|
ಶಿಮ್ಲಾ (ಹಿಮಾಚಲ ಪ್ರದೇಶ) – ಇಲ್ಲಿಯ ಸಂಜೌಲಿ ಮಸೀದಿಯ ೩ ಅಕ್ರಮ ಮಹಡಿಗಳು ಕೆಡವಲು ಆದೇಶ ನೀಡಿದ ನಂತರ ಕಳೆದ ೪ ತಿಂಗಳಲ್ಲಿ ಅದರ ಪ್ರಕಾರ ಕ್ರಮ ಕೈಗೊಳ್ಳದೆ ಇರುವುದರಿಂದ ಮತ್ತೊಮ್ಮೆ ವಿವಾದ ಆರಂಭವಾಗಿದೆ. ಸಿವಿಲ್ ಸೊಸೈಟಿ ಮತ್ತು ದೇವಭೂಮಿ ಸಂಘರ್ಷ ಸಮಿತಿ ಇವರು ಈ ಪ್ರಕರಣವನ್ನು ಶಿಮ್ಲಾ ಮಹಾನಗರ ಪಾಲಿಕೆಯಲ್ಲಿ ಮನವಿ ಪ್ರಸ್ತುತಪಡಿಸಿದ್ದಾರೆ. “೪ ತಿಂಗಳ ಹಿಂದೆ ಮಹಾನಗರ ದಂಡಾಧಿಕಾರಿ ನ್ಯಾಯಾಲಯವು ಮಸೀದಿಯ ಅಕ್ರಮ ಕಟ್ಟಡ ಕೆಡವಲು ಆದೇಶ ನೀಡಿತ್ತು; ಆದರೆ ೪ ತಿಂಗಳು ಕಳೆದರೂ ಕೂಡ ಈ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಮಸೀದಿಯಲ್ಲಿ ನಡೆದಿರುವ ಅಕ್ರಮ ಕಾಮಗಾರಿ ೧೫ ದಿನದಲ್ಲಿ ಕೆಡವದಿದ್ದರೆ ಸಂಜೌಲಿ ಮಾರುಕಟ್ಟೆ ಮುಚ್ಚಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಮತ್ತು ಅದಕ್ಕಾಗಿ ಮಹಾನಗರ ಪಾಲಿಕೆಯ ಆಡಳಿತ ಜವಾಬ್ದಾರ ಇರುವುದು,” ಎಂದು ಎಚ್ಚರಿಕೆ ನೀಡಲಾಗಿದೆ. (ಈ ರೀತಿಯ ಪ್ರತಿಭಟನೆಯ ಎಚ್ಚರಿಕೆಯ ದಪ್ಪ ಚರ್ಮದ ಕಾಂಗ್ರೆಸ್ ಸರಕಾರದ ಮೇಲೆ ಯಾವ ಪರಿಣಾಮ ಬೀರುವುದು ? ಈ ಹಿಂದೆ ಕೂಡ ಕೆಲವು ತಿಂಗಳು ಪ್ರತಿಭಟನೆ ನಡೆಸಲಾಗಿತ್ತು ! – ಸಂಪಾದಕರು)
“If the illegal construction is not demolished within 15 days, there will be a major protest!” – A warning from the Citizens of Shimla
Incident of an illegal mosque being constructed in Shimla (Himachal Pradesh)
No action taken even after 4 months of the court order!
It is not… https://t.co/RdY14Er271 pic.twitter.com/SbNBFZOuNU
— Sanatan Prabhat (@SanatanPrabhat) February 19, 2025
೧. ಕಳೆದ ವರ್ಷ ಈ ಪ್ರಕರಣದಲ್ಲಿ ವಿವಾದ ಹೆಚ್ಚಾದ ನಂತರ ಶಿಮ್ಲಾ ಮಹಾನಗರ ಪಾಲಿಕೆಯ ಆಯುಕ್ತರ ನ್ಯಾಯಾಲಯವು ಈ ಮಸೀದಿಯ ೩ ಮಹಡಿಗಳು ಅಕ್ರಮವಾಗಿರುವುದು ಅವುಗಳನ್ನು ಕೆಡುವಲು ಆದೇಶ ನೀಡಿತ್ತು. ಆಯುಕ್ತರ ನ್ಯಾಯಾಲಯವು ವಕ್ಫ್ ಬೋರ್ಡ್ ಮತ್ತು ಮಸೀದಿ ಸಮಿತಿಯ ಅಧ್ಯಕ್ಷರಿಗೆ ೨ ತಿಂಗಳಲ್ಲಿ ಈ ಆದೇಶದ ಕಾರ್ಯಾಚಾರಣೆ ಮಾಡಲು ಹೇಳಿತ್ತು.
೨. ಹಿಮಾಚಲ ಕಾಂಗ್ರೆಸ್ ಸರಕಾರದಲ್ಲಿ ಸಚಿವ ಅನಿರುದ್ಧ ಸಿಂಹ ಇವರು ವಿಧಾನ ಸಭೆಯಲ್ಲಿ, ಅನುಮತಿ ಇಲ್ಲದೆ ಮಸೀದಿಯಲ್ಲಿ ಹೆಚ್ಚುವರಿ ಕಾಮಗಾರಿ ಮಾಡಲಾಗಿದೆ ಎಂದು ಹೇಳಿದ್ದರು. ಆಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಕಳೆದ ಸಪ್ಟೆಂಬರ್ ೧೨ ರಂದು ಮಸೀದಿಯ ಅಕ್ರಮಭಾಗ ನೆಲೆಸಮ ಮಾಡುವುದಕ್ಕಾಗಿ ನಡೆದಿರುವ ಪ್ರತಿಭಟನೆಯಲ್ಲಿ ೧೦ ಜನರು ಗಾಯಗೊಂಡಿದ್ದರು.
ಸಂಪಾದಕೀಯ ನಿಲುವು
|