Bangladesh Cow Killing Threat: ಬಾಂಗ್ಲಾದೇಶ: ಬಂಗಾಳಿ ಹೊಸ ವರ್ಷಕ್ಕೆ 100 ಗೋವುಗಳ ಹತ್ಯೆಗೆ ಮುಸಲ್ಮಾನರಿಂದ ಬೆದರಿಕೆ!

ಮಧ್ಯಂತರ ಸರಕಾರ ಬೆದರಿಕೆಯ ಬಗ್ಗೆ ಗಂಭೀರವಾಗಿಲ್ಲ!

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಏಪ್ರಿಲ್ 14 ರಂದು ಆಚರಿಸಲಾಗುವ ‘ಪೊಹೆಲಾ ಬೈಸಾಖ್’ ಈ ಬಂಗಾಳಿ ಹೊಸ ವರ್ಷವನ್ನು ಇಸ್ಲಾಮಿಕ್ ಹಬ್ಬವಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿವೆ. ಕೆಲವು ಜಿಹಾದಿ ಮುಸ್ಲಿಮರು ಈ ಹಬ್ಬದ ಸಂದರ್ಭದಲ್ಲಿ 100 ಹಸುಗಳನ್ನು ವಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದು ಹಿಂದೂ ಸಮುದಾಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ಪೊಹೆಲಾ ಬೈಸಾಖ ಹಬ್ಬವು ವಸಂತಕಾಲದ ಆಗಮನ ಮತ್ತು ಸುಗ್ಗಿಯ ಋತುವಿನ ಸಂತೋಷವನ್ನು ಆಚರಿಸುವ ಹಬ್ಬವಾಗಿದೆ.

1. ಪ್ರತಿ ವರ್ಷ, ಪೊಹೆಲಾ ಬೈಸಾಖ್ ಸಂದರ್ಭದಲ್ಲಿ, ಢಾಕಾದ ರಮನಾ ಪಾರ್ಕನಲ್ಲಿರುವ ರಮನಾ ಬತಾಮುಲ ವಟವೃಕ್ಷದ ಕೆಳಗೆ ಒಂದು ದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮವನ್ನು 1961 ರಲ್ಲಿ ಸ್ಥಾಪಿಸಲಾದ ‘ಛಾಯತ್ ಸಂಗೀತ ವಿದ್ಯಾಲಯ’ ಮೂಲಕ ನಡೆಸಲಾಗುತ್ತಿದೆ, ಬಂಗಾಳಿ ಸಂಸ್ಕೃತಿ ಮತ್ತು ಸಂಗೀತಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ.

2. ಬಾಂಗ್ಲಾದೇಶದ ಮಧ್ಯಂತರ ಸರಕಾರದ ಸಾಂಸ್ಕೃತಿಕ ಸಚಿವಾಲಯದ ಸಲಹೆಗಾರ ಮುಸ್ತಫಾ ಸರವರ ಫಾರೂಕಿ ಅವರು ಮಾತನಾಡಿ, ಜನರು ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯದ ಬಗ್ಗೆ ಏನೇನೋ ಮಾತನಾಡುತ್ತಾರೆ. ನಾವು ಪ್ರತಿಯೊಂದು ವಿಷಯವನ್ನೂ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಪೊಹೆಲಾ ಬೈಸಾಖ್ ಒಂದು ದೊಡ್ಡ ಹಬ್ಬವಾಗಿದೆ. ಇದನ್ನು ಎಂದಿನಂತೆ ಆಚರಿಸಲಾಗುವುದು ಎಂದಷ್ಟೇ ನಾನು ಹೇಳಬಲ್ಲೆ ಎಂದು ಹೇಳಿದರು.

3. ಇದಕ್ಕೂ ಮೊದಲು, ಏಪ್ರಿಲ್ 14, 2001 ರಂದು, ಜಿಹಾದಿ ಭಯೋತ್ಪಾದಕ ಸಂಘಟನೆ ‘ಹರ್ಕತ್-ಉಲ್-ಜಿಹಾದ್-ಅಲ್-ಇಸ್ಲಾಜಿ’ ರಾಮನಾ ಪಾರ್ಕ್‌ನಲ್ಲಿ ಎರಡು ಬಾಂಬ್ ಸ್ಫೋಟಗಳನ್ನು ನಡೆಸಿತ್ತು, ಇದರಲ್ಲಿ 9 ಜನರು ಸಾವನ್ನಪ್ಪಿದರು ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ, ಮುಫ್ತಿ (ಶರಿಯಾ ಕಾನೂನಿನ ಪ್ರಕಾರ ನ್ಯಾಯ ನೀಡುವವರು) ಅಬ್ದುಲ ಹನ್ನಾನ್, ಮೌಲಾನಾ (ಇಸ್ಲಾಂ ಅಧ್ಯಯನಕಾರ) ಅಕ್ಬರ ಹುಸೇನ, ಮೌಲಾನಾ ಮಹಮ್ಮದ ತಾಜುದ್ದೀನ, ಹಫೀಜ ಜಹಾಂಗೀರ ಆಲಂ ಬದರ, ಮೌಲಾನಾ ಅಬು ಬಕರ, ಮುಫ್ತಿ ಶಫಿಕುರ ರೆಹಮಾನ, ಮುಫ್ತಿ ಅಬ್ದುಲ ಹೈಯಿ ಮತ್ತು ಆರಿಫ ಹಸನ ಅವರಿಗೆ 2014 ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ಮೌಲಾನಾ ಅಬು ತಾಹೆರ, ಮೌಲಾನಾ ಸಬ್ಬೀರ ಉರ್ಫ ಅಬ್ದುಲ ಹನ್ನಾನ, ಮೌಲಾನಾ ಯಾಹ್ಯಾ, ಮೌಲಾನಾ ಶೌಕತ ಉಸ್ಮಾನ, ಮೌಲಾನಾ ಅಬ್ದುಲ ರೌಫ ಮತ್ತು ಶಹಾದತ ಉಲ್ಲಾ ಅವರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಭಯೋತ್ಪಾದಕರಾದ ತಾಜುದ್ದೀನ್, ಹಫೀಜ್ ಜಹಾಂಗೀರ್, ಮೌಲಾನಾ ಅಬು ಬಕರ್, ಮುಫ್ತಿ ಶಫೀಕರ್ ಮತ್ತು ಮುಫ್ತಿ ಇನ್ನೂ ತಲೆಮರೆಸಿಕೊಂಡಿದ್ದಾರೆ. (ಮೌಲಾನಾ ಮತ್ತು ಮುಫ್ತಿ ಎಂಬ ಬಿರುದುಗಳನ್ನು ಹೊಂದಿರುವ ಮುಸ್ಲಿಂ ಧಾರ್ಮಿಕ ಮುಖಂಡರು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಾರೆ ಎಂಬುದನ್ನು ಗಮನಿಸಬೇಕು! – ಸಂಪಾದಕರು)

ಸಂಪಾದಕೀಯ ನಿಲುವು

ಮದ್ಯವ್ಯಸನಿಗೆ ಮದ್ಯಪಾನ ಮಾಡಲು ಕಾರಣ ಬೇಕಾಗುವುದಿಲ್ಲ. ಹಾಗೆಯೇ ಜಿಹಾದಿ ಮುಸಲ್ಮಾನರಿಗೆ ಗೋವುಗಳನ್ನು ವಧಿಸಲು ಕಾರಣ ಬೇಕಾಗುವುದಿಲ್ಲ. ಅದರಲ್ಲಿಯೂ ಹಿಂದೂಗಳನ್ನು ಉದ್ರಿಕ್ತಗೊಳಿಸಲು ಹಬ್ಬಗಳ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಹಸುಗಳನ್ನು ವಧಿಸುತ್ತಾರೆ. ಅದೇ ಈ ಬೆದರಿಕೆಯಲ್ಲಿ ಮತ್ತೆ ಕಾಣುತ್ತಿದೆ !