‘ಸನಾತನ ಪ್ರಭಾತ’ದ ೨೬ ನೇ ವರ್ಧಂತ್ಯುತ್ಸವದ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಸಂದೇಶ

‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಮಾಜದಲ್ಲಿ ಕ್ಷಾತ್ರತೇಜವನ್ನು ಜಾಗೃತ ಗೊಳಿಸುವುದು ಕಾಲಾನುಸಾರ ಒಂದು ಆವಶ್ಯಕ ಕಾರ್ಯವಾಗಿದೆ. ‘ಸನಾತನ ಪ್ರಭಾತ’ವು ಕಳೆದ ೨೫ ವರ್ಷಗಳಿಂದ ಈ ವೈಚಾರಿಕ ಕಾರ್ಯವನ್ನು ಒಂದು ದಿನವೂ ರಜೆ ಪಡೆಯದೇ ನಿರಂತರ ವಾಗಿ ಮಾಡುತ್ತಿದೆ. ೧೯೯೯ ರಲ್ಲಿ ಪತ್ರಿಕೋದ್ಯಮದ ಬಗ್ಗೆ ಯಾವುದೇ ತರಬೇತಿ ಇಲ್ಲದ ಸನಾತನದ ಸಾಧಕರ ಸಹಾಯದಿಂದ ಆರಂಭವಾದ ‘ಸನಾತನ ಪ್ರಭಾತ’ ಪತ್ರಿಕೆಯು ಇಂದು ೨೫ ವರ್ಷ ಪೂರ್ಣಗೊಳಿಸಿ ೨೬ ನೇ ವರ್ಷಕ್ಕೆ ದಾಪುಗಾಲಿಡುತ್ತಿರುವುದು ಒಂದು ವೈಶಿಷ್ಟ್ಯಪೂರ್ಣ ಅನುಭೂತಿಯಾಗಿದೆ. ‘ಈಶ್ವರನ ಕಾರ್ಯವನ್ನು ಈಶ್ವರನೇ ಮಾಡಿಸಿಕೊಳ್ಳುತ್ತಾನೆ’, ಎಂಬ ಉಕ್ತಿಗನುಸಾರ ‘ಸನಾತನ ಪ್ರಭಾತ’ದ ಮಾಧ್ಯಮದಿಂದ ಈಶ್ವರನೇ ಕಾರ್ಯವನ್ನು ಮಾಡುತ್ತಿದ್ದಾನೆ. ಸಾಕಷ್ಟು ಪ್ರಮಾಣದಲ್ಲಿ ಸಿಗದಿರುವ ಜಾಹೀರಾತುಗಳು, ಪತ್ರಿಕೋದ್ಯಮದಲ್ಲಿ ವೃತ್ತಿಪರತೆಯ ಕೊರತೆ, ತರಬೇತಿ ಪಡೆಯದ ಮನುಷ್ಯಬಲ ಇತ್ಯಾದಿ ಅನೇಕ ಅಡಚಣೆಗಳಿದ್ದರೂ ‘ಸನಾತನ ಪ್ರಭಾತ’ವು ಈಶ್ವರೀ ಕೃಪೆಯಿಂದ ತನ್ನ ಕಾರ್ಯವನ್ನು ನಿರ್ವಹಿಸುತ್ತಲೇ ಇದೆ. ಕಳೆದ ೨೫ ವರ್ಷಗಳಲ್ಲಿ ‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಮಾರ್ಗಕ್ರಮಣ ವೃತ್ತಿಪರ ಪತ್ರಿಕೆ ಗಳನ್ನು ನಾಚಿಸುವಂತಿದೆ.
ಸಮಾಜದಲ್ಲಿ ಹೆಚ್ಚೆಚ್ಚು ಧರ್ಮಜಾಗೃತಿಯಾಗಬೇಕು, ಎಂಬುದಕ್ಕಾಗಿ ಆರಂಭದಲ್ಲಿ ೮ ಪುಟಗಳನ್ನು ಹೊಂದಿದ್ದ ‘ಸನಾತನ ಪ್ರಭಾತ’ ಪತ್ರಿಕೆ ಪ್ರಸ್ತುತ ೧೬ ಪುಟಗಳ ವರೆಗೆ ತಲುಪಿದೆ. ಪುಟಗಳ ಸಂಖ್ಯೆ ಹೆಚ್ಚಾದುದರಿಂದ ರಾಷ್ಟ್ರ ಮತ್ತು ಧರ್ಮ ಹಿತದ, ಹಾಗೆಯೇ ರಾಷ್ಟ್ರ ಮತ್ತು ಧರ್ಮಹಾನಿಯ ಬಗ್ಗೆ ಹೆಚ್ಚೆಚ್ಚು ಘಟನೆಗಳನ್ನು ಓದುಗರ ವರೆಗೆ ತಲುಪಿಸಲು ಸಾಧ್ಯವಾಗುತ್ತಿದೆ. ಕೇವಲ ಹಿಂದೂಗಳಲ್ಲಿ ಧರ್ಮಜಾಗೃತಿ ಮೂಡಿಸುವ ಉದ್ದೇಶದಿಂದ ಜಾಹೀರಾತುಗಳ ಸಂಖ್ಯೆಯನ್ನು ಹೆಚ್ಚಿಸದೇ, ಪುಟಗಳ ಸಂಖ್ಯೆಯನ್ನು ಹೆಚ್ಚಿಸಿರುವುದು ಇದು ‘ಸನಾತನ ಪ್ರಭಾತ’ದ ನಿಸ್ವಾರ್ಥ ಕಾರ್ಯದ ಸಂಕೇತವಾಗಿದೆ.
ಈ ೨೫ ವರ್ಷಗಳ ಕಾಲಾವಧಿಯಲ್ಲಿ ‘ಸನಾತನ ಪ್ರಭಾತ’ವು ತನ್ನ ಶಬ್ದಸಾಮರ್ಥ್ಯದಿಂದ ಜಾತ್ಯಾಂಧ, ಸಮಾಜಕಂಟಕರು, ದೇಶದ್ರೋಹಿಗಳು ಮತ್ತು ಧರ್ಮದ್ವೇಷಿಗಳ ವಿರುದ್ಧ ನಿರಂತರ ವೈಚಾರಿಕವಾಗಿ ಹೋರಾಟ ನಡೆಸಿತು. ಅಧರ್ಮಾಚರಣೆ, ಅನೈತಿಕತೆ, ಭ್ರಷ್ಟಾಚಾರ ಮತ್ತು ಮತಾಂಧತೆ ಈ ದುಷ್ಟಪ್ರವೃತ್ತಿಗಳ ವಿರುದ್ಧ ಧ್ವನಿ ಎತ್ತಿತು. ಕಡಿಮೆ ಕಾಲಾವಧಿಯಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ದೇಶಾದ್ಯಂತ ಚರ್ಚೆಯನ್ನು ಹುಟ್ಟುಹಾಕಿದ ಏಕೈಕ ನಿಯತಕಾಲಿಕೆಯೆಂದು ಸಿದ್ಧವಾಯಿತು.
ಇಂದು ‘ಸನಾತನ ಪ್ರಭಾತ’ದ ಬ್ರಾಹ್ಮ-ಕ್ಷಾತ್ರತೇಜದ ದೃಷ್ಟಿಕೋನ ವನ್ನು ಬೆಳೆಸಿಕೊಂಡ ಓದುಗರೇ ಸನಾತನ ಧರ್ಮದ ಶಕ್ತಿಯಾಗಿ ದ್ದಾರೆ. ‘ಸನಾತನ ಪ್ರಭಾತ’ ಸೃಷ್ಟಿಸಿದ ಈ ಧರ್ಮಶಕ್ತಿಯೇ ಧರ್ಮಸಂಸ್ಥಾಪನೆಯ ಕಾರ್ಯಕ್ಕೆ ಬಲ ನೀಡುವುದು ಮತ್ತು ಆದಷ್ಟು ಬೇಗನೇ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು !’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಸಂಸ್ಥಾಪಕ-ಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಲಿಕೆ ಸಮೂಹ
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
ಮುಸಲ್ಮಾನರ ಒತ್ತಡಕ್ಕೆ ಮಣಿದು ಶಾಸಕ ಟಿ. ರಾಜಾಸಿಂಗ್ ಅವರ ಧರ್ಮಸಭೆಗೆ ಅನುಮತಿ ನಿರಾಕರಿಸಿದ ಪೊಲೀಸರು !
ಮಂತ್ರಾಲಯದ ಪ್ರವೇಶದ್ವಾರದಲ್ಲಿದ್ದ ಅಶುದ್ಧ ಭಾಷೆಯ ಫಲಕವನ್ನು ಆಡಳಿತವು ತೆರವುಗೊಳಿಸಿದೆ !
ಮಹಾರಾಷ್ಟ್ರದಲ್ಲಿ ಗಂಭೀರ ಅಪರಾಧಗಳ ಪ್ರಕರಣಗಳ ತೀರ್ಪಿನ ಸ್ಥಿತಿ ಚಿಂತಾಜನಕ!
ಮಹಾರಾಷ್ಟ್ರ : ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೇ. ೨೫% ರಷ್ಟು ಸೀಟು ಮೀಸಲು; ಅನುದಾನ ನೀಡಲು ಸರಕಾರದ ನಿರಾಸಕ್ತಿ !
ಗೋವಾ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಂದು ದಿನದ ಪಾದಯಾತ್ರೆಯ ವಾರಿ !