|
(ಸೂಚನೆ: ಆರ್.ಎನ್.ಎ. ಎಂದರೆ ರೈಬೋನ್ಯೂಕ್ಲಿಯಿಕ್ ಆಸಿಡ್ ಮತ್ತು ಬ್ಯಾಕ್ಟೀರಿಯೋಫೇಜ್ ಎಂದರೆ ನದಿಯಲ್ಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಅಂಶಗಳು)
ಪ್ರಯಾಗರಾಜ್ – ಗಂಗಾ ಜಲದಲ್ಲಿ ಅತ್ಯಂತ ಹಾನಿಕಾರಕ ಬ್ಯಾಕ್ಟೀರಿಯಾಗಳ (ರೋಗಾಣುಗಳ) ಆರ್.ಎನ್.ಎ. ಮೇಲೆ ಆಕ್ರಮಣ ಮಾಡಿ ಅವುಗಳನ್ನು ಕ್ಷಣಾರ್ಧದಲ್ಲಿ ನಾಶಮಾಡುವ ಬ್ಯಾಕ್ಟೀರಿಯೋಫೇಜ್ ಕಂಡುಬರುತ್ತದೆ, ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಅಜಯ ಸೋನಕರ್ ಗಂಗಾ ಜಲದ ಬಗ್ಗೆ ಸಂಶೋಧನೆ ಮಾಡಿದ್ದಾರೆ. ಅವರ ಸಂಶೋಧನೆಯ ಪ್ರಕಾರ, ಗಂಗಾ ನದಿಯು ಜಗತ್ತಿನಲ್ಲಿ ಇಂತಹ 1 ಸಾವಿರ 100 ರೀತಿಯ ಬ್ಯಾಕ್ಟೀರಿಯೋಫೇಜ್‌ಗಳನ್ನು ಹೊಂದಿರುವ ಏಕೈಕ ನದಿಯಾಗಿದೆ. ಹಾಗೆಯೇ ಇತರ ನದಿಗಳಿಗೆ ಹೋಲಿಸಿದರೆ ಇದರ ಸ್ವಯಂ ಶುದ್ಧೀಕರಣದ ಸಾಮರ್ಥ್ಯವು 50 ಪಟ್ಟು ಹೆಚ್ಚಾಗಿದೆ. ನೆದರ್ಲ್ಯಾಂಡ್‌ನ ವೇಗೆನಿಂಗೆನ್ ವಿಶ್ವವಿದ್ಯಾಲಯ, ರೈಸ್ ವಿಶ್ವವಿದ್ಯಾಲಯ (ಹ್ಯೂಸ್ಟನ್, ಅಮೇರಿಕಾ), ಟೋಕಿಯೋ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಡಾ. ಸೋನಕರ್ ಮಹತ್ವದ ಸಂಶೋಧನೆ ಮಾಡಿದ್ದಾರೆ. ಭಾರತದ ಮಾಜಿ ರಾಷ್ಟ್ರಪತಿ ಮತ್ತು ವಿಶ್ವವಿಖ್ಯಾತ ವಿಜ್ಞಾನಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಡಾ. ಸೋನಕರ್ ಅವರ ಸಂಶೋಧನೆಯನ್ನು ಶ್ಲಾಘಿಸಿದ್ದರು.
ಡಾ. ಸೋನಕರ್ ಅವರ ಸಂಶೋಧನೆಯ ಕೆಲವು ಸೂತ್ರಗಳು!
1. ಮಾನವ ನಿರ್ಮಿತ ಮಾಲಿನ್ಯದ ಅಂಶಗಳನ್ನು ನಾಶಮಾಡುವ 1 ಸಾವಿರ 100 ರೀತಿಯ ಬ್ಯಾಕ್ಟೀರಿಯೋಫೇಜ್‌ಗಳು ಗಂಗಾ ಜಲದಲ್ಲಿ ಕಂಡುಬರುತ್ತವೆ. ಬ್ಯಾಕ್ಟೀರಿಯೋಫೇಜ್‌ಗಳು ತಮ್ಮಗಿಂತ 50 ಪಟ್ಟು ದೊಡ್ಡದಾದ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶಮಾಡಿ ತಾವೂ ನಾಶವಾಗುತ್ತವೆ. ಆದ್ದರಿಂದ ಗಂಗೆಯನ್ನು ‘ಸೆಕ್ಯುರಿಟಿ ಗಾರ್ಡ್’ ಎಂದು ಕರೆಯಲಾಗುತ್ತದೆ.
2. ಮಹಾಕುಂಭದಲ್ಲಿ ಕೋಟ್ಯಂತರ ಜನರು ಗಂಗೆಯಲ್ಲಿ ಸ್ನಾನ ಮಾಡಿದರೂ ಗಂಗಾ ಜಲವು ರೋಗಾಣುಗಳಿಂದ ಮುಕ್ತವಾಗಿತ್ತು. ಗಂಗೆಯ ಬ್ಯಾಕ್ಟೀರಿಯೋಫೇಜ್‌ಗಳು ತಕ್ಷಣ ಸಕ್ರಿಯಗೊಂಡು ರೋಗಾಣುಗಳನ್ನು ನಾಶಮಾಡುತ್ತವೆ.
3. ಬ್ಯಾಕ್ಟೀರಿಯೋಫೇಜ್‌ಗಳು ಕೇವಲ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಮಾತ್ರ ನಾಶಮಾಡದೇ ಒಳ್ಳೆಯ ಬ್ಯಾಕ್ಟೀರಿಯಾಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ.
4. ಇವು ನಿರ್ದಿಷ್ಟ ರೀತಿಯ ಬ್ಯಾಕ್ಟೀರಿಯಾಗಳನ್ನು ಗುರಿಯಾಗಿಸುತ್ತವೆ ಮತ್ತು ಗಂಗಾ ಜಲದ ಶುದ್ಧೀಕರಣವು ಸಮುದ್ರದ ನೈಸರ್ಗಿಕ ಶುದ್ಧೀಕರಣ ಪ್ರಕ್ರಿಯೆಯಂತೆ ಆಗುತ್ತದೆ.
5. ಬ್ಯಾಕ್ಟೀರಿಯೋಫೇಜ್‌ಗಳನ್ನು ವೈದ್ಯಕೀಯ ಕ್ಷೇತ್ರದಲ್ಲಿ ಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಬಹುದು.
6. ಗಂಗೆಯಲ್ಲಿರುವ ನೈಸರ್ಗಿಕ ಶುದ್ಧೀಕರಣ ಸಾಮರ್ಥ್ಯದಿಂದ ಮನುಷ್ಯನು ಕೂಡಾ ಪ್ರಕೃತಿಯೊಂದಿಗೆ ಸಾಮರಸ್ಯವನ್ನು ಸಾಧಿಸಬೇಕು, ಇಲ್ಲದಿದ್ದರೆ ಪ್ರಕೃತಿಯು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಹುದು.