ಅಭೂತಪೂರ್ವ ಉತ್ಸಾಹದಿಂದ ತ್ರಿವೇಣಿ ಸಂಗಮದಲ್ಲಿ 1 ಕೋಟಿ 65 ಲಕ್ಷ ಭಕ್ತರಿಂದ ಮೇಳ ಸ್ನಾನ !

ಪ್ರಯಾಗರಾಜ್ ಮಹಾಕುಂಭ ಮೇಳ 2025

  • ಜನವರಿ 14 ರಂದು ಮೊದಲ ಅಮೃತ ಸ್ನಾನ !

  • ಕುಂಭ ನಗರಿ ಪ್ರಯಾಗ್‌ರಾಜ್‌ನಲ್ಲಿ ಭಕ್ತರಿಂದ ಭಜನೆ ಮತ್ತು ಭಕ್ತಿಗೀತೆಯೊಂದಿಗೆ ಆಗಮನ

ಶ್ರೀ. ಪ್ರೀತಮ್ ನಾಚಣಕರ್, ಶ್ರೀ. ಯಜ್ಞೇಶ್ ಸಾವಂತ್ ಮತ್ತು ಶ್ರೀ. ನೀಲೇಶ್ ಕುಲಕರ್ಣಿ

ಪ್ರಯಾಗರಾಜ್, ಜನವರಿ 13 (ಸುದ್ದಿ.) – ಹಲವು ದಿನಗಳಿಂದ ಪ್ರಪಂಚದಾದ್ಯಂತ ಕೋಟ್ಯಂತರ ಭಕ್ತರು ಕಾಯುತ್ತಿದ್ದ ಮಹಾಕುಂಭಮೇಳ ಇಂದು ಅಭೂತಪೂರ್ವ ಉತ್ಸಾಹದಿಂದ ಪ್ರಾರಂಭವಾಯಿತು. ಇಂದು ಲಕ್ಷಾಂತರ ಭಕ್ತರ ಆಗಮನದಿಂದ ಕುಂಭನಗರಿ ಅಕ್ಷರಶಃ ತುಂಬಿ ತುಳುಕುತ್ತಿತ್ತು. ಒಂದು ಬದಿಯಲ್ಲಿ ಗಂಗಾ ನದಿ, ಇನ್ನೊಂದು ಬದಿಯಲ್ಲಿ ಯಮುನಾ ಮತ್ತು ಕೆಳಗೆ ಹರಿಯುವ ಸರಸ್ವತಿ ನದಿಯ ಸಂಗಮದಲ್ಲಿ ಇಂದು ಒಂದುವರೆ ಕೋಟಿಗಿಂತಲೂ ಹೆಚ್ಚಿನ ಭಕ್ತರಿಂದ ‘ಹರ ಹರ ಮಹಾದೇವ’ ಮತ್ತು ‘ಜಯ ಶ್ರೀ ರಾಮ್’ ಎಂದು ಘೋಷಣೆ ಕೂಗುತ್ತಾ ಮೊದಲ ಮೇಳ ಸ್ನಾನ ಮಾಡಿದರು. ಈ ಸಮಯದಲ್ಲಿ, ಇಡೀ ಕುಂಭ ಕ್ಷೇತ್ರವು ಭಕ್ತಿ ಮತ್ತು ಚೈತನ್ಯದಿಂದ ತುಂಬಿತ್ತು. ಭಕ್ತರ ಮುಖಗಳಲ್ಲಿ ಹಬ್ಬದ ಸ್ನಾನದ ಸಂತೋಷ ತುಂಬಿ ತುಳುಕುತ್ತಿತ್ತು. ಭಕ್ತರು ತ್ರಿವೇಣಿ ಸಂಗಮದಲ್ಲಿ ಭಕ್ತಿ ಸ್ನಾನ ಮಾಡುತ್ತಿದ್ದರು ಮತ್ತು ತಮ್ಮನ್ನು ತಾವು ಧನ್ಯರೆಂದು ಪರಿಗಣಿಸುತ್ತಿದ್ದರು. 144 ವರ್ಷಗಳ ನಂತರ ನಡೆಯುತ್ತಿರುವ ಈ ಮಹಾಕುಂಭದಲ್ಲಿ ಮುಂದಿನ ಒಂದೂವರೆ ತಿಂಗಳಲ್ಲಿ ಕೋಟ್ಯಂತರ ಭಕ್ತರು ಭಾಗವಹಿಸಿ ಈ ಉತ್ಸವದ ಲಾಭವನ್ನು ಪಡೆದುಕೊಳ್ಳುವರು.

ಜನವರಿ 13 ರಂದು ಇಲ್ಲಿನ ತ್ರಿವೇಣಿ ಸಂಗಮದಲ್ಲಿ ದೇಶ ವಿದೇಶಗಳಿಂದ ಅಂದಾಜು 80 ಲಕ್ಷ ಭಕ್ತರ ಅಭೂತಪೂರ್ವ ಉತ್ಸಾಹದೊಂದಿಗೆ ಮೊದಲ ಮೇಳ ಸ್ನಾನ ನಡೆಯಿತು. ಬೆಳಿಗ್ಗೆ 4 ಗಂಟೆಯಿಂದ ಮೇಳ ಸ್ನಾನ ಪ್ರಾರಂಭವಾಯಿತು. ಕೊರೆಯುವ ಚಳಿಯಲ್ಲಿಯೂ ಸಂಗಮ ತಲುಪಲು ಎಲ್ಲಾ ರಸ್ತೆಗಳಲ್ಲಿಯೂ ಭಕ್ತರ ಪ್ರಚಂಡ ದಟ್ಟಣೆ ಇತ್ತು. ಅವರು ಸುಮಾರು 6-7 ಕಿ.ಮೀ. ದೂರ ಕ್ರಮಿಸಿ ಸಂಗಮವನ್ನು ತಲುಪಿದರು. ಅತಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಈ ಸ್ನಾನದ ಲಾಭವನ್ನು ಪಡೆದರು. ವಿಶೇಷವಾಗಿ ಕಲ್ಪವಾಸ (ಒಂದು ರೀತಿಯ ವ್ರತ) ಆಚರಿಸಲು ಬಂದ ಭಕ್ತರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ‘ಜಯ ಸಿಯಾರಾಮ್’ ಎಂದು ನಾಮ ಜಪ ಮಾಡುತ್ತಾ ಅವರೆಲ್ಲರೂ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ನಂತರ ಗಂಗಾ ಪೂಜೆ ಮತ್ತು ಆರತಿ ಮಾಡಿ ಪದ್ಧತಿಯಂತೆ ನದಿಯಲ್ಲಿ ದೀಪಗಳನ್ನು ಬಿಟ್ಟರು. ವಿದೇಶಿ ಪ್ರಜೆಗಳ ಗಮನಾರ್ಹ ಭಾಗವಹಿಸುವಿಕೆ ಈ ಮೇಳಸ್ನಾನದ ವೈಶಿಷ್ಟ್ಯವಾಗಿತ್ತು. ಜನವರಿ 14 ರಂದು ಮಕರ ಸಂಕ್ರಾಂತಿಯ ದಿನದಂದು ಇದೇ ಸ್ಥಳದಲ್ಲಿ ಮೊದಲ ರಾಜಸಿ ಸ್ನಾನ ನಡೆಯಲಿದೆ. ಈ ಸ್ನಾನಕ್ಕೆ 3 ಕೋಟಿ ಭಕ್ತರು ಬರುತ್ತಾರೆ ಎಂದು ಆಡಳಿತ ಮಂಡಳಿ ಅಂದಾಜಿಸಿದೆ. ಇದರಲ್ಲಿ ಮುಖ್ಯವಾಗಿ ಎಲ್ಲಾ ಅಖಾಡಗಳ ಸಾಧು-ಸಂತರ ಸಮಾವೇಶವಿದೆ. ಇಂದಿನ ಸ್ನಾನಕ್ಕಾಗಿ ನೀರಾವರಿ ಇಲಾಖೆಯು ಗಂಗಾ ನದಿಗೆ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿತ್ತು. ಆದ್ದರಿಂದ, ಗಂಗಾ ನದಿಯ ಹರಿವು ಸಾಮಾನ್ಯಕ್ಕಿಂತ ವೇಗವಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಗಂಗಾ ನದಿಯ ನೀರು ಅತ್ಯಂತ ಸ್ವಚ್ಛವಾಗಿದ್ದು, ಭಕ್ತರಿಗೆ ಸ್ನಾನದ ಆನಂದವನ್ನು ಅನುಭವಿಸಲು ಸಾಧ್ಯವಾಯಿತು. ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಮಹಾಕುಂಭಮೇಳವು ನಡೆಯುತ್ತದೆ.

ಕ್ಷಣಚಿತ್ರಗಳು

1. ಆಡಳಿತವು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸ್ವಯಂಸೇವಕರ ಸಹಾಯವನ್ನು ಪಡೆದುಕೊಂಡಿತು.

2. ಅನೇಕ ಸಾಧು-ಸಂತರು ಮತ್ತು ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದ ನಂತರ, ಜಪ, ತಪಸ್ಸು, ಭಜನೆ, ಕೀರ್ತನೆ, ಪಾರಾಯಣ ಇತ್ಯಾದಿಗಳಲ್ಲಿ ಮಗ್ನರಾಗಿದ್ದರು.

3. ಸ್ನಾನ ಮುಗಿಸಿ ಹಿಂತಿರುಗುವಾಗ ಅನೇಕ ಭಕ್ತರು ತಮ್ಮೊಂದಿಗೆ ಗಂಗಾಜಲವನ್ನು ಭಾವಪೂರ್ಣವಾಗಿ ಕೊಂಡೊಯ್ಯುತ್ತಿದ್ದರು.

ತಪಾಸಣೆಯ ಪರೀಕ್ಷೆಯಲ್ಲಿ ಪೊಲೀಸ್-ಆಡಳಿತ ಅಂಚಿನಲ್ಲಿ ತೇರ್ಗಡೆ; ವ್ಯವಸ್ಥೆ ಸುಧಾರಣೆಗೆ ಅವಕಾಶ !

ಅಮೃತ ಸ್ನಾನಕ್ಕೆ ಹೋಲಿಸಿದರೆ, ಮೇಳ ಸ್ನಾನಕ್ಕೆ ಭಕ್ತರ ಗದ್ದಲ ಅರ್ಧದಷ್ಟು ಕಡಿಮೆ ಇರುತ್ತದೆ. ಆದ್ದರಿಂದ, ಇಂದಿನ ಮೇಳ ಸ್ನಾನವು ಪೊಲೀಸರಿಗೆ ಮತ್ತು ಆಡಳಿತಕ್ಕೆ ಒಂದು ಪರೀಕ್ಷೆಯಾಗಿತ್ತು. ಈ ಕೆಳಗಿನ ಅಂಶಗಳಿಂದ ಇಲ್ಲಿನ ವ್ಯವಸ್ಥೆಗಳನ್ನು ನೋಡಿದರೆ ಪೊಲೀಸರು ಮತ್ತು ಆಡಳಿತವು ಈ ಪರೀಕ್ಷೆಯಲ್ಲಿ ಅಂಚಿನಲ್ಲಿ ಉತ್ತೀರ್ಣವಾಗಿದೆ ಎಂದು ಹೇಳಬಹುದು ಮತ್ತು ಜನವರಿ 14 ರಂದು ನಡೆಯುವ ಮೊದಲ ಅಮೃತ ಸ್ನಾನದ ದಿನದಂದು ಅವರ ವ್ಯವಸ್ಥೆಗಳಲ್ಲಿ ಸುಧಾರಣೆಗೆ ಅವಕಾಶವಿದೆ ಎಂದು ಭಕ್ತರ ಹೇಳಿಕೆಯಾಗಿದೆ.

1. ಪಾಂಟೂನ ಸೇತುವೆಯಲ್ಲಿ ಅವ್ಯವಸ್ಥೆ ! : ಪಾಂಟೂನ ಸೇತುವೆಯಲ್ಲಿ (ನದಿ ದಾಟಲು ನಿರ್ಮಿಸಲಾದ ತಾತ್ಕಾಲಿಕ ಸೇತುವೆ) ಭಕ್ತರ ಭಾರಿ ಜನಸಂದಣಿ ಇದ್ದ ಕಾರಣ, 50 ಮೀಟರ್ ದೂರದಲ್ಲಿ ಸ್ವಲ್ಪ ಸಮಯದವರೆಗೆ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಕೆಲವು ಕ್ಷಣಗಳ ಕಾಲ ಉದ್ವಿಗ್ನತೆಯ ವಾತಾವರಣ ನಿರ್ಮಾಣವಾಯಿತು. ಸಾಮಾನ್ಯ ಮಾರ್ಗದ ಮೇಲೆ ಜನರ ನಡೆಯುವ ವೇಗ ಪಾಂಟೂನ ಸೇತುವೆಯ ಮೇಲೆ ಕಡಿಮೆಯಾದಾಗ, ಸೇತುವೆಯ ಪ್ರವೇಶದ್ವಾರದಲ್ಲಿ ಹೆಚ್ಚಿನ ಜನದಟ್ಟಣೆ ಕಂಡುಬಂದಿತು. ಪೊಲೀಸರು ಅಲ್ಲಿದ್ದರೂ ಪರಿಸ್ಥಿತಿಯನ್ನು ನಿಯಂತ್ರಿಸಲು ಅವರಿಗೆ ಸಾಧ್ಯವಾಗಲಿಲ್ಲ.

2. ಸೂಚನಾ ಫಲಕಗಳ ಕೊರತೆ! : ಸಂಗಮ ಸ್ಥಳ ತಲುಪಲು ವಿವಿಧ ಸ್ಥಳಗಳಲ್ಲಿ ಮಾರ್ಗದರ್ಶನ ಫಲಕಗಳು ಇಲ್ಲದ ಕಾರಣ ಹೊಸದಾಗಿ ಆಗಮಿಸಿದ ಭಕ್ತರು ಗೊಂದಲಕ್ಕೊಳಗಾದರು. ಅವರಿಗೆ ಪದೇ ಪದೇ ವಿಚಾರಿಸಬೇಕಾಗುತ್ತಿತ್ತು. ಸಂಗಮಕ್ಕೆ ಭಕ್ತರ ಪ್ರವೇಶ ಮತ್ತು ಹಿಂತಿರುಗುವ ಮಾರ್ಗಗಳನ್ನು ಆಡಳಿತವು ಸ್ಪಷ್ಟವಾಗಿ ತಿಳಿಸಿದ್ದರೂ, ಭಕ್ತರಿಗೆ ಗೊಂಧಲವಾಗದೇ ಸಹಜವಾಗಿ ಗೋಚರಿಸುವಂತೆ ದೊಡ್ಡ ಫಲಕಗಳನ್ನು ವಿವಿಧ ಸ್ಥಳಗಳಲ್ಲಿ ಇರಿಸುವುದು ನಿರೀಕ್ಷಿಸಲಾಗಿತ್ತು. ಆದರೆ ಅಂತಹ ಯಾವುದೇ ವ್ಯವಸ್ಥೆ ಕಾಣಲಿಲ್ಲ. ಪರಿಣಾಮವಾಗಿ, ಬರುವ ಮತ್ತು ಹೊರಹೋಗುವ ಭಕ್ತರು ಒಂದೇ ರಸ್ತೆಯಲ್ಲಿ ಬಂದು ಹೋಗುತ್ತಿದ್ದರು, ಇದರಿಂದ ಅನಗತ್ಯ ದಟ್ಟಣೆ ಸೃಷ್ಟಿಯಾಗುತ್ತಿತ್ತು.

3. ಜನಸಂದಣಿಯಲ್ಲಿ ಕಳೆದುಹೋದವರಿಗಾಗಿ ಮಾಡಲಾಗಿರುವ ವ್ಯವಸ್ಥೆಯಲ್ಲಿನ ಅಕ್ಷಮ್ಯ ನಿಷ್ಕಾಳಜಿ ! : ಸಂಗಮದಲ್ಲಿ ಜನಸಂದಣಿಯಲ್ಲಿ ಕಳೆದುಹೋದ ಜನರಿಗೆ ಸಹಾಯ ಮಾಡಲು ಪೊಲೀಸರು ಭಾರಿ ಸಂಭ್ರಮದಿಂದ ಒಂದು ವ್ಯವಸ್ಥೆಯನ್ನು ಸ್ಥಾಪಿಸಿದರು; ಆದರೆ ವಾಸ್ತವದಲ್ಲಿ, ಈ ವ್ಯವಸ್ಥೆಯಲ್ಲಿ ಅಕ್ಷಮ ನಿಷ್ಕಾಳಜಿಯನ್ನು ತೋರಿಸಿದೆ. ಅಂತಹವರಿಗಾಗಿ ಸಂಗಮದಲ್ಲಿ ಕೇವಲ 1 ಕೊಠಡಿಯನ್ನು ನಿರ್ಮಿಸಲಾಗಿದೆ ಎಂದು ಕಂಡುಬಂದಿದೆ. ಆ ಕೋಣೆಯಲ್ಲಿ ಯಾವುದೇ ಸೂಚನಾ ಫಲಕ ಇರಲಿಲ್ಲ. ಅವರು ಅಲ್ಲಿ ಕಾಣೆಯಾದವರ ಸಂಬಂಧಿಕರ ಹೆಸರುಗಳನ್ನು ಘೋಷಿಸುತ್ತಾ, ” ಸೇತುವೆ ಸಂಖ್ಯೆ 1 ರ ಬಳಿಗೆ ಬರಬೇಕು’ ಎಂದು ಕರೆ ನೀಡಲಾಗುತ್ತಿತ್ತು. ಆದರೆ, ಈ ಸೇತುವೆ ಎಲ್ಲಿದೆ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ. ಇದು ಮತ್ತಷ್ಟು ಗೊಂದಲವನ್ನು ಸೃಷ್ಟಿಸಿತು. ಸಂಬಂಧಿಕರು ಅಳುವಿನ ಮುಖಮಾಡಿರುವುದು ಕಂಡುಬಂದಿತು. ಅಲ್ಲಿನ ಪೊಲೀಸರ ಪ್ರಕಾರ, ಬೆಳಿಗ್ಗೆ 4 ರಿಂದ 10 ಗಂಟೆಯ ನಡುವೆ ಕನಿಷ್ಠ 3 ಸಾವಿರ ನಾಪತ್ತೆಯಾಗಿರುವ ದೂರುಗಳು ಬಂದಿವೆ. ಈ ಕಕ್ಷೆಯ ವಿಷಯದಲ್ಲಿ ಸರಕಾರ ಆವಶ್ಯಕವಿರುವ ಗಂಭೀರವಾಗಿ ಜನಜಾಗೃತಿ ಮೂಡಿಸದೇ ಇರುವುದು ಕಂಡು ಬಂದಿತು.

4. ಮಹಿಳೆಯರಿಗೆ ಅನಾನುಕೂಲತೆ: ಸ್ನಾನ ಮಾಡಿದ ನಂತರ ಮಹಿಳೆಯರು ಬಟ್ಟೆ ಬದಲಾಯಿಸಲು ಆಡಳಿತವು ಘಾಟ್‌ನಲ್ಲಿ ಹಲವಾರು ಕೊಠಡಿಗಳನ್ನು ಸ್ಥಾಪಿಸಿದೆ; ಆದರೆ ಈ ಕೋಣೆ ಘಾಟ್‌ನಿಂದ ಸ್ವಲ್ಪ ದೂರದಲ್ಲಿರುವುದರಿಂದ, ಜನದಟ್ಟಣೆಯಿಂದಾಗಿ ಎಲ್ಲಾ ಮಹಿಳೆಯರು ಅಲ್ಲಿಗೆ ತಲುಪಲು ಸಾಧ್ಯವಾಗಲಿಲ್ಲ. ಆದ್ದರಿಂದ, ಮಹಿಳೆಯರ ಅನುಕೂಲಕ್ಕಾಗಿ, ಈ ಕೊಠಡಿ ಘಾಟ್‌ಗೆ ಹತ್ತಿರದಲ್ಲಿದೆ ಎಂದು ನಿರೀಕ್ಷಿಸಲಾಗಿತ್ತು.

5. ಭಿಕ್ಷುಕರ ತೊಂದರೆ! : ಸಂಗಮದಲ್ಲಿ ಸ್ನಾನ ಮಾಡಿದ ನಂತರ ದಾನ ನೀಡುವ ಸಂಪ್ರದಾಯವಿದೆ. ಆದ್ದರಿಂದ, ಸಂಗಮ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಭಿಕ್ಷುಕರು ಜಮಾಯಿಸಿದ್ದರು. ಸ್ನಾನ ಮಾಡಿ ಹಿಂತಿರುಗಿದವರ ಹಿಂದೆ ಅವರು ಅಕ್ಷರಶಃ ಹಿಂದೆ ಬೀಳುತ್ತಿದ್ದರು. ಇದರಿಂದಾಗಿ ಭಕ್ತರು ತೊಂದರೆ ಅನುಭವಿಸಿದರು.