ಅಖಿಲ ಭಾರತೀಯ ಧರ್ಮಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯಿಂದ ‘ಹಿಂದೂ ರಾಷ್ಟ್ರ ಅಧಿವೇಶನ’ ಸಂಪನ್ನ !

ಪ್ರಯಾಗರಾಜ, ಜನವರಿ 31 (ಸುದ್ದಿ) – ಪ್ರಯಾಗರಾಜನಲ್ಲಿ ನಡೆಯುತ್ತಿರುವ ಮಹಾಕುಂಭಮೇಳ ಪ್ರಾರಂಭವಾದಾಗಿನಿಂದ, ಅನೇಕ ಸಂತರು, ಮಹಾಂತರು ಮತ್ತು ಮಹಾಮಂಡಲೇಶ್ವರರು ಹಿಂದೂ ರಾಷ್ಟ್ರವನ್ನು ಘೋಷಿಸಿದ್ದಾರೆ. ಇದರ ಮುಂದಿನ ಹೆಜ್ಜೆ ಇಡುತ್ತಾ, ಹಿಂದೂ ರಾಷ್ಟ್ರದ ಈ ಪರಿಕಲ್ಪನೆಯನ್ನು ಪ್ರತ್ಯಕ್ಷದಲ್ಲಿ ಕಾರ್ಯಗತಗೊಳಿಸಲು ಅನೇಕ ಸಂತರು, ಮಹಾಂತರು ಮತ್ತು ಮಹಾಮಂಡಲೇಶ್ವರರು ಮಹಾಕುಂಭ ಮೇಳದಲ್ಲಿ ಆಯೋಜಿಸಲಾದ ಹಿಂದೂ ರಾಷ್ಟ್ರ ಸಮಾವೇಶದಲ್ಲಿ ಒಂದುಗೂಡಿದರು. ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪಿಸಲು ನಿರ್ಧರಿಸಿ, ಅಧಿವೇಶನದಲ್ಲಿ ಒಂದುಗೂಡಿದ್ದ ಸಂತರು ಹಿಂದೂ ರಾಷ್ಟ್ರದ ಸ್ಥಾಪನೆಗೆ ಕೊಡುಗೆ ನೀಡಲು ನಿರ್ಧರಿಸಿದರು. ಸಂತರ ಧರ್ಮತೇಜ ಮತ್ತು ಕ್ಷಾತ್ರತೇಜ ಧರ್ಮಕಾರ್ಯಕ್ಕಾಗಿ ಪ್ರಾಪ್ತವಾಗಲು ಈ ಸಂದರ್ಭದಲ್ಲಿ ಅಧಿವೇಶನದಲ್ಲಿ ಉಪಸ್ಥಿತರಿದ್ದ ಧರ್ಮಪ್ರೇಮಿಗಳು ಪ್ರಾರ್ಥಿಸಿದರು ಮತ್ತು ಹಿಂದೂ ರಾಷ್ಟ್ರಕ್ಕಾಗಿ ಟೊಂಕಕಟ್ಟಿ ಕಾರ್ಯನಿರ್ವಹಿಸಲು ನಿರ್ಧರಿಸಿದರು.

ನವೆಂಬರ್ 30 ರಂದು, ‘ಅಖಿಲ ಭಾರತೀಯ ಧರ್ಮ ಸಂಘ’ ಮತ್ತು ‘ಹಿಂದೂ ಜನಜಾಗೃತಿ ಸಮಿತಿ’ ಜಂಟಿಯಾಗಿ ಸಂಯುಕ್ತವಾಗಿ ಸೆಕ್ಟರ್ 19 ರ ಮೋರಿ-ಸಂಗಮ ಲೋವರ್ ರಸ್ತೆಯಲ್ಲಿರುವ ಅಖಿಲ ಭಾರತೀಯ ಧರ್ಮ ಸಂಘದ ಶಿಬಿರದಲ್ಲಿ ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ ಹಿಂದೂ ರಾಷ್ಟ್ರ ಅಧಿವೇಶನವನ್ನು ಆಯೋಜಿಸಿದ್ದವು. ‘ನಾವು ಭಾರತವನ್ನು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡುತ್ತೇವೆ, ನಾವು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತೇವೆ’, ‘ಜೈ ಶ್ರೀ ರಾಮ’, ‘ಹರ ಹರ ಮಹಾದೇವ’ ಈ ಘೋಷಣೆಗಳೊಂದಿಗೆ ಸಂತರು, ಮಹಾಂತರು ಮತ್ತು ಗಣ್ಯರನ್ನು ಅಧಿವೇಶನದ ಸ್ಥಳದಲ್ಲಿ ಸ್ವಾಗತಿಸಲಾಯಿತು. ವಿವಿಧ ಅಖಾಡಗಳ ಸಂತರು- ಮಹಾಂತರು, ಮಹಾಮಂಡಲೇಶ್ವರರು ಮತ್ತು ಆಧ್ಯಾತ್ಮಿಕ ಸಂಸ್ಥೆಗಳ ಪ್ರತಿನಿಧಿಗಳು ಇವರೆಲ್ಲರಲ್ಲಿಯೂ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹೆಚ್ಚಿನ ಉತ್ಸಾಹವಿತ್ತು. ಈ ಉತ್ಸಾಹ ಎಲ್ಲರ ಮಾರ್ಗದರ್ಶನದಿಂದ ವ್ಯಕ್ತವಾಗುತ್ತಿರುವುದು ಕಾಣುತ್ತಿತ್ತು. ವಿವಿಧ ಸಂಘಟನೆಗಳ ಕೆಲಸಗಳು ಭಿನ್ನವಾಗಿದ್ದರೂ, ಹಿಂದೂ ರಾಷ್ಟ್ರ ಸ್ಥಾಪನೆ ಪ್ರತಿಯೊಬ್ಬರ ಅಜೆಂಡಾ (ಕಾರ್ಯಸೂಚಿ?)ಆಗಿದೆ. ಆದ್ದರಿಂದ, ಈ ಉದ್ದೇಶದಿಂದ ಸಂಘಟಿತರಾಗಿ ಕಾರ್ಯ ಮಾಡಬೇಕೆಂದು ಮಾರ್ಗದರ್ಶನದ ಮೂಲಕ ವಕ್ತಾರರು ಕರೆ ನೀಡಿದರು.

ಅಧಿವೇಶನ ಹೀಗೆ ನಡೆಯಿತು!
1. ಶಂಖದ ಧ್ವನಿಯೊಂದಿಗೆ ಅಧಿವೇಶನವು ಪ್ರಾರಂಭವಾಯಿತು. ಪುರೋಹಿತ ಶ್ರೀ. ಉಜ್ವಲ ತಿವಾರಿಯವರು ಶಂಖನಾದ ಮಾಡಿದರು. ಶ್ರೀ ಸ್ವಾಮಿ ಕರಪಾತ್ರಿ ವೇದಶಾಸ್ತ್ರದ ಅನುಸಂಧಾನ ಕೇಂದ್ರ, ಅಖಿಲ ಭಾರತ ಧರ್ಮ ಸಂಘದ ವೇದ ಸಂಶೋಧನಾ ಕೇಂದ್ರದ ವೇದ ಅಧ್ಯಾಪಕ. ಅಶುತೋಷ ಝಾ ಮತ್ತು ಶ್ರೀ. ಅನುಪ ಕುಮಾರ ದ್ವಿವೇದಿ ವೇದಗಳ ಪಠಣ ಮಾಡಿದರು.
2. ಇದಾದ ನಂತರ, ‘ಸನಾತನ ಪ್ರಭಾತ’ ದಿನಪತ್ರಿಕೆಯ ಉಪ ಸಂಪಾದಕರಾದ ಶ್ರೀ. ನೀಲೇಶ ಕುಲಕರ್ಣಿಅವರು ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ‘ಸನಾತನ ಪ್ರಭಾತ’ ದಿನಪತ್ರಿಕೆಯ ಕೊಡುಗೆಯ ಬಗ್ಗೆ ಮಾಹಿತಿ ನೀಡಿದರು.
3. ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಮತ್ತು ಧರ್ಮ ಪ್ರಚಾರಕ ಸದ್ಗುರು ನೀಲೇಶ ಸಿಂಗಬಾಳ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಸಂತರನ್ನು ಹೂಮಾಲೆ ಮತ್ತು ರುದ್ರಾಕ್ಷ ಮಾಲೆಯನ್ನು ಹಾಕಿ, ಶಾಲು ಹೊದಿಸಿ ಸನ್ಮಾನಿಸಿದರು. ತದ ನಂತರ, ಸಂತರು ತಮ್ಮ ಆಶೀರ್ವಾದ ಮತ್ತು ಕ್ಷತ್ರಿಯ ತೇಜಸ್ಸಿನಿಂದ ಮಾರ್ಗದರ್ಶನವನ್ನು ನೀಡಿದರು.
Sadhus and Saints Resolve to Establish a Dharma-Based Hindu Rashtra at the ‘Hindu Rashtra Adhiveshan’ in Mahakumbh Prayagraj, jointly organised by Akhil Bharatiya Dharmasangh and @HinduJagrutiOrg
Spontaneous participation of Saints, Mahants, Mahamandaleshwars and devout Hindus!… pic.twitter.com/fwXhCcDEkA
— Sanatan Prabhat (@SanatanPrabhat) January 31, 2025
ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವುದರಿಂದ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ! – ಬ್ರಹ್ಮಚಾರಿ ಶಂಕರ ಚೈತನ್ಯ ಮಹಾರಾಜರು, ಧರ್ಮಸಂಘ ಪೀಠಾಧೀಶ್ವರ, ದುರ್ಗಾಕುಂಡ, ವಾರಣಾಸಿ

ಪ್ರಯಾಗರಾಜನಲ್ಲಿರುವ ಮಹಾಕುಂಭ ಕ್ಷೇತ್ರವು ಅನಾದಿ ಕಾಲದಿಂದಲೂ ಹಿಂದೂಗಳ ಭೂಮಿಯಾಗಿದೆ. ಕುಂಭಮೇಳದಲ್ಲಿ ದೇವಿ-ದೇವತೆಗಳು, ಸಂತರು ಮತ್ತು ಮಹಾತ್ಮರು ಸಾಧನೆಗಾಗಿ ಬರುತ್ತಾರೆ. ಇದು ಅನಾದಿ ಕಾಲದಿಂದಲೂ ನಡೆದು ಬಂದಿರುವ ಸಂಪ್ರದಾಯವಾಗಿದೆ.. ಅಂತಹ ಪವಿತ್ರ ಭೂಮಿ ವಕ್ಫ್ ಮಂಡಳಿಯ ಆಸ್ತಿ ಎಂದು ಹೇಳಲು ಯಾರಾದರೂ ಹೇಗೆ ಧೈರ್ಯ ಮಾಡಲು ಸಾಧ್ಯ? ಹೀಗೆ ಹೇಳುವವರಿಗೆ ಭಾರತದಲ್ಲಿ ವಾಸಿಸುವ ಹಕ್ಕಿಲ್ಲ. ಅವರು ಭಾರತವನ್ನು ಬಿಟ್ಟು ಹೋಗಬೇಕು. ಭಾರತ ಹಿಂದೂಗಳ ದೇಶವಾಗಿದೆ. ಇಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ.
ಈ ಸಮಯದಲ್ಲಿ, ಬ್ರಹ್ಮಚಾರಿ ಶಂಕರ ಚೈತನ್ಯ ಮಹಾರಾಜರು ಹೇಳಿದರು,
1. ಧರ್ಮಸಂಘ ಪೀಠಾಧೀಶ್ವರ, ದುರ್ಗಾಕುಂಡ, ವಾರಣಾಸಿಯಲ್ಲಿ ಮೂವತ್ತಮೂರು ಕೋಟಿ ದೇವರುಗಳ ವಾಸಸ್ಥಾನವಾದ ಗೋಮಾತೆಯನ್ನು ವಧಿಸಲಾಗುತ್ತಿದೆ.
2. ಗೋಮಾತೆಯ ರಕ್ಷಣೆಗಾಗಿ ಪ್ರತಿಯೊಬ್ಬ ಹಿಂದೂವೂ ಗೋಮಾತೆಯ ಪೋಷಣೆ ಮಾಡಬೇಕು. ಇದು ಸಾಧ್ಯವಾಗದಿದ್ದರೆ, ಕನಿಷ್ಠ 10 ಹಿಂದೂಗಳು ಒಟ್ಟಾಗಿಯಾದರೂ ಹಸುಗಳನ್ನು ನೋಡಿಕೊಳ್ಳಬೇಕು.
3. ಗೋಹತ್ಯೆಯನ್ನು ತಡೆಯಲು ಹಿಂದೂಗಳು ಆದಷ್ಟು ಬೇಗ ದೃಢವಾದ ನಿಲುವನ್ನು ತೆಗೆದುಕೊಳ್ಳಬೇಕು. ಗೋಹತ್ಯೆ ಸನಾತನ ಧರ್ಮದ ಮೇಲಿನ ದಾಳಿಯಾಗಿದೆ. ಹಿಂದೂ ಧರ್ಮವನ್ನು ರಕ್ಷಿಸಲು ಎಲ್ಲರೂ ಒಗ್ಗಟ್ಟಾಗಬೇಕು.
ಬ್ರಹ್ಮಚಾರಿ ಶಂಕರ ಚೈತನ್ಯ ಮಹಾರಾಜರು, ಧರ್ಮಸಂಘ ಪೀಠಾಧೀಶ್ವರ, ದುರ್ಗಾಕುಂಡ, ವಾರಣಾಸಿ ಇವರಿಂದ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದ ಶ್ಲಾಘನೆಹಿಂದೂ ಜನಜಾಗೃತಿ ಸಮಿತಿಯ ಅನೇಕ ಕಾರ್ಯಕರ್ತರು ವೈದ್ಯರು, ಎಂಜಿನಿಯರ್ಗಳು ಮುಂತಾದ ಉನ್ನತ ಶಿಕ್ಷಣ ಪಡೆದಿದ್ದಾರೆ. ಅವರೆಲ್ಲರೂ ಸಮರ್ಪಿತರಾಗಿ ಧರ್ಮ ಕಾರ್ಯವನ್ನು ಮಾಡುತ್ತಿದ್ದಾರೆ. ಅವರ ತ್ಯಾಗವನ್ನು ಗಮನದಲ್ಲಿಟ್ಟುಕೊಂಡು, ಪ್ರತಿಯೊಬ್ಬ ಹಿಂದೂ ಕನಿಷ್ಠ ಸ್ವಲ್ಪ ಸಮಯವನ್ನಾದರೂ ಧರ್ಮಕಾರ್ಯಕ್ಕಾಗಿ ಮೀಸಲಿಡಬೇಕು, ಎಂದು ಹೇಳಿ ಬ್ರಹ್ಮಚಾರಿ ಶಂಕರ ಚೈತನ್ಯ ಮಹಾರಾಜರು ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು. |
ಜನರು ಹಿಂದೂ ಧರ್ಮದ ಬಗ್ಗೆ ಸಂವೇದನಾಶೀಲರಾಗುವವರೆಗೆ ಹಿಂದುತ್ವ ಅಪಾಯದಲ್ಲಿದೆ! – ಆನಂದದಾಸ ಭಯ್ಯಾಜಿ ಮಹಾರಾಜರು

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂಗಳು ಮೊದಲು ತಮ್ಮದೇ ಆದ ವ್ಯವಸ್ಥೆಯನ್ನು ರಚಿಸಬೇಕು. ಧರ್ಮದ ರಕ್ಷಣೆಗಾಗಿ ಹಿಂದೂಗಳು ಮೊದಲು ಧರ್ಮವನ್ನು ಸ್ವೀಕರಿಸಬೇಕು. ಧರ್ಮದ ಬಗ್ಗೆ ಹಿಂದೂಗಳು ಸಂವೇದನಾಶೀಲರಾಗುವವರೆಗೆ, ಹಿಂದೂಗಳು ವಿಭಜಿತರಾಗಿಯೇ ಇರುತ್ತಾರೆ. ಹಿಂದೂಗಳ ಹತ್ಯೆ ನಿಲ್ಲುವುದಿಲ್ಲ. ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಹಿಂದೂಗಳು ಸಂಘಟಿತರಾಗುವ ಆವಶ್ಯಕತೆಯಿದೆ.
ಭಾರತ ಸಾಂವಿಧಾನಿಕವಾಗಿ ಹಿಂದೂ ರಾಷ್ಟ್ರವೆಂದು ಘೋಷಿಸುವುದು ಆವಶ್ಯಕ! – ಶ್ರೀಮದ್ ಜಗದ್ಗುರು ರಾಮಾನಂದಾಚಾರ್ಯ ಸ್ವಾಮಿ ರಾಜೇಶ್ವರ ಮಾವುಲಿ ಸರಕಾರ, ಪೀಠಾಧೀಶ್ವರ, ಶ್ರೀ ರುಕ್ಮಿಣಿ ವಿದರ್ಭ ಪೀಠ

ಭಾರತ ದೇಶವು ಸಂವಿಧಾನದ ಮೂಲಕ ಆಡಳಿತ ನಡೆಯುತ್ತಿದೆ. ಇದರಿಂದ, ಭಾರತವನ್ನು ಸಂವಿಧಾನದ ಮೂಲಕ ಹಿಂದೂ ರಾಷ್ಟ್ರವೆಂದು ಘೋಷಿಸಬೇಕು. ಇಂದಿಗೂ ಸಹ, ಅನೇಕ ಜನರು ಪಾಕಿಸ್ತಾನದ ಪರವಾಗಿದ್ದಾರೆ. ಕ್ರಿಕೆಟನಲ್ಲಿ ಪಾಕಿಸ್ತಾನ ಗೆದ್ದಾಗ ಪಟಾಕಿ ಸಿಡಿಸುವವರು. ಹಿಂದೂ ರಾಷ್ಟ್ರವನ್ನು ಸಂವಿಧಾನಬಾಹಿರ ಎಂದು ಕರೆಯುವವರು, ಭಾರತದ ಸಂವಿಧಾನ ಸುರಕ್ಷಿತವಾಗಿರುವುದು ಹಿಂದೂಗಳಿಂದಲೇ ಎಂಬುದನ್ನು ನೆನಪಿನಲ್ಲಿಡಬೇಕು. ‘ ಬಟೇಂಗೆ ತೋ ಕಟೇಂಗೆ ‘ (ನಾವು ವಿಭಜಿಸಲ್ಪಟ್ಟರೆ, ನಮ್ಮನ್ನು ಕೊಲ್ಲಲಾಗುತ್ತದೆ) ಎಂಬ ಘೋಷಣೆ ಹಿಂದೂಗಳಿಗಾಗಿಯೇ ಇದೆ. ಪ್ರಸ್ತುತ, ಅನೇಕ ಹಿಂದೂಗಳು ಪಾಶ್ಚಿಮಾತ್ಯರನ್ನು ಅನುಕರಿಸುತ್ತಿದ್ದಾರೆ. ಹಿಂದೂಗಳು ಧರ್ಮವನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಆಚರಿಸಬೇಕು. ಇರುವೆಗಳು ಚಿಕ್ಕದಾಗಿದ್ದರೂ, ಅವು ಒಂದುಗೂಡಿ ದೊಡ್ಡ ಹೆಬ್ಬಾವನ್ನು ಸಹ ಕೊಲ್ಲಬಲ್ಲವು. ಹಿಂದೂಗಳು ವಿಭಜಿಸಲ್ಪಟ್ಟಿರುವುದರಿಂದ ತೊಂದರೆಯಲ್ಲಿದ್ದಾರೆ. ಧರ್ಮ ರಕ್ಷಣೆಗೆ ಹಿಂದೂಗಳು ಒಂದಾಗುವ ಆವಶ್ಯಕತೆಯಿದೆ.
ನಮಗೆ ಧರ್ಮಾಧಿಷ್ಠಿತ ಸಂವಿಧಾನ ವ್ಯವಸ್ಥೆ(?) ಇರುವ ಹಿಂದೂ ರಾಷ್ಟ್ರ ಬೇಕು! – ಸದ್ಗುರು ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ

ರಾಜಧರ್ಮವು ಹಿಂದೂ ರಾಷ್ಟ್ರದ ಒಂದು ಭಾಗವಾಗಿದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ, ಧರ್ಮಪರಾಯಣ ಮತ್ತು ಚಾರಿತ್ರ್ಯದಿಂದ ಸಮೃದ್ಧವಾದ ಸಮಾಜವನ್ನು ಸೃಷ್ಟಿಸುವುದು ಸಹ ಅಗತ್ಯವಾಗಿದೆ. ಸನಾತನ ಸಂಪ್ರದಾಯದಲ್ಲಿ, ಹಿಂದೂ ರಾಜ್ಯ ಮತ್ತು ರಾಷ್ಟ್ರ ಒಂದುಗೂಡಿರುತ್ತದೆ. ರಾಜ ಇರುವಲ್ಲಿ ರಾಜ ಗುರು, ರಾಜದಂಡ ಮತ್ತು ಧರ್ಮದಂಡ ಇರುತ್ತದೆ. ಸಾಂಪ್ರದಾಯಿಕವಾಗಿ, ನಾವು ಭಾರತವನ್ನು ಹಿಂದೂ ರಾಷ್ಟ್ರ ಎಂದು ಕರೆಯುತ್ತೇವೆ. ಆಗ ಅದು ಹೀಗಿರಬೇಕು ಎಂದು ನಿರೀಕ್ಷಿಸಲಾಗಿದೆ. ಬ್ರಿಟಿಷರು ಭಾರತವನ್ನು ಆಳಲು ಕ್ರಿಶ್ಚಿಯನ್ ಮತ್ತು ಯುರೋಪಿಯನ್ ವಿಧಾನಗಳ ಪ್ರಕಾರ ರಾಜ್ಯ ಮತ್ತು ರಾಷ್ಟ್ರದ ಪರಿಕಲ್ಪನೆಗಳನ್ನು ಬೇರ್ಪಡಿಸಿದರು. ಬ್ರಿಟಿಷರು ಧರ್ಮವನ್ನು ರಾಜ್ಯ ವ್ಯವಹಾರಗಳಿಂದ ಬೇರ್ಪಡಿಸಿದರು. ನಾವು ಸಾಂಪ್ರದಾಯಿಕ ಹಿಂದೂ ರಾಷ್ಟ್ರವಾಗಿದ್ದರೂ, ಸಂವಿಧಾನದ ಪ್ರಕಾರ ಮತ್ತು ಧರ್ಮಾಧಿಷ್ಠಿತ ರಾಜ್ಯ ವ್ಯವಸ್ಥೆಯೊಂದಿಗೆ ನಮಗೆ ಹಿಂದೂ ರಾಷ್ಟ್ರ ಬೇಕಾಗಿದೆ. ಸಂವಿಧಾನದ ‘ಜಾತ್ಯತೀತ’ ಶಬ್ದವನ್ನು ತೆಗೆದುಹಾಕಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು. ಹಾಗೆಯೇ ಜನಸಂಖ್ಯಾ ನಿಯಂತ್ರಣ, ಧರ್ಮಾಂತರ ನಿಷೇಧ, ಗೋಹತ್ಯೆ ನಿಷೇಧ ಕಾನೂನುಗಳನ್ನು ಜಾರಿಗೆ ತರಬೇಕು. ಸಂವಿಧಾನ ಮೂಲಕ ಅಲ್ಪಸಂಖ್ಯಾತರಿಗಾಗಿ ಜಾರಿಗೊಳಿಸಲಾಗಿರುವ ವಿಶೇಷ ನಿಬಂಧನೆಗಳನ್ನು ರದ್ದುಗೊಳಿಸಬೇಕು ಎಂದು ಕೇಂದ್ರ ಸರಕಾರದಿಂದ ನಿರೀಕ್ಷಿಸಲಾಗಿದೆ.
ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ನಾವು ದೃಢ ಸಂಕಲ್ಪ ಮಾಡಬೇಕು! – ಸದ್ಗುರು ನೀಲೇಶ ಸಿಂಗಬಾಳ, ಈಶಾನ್ಯ ಭಾರತದ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ

ಶತಶತಮಾನಗಳಿಂದ ನಮ್ಮ ಭವ್ಯ ಹಿಂದೂ ಸಂಸ್ಕೃತಿಯ ಮೇಲೆ ದಾಳಿ ನಡೆಯುತ್ತಿದೆ. ಇದರಿಂದಾಗಿ ಹಿಂದೂ ಸಮಾಜವು ಸಂಕಷ್ಟಕ್ಕೆ ಸಿಲುಕಿದೆ. ನಮ್ಮ ಧರ್ಮದ ಮೇಲೆ ಬಂದಿರುವ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬೇಕು. ಉತ್ತರ ಪ್ರದೇಶದ ಸಂಭಲ್ನಲ್ಲಿ ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸಲಾಯಿತು. ಈ ರೀತಿ ನಮ್ಮ ಸಾಂಸ್ಕೃತಿಕ ಸಂಪ್ರದಾಯಗಳು ನಾಶವಾದರೆ, ನಮ್ಮ ಅಸ್ತಿತ್ವವೇ ಉಳಿಯುವುದಿಲ್ಲ. ಗೋಹತ್ಯೆ, ಲವ್ ಜಿಹಾದ, ಭೂ ಜಿಹಾದ ಮತ್ತು ವಕ್ಫ್ ಮಂಡಳಿಯಂತಹ ತಮ್ಮ ಧರ್ಮದ ಮೇಲಿನ ಬಿಕ್ಕಟ್ಟುಗಳನ್ನು ಹಿಂದೂಗಳು ಪರಿಹರಿಸಲೇ ಬೇಕಾಗುತ್ತದೆ. ಹಿಂದೂ ಮಹಿಳೆಯರು ಮತ್ತು ಹಿಂದೂ ದೇವಸ್ಥಾನಗಳನ್ನು ಅವಮಾನಿಸಲು ನಾವು ಬಿಡುವುದಿಲ್ಲ. ಇದಕ್ಕಾಗಿಯೇ ಹಿಂದೂ ರಾಷ್ಟ್ರ ಆವಶ್ಯಕವಾಗಿದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನಮಗೆ ದೃಢ ಸಂಕಲ್ಪ ಮಾಡಬೇಕಾಗುವುದು. ಹಿಂದೂ ರಾಷ್ಟ್ರ ಸ್ಥಾಪನೆಯಿಂದಲೇ ಹಿಂದೂಗಳ ಭವಿಷ್ಯ ಸುರಕ್ಷಿತವಾಗಿರುತ್ತದೆ. ಎಲ್ಲಿ ಹಿಂದೂಗಳ ಸಂಪ್ರದಾಯಗಳನ್ನು ಗೌರವಿಸಲ್ಪಡುವುದೋ, ಅಂತಹ ಹಿಂದೂ ರಾಷ್ಟ್ರವನ್ನು ನಮಗೆ ಸ್ಥಾಪಿಸಬೇಕಾಗಿದೆ. ಹಿಂದೂ ಧರ್ಮದ ಪುನರುಜ್ಜೀವನಕ್ಕಾಗಿ, ಭಾರತದಲ್ಲಿ ಸಾಂವಿಧಾನಿಕ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಅವಶ್ಯಕವಾಗಿದೆ. ಇದಕ್ಕೆ ನಮ್ಮ ಜಂಟಿ ಪ್ರಯತ್ನಗಳು, ನಮ್ಮ ಅಚಲ ವಚನಬದ್ಧತೆ ಆವಶ್ಯಕವಾಗಿದೆ. ಸಾಂವಿಧಾನಿಕ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ನಮ್ಮ ಅಂತಿಮ ಗುರಿಯಾಗಿದೆ. ಭಾರತವನ್ನು ಸಾಂವಿಧಾನಿಕ ತಿದ್ದುಪಡಿಯ ಮೂಲಕ ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಂದು ಒತ್ತಾಯಿಸುವುದು ಒಂದು ಸೈದ್ಧಾಂತಿಕ ಚಳುವಳಿಯಾಗಿದೆ. ಹಿಂದೂ ರಾಷ್ಟ್ರದ ಮೂಲಕ ಎಲ್ಲಾ ಮಾನವಜಾತಿಯ ಹಿತವನ್ನು ರಕ್ಷಿಸಲಾಗುತ್ತದೆ.
ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ‘ಫೇಕ ನೆರೇಟಿವ್ಹ್ ‘ನ ನಷ್ಟಗೊಳಿಸುವುದು ಆವಶ್ಯಕವಾಗಿದೆ! – ಸದ್ಗುರು ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಿ, ಹಿಂದೂ ಜನಜಾಗೃತಿ ಸಮಿತಿ![]() ಯಾವುದೇ ಪ್ರತ್ಯಕ್ಷ ಯುದ್ಧದ ಮೊದಲು ಬೌದ್ಧಿಕ ಯುದ್ಧದ ಆವಶ್ಯಕತೆಯಿರುವುದು. ಮಹಾಯುದ್ಧದ ಸಮಯದಲ್ಲಿ ಅರ್ಜುನನಿಗೆ ಶಸ್ತ್ರಗಳನ್ನು ತ್ಯಜಿಸುವ ಭ್ರಮೆ ನಿರ್ಮಾಣವಾಯಿತೋ ಅದನ್ನು ‘ಫೇಕ ನೆರೇಟಿವ್ಹ್ ‘ (ನಕಲಿ ನಿರೂಪಣೆ?) ಎಂದು ಕರೆಯಲಾಗುತ್ತದೆ. ‘ಫೇಕ ನೆರೇಟಿವ್ಹ್ ‘ ನಿಂದ ಹೊರಬರಲು ಶ್ರೀಕೃಷ್ಣನು ಅರ್ಜುನನಿಗೆ ಗೀತೆಯನ್ನು ಉಪದೇಶಿಸಿದನು. ಇಂದಿನ ಕಾಲದಲ್ಲೂ ಹಿಂದೂ ರಾಷ್ಟ್ರದ ವಿರುದ್ಧ ‘ಫೇಕ ನೆರೇಟಿವ್ಹ್ ‘ ಸೃಷ್ಟಿಸುವ ಮೂಲಕ ಹಿಂದೂಗಳನ್ನು ದಾರಿ ತಪ್ಪಿಸಲಾಗುತ್ತಿದೆ. ಆದ್ದರಿಂದ, ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಮಹತ್ವವನ್ನು ನಾವು ಅರ್ಥಮಾಡಿಕೊಂಡರೆ ಮಾತ್ರ ನಾವು ಹಿಂದೂ ರಾಷ್ಟ್ರವನ್ನು ಸ್ಥಾಪಿಸಬಹುದು. |
ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಭಾರತ ಸಹಾಯ ಮಾಡಬೇಕು! – ಶಂಕರ ಖರಾಲ, ವಿಶ್ವ ಹಿಂದೂ ಒಕ್ಕೂಟ, ನೇಪಾಳ

ಅಮೇರಿಕದ ಹಸ್ತಕ್ಷೇಪದಿಂದ ಬಾಂಗ್ಲಾದೇಶದಲ್ಲಿ ಅಧಿಕಾರ ಬದಲಾವಣೆಯಾಯಿತು. ಭಾರತದಲ್ಲಿ, ನಾಗಾಲ್ಯಾಂಡ್ ಮತ್ತು ಬಂಗಾಳ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂಗಳು ಇಸ್ಲಾಂಗೆ ಮತಾಂತರಗೊಳ್ಳುತ್ತಿದ್ದಾರೆ. ನೇಪಾಳದಲ್ಲೂ ಇದೇ ಪರಿಸ್ಥಿತಿಯಿದೆ. ನೇಪಾಳವು ಬಾಂಗ್ಲಾದೇಶ ಮತ್ತು ರೋಹಿಂಗ್ಯಾಗಳಿಂದ ಒಳನುಸುಳುವಿಕೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಆದ್ದರಿಂದ, ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದು ಅವಶ್ಯಕ ಮತ್ತು ಅದಕ್ಕೆ ಭಾರತದ ಸಹಾಯದ ಆವಶ್ಯಕತೆಯಿದೆ.
ಭಾರತದಲ್ಲಿ ಗುರುಕುಲಗಳನ್ನು ಸ್ಥಾಪಿಸಬೇಕು! – ಡಾ. ಮುರಳೀಧರ ದಾಸ, ಇಸ್ಕಾನ್

ನಮ್ಮ ಆಹಾರ ಪದ್ಧತಿ ಸಾತ್ವಿಕವಾಗಿರಬೇಕು, ಆಗ ಮಾತ್ರ ನಮ್ಮ ಆಲೋಚನೆಗಳು ಸಾತ್ವಿಕವಾಗುತ್ತವೆ. ಇದರೊಂದಿಗೆ, ಭಾರತದಲ್ಲಿ ಗುರುಕುಲಗಳನ್ನು ಸ್ಥಾಪಿಸಬೇಕು. ಇದರಿಂದ ಹಿಂದೂಗಳಿಗೆ ಹಿಂದೂ ಧರ್ಮದ ಶಿಕ್ಷಣ ಸಿಗುವುದು ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಯ ಹಾದಿ ಸುಗಮವಾಗುವುದು.
ಬಾಂಗ್ಲಾದೇಶದ ಹಿಂದೂಗಳಿಗೆ ಭಾರತದಿಂದ ಸಹಾಯ ಬೇಕು! – ಪರಿಮಲಕುಮಾರ ರೈ, ಬಾಂಗ್ಲಾದೇಶ

ಒಂದು ವರ್ಷದ ಹಿಂದೆ ಬಾಂಗ್ಲಾದೇಶದಲ್ಲಿ 1 ಲಕ್ಷ ಹಿಂದೂ ಮನೆಗಳು ಸುಟ್ಟುಹೋದವು. ಅಪ್ರಾಪ್ತ ಬಾಲಕಿಯರ ಮೇಲೆ ಬಲಾತ್ಕಾರಗಳು ನಡೆದಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಿಂದೆಂದೂ ಕಾಣದ ದೌರ್ಜನ್ಯಗಳು ನಡೆದವು. ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗೆ ಭಾರತದ ಸಹಾಯದ ಅಗತ್ಯವಿದೆ.
ಹಿಂದೂಗಳು ಜಾತಿಜಾತಿಗಳಲ್ಲಿ ವಿಭಜನೆಗೊಳ್ಳದೇ ಹಿಂದೂಗಳಾಗಿ ಒಂದಾಗಬೇಕು! – ಶ್ರೀ ಮಹಾಂತ ವಾಸುದೇವಾನಂದಗಿರಿಜಿ ಮಹಾರಾಜರು

ಇಂದು ಹಿಂದೂಗಳು ಜಾತಿವಾದ, ಪ್ರಾದೇಶಿಕತೆ, ಭಾಷಾವಾದ, ಬುಡಕಟ್ಟುವಾದ ಇತ್ಯಾದಿಗಳಲ್ಲಿ ಸಿಲುಕಿಕೊಂಡಿದ್ದಾರೆ. ಆದ್ದರಿಂದ, ಅವರು ಚದುರಿ ಹೋಗಿದ್ದಾರೆ. ಇದನ್ನು ತಪ್ಪಿಸಲು, ಹಿಂದೂಗಳು ಹಿಂದೂಗಳಾಗಿ ಸಂಘಟಿತರಾಗಬೇಕು. ಹಿಂದೂಗಳು ‘ಸಂಘೇ ಶಕ್ತಿ ಕಲೌ ಯುಗೇ’ (ಕಲಿ ಯುಗದಲ್ಲಿ ಒಗ್ಗಟ್ಟಿನಿಂದ ಇರುವುದು ಪ್ರಯೋಜನಕಾರಿ) ಎಂಬುದನ್ನು ನೆನಪಿನಲ್ಲಿಡಬೇಕು.
ಮಹಾಕುಂಭದ ಸಮಯದಲ್ಲಿ ಹಿಂದೂ ರಾಷ್ಟ್ರದ ಫಲಕಗಳನ್ನು ತೆಗೆದುಹಾಕುವುದು ತಪ್ಪು! – ಪ.ಪೂ. ಭಗೀರಥಿ ಮಹಾರಾಜರು, ವಿಶ್ವ ಹಿಂದೂ ಪರಿಷತ್ತು

ಮಹಾಕುಂಭಪರ್ವದಲ್ಲಿ ಆಡಳಿತದ ವತಿಯಿಂದ ಹಿಂದೂ ಜನಜಾಗೃತಿ ಸಮಿತಿಯ ಜಾಹೀರಾತು ಫಲಕವನ್ನು ತೆಗೆದುಹಾಕಲಾಯಿತು. . ಈ ಕ್ರಮ ತಪ್ಪಾಗಿದೆ. ಇದು ಶ್ರೀ ರಾಮ ಮತ್ತು ಶ್ರೀ ಕೃಷ್ಣನ ಭೂಮಿಯಾಗಿದೆ. ಆದ್ದರಿಂದ, ಭಾರತವು ಹಿಂದೂ ರಾಷ್ಟ್ರವಾಗಲಿದೆ ಇದು ನಿರ್ವಿವಾದವಾಗಿದೆ. ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಗೆ ಯಾರೂ ತೊಂದರೆ ನೀಡಬಾರದು; ಏಕೆಂದರೆ ಈ ಸಂಸ್ಥೆಗಳಿಗೆ ಸಂತರ ಆಶೀರ್ವಾದವಿದೆ ಮತ್ತು ಸಂತರ ಆಶೀರ್ವಾದದಿಂದ ಅವರ ಕಾರ್ಯವು ನಡೆಯುತ್ತಿದೆ.
