
ನವದೆಹಲಿ – ಅಮೇರಿಕಾವು ‘ಲಷ್ಕರ್-ಎ-ತೊಯ್ಬಾ’ವನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸಿತ್ತು; ಆದರೆ ನಾವು ಪಾಕಿಸ್ತಾನವನ್ನು ‘ಭಯೋತ್ಪಾದನೆಗೆ ಹಣ ನೀಡುವ ದೇಶ’ವೆಂದು ಘೋಷಿಸಿಲ್ಲ. ಈಗ ‘ಆಕ್ಟೋಪಸ್’ನ ಕೈಗಳ ಬದಲು ಅದರ ತಲೆಯ ಮೇಲೆ ಆಕ್ರಮಣ ಮಾಡುವ ಸಮಯ ಬಂದಿದೆ. ಅಮೇರಿಕಾವು ಸರ್ವಾನುಮತದಿಂದ ಭಾರತವನ್ನು ಬೆಂಬಲಿಸಬೇಕು ಮತ್ತು ಪಾಕಿಸ್ತಾನವನ್ನು ‘ಭಯೋತ್ಪಾದನೆಯ ಕೇಂದ್ರ’ವೆಂದು ಘೋಷಿಸಬೇಕು ಎಂದು ಅಮೇರಿಕಾದ ರಕ್ಷಣಾ ಸಚಿವಾಲಯ ‘ಪೆಂಟಗನ್’ನ ಮಾಜಿ ಹಿರಿಯ ಅಧಿಕಾರಿ ಮೈಕಲ್ ರೂಬಿನ್ ಅವರು ಭಾರತದ ‘ಆಪರೇಷನ್ ಸಿಂಧೂರ’ನ್ನು ಬೆಂಬಲಿಸುತ್ತಾ ಒತ್ತಾಯಿಸಿದ್ದಾರೆ.
ರೂಬಿನ್ ಅವರು ಮಾತು ಮುಂದುವರೆಸುತ್ತಾ,
೧. ಪಾಕಿಸ್ತಾನದ ಸೇನಾ ಪ್ರಮುಖರಾದ ಅಸೀಮ ಮುನೀರರವರು ‘ಪಾಕಿಸ್ತಾನದಲ್ಲಿ ಹಿಂದೂಗಳು ಮತ್ತು ಮುಸಲ್ಮಾನರು ಒಟ್ಟಿಗೆ ವಾಸಿಸಲು ಸಾಧ್ಯವಿಲ್ಲ’ ಎಂಬ ಹೇಳಿಕೆ ನೀಡಿದ ನಂತರ ಈ ಸಂಘರ್ಷ ಪ್ರಾರಂಭವಾಯಿತು. ಆದಾಗ್ಯೂ, ಭಾರತದಲ್ಲಿ ಹಿಂದೂಗಳು ಮತ್ತು ಮುಸಲ್ಮಾನರು ಒಟ್ಟಿಗೆ ವಾಸಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿ ಇದು ನಡೆಯುವುದಿಲ್ಲ; ಏಕೆಂದರೆ ಪಾಕಿಸ್ತಾನವು ಅಲ್ಲಿನ ಅಲ್ಪಸಂಖ್ಯಾತರನ್ನು ವ್ಯವಸ್ಥಿತವಾಗಿ ದೇಶದಿಂದ ಹೊರಹಾಕುತ್ತಿದೆ.
೨. ಪಾಕಿಸ್ತಾನವು ಆರ್ಥಿಕ ಅಥವಾ ಸಾಮಾಜಿಕ ಮಟ್ಟದಲ್ಲಿ ವಿಫಲವಾದಾಗ, ಅದು ಭಾರತದ ವಿರುದ್ಧ ಆಕ್ರಮಣಕಾರಿ ನಿಲುವು ತಳೆದು ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತದೆ. ಇದು ವಿಫಲ ರಾಷ್ಟ್ರದ ಲಕ್ಷಣವಾಗಿದೆ.
೩. ಪಾಕಿಸ್ತಾನವು ಈಗ ಚೆನ್ನಾಗಿ ಸಿಲುಕಿದ್ದು, ಈಗ ಅದು ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ‘ಇತರರಿಗಾಗಿ ತೋಡಿದ ಗುಂಡಿಯಲ್ಲಿ ಒಂದು ದಿನ ತಾವೇ ಬೀಳುತ್ತೇವೆ’ ಎಂಬುದನ್ನು ಅಸೀಮ ಮುನೀರರವರು ನೆನಪಿಟ್ಟುಕೊಳ್ಳಬೇಕು ಮತ್ತು ಇತರರಿಗಾಗಿ ಗುಂಡಿ ತೋಡುವುದನ್ನು ನಿಲ್ಲಿಸಬೇಕು, ಎಂದು ಹೇಳಿದರು.
ಸಂಪಾದಕೀಯ ನಿಲುವುಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಿ ಹಣ ಸಂಪಾದಿಸುವ ದೂರ್ತ ಅಮೇರಿಕಾವು ಎಂದಿಗೂ ಹೀಗೆ ಮಾಡುವುದಿಲ್ಲ, ಇದು ಕೂಡ ಅಷ್ಟೇ ಸತ್ಯವಾಗಿದೆ ! |
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister