ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ನಾಗಪುರ – ಈ ಯುದ್ಧದಂತಹ ಪರಿಸ್ಥಿತಿಯ ಈ ಸಮಯದಲ್ಲಿ ನಾವು ದೇಶವಾಸಿಗಳಿಗೆ ಸರಕಾರ ನೀಡಿದ ಸೂಚನೆಗಳು ಮತ್ತು ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಸರಕಾರಕ್ಕೆ ಸಹಕರಿಸುವಂತೆ ವಿನಂತಿಸುತ್ತೇವೆ. ರಾಷ್ಟ್ರ ವಿರೋಧಿ ಶಕ್ತಿಗಳ ವಿರುದ್ಧ ಒಗ್ಗಟ್ಟು ಪ್ರದರ್ಶಿಸುವ ಸಮಯ ಇದು. ದೇಶದ ರಾಷ್ಟ್ರೀಯ ಏಕತೆ ಮತ್ತು ಭದ್ರತೆಗಾಗಿ ಅಗತ್ಯವಿರುವ ಸರಕಾರದ ಎಲ್ಲಾ ಪ್ರಯತ್ನಗಳಿಗೆ ಬೆಂಬಲ ನೀಡಬೇಕು ಎಂದು ರಾ.ಸ್ವ.ಸೇ.ಸಂ. ಸರಸಂಘಚಾಲಕ ಪ.ಪೂ. ಡಾ. ಮೋಹನಜಿ ಭಾಗವತ ಹೇಳಿದ್ದಾರೆ.

ಅವರು ಇದರಲ್ಲಿ, ‘ಆಪರೇಷನ್ ಸಿಂಧೂರ್’ ಭಾರತ ಸರಕಾರದ ನೇತೃತ್ವದಲ್ಲಿ ಮತ್ತು ಸೇನಾ ಪಡೆಗಳು ತೆಗೆದುಕೊಂಡ ಮಹತ್ವದ ಹೆಜ್ಜೆ ಎಂದು ಹೇಳಿದ್ದಾರೆ. ಭಯೋತ್ಪಾದಕರು ನಡೆಸಿದ ಕ್ರೂರ ಹತ್ಯಾಕಾಂಡ ಮತ್ತು ಹೇಡಿ ದಾಳಿಯ ನಂತರ, ಸಂತ್ರಸ್ತ ಕುಟುಂಬಗಳಿಗೆ, ತಾಯಂದಿರು ಮತ್ತು ಸಹೋದರಿಯರಿಗೆ ನ್ಯಾಯ ಸಿಗಬೇಕು ಎಂಬ ದೇಶದ ಭಾವನೆ ದೇಶವಾಸಿಗಳ ಮನಸ್ಸಿನಲ್ಲಿತ್ತು. ಅದರ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ನಾವು ಸರಕಾರ ಮತ್ತು ಸೇನಾ ಪಡೆಗಳನ್ನು ಅಭಿನಂದಿಸುತ್ತೇವೆ, ಎಂದು ಹೇಳಿದರು.
The time has come to show unity against anti-national forces! – Param Pujaniya Sarsanghchalak Dr. Mohanji Bhagwat#IndiaPakistanWar #OperationSindhoor #IndiaPakWarpic.twitter.com/nViLFvt4pL
— Sanatan Prabhat (@SanatanPrabhat) May 9, 2025
ಅವರು ಮಾತು ಮುಂದುವರೆಸಿ,
ಸರಕಾರ ಮತ್ತು ಸೇನಾ ಪಡೆಗಳು ‘ಆಪರೇಷನ್ ಸಿಂಧೂರ್’ ಅನ್ನು ಕಾರ್ಯಗತಗೊಳಿಸಿದ್ದರಿಂದ ಇಡೀ ದೇಶದ ಧೈರ್ಯ ಹೆಚ್ಚಿದೆ. ಅವರ ಎದೆ ಹೆಮ್ಮೆಯಿಂದ ಉಬ್ಬಿದೆ. ಪಾಕಿಸ್ತಾನ ಏನು ಮಾಡಿತೋ, ನಂತರ ಭಾರತೀಯ ಸೇನಾ ಪಡೆಗಳು ನೀಡಿದ ಉತ್ತರವು ಒಂದು ಪ್ರಮುಖ ಮತ್ತು ಅನಿವಾರ್ಯ ಕ್ರಮವಾಗಿತ್ತು. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ಬಿಕ್ಕಟ್ಟಿನ ಸಮಯದಲ್ಲಿ, ನಾವು ತನು, ಮನ ಮತ್ತು ಧನದೊಂದಿಗೆ ದೇಶ, ಸರಕಾರ ಮತ್ತು ಸೇನಾ ಪಡೆಗಳೊಂದಿಗೆ ಇದ್ದೇವೆ. ಪಾಕಿಸ್ತಾನ ಸೈನ್ಯವು ಸಾಮಾನ್ಯ ನಾಗರಿಕರನ್ನು ಪರಿಗಣಿಸದೆ ದಾಳಿ ಮಾಡುತ್ತಿದೆ. ಗಡಿ ಪ್ರದೇಶಗಳು ಮತ್ತು ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಲಾಗುತ್ತಿದೆ. ಈ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡವರಿಗೆ ನಮ್ಮ ಸಂತಾಪವಿದೆ, ಎಂದು ಹೇಳಿದರು.
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
‘ವಿಶ್ವಸಂಸ್ಥೆಯ ಠರಾವಿನಂತೆ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕಂತೆ!’
ಭಾರತದಿಂದ ಕಳುವಾದ 3 ಪ್ರಾಚೀನ ಮೂರ್ತಿಗಳನ್ನು ಭಾರತಕ್ಕೆ ಹಸ್ತಾಂತರಿಸಲಿರುವ ಆಸ್ಟ್ರೇಲಿಯಾ ಸರಕಾರ !
ಆಸ್ಟ್ರೇಲಿಯಾದಿಂದ ಭಾರತಕ್ಕೆ ಯುರೇನಿಯಂ ಪೂರೈಕೆ! : PM Modi Australia Visit