Mahakumbh Toll Free Travel : ಮಹಾಕುಂಭ ಮೇಳ ಪರ್ವಕ್ಕೆ ಬರುವ ಭಕ್ತರಿಗೆ ಟೋಲ್ ಶುಲ್ಕ ರಹಿತ ಪ್ರಯಾಣ !

ಪ್ರಯಾಗ್‌ರಾಜ್ – ಮಹಾಕುಂಭ ಮೇಳದ ಮುನ್ನಾದಿನದಂದು ಪ್ರಯಾಗ್‌ರಾಜ್-ರಾಯ್ ಬರೇಲಿ ಹೆದ್ದಾರಿಯಲ್ಲಿರುವ ಆಂಧಿಯಾರಿ ಟೋಲ್ ಬೂತ್‌ನಲ್ಲಿ ಟೋಲ್ ಸಂಗ್ರಹಿಸದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಜನವರಿ 10 ರಿಂದ ಫೆಬ್ರವರಿ 28 ರವರೆಗೆ ಟೋಲ್ ಸಂಗ್ರಹ ಮಾಡುವುದಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಟೋಲ್ ವಸೂಲಿ ನಿಲ್ಲಿಸಿರುವುದಾಗಿ ಸಾರ್ವಜನಿಕರಿಗೆ ಮೊದಲೇ ಸೂಚನೆ ನೀಡಿರಲಿಲ್ಲ. ಜನವರಿ 10ರ ಮಧ್ಯರಾತ್ರಿ 12 ಗಂಟೆಗೆ ಏಕಾಏಕಿ ಟೋಲ್ ಸಂಗ್ರಹ ಸ್ಥಗಿತಗೊಳಿಸಲಾಯಿತು. ಕೆಲ ಸಮಯದ ಬಳಿಕ ಜನರಿಗೆ ಈ ವಿಷಯ ತಿಳಿಯಿತು. ಪ್ರಾಧಿಕಾರದ ಈ ನಿರ್ಧಾರವನ್ನು ಭಕ್ತರು ಸ್ವಾಗತಿಸಿದ್ದಾರೆ.