‘ಛಾವಾ’ ಈ ಹಿಂದಿ ಚಲನಚಿತ್ರ ಫೆಬ್ರವರಿ 14 ರಂದು ಅಂದರೆ ‘ವ್ಯಾಲೆಂಟೈನ್ಸ್ ಡೇ’ ಎಂಬ ಅಸಭ್ಯ ಪದ್ಧತಿಯನ್ನು ಮುರಿಯುವಲ್ಲಿ ಮಹಾನ್ ಕಾರ್ಯವನ್ನು ಮಾಡಿದೆ. ಈ ಚಲನಚಿತ್ರವು ಮೊದಲ ಬಾರಿಗೆ ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜರ ಅದ್ವಿತೀಯ ಶೌರ್ಯ, ಅಪರಿಮಿತ ಧೈರ್ಯ, ಸ್ವರಾಜ್ಯದ ಬಗೆಗಿನ ಚರಮಾತೀತ ನಿಷ್ಠೆ, ಜಾಜ್ವಲ್ಯ ಧರ್ಮಪ್ರೇಮ ಮತ್ತು ಮೊಗಲರ ಮೃಗೀಯ ಕ್ರೌರ್ಯವನ್ನು ಮೊದಲ ಬಾರಿಗೆ ಇಡೀ ಪ್ರಪಂಚಕ್ಕೆ ತಿಳಿಸಿತು. ಚಲನಚಿತ್ರಗಳ ಮೂಲಕ ಹಿಂದೂ ಧರ್ಮ ಮತ್ತು ದೇವತೆಗಳನ್ನು ನಿರಂತರವಾಗಿ ಅಪಹಾಸ್ಯ ಮಾಡುವ, ಉದ್ದೇಶಪೂರ್ವಕವಾಗಿ ಹಿಂದೂಗಳನ್ನು ಭಯೋತ್ಪಾದಕರಂತೆ ಚಿತ್ರಿಸುವ ಮತ್ತು ಸತ್ಯ ಕಥೆಯನ್ನು ತಿರುಚಿ ‘ಆಸಿಡ್’ ಎರಚಿದ ಮುಸ್ಲಿಂ ವ್ಯಕ್ತಿಯ ಹೆಸರನ್ನು ಬದಲಾಯಿಸಿ ಅವನನ್ನು ಹಿಂದೂ ಎಂದು ತೋರಿಸುವ ದುಷ್ಕೃತ್ಯ ಮಾಡುವ ಮೂಲಕ ಹಸಿರು ಸಮಾಜಕ್ಕೆ ಕೇಸರಿ ಪ್ರತ್ಯುತ್ತರವೇ ನಿರ್ದೇಶಕ ಲಕ್ಷ್ಮಣ್ ಉತ್ತೇಕರ್ ಇವರು ನೀಡಿದ್ದಾರೆ ಎಂದೆನಿಸುತ್ತದೆ. ಆದ್ದರಿಂದ, ಈ ಅದ್ಭುತ ಚಿತ್ರಕ್ಕಾಗಿ ಉತ್ತೇಕರ ಮತ್ತು ಅವರ ಸಹೋದ್ಯೋಗಿಗಳನ್ನು ಅಭಿನಂದಿಸಲೇಬೇಕು !
ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜರ ಇತಿಹಾಸ ಇಲ್ಲಿಯವರೆಗೆ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿತ್ತು. ಅವರ ಕುರಿತು ಧಾರಾವಾಹಿಗಳನ್ನು ನಿರ್ಮಿಸುವವರನ್ನು ಕೆಲವು ಮುಸ್ಲಿಂ ಓಲೈಕೆ ಮಾಡುವ ಆಡಳಿತಗಾರರು ತಮ್ಮ ಬಗ್ಗೆ ರಹಸ್ಯವಾಗಿ ವಿರೋಧಿಸಿದರು. ‘1689 ಸಂಭಾಜಿ’ಯಂತಹ ಚಲನಚಿತ್ರಗಳನ್ನು ಹಣಕಾಸಿನ ಕೊರತೆಯಿಂದಾಗಿ ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾದರು. ಶಂಭುರಾಜನ ಪಾತ್ರವನ್ನು ನಿರ್ವಹಿಸಿದ ಕಲಾವಿದರನ್ನು ಗುರಿಯಾಗಿಸಿಕೊಂಡು, ಮರಾಠಿ ಚಲನಚಿತ್ರ ಮತ್ತು ರಂಗಭೂಮಿ ಉದ್ಯಮವನ್ನು ಜಾತ್ಯತೀತವಾದಿಗಳ ಸೆರಗಿಗೆ ಕಟ್ಟಿಹಾಕಲಾಗಿತ್ತು. ಕಳೆದ ಕೆಲವು ವರ್ಷಗಳಿಂದ ಮರಾಠಿ ಚಲನಚಿತ್ರ ನಿರ್ಮಾಪಕರು ಈ ಅಡೆತಡೆಗಳನ್ನು ಮುರಿಯಲು ಪ್ರಯತ್ನಿಸಿದ್ದಾರೆ; ಆದರೆ ಅವರಿಗೆ ಸೀಮಿತ ಯಶಸ್ಸು ಸಿಕ್ಕಿತು. ಇದಕ್ಕೆ ವ್ಯತಿರಿಕ್ತವಾಗಿ, ‘ಛಾವಾ’ ಚಿತ್ರವು ಎಲ್ಲಾ ನಿರ್ಬಂಧಗಳನ್ನು ಮುರಿದು ಜಾತ್ಯತೀತರಿಗೆ ಬಲವಾದ ಹೊಡೆತ ನೀಡಿದೆ. ‘ವ್ಯಾಲೆಂಟೈನ್ಸ್ ಡೇ’ದ ಸ್ವಪ್ನಮಯ ಜೀವನದಲ್ಲಿ ಮುಳುಗಿರಬಹುದಾದ ಯುವಕರು, ಶಂಭುರಾಜ ಅವರ ಅಸಾಧಾರಣ ರಾಷ್ಟ್ರ ಮತ್ತು ಧರ್ಮ ಪ್ರೇಮದ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಇವೆಲ್ಲವೂ ಶಂಭುರಾಜ್ ಅವರ ಮಹೋನ್ನತ ಜೀವನಗಾಥೆಯನ್ನು ಸಪ್ತ ಸಾಗರದಾಚೆಗೆ ಕೊಂಡೊಯ್ಯಲು ನಿಪುಣ ನಿರ್ದೇಶಕ ಲಕ್ಷ್ಮಣ್ ಉತೇಕರ್ ಅವರ ಯಶಸ್ವಿ ಪ್ರಯತ್ನಗಳ ಅನುಬಂಧಗಳೆಂದು ಹೇಳಲೇಬೇಕು !
ಸಂಕಲನಕಾರರು : ಶ್ರೀ . ಸಾಗರ ನಿಂಬಾಳಕರ

1. ಚಲನಚಿತ್ರದ ವೈಶಿಷ್ಟ್ಯಗಳು!
ಅ. ಚಲನಚಿತ್ರ ಕಥೆಯನ್ನು ಕೈ. ಶಿವಾಜಿ ಸಾವಂತ್ ಅವರ ಕಾದಂಬರಿ ‘ಛಾವಾ’ ದಿಂದ ತೆಗೆದುಕೊಳ್ಳಲಾಗಿದೆ; ಆದಾಗ್ಯೂ, ಕಾದಂಬರಿಯಲ್ಲಿನ ವಿಶಿಷ್ಟ ಪ್ರಸಂಗಗಳು ಆಯ್ಕೆ ಅದ್ಭುತವಾಗಿದೆ. ಋಷಿ ವೀರಮಾನಿ ಮತ್ತು ಇರ್ಷಾದ್ ಕಾಮಿಲ್ ಬರೆದ ಸಂಭಾಷಣೆಗಳು ಹೆಚ್ಚು ಕ್ಷಾತ್ರತೇಜಸ್ಸಿನಿಂದ ತುಂಬಿದ್ದು, ತೀಕ್ಷ್ಣವಾಗಿವೆ.

ಆ. ಆರಂಭದಲ್ಲಿ, ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಮಾಹಿತಿಯನ್ನು ಸಂಕ್ಷಿಪ್ತವಾಗಿ ನಿರೂಪಿಸಲಾಗಿದೆ. ತದನಂತರ ಪ್ರಾರಂಭವಾದ ಮೊದಲ ಯುದ್ಧದ ಪ್ರಸಂಗದಿಂದಲೇ ಪ್ರೇಕ್ಷಕರ ಗಮನವನ್ನು ಸೆಳೆಯುತ್ತದೆ.

ಇ. ಈ ಚಲನಚಿತ್ರದ ಆರಂಭದಲ್ಲಿ ಶಂಭುರಾಜರ ಜಾತ್ಯತೀತತೆಯನ್ನು ತೋರಿಸುವ ಒಂದು ಘಟನೆ ಇದೆ; ಆದರೆ, ತದನಂತರ ಎಲ್ಲಿಯೂ ಜಾತ್ಯತೀತತೆಯನ್ನು ಎಲ್ಲಿಯೂ ಹೊಗಳಿರುವುದಿಲ್ಲ. ಇಂದು, ಅನೇಕ ಜನರು ಛತ್ರಪತಿ ಶಿವಾಜಿ ಮಹಾರಾಜರನ್ನು ‘ಜಾತ್ಯತೀತ’ ಎಂದು ಬಿಂಬಿಸಲು ಉದ್ದೇಶಪೂರ್ವಕವಾಗಿ ಕೆಲವು ಮುಸ್ಲಿಮರನ್ನು ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿ ತೋರಿಸುತ್ತಾರೆ; ಆದರೆ, ಈ ಚಿತ್ರದಲ್ಲಿ ಅಂತಹ ಯಾವುದೇ ದೃಶ್ಯವಿಲ್ಲ.
ಈ. ಯುದ್ಧದ ದೃಶ್ಯಗಳು ಇಂದಿನ ಯುವಕರಿಗೆ ಆಕರ್ಷಿಸುವಂತೆ ಇದ್ದರೂ, ಅದರಿಂದ ಶಂಭುರಾಜ್ ಅವರ ಶೌರ್ಯ, ತಂತ್ರ ಮತ್ತು ಶಕ್ತಿಯನ್ನು ಜನಸಾಮಾನ್ಯರ ಮನಸ್ಸಿನಲ್ಲಿ ತುಂಬುವಲ್ಲಿ ಯಶಸ್ವಿಯಾಗಿವೆ. ಮರಾಠಾ ಇತಿಹಾಸದ ಅವಿಭಾಜ್ಯ ಅಂಗವಾದ ಗೆರಿಲ್ಲಾ ಯುದ್ಧವನ್ನು ಈ ಚಿತ್ರದಲ್ಲಿ ವಿಶೇಷವಾಗಿ ಎತ್ತಿ ತೋರಿಸಲಾಗಿದೆ.
ಉ. ಔರಂಗಜೇಬ ಎಷ್ಟು ಹಿಂಸಾತ್ಮಕ, ಕ್ರೂರಿ, ಕೀಳು ಮನಸ್ಸಿನವನು ಮತ್ತು ನೀಚನಾಗಿದ್ದನು ಎಂಬುದನ್ನು ಈ ಚಿತ್ರ ಬಹಳ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿದೆ. ಇದು ಸ್ವಂತ ತಂದೆ, ಸಹೋದರರು ಮತ್ತು ಪುತ್ರರ ಬಲಿ ನೀಡುವ ಮೂಲಕ ಅಧಿಕಾರವನ್ನು ಭೋಗಿಸಲು ಮೊಘಲರ ಹಸಿರು ಇತಿಹಾಸವನ್ನು ಅತ್ಯಂತ ಸಹಜವಾಗಿ ಜನತೆಯ ವರೆಗೆ ತಲುಪಿಸುತ್ತದೆ.
ಊ. ಸ್ವರಾಜ್ಯದ ಶತ್ರುಗಳಾಗಿದ್ದ ಗಣೋಜಿ ಮತ್ತು ಕನ್ಹೋಜಿ ಶಿರ್ಕೆಯವರಂತಹ ದುಷ್ಟ ಪ್ರವೃತ್ತಿಗಳ ವಿರುದ್ಧದ ಕೋಪವು ಪ್ರೇಕ್ಷಕರಲ್ಲಿ ಹರಡುತ್ತದೆ.
ಎ. ಚಲನಚಿತ್ರದಲ್ಲಿ ಎಲ್ಲಾ ಯುದ್ಧಗಳನ್ನು ವಿಶಿಷ್ಟವಾಗಿ ಚಿತ್ರಿಸಲಾಗಿದೆ. ಸಂಗಮೇಶ್ವರ ಕದನ ಮತ್ತು ಶಂಭುರಾಜನ ಸೆರೆಹಿಡಿಯುವಿಕೆಯ ಸಮಯದಲ್ಲಿ ಮೊಘಲರ ಶೋಚನೀಯ ಸ್ಥಿತಿಯು ವಿಶೇಷವಾಗಿ ಪರಿಣಾಮಕಾರಿಯಾಗಿವೆ. ಶಂಭುರಾಜ್ ಅವರ ಭಯಾನಕ ದೃಶ್ಯಗಳು, ಆಗಿನ ಮತ್ತು ನಂತರ ಸೆರೆವಾಸ ಅನುಭವಿಸಿದಾಗ, ಇಡೀ ಚಿತ್ರಮಂದಿರವೇ ನಡುಗಿಸುತ್ತದೆ. ಈ ಎಲ್ಲಾ ದೃಶ್ಯಗಳು, ಕಾಲ್ಪನಿಕ ಕಥೆಗಳಲ್ಲಿ ನಾಯಕನನ್ನು ಸರ್ವೋಚ್ಚ ಎಂದು ತೋರಿಸಲು ಇತರ ಚಲನಚಿತ್ರಗಳಲ್ಲಿ ಬಿಂಬಿಸುವ ದೃಶ್ಯಗಳಿಗಿಂತ ಈ ಎಲ್ಲಾ ದೃಶ್ಯಗಳು ಹೆಚ್ಚು ಎದ್ದು ಕಾಣುತ್ತವೆ; ಏಕೆಂದರೆ ಅದು ಶಂಭುರಾಜನ ಅದ್ವಿತೀಯ ಶೌರ್ಯ, ಸತ್ಯದ ಮತ್ತು ಧರ್ಮಪ್ರೀತಿಯ ಸ್ಪರ್ಶವನ್ನು ಹೊಂದಿದೆ.
ಏ. ಪ್ರಾರಂಭದಲ್ಲಿ ಶಂಭುರಾಜನ ವಿಜಯಗಾಥೆಯನ್ನು ಹೊಂದಿರುವ ಚಲನಚಿತ್ರ ಮುಕ್ತಾಯದತ್ತ ಸಾಗುವಾಗ ಅವನ ಅಪಾರ ತ್ಯಾಗಕ್ಕೆ ಎಲ್ಲರ ತಲೆಬಾಗುವಂತೆ ಮಾಡುತ್ತದೆ. ಪ್ರಾರಂಭದಲ್ಲಿ ಶಂಭುರಾಜನ ವಿಜಯ ತೃಷೆಯ ರಥವನ್ನು ನೋಡಿ ಆರಂಭದಲ್ಲಿ ಚಪ್ಪಾಳೆ ತಟ್ಟಿ ಶಿಳ್ಳೆ ಹೊಡೆದ ಯುವಕ, ರಾಜನ ಚಿತ್ರಹಿಂಸೆಯನ್ನು ನೋಡಿ ಮೂಕನಾಗುತ್ತಾನೆ. ಎಲ್ಲರ ಹೃದಯವನ್ನೂ ಹಿಂಡುತ್ತದೆ. ಮೊಘಲರ ಕ್ರೌರ್ಯದ ವಿರುದ್ಧ ರೋಷದ ಜ್ವಾಲೆಯು ಪಾದದಿಂದ ಮಸ್ತಕಕ್ಕೆ ಏರುತ್ತದೆ. ಪ್ರೇಕ್ಷಕರು ಹಿಂದೂ ಸ್ವರಾಜ್ಯದ ಉಸಿರನ್ನು ಅನುಭವಿಸುತ್ತಾರೆ.
2. ಚಲನಚಿತ್ರ ನಟರ ಅದ್ಭುತ ನಟನೆ!

ಅ. ವಿಕ್ಕಿ ಕೌಶಲ್ ‘ಶಂಭುರಾಜೆ’ ಚಿತ್ರದಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಪಾತ್ರವನ್ನು ನಿರ್ವಹಿಸಿದ್ದಾರೆ. ಇದಕ್ಕಾಗಿ ಅವರು ಪಟ್ಟ ಕಠಿಣ ಪರಿಶ್ರಮವೆಂದರೆ ತೂಕ ಹೆಚ್ಚಿಸಿಕೊಳ್ಳುವುದು, ಕತ್ತಿವರಸೆ ಕಲಿಯುವುದು ಮತ್ತು ಕುದುರೆ ಸವಾರಿ ಕಲಿಯುವುದರಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಶಂಭುರಾಜೆ ಪಾತ್ರವನ್ನು ಎಷ್ಟು ವಾಸ್ತವಿಕವಾಗಿ ನಟಿಸಿದ್ದಾರೆಂದರೆ ಅದು ಅವರ ನರನಾಡಿಗಳಲ್ಲಿಯೇ ಹರಿದಾಡುತ್ತಿರುವಂತೆ ತೋರುತ್ತದೆ. ಶಂಭುರಾಜನನ್ನು ಜೈಲಿಗೆ ಹಾಕಿದ ನಂತರ ಅವನ ಕೋಪ, ದೇಹವು ನೋವಿನಲ್ಲಿದ್ದಾಗಲೂ ಜಾಗೃತವಾಗಿರುವ ಅವನ ನಿರ್ಭೀತ ವರ್ತನೆ, ನಾಲಿಗೆ ಕತ್ತರಿಸಿದ ನಂತರವೂ ಅವನ ಕಣ್ಣುಗಳಿಂದ ಹೊರಬರುವ ಬೆಂಕಿ, ದೇಶಭಕ್ತಿಯ ಜ್ವಾಲೆ ಮತ್ತು ಅವನ ಜ್ವಲಂತ ಧರ್ಮ ನಿಷ್ಠೆ ಎಲ್ಲವೂ ಪ್ರೇಕ್ಷಕರನ್ನು ಆಕರ್ಷಿಸುತ್ತವೆ. ಇಂದಿನ ಪೀಳಿಗೆಯ ಅತ್ಯಂತ ಪ್ರತಿಭಾನ್ವಿತ, ಅಧ್ಯಯನಶೀಲ ಮತ್ತು ವಾಸ್ತವವನ್ನು ಹಿಡಿದು ಪಾತ್ರದೊಂದಿಗೆ ಏಕರೂಪರಾಗುವ ವಿಶೇಷ ನಟರೆಂದು ವಿಕಿ ಕೌಶಲ್ ಉಲ್ಲೇಖಿಸಬೇಕು.

ಆ. ಶಾಂತವಾಗಿ ಕಾಣುವ ವೃದ್ಧನು ದ್ವೇಷಕ್ಕೆ ಒಳಗಾಗಿ ಯಾವ ರೀತಿ ಹೆದರಿಕೆಯಿಲ್ಲದ ಕೊಲೆಗಾರನಾಗುತ್ತಾನೆ ಎನ್ನುವುದು ಔರಂಗಜೇಬನ ಪಾತ್ರವನ್ನು ನಿರ್ವಹಿಸಿರುವ ಅಕ್ಷಯ್ ಖನ್ನಾ ಸುಂದರವಾಗಿ ಅಭಿನಯಿಸಿದ್ದಾರೆ. ಅಕ್ಷಯ್ ಖನ್ನಾ ಅವರ ಕೊಡುಗೆಯು ಮೊಘಲರ ಹಸಿರು ಮನೋಭಾವದ ಬಗ್ಗೆ ಪ್ರೇಕ್ಷಕರಲ್ಲಿ ಆಕ್ರೋಶವನ್ನು ಉಂಟುಮಾಡುತ್ತದೆ.

ಇ. ರಶ್ಮಿಕಾ ಮಂದಣ್ಣ ಅವರು ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಒಬ್ಬ ಹಿಂದೂ ಮಹಾರಾಣಿಯ ಆತ್ಮಸಂಯಮ, ಅತ್ಯುತ್ತಮ ರಾಜಕೀಯ ತಿಳುವಳಿಕೆ, ಮನುಷ್ಯನನ್ನು ಗುರುತಿಸುವ ಕಲೆ, ತತ್ವನಿಷ್ಠೆ ಮತ್ತು ಕೇವಲ ಪತಿಯ ಮನೋಭಾವ ಮಾತ್ರವಲ್ಲದೆ, ಸ್ವರಾಜ್ಯದ ಅಗತ್ಯವನ್ನು ಅರಿತು ದುಃಖವನ್ನು ಮರೆಮಾಚುವ ಧೈರ್ಯಶಾಲಿ ಮಹಾರಾಣಿ ಈ ಎಲ್ಲಾ ಛಾಯೆಗಳನ್ನು ರಶ್ಮಿಕಾ ಅವರು ಸಮರ್ಥವಾಗಿ ವ್ಯಕ್ತಪಡಿಸಿದ್ದಾರೆ.
ಈ. ಇತರ ಕಲಾವಿದರಲ್ಲಿ ಅಶುತೋಷ್ ರಾಣಾ (ಸೇನಾಪತಿ ಹಂಬೀರರಾವ್ ಮೋಹಿತೆ), ವಿನೀತ್ ಕುಮಾರ್ ಸಿಂಗ್ (ಕವಿ ಕಲಶ), ದಿವ್ಯಾ ದತ್ತಾ (ಮಹಾರಾಣಿ ಸೋಯರಾಬಾಯಿ), ಸಂತೋಷ್ ಜುವೇಕರ್ (ರಾಯಾಜಿ ಮಾಲ್ಗೆ) ಮುಂತಾದವರ ಕೆಲಸಗಳು ಸಹ ಗಮನಾರ್ಹವಾಗಿವೆ.
3. ಇತರ ಪ್ರಮುಖ ಅಂಶಗಳು

ಅ. ಚಿತ್ರದಲ್ಲಿನ ಶಂಭುರಾಜರ ಸಂಪೂರ್ಣ ಪಾತ್ರವು ಅನುಕರಣೀಯವಾಗಿದೆ. ಶಂಭುರಾಜರ ನಾಯಕತ್ವ, ನಿರ್ಣಯ ತೆಗೆದುಕೊಳ್ಳುವ ಕೌಶಲ್ಯ, ಧರ್ಮಾಭಿಮಾನ, ಸಹಿಷ್ಣುತೆ, ಅದಮ್ಯ ಇಚ್ಛಾಶಕ್ತಿ, ಕ್ಷಾತ್ರ ತೇಜ, ಬ್ರಾಹ್ಮ ತೇಜ, ದೇವರಲ್ಲಿನ ಶ್ರದ್ಧೆ ಇತ್ಯಾದಿ ಗುಣಗಳನ್ನು ಇಲ್ಲಿ ಕಲಿಯಬಹುದು. ಮುಂಭಾಗದಿಂದ ಬರುವ ಶತ್ರುವಿಗಿಂತ ನಮ್ಮ ಗುಂಪಿನಲ್ಲಿರುವ ವಿಶ್ವಾಸಘಾತುಕರು ಎಷ್ಟು ಅಪಾಯಕಾರಿ ಎಂದು ಈ ಚಿತ್ರವು ಪ್ರಮುಖ ಪಾಠವನ್ನು ನೀಡುತ್ತದೆ.
ಆ. ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಎ.ಆರ್. ರೆಹಮಾನ್ ಅವರು ನೀಡಿದ್ದಾರೆ. ಶಂಭುರಾಜರ ಬಗ್ಗೆ ‘ತೂಫಾನ್’ ಹಾಡು ಶ್ರವಣೀಯವಾಗಿದೆ ಮತ್ತು ಸನ್ನಿವೇಶಕ್ಕೆ ಅನುಗುಣವಾಗಿ ಶಕ್ತಿಯನ್ನು ಸೃಷ್ಟಿಸುತ್ತದೆ. ಒಟ್ಟಾರೆಯಾಗಿ, ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತವು ಎಲ್ಲಾ ದೃಶ್ಯಗಳ ಮಾರಕತೆ ಮತ್ತು ಬೆಂಕಿಉರಿಯುವ ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಆಹ್ಲಾದಕರ ಅನುಭವವನ್ನು ನೀಡುತ್ತದೆ.
ಇ. ಚಿತ್ರಮಂದಿರದಲ್ಲಿ ಮೊದಲೇ ಕೇಸರಿ ಧ್ವಜಗಳನ್ನು ಹಾಕಲಾಗಿದೆ. ಅನೇಕ ಹಿಂದೂ ಯುವಕರ ಗುಂಪುಗಳು ಕೇಸರಿ ಧ್ವಜಗಳನ್ನು ಹಿಡಿದುಕೊಂಡು, ಕೇಸರಿ ಶಾಲುಗಳು, ವೇಷಭೂಷಣಗಳನ್ನು ಧರಿಸಿ, ಶಿವ-ಶಂಭು ಅವರ ಜಯಘೋಷಗಳನ್ನು ಮಾಡುತ್ತಾ ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಶಂಭುರಾಜರ ಪ್ರವೇಶದ ಸಮಯದಲ್ಲಿ ಚಿತ್ರಮಂದಿರದಲ್ಲಿ ಪ್ರಾರಂಭವಾಗುವ ಜಯಘೋಷ ಮತ್ತು ಕೊನೆಯಲ್ಲಿ ಹರಡುವ ಸ್ಮಶಾನ ಮೌನವು ಹಿಂದೂಗಳ ಜೀವಂತಿಕೆಯ ಸಂಕೇತವಾಗಿದೆ. ಇದು ಒಂದು ರೀತಿಯಲ್ಲಿ ‘ವ್ಯಾಲೆಂಟೈನ್ಸ್ ಡೇ’ಯನ್ನು ಬದಿಗೊತ್ತಿ ಹಿಂದುತ್ವದ ಅಲೆಗಳನ್ನು ತರುವ ಈ ಚಿತ್ರದ ಬಗ್ಗೆ ಪ್ರತಿಯೊಬ್ಬ ಹಿಂದೂ ಕೃತಜ್ಞರಾಗಿರಬೇಕು ! ಹಾಗೆಯೇ, ಈ ಚಿತ್ರಕ್ಕೆ ಬಂದ ಮತಾಂಧರು ಮತ್ತು ಔರಂಗಜೇಬ ಪ್ರೇಮಿಗಳು ಯಾವುದೇ ಕಾರಣವನ್ನು ಕಂಡುಹಿಡಿದು ಹಿಂದೂಗಳ ಮೇಲೆ ದಾಳಿ ಮಾಡಬಹುದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು! ಆದ್ದರಿಂದ ಹಿಂದೂಗಳು ಚಿತ್ರವನ್ನು ನೋಡುವಾಗ ಸರಿಯಾದ ಮುನ್ನೆಚ್ಚರಿಕೆ ಮತ್ತು ಜಾಗರೂಕತೆಯನ್ನು ವಹಿಸಬೇಕು!
#Chhaava Review : A Compelling Movie that powerfully depicts the greatest sacrifice for Dharma!
|
4. ಚಿತ್ರದ ಸರ್ವಸ್ವ ‘ಲಕ್ಷ್ಮಣ್ ಉತ್ತೇಕರ್’ ಅವರಿಗೆ ವಿಶೇಷ ಅಭಿನಂದನೆಗಳು!

ಲಕ್ಷ್ಮಣ್ ಉತ್ತೇಕರ್ ಅವರ ಚಿತ್ರ ನಿರ್ದೇಶನ ಅತ್ಯುತ್ತಮವಾಗಿದೆ. ಅವರ ಶಿವಾಜಿ ಮಹಾರಾಜ ಪ್ರೀತಿಯ ಪ್ರಜ್ಞೆ ಚಿತ್ರದ ಎಲ್ಲಾ ಸನ್ನಿವೇಶಗಳಲ್ಲಿಯೂ ಬರುತ್ತದೆ. ಅವರು ಹಿಂದೂಗಳ ಧರ್ಮ ಭಾವನೆಗಳನ್ನು ಗೌರವಿಸಿದ್ದಾರೆ. ಜಾತ್ಯತೀತವಾದಿಗಳು ಅಥವಾ ಔರಂಗಜೇಬನ ವಂಶಸ್ಥರು ಯಾವುದೇ ರೀತಿಯ ಟೀಕೆಗೆ ಅವಕಾಶ ನೀಡಬಾರದು ಅದರಲ್ಲೂ ಅವರು ಯಶಸ್ವಿಯಾಗಿದ್ದಾರೆ. ಚಲನಚಿತ್ರ ಮಾಧ್ಯಮವಾಗಿ ಅಗತ್ಯವಿರುವ ಸಾಧನ ಶುಚಿತ್ವವನ್ನು ಕಾಪಾಡಿಕೊಳ್ಳುವಾಗ ಈ ಶೌರ್ಯಗಾಥೆಯನ್ನು ಜಗತ್ತಿನಾದ್ಯಂತ ಯಾವುದೇ ಅಡೆತಡೆಯಿಲ್ಲದೆ ತಲುಪಿಸುವ ಅವರ ಉದ್ದೇಶವು ಈಡೇರಿದೆ. ವಿದೇಶಗಳಲ್ಲಿ ಅಲೆಕ್ಸಾಂಡರ್‌ನಂತಹ ಸ್ವಯಂ ಘೋಷಿತ ಹೋರಾಟಗಾರರ ಸಣ್ಣಪುಟ್ಟ ಯುದ್ಧಗಳನ್ನು ಚಲನಚಿತ್ರ ಮಾಧ್ಯಮದ ಮೂಲಕ ಜಗತ್ತಿನಾದ್ಯಂತ ತಲುಪಿಸಿ ಅದರ ವೇತನದ ಮೇಲೆ ಜೀವನ ನಡೆಸುವ ಚಲನಚಿತ್ರ ನಿರ್ಮಾಪಕರನ್ನು ಉತ್ತೇಕರ್ ಅವರು ಮುಳುಗಿಸಿದ್ದಾರೆ.
ಉತ್ತೇಕರ್ ಅವರಿಗೆ ವಿಶೇಷ ಅಭಿನಂದನೆಗಳು ಏಕೆಂದರೆ ಅವರು ಈ ಚಿತ್ರದಲ್ಲಿ ಶಂಭುರಾಜರ ಧರ್ಮವೀರತ್ವವನ್ನು ತೋರಿಸುವ ಒಂದು ಸಣ್ಣದಾದರೂ ಪ್ರಮುಖವಾದ ಸನ್ನಿವೇಶವನ್ನು ಹಾಕಿದ್ದಾರೆ. ಔರಂಗಜೇಬ್ ಶಂಭುರಾಜರಿಗೆ ಧರ್ಮವನ್ನು ಬದಲಾಯಿಸುವ ಆಮಿಷವನ್ನು ತೋರಿಸುತ್ತಾನೆ; ಆದರೆ ರಾಜನು ಅವನನ್ನು ತನ್ನ ಗುಂಪಿಗೆ ಬರುವಂತೆ ಆಹ್ವಾನಿಸುತ್ತಾನೆ. ಈ ಸನ್ನಿವೇಶವು ‘ಕಳೆದ ಹಲವು ವರ್ಷಗಳಿಂದ ದಾವೂದ್ ಇಬ್ರಾಹಿಂನಂತಹ ಭೂಗತ ಜಗತ್ತಿನ ಮತಾಂಧ ಗೂಂಡಾಗಳ ಕೈಯಲ್ಲಿ ಕೈಗೊಂಬೆಯಾಗಿರುವ ಮತ್ತು ಮತಾಂಧರ ಪರವಾಗಿ ಮಾತನಾಡಲು ಭಯೋತ್ಪಾದಕರಿಗೆ ಹಿಂದೂ ಹೆಸರುಗಳನ್ನು ನೀಡಿ ಅವರನ್ನು ಅಪಖ್ಯಾತಿಗೊಳಿಸುವ ‘ಬಾಲಿವುಡ್’ಗೆ ‘ಕೇಸರಿ ಪ್ರತ್ಯುತ್ತರ’ವಾಗಿದೆ.
5. ಎಲ್ಲರಿಗೂ ಕರೆ!
ಇಂತಹ ಚಿತ್ರ ಹಲವು ವರ್ಷಗಳಲ್ಲಿ ಒಮ್ಮೆ ಮಾತ್ರ ಬರುತ್ತದೆ. ಇಂದಿನವರೆಗೂ ಮತಾಂಧ ಮೊಘಲರ ಕ್ರೂರ ಮುಖವನ್ನು ಯಾರ ಮುಂದೆಯೂ ಬರಲು ಬಿಡಬಾರದು ಎಂದು ಈ ವಿಷಯದ ಬಗ್ಗೆ ಅನೇಕ ಕಾದಂಬರಿಗಳಿದ್ದರೂ ಯಾರೂ ಈ ವಿಷಯವನ್ನು ಕೈಗೆತ್ತಿಕೊಂಡಿರಲಿಲ್ಲ. ಈ ಚಿತ್ರವು ಹಿಂದಿ ಚಿತ್ರರಂಗದ ಮೇಲೆ ಬಂದ ಹಸಿರು ಪಾಚಿಯನ್ನು ತೆಗೆದುಹಾಕುವ ಆರಂಭವಾಗಬಹುದು. ಆದ್ದರಿಂದ ಮತ್ತು ಶಿವ-ಶಂಭುರಾಜರ ಅನುಯಾಯಿಗಳಾಗಿ ಈ ಶೌರ್ಯಗಾಥೆಯನ್ನು ನಾವು ನೋಡಲೇಬೇಕು. ಹಾಗೆಯೇ ಈ ಚಿತ್ರವನ್ನು ನಾವು ಚಿತ್ರಮಂದಿರಕ್ಕೆ ಹೋಗಿ ನೋಡಿದರೆ ಅದು ಚಲನಚಿತ್ರ ನಿರ್ಮಾಪಕರಿಗೆ ಆರ್ಥಿಕ ಲಾಭವನ್ನು ನೀಡುತ್ತದೆ ಮತ್ತು ಅವರನ್ನು ಬೆಂಬಲಿಸಿದಂತೆ ಆಗುತ್ತದೆ. ಎಲ್ಲಾ ಪೋಷಕರು ಮಕ್ಕಳ ಮುಂದೆ ರಾಷ್ಟ್ರ ಮತ್ತು ಧರ್ಮ ಪ್ರೀತಿಯ ಆದರ್ಶವನ್ನು ಸೃಷ್ಟಿಸಬೇಕು ಎಂದು ಮಕ್ಕಳಿಗೆ ಈ ಚಿತ್ರವನ್ನು ತೋರಿಸಬೇಕು!
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!