‘ಹನುಮಂತನು ಶಿವನ ಅಂಶಾವತಾರನಾಗಿದ್ದು ಅವನನ್ನು ‘೧೧ ನೇ ರುದ್ರ’, ಎಂದೂ ಸಂಬೋಧಿಸುತ್ತಾರೆ. ಹನುಮಂತನು ಎಲ್ಲಾ ದೇವತೆ ಗಳಿಗೂ ಪ್ರಿಯವಾಗಿದ್ದನು. ದೇವತೆಗಳು ವಿವಿಧ ರೀತಿಯ ಆಶೀರ್ವಾದಗಳನ್ನು ಬಾಲ್ಯದಲ್ಲಿಯೇ ನೀಡಿ ಬಲಸಂಪನ್ನಗೊಳಿಸಿದವರಲ್ಲಿ ಕಾರ್ತಿಕೇಯನನ್ನು ಹೊರತುಪಡಿಸಿದರೆ ಹನುಮಂತನೊಬ್ಬನೇ ಅಂತಹ ದೇವತೆಯಾಗಿದ್ದಾನೆ. ಆದ್ದರಿಂದ ಅತ್ಯಂತ ಬಲಶಾಲಿಯಾಗಿದ್ದರಿಂದ ಅವನಿಗೆ ‘ಮಹಾಬಲಿ ಹನುಮಾನ’, ಎಂಬ ಹೆಸರು ಬಂತು.
೧. ಬಾಲಹನುಮಾನನಿಗೆ ದೇವತೆಗಳು ನೀಡಿದ ವಿವಿಧ ಆಶೀರ್ವಾದಗಳು
ಟಿಪ್ಪಣಿ ೧ – ಸೂರ್ಯ ಹಾಗೂ ಚಂದ್ರರು ಸ್ವರ್ಗಲೋಕದಲ್ಲಿ ಕನಿಷ್ಠ ದೇವತೆಗಳ ಸ್ವರೂಪದಲ್ಲಿ ಕಾರ್ಯರತವಾಗಿರುವಾಗ ಬಾಲಹನುಮಂತನಿಗೆ ಮೇಲಿನಂತೆ ಆಶೀರ್ವದಿಸಿದರು.
ಟಿಪ್ಪಣಿ ೨ – ದೈವೀ ಸಂಪತ್ತಿನ ಸ್ವಾಮಿ ಕುಬೇರನಾಗಿದ್ದಾನೆ. ಅವನ ಬಳಿ ಪ್ರಮುಖವಾಗಿ ೯ ಪ್ರಕಾರದ ಸಂಪತ್ತಿದೆ. ಅದನ್ನು ‘ನವವಿಧಿ’ ಎಂದು ಕರೆಯುತ್ತಾರೆ. ಅದು ಮುಂದಿನಂತಿದೆ. ‘ಮಹಾಪದ್ಮ, ಪದ್ಮ, ಶಂಖ, ಮಕರ, ಕಚ್ಛಪ, ಮುಕುಂದ, ಕುಂದ, ನೀಲ ಹಾಗೂ ಖರ್ವ. ಅಂದರೆ ೧೦೦ ಅಬ್ಜ. (ಆಧಾರ : ಭಕ್ತಿಕೋಶ)’
೨. ಬಾಲಹನುಮಂತನಿಗೆ ನವಗ್ರಹ ದೇವತೆಗಳು ನೀಡಿದ ವಿವಿಧ ಪ್ರಕಾರದ ಆಶೀರ್ವಾದಗಳು
ನವಗ್ರಹ ದೇವತೆ ಹನುಮಂತನಿಗೆ ನೀಡಿದ ಆಶೀರ್ವಾದಗಳು
ಟಿಪ್ಪಣಿ – ಸೂರ್ಯ ಹಾಗೂ ಚಂದ್ರದ ಗ್ರಹಗಳ ಸ್ವರೂಪದಲ್ಲಿ ಕಾರ್ಯರತವಾಗಿರುವಾಗ ಬಾಲಹನುಮಂತನು ಮೇಲಿನ ಆಶೀರ್ವಾದ ನೀಡಿದರು.
೩. ಬಾಲಹನುಮಂತನಿಗೆ ಗಣಪತಿ, ದತ್ತಾತ್ರೇಯ, ತ್ರಿದೇವತೆಗಳು ಹಾಗೂ ತ್ರಿದೇವಿಯರು ನೀಡಿದ ವಿವಿಧ ಆಶೀರ್ವಾದಗಳು
೪. ಸರ್ವಸಿದ್ಧ ಹನುಮಾನಕವಚ
ಹೀಗೆ ಎಲ್ಲಾ ದೇವದೇವತೆಗಳು ನೀಡಿದ ದೈವೀ ಶಕ್ತಿಯಿಂದ ಬಾಲಹನುಮಾನನ ಸುತ್ತಲು ಭೇದಿಸಲು ಅಸಾಧ್ಯವಾಗದ ಸುರಕ್ಷಾಕವಚ ನಿರ್ಮಾಣವಾಯಿತು. ಅದಕ್ಕೆ ‘ಹನುಮಾನಕವಚ’ ಎಂದು ಹೇಳಲಾಗುತ್ತದೆ. ಈ ಕವಚವು ಎಲ್ಲಾ ದೃಷ್ಟಿಯಿಂದಲೂ ಸಿದ್ಧ ಹಾಗೂ ಜಾಗೃತವಾಗಿರುವುದರಿಂದ ಅದಕ್ಕೆ ‘ಸರ್ವಸಿದ್ಧ ಹನುಮಾನಕವಚ’, ಎನ್ನುತ್ತಾರೆ.
೫. ‘ಪಂಚಮುಖಿ ಹನುಮಾನ್’ ಹಾಗೂ ‘ಪಂಚಮುಖಿ ಹನುಮಾನಕವಚ’ಗಳ ಲಾಭ
೫ ಅ. ‘ಪಂಚಮುಖೀ ಹನುಮಾನ್’ : ‘ಪೂರ್ವಾಭಿಮುಖಿ ವಾನರ (ಅಥವಾ ಕಪಿ)ರೂಪ, ದಕ್ಷಿಣಾಭಿಮುಖಿ ನರಸಿಂಹ ರೂಪ, ಪಶ್ಚಿಮಾಭಿಮುಖಿ ಗರುಡ ರೂಪ, ಉತ್ತರಾಭಿಮುಖಿ ವರಾಹ ರೂಪ ಹಾಗೂ ಉರ್ಧ್ವಮುಖಿ ಹಯಗ್ರೀವ (ಅಥವ ಅಶ್ವ) ರೂಪ,’ ಇಂತಹ ಹನುಮಾನನ ಐದು ಸುಂದರ ಮುಖಗಳಿವೆ. ಇದರಿಂದ ಹನುಮಂತನ ಈ ಸ್ವರೂಪಕ್ಕೆ ‘ಪಂಚಮುಖಿ ಹನುಮಾನ’, ಎಂದು ಸಂಬೋಧಿಸಲಾಗುತ್ತದೆ. ಹನುಮಾನನ ಪಂಚಮುಖದೊಂದಿಗೆ ಸಂಬಂಧಪಟ್ಟ ಕವಚಕ್ಕೆ ‘ಪಂಚಮುಖಿ ಹನುಮಾನಕವಚ’ ಎಂದು ಸಂಬೋಧಿಸಲಾಗುತ್ತದೆ.
೫ ಆ. ‘ಪಂಚಮುಖಿ ಹನುಮಾನಕವಚ’ದ (ಪಂಚಮುಖಿ ಹನುಮಾನಕವಚ ಪಠಿಸುವ) ಲಾಭ :
ಶಾರೀರಿಕ, ಮಾನಸಿಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ಮಟ್ಟದಲ್ಲಿರುವ ಎಲ್ಲಾ ಅಡಚಣೆಗಳು ದೂರವಾಗುವುದು, ಎಲ್ಲಾ ಶತ್ರುಗಳ ವಿನಾಶವಾಗುವುದು, ಪುತ್ರಪೌತ್ರಾದಿಗಳ ಸುಖ ಸಿಗುವುದು, ರಾಜ್ಯಮಪದವಿಯ ಪ್ರಾಪ್ತವಾಗುವುದು, ದೇವತೆಗಳೆಲ್ಲರೂ ಪ್ರಸನ್ನರಾಗುವುದು, ವಿವಿಧ ಲೋಕಗಳ ಮೇಲೆ ಜಯ ಪ್ರಾಪ್ತವಾಗುವುದು, ಶನಿಯ ಏಳುವರೆಯ ಪೀಡೆಯಿದ್ದರೆ ಪಂಚಮುಖಿ ಹನುಮಂತನ ಉಪಾಸನೆಯಿಂದ ಅದು ಕಡಿಮೆಯಾಗುವುದು ಹಾಗೂ ಶನಿಯ ಪೀಡೆಯಿಂದ ರಕ್ಷಣೆಯಾಗುವುದು, ಸೌಭಾಗ್ಯ, ಎಲ್ಲಾ ವಿದ್ಯೆಗಳು, ಎಲ್ಲಾ ಸಿದ್ಧಿಗಳು, ಶಕ್ತಿ, ಧೈರ್ಯ, ಸುಬುದ್ಧಿ ಹಾಗೂ ತ್ರಿಕಾಲಜ್ಞಾನದ ಪ್ರಾಪ್ತಿಯಾಗುವುದು, ರೋಗನಿರೋಧಕಶಕ್ತಿಯು ಹೆಚ್ಚಾಗಿ ಸಮಸ್ತರೋಗಗಳ ನಿವಾರಣೆಯಾಗುವುದು, ಕಾರ್ಯದಲ್ಲಿ ಯಶಸ್ಸು ಸಿಗುವುದು, ಒಳ್ಳೆಯ ಆರೋಗ್ಯ, ಧನ ಹಾಗೂ ಸಂಪತ್ತು ಸಿಕ್ಕಿ ಏಳಿಗೆಯಾಗುವುದು ಅದೇರೀತಿ ಐಹಿಕ ಹಾಗೂ ಪಾರಮಾರ್ಥಿಕ ಉನ್ನತಿಯಾಗಿ ದೀರ್ಘಾಯುಷ್ಯ ಲಭಿಸುವುದು’, ಇದು ಪಂಚಮುಖಿ ಹನುಮಾನಕವಚ ಸ್ತೋತ್ರಪಠಣದಿಂದ ಸಾಧ್ಯವಾಗುತ್ತದೆ.’
– ಕು. ಮಧುರಾ ಭೋಸಲೆ (ಸೂಕ್ಷ್ಮದಲ್ಲಿ ಸಿಕ್ಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ (೧೧.೩.೨೦೨೦, ರಾತ್ರಿ ೧೦)