ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಎಲ್ಲಾ ಅಕ್ರಮ ವಿದೇಶಿ ನಾಗರೀಕರನ್ನು ಮರಳಿ ತಮ್ಮ ದೇಶಕ್ಕೆ ಗಡೀಪಾರು ಮಾಡುವ ಯೋಜನೆಯಡಿ ಅಫ್ಘಾನ್ ಪೌರತ್ವದ ಕಾರ್ಡ್ ಗಳನ್ನು ಹೊಂದಿರುವವರಿಗೆ ಸ್ವಯಂ ಪ್ರೇರಣೆಯಿಂದ ಪಾಕಿಸ್ತಾನವನ್ನು ತೊರೆಯುವಂತೆ ಪಾಕ್ ಸರ್ಕಾರ ಎಚ್ಚರಿಕೆ ನೀಡಿದೆ. ಅಫ್ಘಾನ್ ನಾಗರಿಕರಿಗೆ ಪಾಕಿಸ್ತಾನವು ಮಾರ್ಚ್ 31 ರ ತನಕ ಸಮಯ ನಿಗದಿಪಡಿಸಿದೆ. ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ನೆಲೆಸಿರುವ ಪೌರತ್ವ ಕಾರ್ಡ್ ಹೊಂದಿರುವವರನ್ನು ಅಫ್ಘಾನಿಸ್ತಾನಕ್ಕೆ ವಾಪಸ್ ಕಳುಹಿಸಲಾಗುತ್ತದೆ. ಭಯೋತ್ಪಾದನೆಯ ಸೂತ್ರಗಳ ಮೇಲೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಣಯವು ಆಫ್ಘನ್ ಪೌರತ್ವ ಕಾರ್ಡ್ ಹೊಂದಿರುವ ಹಾಗೂ ನಿರಾಶ್ರಿತರ ವರ್ಗಕ್ಕೆ ಸೇರಿರುವ 8 ಲಕ್ಷಕ್ಕೂ ಹೆಚ್ಚು ಆಫ್ಘನ್ ನಿರಾಶ್ರಿತರ ಮೇಲೆ ಪರಿಣಾಮ ಬೀರಬಹುದು. ಇವರೆಲ್ಲರೂ ದಾಖಲೆಗಳಿಲ್ಲದೆ ಸಾವಿರಾರು ಜನರು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆ.
ಸಂಪಾದಕೀಯ ನಿಲುವುಭಾರತದಲ್ಲಿ ವಾಸಿಸುತ್ತಿರುವ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳನ್ನು ದೇಶ ತೊರೆಯುವಂತೆ ಭಾರತ ಸರ್ಕಾರ ಎಚ್ಚರಿಸುವುದು ಯಾವಾಗ? ಅವರ ಬಳಿ ಇರುವ ನಕಲಿ ದಾಖಲೆಗಳನ್ನು ನೋಡಿ ಅವರನ್ನು ಭಾರತೀಯ ಪ್ರಜೆಗಳೆಂದು ಪರಿಗಣಿಸುತ್ತಿದೆಯೇ? |