ಪ.ಪೂ. ಸ್ವಾಮಿ ವರದಾನಂದ ಭಾರತಿಯವರ ಧರ್ಮದ ಬಗ್ಗೆ ಅಮೂಲ್ಯ ಮಾರ್ಗದರ್ಶನ !

ಪ್ರಶ್ನೆ : ಕಿಂ ನು ಹಿತ್ವಾ ಅರ್ಥವಾನ್ ಭವತಿ ?
ಅರ್ಥ : ಮನುಷ್ಯನ ಹಿತಕ್ಕಾಗಿ ಯಾವುದನ್ನು ತ್ಯಜಿಸಬೇಕು ?
ಉತ್ತರ : ಕಾಮಂ ಹಿತ್ವಾ ಅರ್ಥವಾನ್ ಭವತಿ |
ಕಾಮನೆಗಳನ್ನು ತ್ಯಾಗ ಮಾಡು ವುದರಲ್ಲೇ ಮನುಷ್ಯನ ಹಿತವಿದೆ.
‘ಕಾಮ’ ಎಂಬ ಪದವನ್ನು ಸಾಮಾನ್ಯವಾಗಿ ಅರ್ಥೈಸಿದಂತೆ ಕೇವಲ ಲೈಂಗಿಕತೆಗೆ ಸೀಮಿತಗೊಳಿಸಬಾರದು. ಯಾವುದೇ ಇಚ್ಛೆ, ಕಾಮನೆ, ವಾಸನಾ ಇವು ಕಾಮ ಶಬ್ದದ ವ್ಯಾಪಕ ಅರ್ಥದಲ್ಲಿ ಸೇರಿಕೊಳ್ಳುತ್ತದೆ. ಪಂಚಜ್ಞಾನೇಂದ್ರಿಯಗಳಿಗೆ ಸುಖವೆನಿಸುವ ಶಬ್ದ-ಸ್ಪರ್ಶ-ರೂಪ-ರಸ-ಗಂಧ ಮುಂತಾದವುಗಳ ಬಗೆಗಿನ ಆಸೆಯೇ ಕಾಮ. ಕಾಮದ ನಿಜವಾದ ಸ್ವರೂಪವು ಅಗತ್ಯಕ್ಕಿಂತ ಹೆಚ್ಚಿನ ಕಾಮನೆಗಳಿಂದ ವ್ಯಕ್ತವಾಗುತ್ತದೆ ಮತ್ತು ಈ ರೀತಿಯ ಕಾಮವು ಎಂದಿಗೂ ತೃಪ್ತವಾಗುವುದಿಲ್ಲ.
ನ ಜಾತು ಕಾಮಃ ಕಾಮಾನಾಮ್ ಉಪಭೋಗೇನ ಶಾಮ್ಯತಿ |
ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ ||
– ಶ್ರೀಮದ್ಭಾಗವತ, ಸ್ಕಂಧ ೯, ಅಧ್ಯಾಯ ೧೯, ಶ್ಲೋಕ ೧೪
ಅರ್ಥ : ಸುಖಗಳನ್ನು ಉಪಭೋಗಿಸುವುದರಿಂದ ವಿಷಯಾಸಕ್ತಿಯ ತೃಪ್ತಿಯಾಗುವುದಿಲ್ಲ, ಆದರೆ ಹವನದ್ರವ್ಯದಿಂದ ಹೇಗೆ ಅಗ್ನಿ ಪ್ರಜ್ವಲಿಸುತ್ತದೆಯೋ, ಅದೇ ರೀತಿ ಉಪಭೋಗದಿಂದ ವಿಷಯವಾಸನಾ ಮತ್ತಷ್ಟು ಹೆಚ್ಚಾಗುತ್ತದೆ.
ಈ ರೀತಿಯ ಕಾಮಪ್ರವೃತ್ತಿಯು ಮನುಷ್ಯನ ದೈಹಿಕ, ಮಾನಸಿಕ, ಕೌಟುಂಬಿಕ ಮತ್ತು ಸಾಮಾಜಿಕ ಹಿತವನ್ನು ನಾಶಪಡಿಸುತ್ತದೆ. ಕಾಮವು ವ್ಯಸನವಾಗಿ ಬದಲಾಗುತ್ತದೆ, ಹಾಗೆ ಆದರೆ ಸಂಪತ್ತಿನ ನಾಶವೂ ಆಗುತ್ತದೆ.
– ಪ.ಪೂ. ಸ್ವಾಮಿ ವರದಾನಂದ ಭಾರತಿ
(ಸಂಗ್ರಹ: ಗ್ರಂಥ ‘ಯಕ್ಷಪ್ರಶ್ನೆ’)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು