ಪಾಕಿಸ್ತಾನಕ್ಕೆ ಬಲೂಚಿಸ್ತಾನ ಸ್ವತಂತ್ರವಾಗುವ ಭಯ!
ಇಸ್ಲಾಮಾಬಾದ – ಬಲೂಚಿಸ್ತಾನದಲ್ಲಿ ‘ಬಲೂಚ ರಾಜಿ ಅಜೋಯಿ ಸಂಗರ’ (‘ಬಿ.ಆರ್.ಎ..ಎಸ್., ಬ್ರಾಸ್’) ಸಭೆಯಲ್ಲಿ, ಎಲ್ಲಾ ಬಲೂಚ್ ಗುಂಪುಗಳು ಪಾಕಿಸ್ತಾನ ಸರಕಾರ ಮತ್ತು ಸೈನ್ಯದ ವಿರುದ್ಧ ಒಟ್ಟಾಗಿ ಹೋರಾಡಲು ನಿರ್ಧರಿಸಿವೆ. ಈ ಸಭೆಯಲ್ಲಿ ಭಾಗವಹಿಸಿದ ಗುಂಪುಗಳಲ್ಲಿ ಬಲೂಚ ಲಿಬರೇಶನ ಆರ್ಮಿ, ಬಲೂಚಿಸ್ತಾನ ಲಿಬರೇಶನ ಫ್ರಂಟ್, ಬಲೂಚ ರಿಪಬ್ಲಿಕನ ಗಾರ್ಡ್ಸ್, ಸಿಂಧಿ ಲಿಬರೇಶನ್ ಆರ್ಗನೈಸೇಶನ್ ಮತ್ತು ಸಿಂಧೂದೇಶ ರೆವಲ್ಯೂಷನರಿ ಆರ್ಮಿ ಸೇರಿವೆ. ಈ ಗುಂಪುಗಳು ಚೀನೀ ಯೋಜನೆಗಳ ಮೇಲೂ ದಾಳಿ ಮಾಡಿವೆ.
೧. ಬಲೂಚ ಗುಂಪುಗಳು ಒಟ್ಟಾಗಿ ಹೋರಾಡಲು ನಿರ್ಧರಿಸಿದ್ದರಿಂದ ಪಾಕಿಸ್ತಾನಕ್ಕೆ ದೊಡ್ಡ ಸಮಸ್ಯೆ ಉಂಟಾಗಬಹುದು. ಬಲೂಚಿಸ್ತಾನದ ಅನೇಕ ಭಾಗಗಳಲ್ಲಿ ಬಂಡುಕೋರ ಗುಂಪುಗಳು ಮೊದಲೇ ಪಾಕಿಸ್ತಾನಿ ಸೈನ್ಯವನ್ನು ಹೈರಾಣಾಗಿಸಿವೆ. ಈ ಹೊಸ ನಿರ್ಣಯದಿಂದ ಪಾಕಿಸ್ತಾನ ಸರಕಾರಕ್ಕೆ ಬಲೂಚಿಸ್ತಾನ ಬೇರ್ಪಡುವ ಭಯ ಕಾಡುತ್ತಿದೆ.
೨. ‘ಬಲೂಚ್ ರಾಜಿ ಅಜೋಯಿ ಸಂಗರ’ ಪ್ರಸಾರ ಮಾಡಿದ ಹೇಳಿಕೆಯಲ್ಲಿ, ಚೀನಾ ಅಥವಾ ಯಾವುದೇ ಶಕ್ತಿ ಪಾಕಿಸ್ತಾನ ಸರಕಾರದ ಒಪ್ಪಂದದೊಂದಿಗೆ ಬಲೂಚಿನ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಪಾಕಿಸ್ತಾನಿ ಸೈನ್ಯದ ವಿರುದ್ಧದ ಯುದ್ಧವನ್ನು ಹೆಚ್ಚು ಆಕ್ರಮಣಕಾರಿಯಾಗಿ ಮತ್ತು ಪೂರ್ಣ ಶಕ್ತಿಯಿಂದ ಹೋರಾಡುತ್ತೇವೆ. ಎಲ್ಲಾ ಗುಂಪುಗಳ ಒಗ್ಗಟ್ಟಿನ ಹೋರಾಟದಿಂದ ಬಲೂಚ ಸ್ವಾತಂತ್ರ್ಯವು ನನಸಾಗುತ್ತದೆ, ಎಂದು ಹೇಳಲಾಗಿದೆ.
3. ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪಾಕಿಸ್ತಾನದ ವಿರುದ್ಧದ ಆಕ್ರೋಶ ಹೊಸದೇನಲ್ಲ; ಆದರೆ ಚೀನಾದ ಯೋಜನೆಗಳಿಂದ ಇತ್ತೀಚಿನ ದಿನಗಳಲ್ಲಿ ಅದು ಹೆಚ್ಚಾಗಿದೆ. ಬಲೂಚ ಜನರಿಗೆ ಚೀನಾ ತಮ್ಮ ಸಂಪನ್ಮೂಲಗಳನ್ನು ಲೂಟಿ ಮಾಡುತ್ತಿದೆ ಮತ್ತು ಈ ಕೆಲಸದಲ್ಲಿ ಪಾಕಿಸ್ತಾನ ಅವರಿಗೆ ಸಹಾಯ ಮಾಡುತ್ತಿದೆ, ಎಂದು ಬಲೂಚ್ ಜನರು ಭಾವಿಸುತ್ತಾರೆ.