ಬೆಂಗಳೂರು – ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶರದ್ ಕಳಸ್ಕರ್‍ಗೆ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಿ. ಮುರಳೀಧರ್ ಪೈ ಅವರು ಜಾಮೀನು ಮಂಜೂರು ಮಾಡಿದ್ದಾರೆ. ಕಳಸ್ಕರ್‍ಗೆ ಜಾಮೀನು ನೀಡುವುದರೊಂದಿಗೆ, ಈ ಪ್ರಕರಣದ ಎಲ್ಲಾ ಆರೋಪಿಗಳಿಗೂ ಜಾಮೀನು ದೊರೆತಿದೆ. ಜಾಮೀನಿಗಾಗಿ ಅವರು ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿದ್ದರು. ಸಂವಿಧಾನದ 21ನೇ ವಿಧಿಯ ಪ್ರಕಾರ, ಬದುಕುವುದು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಆರೋಪಿಯ ವಿರುದ್ಧ ವಿಚಾರಣೆ ಬಾಕಿ ಇರುವಾಗ ಅವರ ವೈಯಕ್ತಿಕ ಹಕ್ಕುಗಳನ್ನು ಕಸಿದುಕೊಳ್ಳುವಂತಿಲ್ಲ. ಸುಪ್ರೀಂ ಕೋರ್ಟ್ ಕೂಡ, ಅನಗತ್ಯ ವಿಳಂಬವು ಬದುಕುವ ಹಕ್ಕನ್ನು ಮೊಟಕುಗೊಳಿಸುತ್ತದೆ ಎಂದು ಹೇಳಿದೆ. “ಅರ್ಜಿದಾರರು ಸೆಪ್ಟೆಂಬರ್ 2018 ರಿಂದ ಬಂಧನದಲ್ಲಿದ್ದರಿಂದ ಅವರಿಗೆ ಜಾಮೀನು ನೀಡಬಹುದು” ಎಂದು ನ್ಯಾಯಾಧೀಶ ಪೈ ಜಾಮೀನು ಮಂಜೂರು ಮಾಡುವಾಗ ಹೇಳಿದರು.