ರಾಯಪುರ – ಛತ್ತೀಸ್‌ಗಢದ ರಾಜಧಾನಿ ರಾಯಪುರದ ಮೊಮಿನಪಾರಾ ಪ್ರದೇಶದಲ್ಲಿ 1 ವರ್ಷದಿಂದ ಅಕ್ರಮ ಗೋಹತ್ಯೆ ಮತ್ತು ಗೋಮಾಂಸ ಮಾರಾಟ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಬಿಲ್ಕಿಸ್ ಬಾನೋ ಮತ್ತು ಎರಾಮ್ ಜೋಹ್ರಾ ಹೆಸರಿನ ಇಬ್ಬರು ಮಹಿಳೆಯರು ಸೇರಿದಂತೆ 8 ಮುಸಲ್ಮಾನರನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದೂ ಸಂಘಟನೆಗಳು ಧ್ವನಿ ಎತ್ತಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳ ಮನೆಯಲ್ಲಿ ಭಾರೀ ಪ್ರಮಾಣದ ದನದ ಮಾಂಸ ಪತ್ತೆಯಾಗಿದೆ. (ಹಿಂದೂ ಸಂಘಟನೆಗಳು ಒತ್ತಾಯಿಸುವವರೆಗೂ ಕಾಯದೆ ಪೋಲೀಸರು ಸ್ವತಃ ಈ ಆಕ್ರಮ ಗೋಹತ್ಯೆ ಮತ್ತು ಗೋಮಾಂಸ ಮಾರಾಟದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಎಂದು ಸಾಮಾನ್ಯ ಹಿಂದೂಗಳು ಅಪೇಕ್ಷಿಸುತ್ತಾರೆ ! – ಸಂಪಾದಕರು)
1. ಹಿಂದೂ ಸಂಘಟನೆಗಳು ಮಾಡಿದ ಬೇಡಿಕೆಯ ನಂತರ ಪೊಲೀಸರು ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ದನದ ಮಾಂಸ, ನೈಲಾನ್ ಹಗ್ಗ, ಮರದ ದಿಮ್ಮಿ, ಚರ್ಮ, ಚಾಕು ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ. ಬಂಧಿಸಿದ ಆರೋಪಿಗಳಲ್ಲಿ ಬಿಲ್ಕಿಸ್ ಬಾನೋ, ಎರಾಮ್ ಜೋಹ್ರಾ, ಸಮೀರ್, ಖುರ್ಷಿದ್ ಅಲಿ, ಮೊಹಮ್ಮದ್ ಮುಂಟ್ಜಿರ್ ಹೈದರ್, ಅಶ್ಫಾಕ್ ಅಲಿ, ಅರ್ಮಾನ್ ಹೈದರ್ ಮತ್ತು ಮೊಹಮ್ಮದ್ ಇರ್ಷಾದ್ ಖುರೇಷಿ ಸೇರಿದ್ದಾರೆ. ಈ ಘಟನೆಯಿಂದ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
2. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ಆರೋಪಿಗಳ ವಿರುದ್ಧ ‘ಛತ್ತೀಸ್‌ಗಢ ರೈತರ ಜಾನುವಾರು ಸಂರಕ್ಷಣಾ ಕಾಯ್ದೆ, 2004’ ರ ಅಡಿಯಲ್ಲಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಂಪಾದಕೀಯ ನಿಲುವುರಾಜ್ಯದಲ್ಲಿ ಗೋಹತ್ಯೆ ವಿರೋಧಿ ಕಾನೂನು ಇರುವಾಗ ಅಲ್ಲಿ ಗೋಹತ್ಯೆ ನಡೆಯುತ್ತಿದೆ, ಎಂದರೆ ಮುಸ್ಲಿಮರಿಗೆ ಕಾನೂನಿನ ಭಯವಿಲ್ಲ, ಎಂದೇ ತಿಳಿಯಬೇಕು ! ಈ ಕಾನೂನಿನ ಕಠಿಣ ಕ್ರಮದಿಂದ ಗೋ ಹಂತಕರನ್ನು ಶಿಕ್ಷಿಸಿದರೆ ಮಾತ್ರ ಅವರು ನೂರು ಸಲ ಯೋಚಿಸುವರು ! |