Khalistan Terrorist Arrested : ಗುಪ್ತಚರ ಸಂಸ್ಥೆಯಿಂದ ಚಂದ್ರಪುರದಲ್ಲಿ ಖಲಿಸ್ತಾನ್ ಬೆಂಬಲಿಗನ ಬಂಧನ!

ಪೊಲೀಸ್ ಠಾಣೆಯ ಮೇಲೆ ಹ್ಯಾಂಡ್ ಗ್ರೆನೇಡ್ ಎಸೆತ !

ಚಂದ್ರಪುರ – ಅಮೃತಸರದ ಪೊಲೀಸ್ ಠಾಣೆಯ ಮೇಲೆ ‘ಹ್ಯಾಂಡ್ ಗ್ರೆನೇಡ್’ ಎಸೆದ ಖಲಿಸ್ತಾನಿಯನ್ನು ಗುಪ್ತಚದಳ ಚಂದ್ರಪುರದಿಂದ ಬಂಧಿಸಿದೆ. ಈ ಕಾರ್ಯಾಚರಣೆಯನ್ನು ಸ್ಥಳೀಯ ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ಜಂಟಿಯಾಗಿ ನಡೆಸಿದ್ದವು. ಬಂಧಿತ ಜಸ್‌ಪ್ರಿತ್ ಸಿಂಗ್ (ವಯಸ್ಸು 20) ಎಂದು ಗುರುತಿಸಲಾಗಿದೆ. ಈ ಕಾರ್ಯಾಚರಣೆಯನ್ನು ಬೆಳಿಗ್ಗೆ ಬಹಳ ಗೌಪ್ಯವಾಗಿ ನಡೆಸಲಾಯಿತು. ಇದಾದ ನಂತರ ಆರೋಪಿಯನ್ನು ಪಂಜಾಬ್ ಪೊಲೀಸರಿಗೆ ಹಸ್ತಾಂತರಿಸಲಾಯಿತು.

2023 ರಲ್ಲಿ ಜಸಪ್ರಿತ್ ಸಿಂಗ್ ಅಮೃತಸರದಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ್ದ. ಆತ ಮಾದಕವಸ್ತು ವ್ಯಾಪಾರದಲ್ಲೂ ಸಕ್ರಿಯನಾಗಿದ್ದ. ಪೊಲೀಸ್ ಠಾಣೆಯ ಮೇಲಿನ ದಾಳಿಯ ನಂತರ ಆತ ಪರಾರಿಯಾಗಿದ್ದ. ಅಂದಿನಿಂದ, ಪಂಜಾಬ್ ಪೊಲೀಸರು ಅವನ ಜಾಡು ಹಿಡಿದಿದ್ದಾರೆ. ಆತ 6 ದಿನಗಳ ಹಿಂದೆ ಮಹಾರಾಷ್ಟ್ರಕ್ಕೆ ಬಂದಿದ್ದನೆಂದು ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಸಮಯದಲ್ಲಿ ಗುಪ್ತಚರ ದಳಗಳ ತಂಡವೊಂದು ಅವನನ್ನು ಬಂಧಿಸಿತು.

ಸಂಪಾದಕೀಯ ನಿಲುವು

ಮಹಾರಾಷ್ಟ್ರದಲ್ಲಿ ಖಲಿಸ್ತಾನದ ಉದಯ ಅಪಾಯಕಾರಿ ! ಖಲಿಸ್ತಾನವನ್ನು ಸಂಪೂರ್ಣವಾಗಿ ನಾಶಮಾಡಲು ಪ್ರಯತ್ನಗಳನ್ನು ತ್ವರಿತವಾಗಿ ಮಾಡಬೇಕು !