ಮುಂಬಯಿ, ಮಾರ್ಚ್ ೪ (ವಾರ್ತಾ) – ಕ್ರೂರ ಔರಂಗಜೇಬನ ವೈಭವೀಕರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಶಾಸಕ ಅಬು ಆಜ್ಮಿ ವಿರುದ್ಧ ಮಾರ್ಚ್ ೪ರಂದು ಮರೀನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಠಾಣೆಯ ಶ್ರೀ. ಕಿರಣ್ ನಾಕತಿ ಅವರು ಆಜ್ಮಿ ವಿರುದ್ಧ ದೂರು ನೀಡಿದ್ದರು.
“ಔರಂಗಜೇಬ ಉತ್ತಮ ಆಡಳಿತಗಾರನಾಗಿದ್ದ. ಆತನ ಆಳ್ವಿಕೆಯಲ್ಲಿ ಭಾರತವನ್ನು ‘ಚಿನ್ನದ ಹಕ್ಕಿ’ ಎಂದು ಕರೆಯಲಾಗುತ್ತಿತ್ತು” ಎಂದು ಅಬು ಆಜ್ಮಿ ಔರಂಗಜೇಬನನ್ನು ವೈಭವೀಕರಿಸಿದ್ದರು. ಧರ್ಮವೀರ ಸಂಭಾಜಿ ಮಹಾರಾಜರ ಮೇಲೆ ೪೦ ದಿನಗಳ ಕಾಲ ಕ್ರೂರವಾಗಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ, ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ, ಹಿಂದೂಗಳನ್ನು ಮತಾಂತರ ಮಾಡಿದ ಮತ್ತು ದೇವಾಲಯಗಳನ್ನು ನಾಶಪಡಿಸಿದ ಔರಂಗಜೇಬನನ್ನು ವೈಭವೀಕರಿಸುವುದು ಹಿಂದೂಗಳ ಭಾವನೆಗಳಿಗೆ ಅವಮಾನ ಮಾಡಿದಂತೆ ಎಂದು ಶ್ರೀ. ನಾಕತಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.