ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮುಕ್ತ ಗೊಳಿಸಲು ಜಗದ್ಗುರು ರಾಮಭದ್ರಾಚಾರ್ಯ ಮಹಾರಾಜರಿಂದ ಯಾಗ

ಮಹಾಕುಂಭನಗರದಲ್ಲಿ ನೂರಾರು ಯಾಗಗಳು ನಡೆಯಲಿವೆ !

ಬಾಂಬೂ ಉಪಯೋಗಿಸಿ ನಿರ್ಮಿಸಿದ ಯಾಗಶಾಲೆ

ಪ್ರಯಾಗರಾಜ್, ಜನವರಿ 12 (ಸುದ್ದಿ) – ಮಹಾಕುಂಭ ನಗರ ಪ್ರಯಾಗರಾಜ್‌ನಲ್ಲಿ ಜನವರಿ 13 ರಂದು ಕುಂಭಸ್ನಾನ ಮತ್ತು ಜನವರಿ 14 ರಂದು ಮೊದಲ ರಾಜಸಿ ಸ್ನಾನ(ಶಾಹಿ) ನಡೆಯಲಿದೆ. ಮಹಾಕುಂಭಮೇಳದ ಸಮಯದಲ್ಲಿ ಸ್ನಾನ, ಯಾಗಗಳು, ಅನುಷ್ಠಾನಗಳಿಗೆ ಹೆಚ್ಚಿನ ಮಹತ್ವವಿರುವುದರಿಂದ ಆಖಾಡಾವಾಸಿಗಳು, ಸಂಪ್ರದಾಯಗಳು, ಸಂತರು ನೂರಾರು ಯಾಗಗಳ ಆಯೋಜನೆಯನ್ನು ಮಾಡಿದೆ. ಸಧ್ಯ ಸಂತರ ದೊಡ್ಡ ಡೇರಿಯಲ್ಲಿ ಪ್ರವಚನ, ಕಥಾವಾಚನಗಳ ಕಾರ್ಯಕ್ರಮಗಳು ಪ್ರಾರಂಭವಾಗಿವೆ. ಇಂದಿನಿಂದ ಯಾಗ ಪ್ರಾರಂಭವಾಗಲಿದೆ.
ಮಹತ್ವದ ಯಾಗಗಳಲ್ಲಿ ಪಂಚಾಯತಿ ನಿರಂಜನಿ ಆಖಾಡಾದ ಬಗಲಾಮುಖಿ ಯಾಗ, ತುಳಸಿ ಪೀಠಾಧೀಶ್ವರ ಜಗದ್ಗುರು ರಾಮಭದ್ರಾಚಾರ್ಯ ಮಹಾರಾಜ, ಶಂಕರಾಚಾರ್ಯ ಸ್ವಾಮಿ ಅವಿಮುಕ್ತೆಶ್ವರಾನಂದ ಇವರ ಶೀಬಿರದಲ್ಲಿನ ಯಾಗ, ಸಂತ ಬಾಲಕದಾಸ ಮಹಾರಾಜ, ಸ್ವಾಮಿ ಮಹೇಶಾನಂದ ಗಿರಿ, ಶಂಕರದೇವ ಚೈತನ್ಯ ಬ್ರಹ್ಮಾಚಾರಿ ಮುಂತಾದವರು ಮಾಡಲಿರುವ ವಿವಿಧ ಯಾಗಗಳು ಸೇರಿವೆ. ಬಿದಿರು ಮತ್ತು ಕೋಲುಗಳನ್ನು ಬಳಸಿ ಭವ್ಯವಾದ ತಾತ್ಕಾಲಿಕ ಸ್ವರೂಪದ ಯಾಗಮಂಟಪವನ್ನು ನಿರ್ಮಿಸಲಾಗಿದೆ. ಹವನ ದ್ರವ್ಯಗಳ ಆಹುತಿ ಮತ್ತು ಮಂತ್ರಗಳ ಪಠಣದಿಂದಾಗಿ ಕುಂಭ ಕ್ಷೇತ್ರದ ಪವಿತ್ರ ವಾತಾವರಣವು ಚೈತನ್ಯವು ತುಂಬಲಿದೆ. ಭಕ್ತರಿಗೆ ಕುಂಭ ಕ್ಷೇತ್ರದಲ್ಲಿ ನಡೆಯುವ ಈ ಮಹಾ ಯಾಗದ ಆಧ್ಯಾತ್ಮಿಕ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಯಾಗದಿಂದ ಆಧ್ಯಾತ್ಮಿಕ ಲಾಭದೊಂದಿಗೆ ಪರಿಸರದ ಶುದ್ಧಿಯಾಗಲಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಸ್ವತಂತ್ರಗೊಳಿಸಲು ಯಾಗ

ಜಗದ್ಗುರು ರಾಮಭದ್ರಾಚಾರ್ಯ ಮಹಾರಾಜ್

ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಸ್ವತಂತ್ರಗೊಳಿಸಲು, ಜಗದ್ಗುರು ರಾಮಭದ್ರಾಚಾರ್ಯ ಮಹಾರಾಜರು 251 ಯಾಗಕುಂಡಗಳಲ್ಲಿ 300 ಆಚಾರ್ಯರ ಮೂಲಕ ಆಹುತಿ ನೀಡಲಿದ್ದಾರೆ. ಈ ಸಮಯದಲ್ಲಿ, ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಆದಷ್ಟು ಬೇಗ ಸ್ವತಂತ್ರಗೊಳಿಸಲು ಸಂಕಲ್ಪ ಮಾಡಿ ಪ್ರಾರ್ಥನೆ ಮಾಡಲಿದ್ದಾರೆ. ಈ ಯಾಗ ಫೆಬ್ರವರಿ 13 ರವರೆಗೆ ಮುಂದುವರಿಯುತ್ತದೆ.

ಬಗಲಾಮುಖಿ ಮಹಾಯಾಗ

ಜನವರಿ 13 ರಂದು ಬೆಳಿಗ್ಗೆ 5.30 ಗಂಟೆಗೆ `ಮಾ ಬಗಲಾಮುಖಿ ಮಹಾಯಾಗ’ದ ಪೂಜೆಯನ್ನು ಶ್ರೀ ಪಂಚಾಯತಿ ಶ್ರೀ ನಿರಂಜನಿ ಆಖಾಡಾದಲ್ಲಿ ನಡೆಯುವುದು. ಈ ಮಹಾಯಾಗ 1 ಸಾವಿರ 8 ಗಂಟೆಗಳ ವರೆಗೆ ನಡೆಯುಲಿದೆ. ಫೆಬ್ರುವರಿ 26ರ ವರೆಗೆ ಈ ಯಾಗ ನಡೆಯುವುದು.

ಸೇನೆಯ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಲು ಯಾಗ

ಮಹಾಕುಂಭದಲ್ಲಿ ಮೊದಲ ಬಾರಿಗೆ ಸೇನೆಯಲ್ಲಿ ಹುತಾತ್ಮರಾಗಿರುವವರಿಗೆ ಶ್ರದ್ಧಾಂಜಲಿ ಅರ್ಪಿಸಲು ಮಹಾಯಾಗವನ್ನು ಆಯೋಜಿಸಲಾಗುತ್ತಿದೆ. `ಅತಿ ವಿಷ್ಣು ಮಹಾಯಾಗ ಸೇವಾ ಸಮಿತಿ’ಯಿಂದ ಸಂತ ರಾಮಬಾಲಕದಾಸ ಮಹಾರಾಜರ ಮಾರ್ಗದರ್ಶನದಡಿಯಲ್ಲಿ ಈ ಯಾಗ ನಡೆಯಲಿದೆ. ಈ ಯಾಗಕ್ಕೆ 108 ಯಾಗಕುಂಡಗಳು ನಿರ್ಮಿಸಲಾಗಿದೆ. ಯಾಗ ಸಮಿತಿಯಿಂದ ಸೇನೆಯ 700 ಕುಟುಂಬಗಳಿಗೆ ಯಾಗಕ್ಕೆ ಬರುವಂತೆ ಆಹ್ವಾನಿಸಲಾಗಿದೆ. ಹರಿಶ್ಚಂದ್ರ ಮಾರ್ಗದಲ್ಲಿ ಈ ಯಾಗವನ್ನು ಆಯೋಜಿಸಲಾಗಿದೆ.

ಗೋ ರಕ್ಷಣೆಗಾಗಿ ಯಾಗ

ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ

ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರ ಮಂಟಪದಲ್ಲಿ ಗೋವುಗಳ ರಕ್ಷಣೆಗಾಗಿ 324 ಯಾಗಕುಂಡಗಳ ಯಾಗಶಾಲೆಯನ್ನು ಸ್ಥಾಪಿಸಲಾಗಿದ್ದು, ಇದು ಮಹಾಕುಂಭದಲ್ಲಿ ಅತಿ ದೊಡ್ಡ ಯಾಗಶಾಲೆಯಾಗಿದೆ. ಯಾಗಶಾಲೆಯು ಮಧ್ಯದಲ್ಲಿ ಬಿದಿರು ಮತ್ತು ಕೋಲುಗಳಿಂದ ಮಾಡಲ್ಪಟ್ಟ 9 ಅಂತಸ್ತಿನ ರಚನೆಯನ್ನು ಹೊಂದಿದ್ದು, ಇದು ನವದುರ್ಗೆಗೆ ಸಂಬಂಧಿಸಿದೆ.

111 ಕುಂಡದ ಅತಿರುದ್ರ ಮಹಾಯಾಗ

ಸ್ವಾಮಿ ಮಹೇಶಾನಂದ ಗಿರಿ ಅವರ ಮಾರ್ಗದರ್ಶನದಲ್ಲಿ, 151 ಆಚಾರ್ಯರು 111 ಕುಂಡದ ಅತಿರುದ್ರ ಮಹಾಯಾಗವನ್ನು ಫೆಬ್ರವರಿ 21 ರಿಂದ 28 ರವರೆಗೆ ನಡೆಸಲಿದ್ದಾರೆ. ಇದನ್ನು ಸೋಮೇಶ್ವರ ಧಾಮ ನವಚಂಡಿ ಆಶ್ರಮದ ಮಂಟಪದಲ್ಲಿ ಆಯೋಜಿಸಲಾಗುತ್ತಿದೆ.

ವಿಶ್ವಕಲ್ಯಾಣಕ್ಕಾಗಿ ಮಹಾಯಾಗ

ಜನವರಿ 14 ರಿಂದ ಫೆಬ್ರವರಿ 12 ರವರೆಗೆ, 108 ಕುಂಡಗಳ ಯಾಗದಲ್ಲಿ 1 ಸಾವಿರ 100 ಆಚಾರ್ಯರು ಯಾಗದಲ್ಲಿ ವಿಶ್ವ ಶಾಂತಿಗಾಗಿ ಆಹುತಿಯನ್ನು ಅರ್ಪಿಸಲಿದ್ದಾರೆ. ಇದನ್ನು ಶ್ರೀ ರಾಮ ಲೋಚನ ಸ್ವರೂಪ ಬ್ರಹ್ಮಚಾರಿ ಬಾಬಾ ಲೀಲೌಟಿನಾಥ ಅವರ ಮಂಟಪದಲ್ಲಿ ಆಯೋಜಿಸಲಾಗಿದೆ.