Bangladesh Hindu Temples Attacked : ಕಳೆದ 5 ದಿನಗಳಲ್ಲಿ ಬಾಂಗ್ಲಾದೇಶದಲ್ಲಿ 6 ಹಿಂದೂ ದೇವಸ್ಥಾನಗಳ ಮೇಲೆ ದಾಳಿ ಮತ್ತು ಲೂಟಿ

ಇಬ್ಬರು ಹಿಂದೂಗಳ ಹತ್ಯೆ ಮತ್ತು ಒಬ್ಬನ ಅಪಹರಣ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ನಿಲ್ಲುವ ಬದಲು ಪ್ರತಿದಿನ ಹೆಚ್ಚುತ್ತಿವೆ. ಕಳೆದ 5 ದಿನಗಳಲ್ಲಿ, ಮತಾಂಧ ಮುಸ್ಲಿಮರು 6 ದೇವಸ್ಥಾನಗಳನ್ನು ಗುರಿಯಾಗಿಸಿದ್ದಾರೆ. ಇವುಗಳಲ್ಲಿ, ಚಿತ್ತಗಾಂಗ್‌ನ ಹಾತಝರಿಯಲ್ಲಿ 4 ದೇವಸ್ಥಾನಗಳು ಮತ್ತು ಕಾಕ್ಸ್ ಬಜಾರ್ ಮತ್ತು ಲಾಲ್ ಮೋನಿರ್ಹತ್‌ನಲ್ಲಿ ತಲಾ ಒಂದು ದೇವಸ್ಥಾನಗಳ ಮೇಲೆ ದಾಳಿ ನಡೆಸಲಾಯಿತು. ಇತರ ಘಟನೆಗಳಲ್ಲಿ, ಇಬ್ಬರು ಹಿಂದೂಗಳು ಕೊಲ್ಲಲ್ಪಟ್ಟರು ಮತ್ತು ಒಬ್ಬನನ್ನು ಅಪಹರಿಸಲಾಯಿತು. ಮೃತಪಟ್ಟವರಲ್ಲಿ ನಿವೃತ್ತ ಕಾಲೇಜು ಶಿಕ್ಷಕ ದಿಲೀಪ್ ಕುಮಾರ್ ರಾಯ್ (71 ವರ್ಷ) ಕೂಡ ಇದ್ದರು, ಅವರನ್ನು ಅವರ ಮನೆಗೆ ನುಗ್ಗಿ ಕೊಲೆ ಮಾಡಲಾಯಿತು. ಜಲಖಾಠಿ ಜಿಲ್ಲೆಯಲ್ಲಿ 26 ವರ್ಷದ ಉದ್ಯಮಿ ಸುದೇವ್ ಹಲ್ದಾರ್ ಅವರನ್ನು ಕತ್ತು ಸೀಳಿ ಕೊಲೆ ಮಾಡಲಾಗಿದೆ. ಈ ಘಟನೆಗಳಲ್ಲಿ ಪೊಲೀಸರಿಗೆ ಯಾವುದೇ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಲಿಲ್ಲ.

1. ಚಿತ್ತಗಾಂಗ್‌ನ ಮಾ ವಿಶ್ವೇಶ್ವರಿ ಕಾಳಿ ದೇವಸ್ಥಾನದಿಂದ ಚಿನ್ನದ ಆಭರಣಗಳು ಮತ್ತು ಕಾಣಿಕೆ ಪೆಟ್ಟಿಗೆಗಳನ್ನು ಲೂಟಿ ಮಾಡಲಾಗಿದೆ. ಇದರೊಂದಿಗೆ, ಸತ್ಯನಾರಾಯಣ ಸೇವಾ ಆಶ್ರಮ, ಮಾ ಮಗಧೇಶ್ವರಿ ದೇವಸ್ಥಾನ ಮತ್ತು ಜಗಬಂಧು ಆಶ್ರಮಗಳಲ್ಲಿಯೂ ಕಳ್ಳತನದ ಘಟನೆಗಳು ನಡೆದಿವೆ. ಕಾಕ್ಸ್ ಬಜಾರ್‌ನಲ್ಲಿರುವ ಶ್ರೀಮಂದಿರದಲ್ಲಿಯೂ ಕಳ್ಳತನದ ಘಟನೆಗಳು ನಡೆದಿವೆ. ಕಳ್ಳರು ಇಲ್ಲಿನ ಸಿಸಿಟಿವಿ ರೆಕಾರ್ಡಿಂಗ್ ಅನ್ನು ನಾಶಪಡಿಸಿದ್ದಾರೆ.

2. ಚಿತ್ತಗಾಂಗ್‌ನ ಹಿಂದೂ ಸರ್ಪಂಚ್ ಚಂದನ್ ಮಹಾಜನ್ ಅವರನ್ನು ಧಾರ್ಮಿಕ ಮತಾಂಧರು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು. ಅದೇ ಸಮಯದಲ್ಲಿ, ಗಯಾಬಂದ ಜಿಲ್ಲೆಯಲ್ಲಿ ಹಿಂದೂ ಮಹಿಳೆಯೊಬ್ಬರ ಮನೆಗೆ ಬೆಂಕಿ ಹಚ್ಚಲಾಯಿತು. ಧಲ್‌ಗ್ರಾಮ ಯೂನಿಯನ್‌ನಲ್ಲಿ ಇಬ್ಬರು ಹಿಂದೂಗಳ ಮನೆಗಳಲ್ಲಿ ದರೋಡೆ ನಡೆದಿದೆ.

ಬಾಂಗ್ಲಾದೇಶ ಮತಾಂಧ ಸರಕಾರ ! – ಬಾಂಗ್ಲಾದೇಶ ಹಿಂದೂ-ಬೌದ್ಧ-ಕ್ರೈಸ್ತ ಏಕತಾ ಪರಿಷತ್ತು

‘ಬಾಂಗ್ಲಾದೇಶ ಹಿಂದೂ-ಬೌದ್ಧ-ಕ್ರೈಸ್ತ ಏಕತಾ ಪರಿಷತ್ತಿ’ನ ಹಂಗಾಮಿ ಪ್ರಧಾನ ಕಾರ್ಯದರ್ಶಿ ಮಣೀಂದ್ರ ಕುಮಾರ್ ನಾಥ್ ಇವರು, ಪ್ರಸ್ತುತ ಮಧ್ಯಂತರ ಸರಕಾರವು ಮತಾಂಧವಾಗಿದೆ. ಯಾವುದೇ ಹಿಂಸಾತ್ಮಕ ಕೃತ್ಯ ಎಸಗದೆ ಹಿಂಸಾಚಾರವನ್ನು ನಮಗೆ ಎದುರಿಸಬೇಕಾಗುತ್ತಿವೆ. ಈ ವಿಷಯದಲ್ಲಿ ಸರಕಾರದ ನಿರ್ಲಕ್ಷ್ಯ ನಮ್ಮನ್ನು ಹೊಸದಾಗಿ ಯೋಚಿಸುವಂತೆ ಮಾಡುತ್ತಿದೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಅಸುರಕ್ಷಿತ ಹಿಂದೂಗಳು ಮತ್ತು ಅವರ ದೇವಸ್ಥಾನಗಳು!