾಧಕರು !
ಏಪ್ರಿಲ್ ೨ – ಹನುಮಾನ ಜಯಂತಿ : ಹನುಮಂತನ ಪಂಚಮಹಾಭೂತಗಳೊಂದಿಗಿನ ಕಾರ್ಯ ಮತ್ತು ಅವನ ಆಧ್ಯಾತ್ಮಿಕ ವೈಶಿಷ್ಟ್ಯಗಳು
ಮೂರನೇ ಮಹಾಯುದ್ಧದ ಬಗ್ಗೆ ಸೂಕ್ಷ್ಮಜ್ಞಾನಪ್ರಾಪ್ತಕರ್ತ ಸಾಧಕರಾದ ಶ್ರೀ. ನಿಷಾದ ದೇಶಮುಖ ಇವರಿಗೆ ಸೂಕ್ಷ್ಮದಿಂದ ದೊರಕಿದ ಜ್ಞಾನ !