
(ಟಿಪ್ಪಣಿ : ಹಸ್ತಸಾಮುದ್ರಿಕಾ ಶಾಸ್ತ್ರವೆಂದರೆ ವ್ಯಕ್ತಿಯ ಮುಖಚರ್ಯೆ, ಕೈಗಳು, ಕಾಲುಗಳು ಮುಂತಾದ ದೇಹದ ವಿವಿಧ ಭಾಗಗಳಿಂದ ವ್ಯಕ್ತಿಯ ಗುಣವೈಶಿಷ್ಟ್ಯಗಳು ಮತ್ತು ಅವನ ಭವಿಷ್ಯವನ್ನು ಅಧ್ಯಯನ ಮಾಡುವ ಶಾಸ್ತ್ರ)
೧. ಕೆಲವು ವ್ಯಕ್ತಿಗಳ ಕೈಯ ಹೆಬ್ಬೆರಳು ಹಿಂದಕ್ಕೆ ಬಾಗುತ್ತದೆ. ಇದು ಏನನ್ನು ಸೂಚಿಸುತ್ತದೆ ?
ಉತ್ತರ : ವ್ಯಕ್ತಿಯ ಕೈಯ ಹೆಬ್ಬೆರಳು ಹಿಂದೆ ಬಾಗುತ್ತಿದ್ದರೆ, ಇಂತಹ ವ್ಯಕ್ತಿ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾನೆ. ಅವನ ವೃತ್ತಿ ತ್ಯಾಗಮಯವಾಗಿರುತ್ತದೆ, ಹಾಗೆಯೇ ಅವನಲ್ಲಿ ಅಹಂ ಕಡಿಮೆ ಇರುತ್ತದೆ; ಆದರೆ ಹೆಬ್ಬೆರಳು ಬಹಳ ಹಿಂದೆ ಬಾಗುತ್ತಿದ್ದರೆ, ಇತರ ಜನರು ಸಂಬಂಧಪಟ್ಟ ವ್ಯಕ್ತಿಯ ದುರುಪಯೋಗಪಡಿಸಿಕೊಳ್ಳುತ್ತಾರೆ. ಇಂತಹ ವ್ಯಕ್ತಿ ನಿರುತ್ಸಾಹಿ ಮತ್ತು ಸೋಮಾರಿ ಅಗಿರುತ್ತಾನೆ. ಅವನ ಇಚ್ಛಾಶಕ್ತಿ ದುರ್ಬಲವಾಗಿರುತ್ತದೆ, ಹಾಗೆಯೇ ಅವನ ಮನಸ್ಸು ಚಂಚಲವಾಗಿರುತ್ತದೆ. ಅವನಲ್ಲಿ ಆತ್ಮವಿಶ್ವಾಸ ಕಡಿಮೆ ಇರುತ್ತದೆ.

೨. ಕೆಲವು ವ್ಯಕ್ತಿಗಳ ಕೈಯ ಹೆಬ್ಬೆರಳು ಹಿಂದೆ ಬಾಗದೇ ನೇರವಾಗಿರುತ್ತದೆ, ಇದು ಏನನ್ನು ಸೂಚಿಸುತ್ತದೆ ?
ಉತ್ತರ : ವ್ಯಕ್ತಿಯ ಕೈಯ ಹೆಬ್ಬೆರಳು ಹಿಂದೆ ಬಾಗದೇ ನೇರವಾಗಿದ್ದರೆ, ಇಂತಹ ವ್ಯಕ್ತಿಯಲ್ಲಿ ಪ್ರಬಲ ಇಚ್ಛಾಶಕ್ತಿ ಮತ್ತು ಆತ್ಮವಿಶ್ವಾಸ ಇರುತ್ತದೆ. ಅವನು ಕಾರ್ಯತತ್ಪರ ಮತ್ತು ಗುರಿ ಸಾಧಿಸುವವನಾಗಿರುತ್ತಾನೆ. ಇಂತಹ ವ್ಯಕ್ತಿ ಧೈರ್ಯಶಾಲಿಯಾಗಿದ್ದು ನಿರ್ಧರಿಸಿದ ಕೆಲಸವನ್ನು ಖಂಡಿತವಾಗಿಯೂ ಪೂರ್ಣಗೊಳಿಸುತ್ತಾನೆ; ಆದರೆ ಇಂತಹ ವ್ಯಕ್ತಿಯ ವಿಚಾರಧಾರೆ ನಕಾರಾತ್ಮಕವಾಗಿದ್ದರೆ, ಅವನು ಅಷ್ಟೇ ಹುಮ್ಮಸ್ಸಿನಿಂದ ತಪ್ಪು ಕೆಲಸಗಳನ್ನೂ ಮಾಡುತ್ತಾನೆ. ಅವನು ಹಠಮಾರಿ, ಅವಿಚಾರಿ ಮತ್ತು ಅಹಂಕಾರಿಯಾಗ ಬಹುದು. ಆದುದರಿಂದ ಬಲವಾದ ಮತ್ತು ಹಿಂದೆ ಬಾಗದ ಹೆಬ್ಬೆರಳಿರುವ ವ್ಯಕ್ತಿಗಳು ಸಕಾರಾತ್ಮಕವಾಗಿ ವಿಚಾರ ಮಾಡುವುದು ಆವಶ್ಯಕವಾಗಿದೆ.

– ಹಸ್ತರೇಖಾತಜ್ಞೆ ಸುನೀತಾ ಶುಕ್ಲಾ, ಋಷಿಕೇಶ. (೨೨.೨.೨೦೨೫)
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !