ಕುಟುಂಬ ಸದಸ್ಯರ ಭ್ರಷ್ಟಾಚಾರವನ್ನು ಬಯಲಿಗೆಳೆಯುವುದು ನಮ್ಮ ರಾಷ್ಟ್ರೀಯ ಕರ್ತವ್ಯವೇ ಆಗಿದೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಯುವಜನರೇ, ತಮ್ಮ ತಂದೆ-ತಾಯಿಯರು ಭ್ರಷ್ಟಾಚಾರ ಮಾಡಿ ಪಾಪ ಮಾಡುತ್ತಿದ್ದರೆ, ಅವರನ್ನು ಮುಂದಿನ ಪಾಪಗಳಿಂದ ದೂರವಿರಿಸಲು ಅವರ ಭ್ರಷ್ಟಾಚಾರವನ್ನು ಬಯಲಿಗೆಳೆಯಿರಿ ಮತ್ತು ನಿಮ್ಮ ರಾಷ್ಟ್ರಭಕ್ತಿ ಹೆಚ್ಚಿಸಿರಿ. ಪತಿಯ ಭ್ರಷ್ಟಾಚಾರ, ಅನೈತಿಕ ವರ್ತನೆ ಇತ್ಯಾದಿ ಗಳನ್ನು ಬಯಲಿಗೆಳೆಯುವುದೂ ರಾಷ್ಟ್ರಕ್ಕೆ ಸಂಬಂಧಿಸಿದ ಪತ್ನಿಯ ಕರ್ತವ್ಯವಾಗಿದೆ.’

ಸಾಧನೆಯ ಅಭಾವವಿರುವುದರಿಂದ ಬುದ್ಧಿಪ್ರಾಮಾಣ್ಯವಾದಿಗಳು ಕುರುಡರೇ !

‘ಕಣ್ಣು ತೆರೆದೊಡನೆ ಹೇಗೆ ಕಾಣಿಸು ತ್ತದೆಯೋ, ಅದೇ ರೀತಿ ಸಾಧನೆಯಿಂದ ಸೂಕ್ಷ್ಮದೃಷ್ಟಿ ಜಾಗೃತ ವಾಯಿತೆಂದರೆ ಸೂಕ್ಷ್ಮ ಆಯಾಮದಲ್ಲಿನ ಸಂಗತಿಗಳು ಕಾಣಿಸುತ್ತವೆ ಮತ್ತು ತಿಳಿಯುತ್ತವೆ. ಸಾಧನೆಯಿಂದ ಸೂಕ್ಷ್ಮದೃಷ್ಟಿ ಜಾಗೃತವಾಗುವ ತನಕ ಬುದ್ಧಿಪ್ರಾಮಾಣ್ಯವಾದಿ ಗಳು ಕುರುಡರೇ ಆಗಿರುತ್ತಾರೆ.’

ಸನಾತನ ಸಂಸ್ಥೆಯ ಆಶ್ರಮಗಳ ಅದ್ವಿತೀಯತೆ !

‘ಸಮಾಜದಲ್ಲಿ, ಕಾರ್ಯಾಲಯದಲ್ಲಿ ಮತ್ತು ಇತರೆಡೆಗಳಲ್ಲಿ ಅಹಂಕಾರ, ಸುಳ್ಳು ಹೇಳುವುದು, ಭ್ರಷ್ಟಾಚಾರ ಇತ್ಯಾದಿ ಸಂಗತಿಗಳ ಅನುಕರಣೆ ಮಾಡಲಾಗುತ್ತದೆ; ಆದರೆ ಸನಾತನದ ಆಶ್ರಮಗಳಲ್ಲಿ ಒಳ್ಳೆಯ ಗುಣಗಳ ಅನುಕರಣೆ ಮಾಡಲಾಗುತ್ತದೆ.’

ಸಂತರು ಮತ್ತು ಗುರುಗಳ ಕಾರ್ಯದಲ್ಲಿನ ವ್ಯತ್ಯಾಸ !

‘ಸಂತರು ಮಾಯೆಯಲ್ಲಿನ ಅಡಚಣೆ ಗಳನ್ನು ದೂರಗೊಳಿಸಿ ಸಾಧನೆಯ ಪರಿಚಯ ಮಾಡಿಕೊಡುತ್ತಾರೆ, ಆದರೆ ಗುರುಗಳು ಮೋಕ್ಷಪ್ರಾಪ್ತಿಯ ದಾರಿಯನ್ನು ತೋರಿಸುತ್ತಾರೆ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ