‘ಹನುಮಂತನು ಚಿರಂಜೀವಿಯಾಗಿದ್ದರಿಂದ, ಅವನ ಜಯಂತಿ ಯನ್ನು ಆಚರಿಸುವ ಬದಲು ಜನ್ಮೋತ್ಸವವನ್ನು ಆಚರಿಸಬೇಕು’ ಎಂಬ ಆಶಯವಿರುವ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಈ ಕುರಿತು ಪರಾತ್ಪರ ಗುರು ಪಾಂಡೆ ಮಹಾರಾಜರು ಶಾಸ್ತ್ರೋಕ್ತ ರೀತಿಯಲ್ಲಿ ನೀಡಿದ ಸ್ಪಷ್ಟೀಕರಣ ಹೀಗಿದೆ.
‘ಜಯಂತಿ’ ಎಂದರೆ ದೇವರ ಜನ್ಮದಿನ !
‘ಹನುಮಾನ’ ಎಂದರೆ ಶಾಶ್ವತ ಚೈತನ್ಯಶಕ್ತಿ. ಆದ್ದರಿಂದ ಈ ಶಕ್ತಿ ಚಿರಂಜೀವಿ. ಈ ಶಕ್ತಿ ಅಂಜನಿದೇವಿಯ ಮೂಲಕ ಪ್ರಕಟವಾಯಿತು. ಈ ಶಕ್ತಿಯು ಪ್ರಕಟವಾಗುತ್ತಿದ್ದಂತೆಯೇ, ಸೂರ್ಯನನ್ನು ಪಡೆಯಲು ಹನುಮಂತನು ಹಾರಿದನು. ರಾಮಾಯಣ ಕಾಲದಲ್ಲಿ ನಿರ್ದಿಷ್ಟ ಉದ್ದೇಶಕ್ಕಾಗಿ ‘ಹನುಮಾನ’ ಅಥವಾ ‘ಮಾರುತಿ’ ಎಂಬ ಹೆಸರಿನಿಂದ ಈ ಶಕ್ತಿ ಕಾರ್ಯನಿರ್ವಹಿಸಿತು. ಹಾಗಾಗಿ ‘ಹನುಮಾನ ಜಯಂತಿ’ ಎನ್ನುವುದೇ ಯೋಗ್ಯ ! ಇದುವರೆಗೂ ಜನಪ್ರಿಯವಾದ ಪರಂಪರೆಯೂ ಇದೇ ಆಗಿದೆ
(ಉಲ್ಲೇಖ : ಶಾಲಾ ಸಂಸ್ಕೃತ ಶಬ್ದಕೋಶ, ಸಂಪಾದಕರು – ಶ್ರೀ. ಮಿಲಿಂದ ದಂಡವತೆ, ಪ್ರಕಾಶಕರು – ವರದಾ ಬುಕ್ಸ್, ಪುಣೆ – ೧೬)