Congress Leader Life Imprisonment : ಕಾಂಗ್ರೆಸ್ಸಿನ ನಾಯಕ ಸಜ್ಜನ ಕುಮಾರ್ ಇವರಿಗೆ ಜೀವಾವಧಿ ಶಿಕ್ಷೆ

೧೯೮೪ ರಲ್ಲಿ ದೆಹಲಿಯಲ್ಲಿ ನಡೆದ ಶಿಖ್ಖ ವಿರೋಧಿ ಗಲಭೆ

ನವದೆಹಲಿ – ಇಲ್ಲಿಯ ರಾವುಸ್ ಅವೆನ್ಯೂ ನ್ಯಾಯಾಲಯವು ದೆಹಲಿಯಲ್ಲಿನ ೧೯೮೪ ರಲ್ಲಿ ನಡೆದಿರುವ ಶಿಖ್ಖ ವಿರೋಧಿ ಗಲಭೆಯ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಮಾಜಿ ಸಂಸದ ಸಜ್ಜನ್ ಕುಮಾರ್ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸಂತ್ರಸ್ತರು ಸಜ್ಜನ್ ಕುಮಾರ್ ಇವರಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿದ್ದರು. ಈ ಪ್ರಕರಣ ಗಲಭೆಯ ಸಮಯದಲ್ಲಿ ಸರಸ್ವತಿ ವಿಹಾರದಲ್ಲಿ ಜಸ್ವಂತ ಸಿಂಹ ಮತ್ತು ಅವರ ಪುತ್ರ ತರುಣ ದೀಪ ಸಿಂಹ ಇವರ ಹತ್ಯೆಗೆ ಸಂಬಂಧಪಟ್ಟದ್ದಾಗಿದೆ. ಸಜ್ಜನ ಕುಮಾರ್ ಇವರು ಪ್ರಸ್ತುತ ಗಲಭೆಯ ಎರಡನೆಯ ಪ್ರಕರಣದಲ್ಲಿ ತಿಹಾರ ಜೈಲಿನಲ್ಲಿ ಜೀವಾವಧಿಶಿಕ್ಷೆ ಭೋಗಿಸುತ್ತಿದ್ದಾರೆ.

ಸಜ್ಜನ ಕುಮಾರ್ ಇವರ ಮೇಲಿನ ಇತರ ಎರಡು ಮೊಕದ್ದಮೆ

೧. ದೆಹಲಿ ಕ್ಯಾಂಟ್ ದಲ್ಲಿ ಪಾಲಂ ಕಾಲೋನಿಯಲ್ಲಿ ೫ ಸಿಖ್ಖರ ಹತ್ಯೆಯ ನಂತರ ಗುರುದ್ವಾರ ಸುಡಲಾಗಿತ್ತು. ಈ ಪ್ರಕರಣದಲ್ಲಿ ಸಜ್ಜನ ಕುಮಾರ್ ತಪ್ಪಿತಸ್ಥರಾಗಿದ್ದರು. ಡಿಸೆಂಬರ್ ೧೭, ೨೦೧೮ ರಂದು ದೆಹಲಿ ಉಚ್ಚ ನ್ಯಾಯಾಲಯವು ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿತು.

೨. ದೆಹಲಿಯ ಸುಲತಾನಪುರಿ ಇಲ್ಲಿ ನಡೆದಿರುವ ೩ ಶಿಖ್ಖ ರ ಹತ್ಯೆಯ ಪ್ರಕಾರಣದಲ್ಲಿ ರಾವುಸ್ ಅವೆನ್ಯೂ ನ್ಯಾಯಾಲಯವು ಅವರನ್ನು ಅಪರಾಧ ಮುಕ್ತಗೊಳಿಸಿತು.


ಏನಿದು ಶಿಖ್ಖ ವಿರೋಧಿ ಗಲಭೆ ?

ಅಕ್ಟೋಬರ್ ೩೦, ೧೯೮೪ ರಂದು ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಇವರನ್ನು ಅವರ ಅಂಗರಕ್ಷಕನು ಹತ್ಯೆಗೈದನು. ಅದರ ನಂತರ ದೆಹಲಿಯಲ್ಲಿ ಗಲಭೆ ಭುಗಿಲೆದ್ದಿತು. ಈ ಶಿಖ್ಖ ವಿರೋಧಿ ಗಲಭೆಯ ವಿಚಾರಣೆಗಾಗಿ ಸ್ಥಾಪಿಸಲಾಗಿರುವ ನಾನಾವಟಿ ಆಯೋಗದ ವರದಿಯ ಪ್ರಕಾರ ದೆಹಲಿ ಒಂದರಲ್ಲಿಯೇ ೫೮೭ ದೂರುಗಳು ದಾಖಲಾಗಿದ್ದವು, ಅದರಲ್ಲಿ ೨ ಸಾವಿರದ ೭೩೩ ಜನರು ಸಾವನ್ನಪ್ಪಿದ್ದರು. ದೇಶಾದ್ಯಂತ ಸಾವನ್ನಪ್ಪಿರುವ ಸಂಖ್ಯೆ ಸುಮಾರು ೩ ಸಾವಿರದ ೫೦೦ ರಷ್ಟು ಇತ್ತು. ಒಟ್ಟು ಪ್ರಕರಣಗಳಲ್ಲಿ ಸುಮಾರು ೨೪೦ ಪ್ರಕರಣಗಳು ಮುಚ್ಚಲಾದವು. ಹಾಗೂ ೨೫೦ ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು.

ಸಂಪಾದಕೀಯ ನಿಲುವು

  • ಇಂಥವರಿಗೆ ಗಲ್ಲು ಶಿಕ್ಷೆ ವಿಧಿಸಬೇಕಿತ್ತು !
  • ೪೧ ವರ್ಷದ ನಂತರ ದೊರೆಯುವ ನ್ಯಾಯ ಇದು ಅನ್ಯಾಯವೇ ಆಗಿದೆ !