Sultanpur Muslims Threaten : ‘ನಮ್ಮ ಸರಕಾರ (ಸಮಾಜವಾದಿ ಪಕ್ಷ/ಇಂಡಿ ಮೈತ್ರಿಕೂಟ) ಅಧಿಕಾರಕ್ಕೆ ಬಂದಾಗ, ನಾವು ಹಿಂದೂಗಳ ಕತ್ತು ಕತ್ತರಿಸುತ್ತೇವೆ’ ಎಂದು ಬೆದರಿಕೆ ಹಾಕಿದರು !

ಉತ್ತರ ಪ್ರದೇಶದ ಸುಲ್ತಾನಪುರದಲ್ಲಿ ಕ್ಷುಲ್ಲಕ ವಿವಾದ; ಮತಾಂಧ ಮುಸ್ಲಿಮರಿಂದ ಹಿಂದೂಗಳ ಮೇಲೆ ಹಲ್ಲೆ

ಸುಲ್ತಾನಪುರ (ಉತ್ತರ ಪ್ರದೇಶ) – ಬೈಕ್ ವಿಚಾರವಾಗಿ ನಡೆದ ಜಗಳದಲ್ಲಿ ಮತಾಂಧ ಮುಸ್ಲಿಮರು ಕತ್ತಿ ಮತ್ತು ದೊಣ್ಣೆಗಳಿಂದ ಹಿಂದೂಗಳ ಮೇಲೆ ಹಲ್ಲೆ ನಡೆಸಿದ್ದರಿಂದ ಜತಿನ್ ಮತ್ತು ಮೋಹಿತ್ ಎಂಬ ಇಬ್ಬರು ಹಿಂದೂ ಯುವಕರು ಗಾಯಗೊಂಡರು. ಈ ಘಟನೆ ಕೊಯಿರಿಪುರ ನಗರದಲ್ಲಿ ನಡೆದಿದೆ. ಇಲ್ಲಿ, ಒಬ್ಬ ಹಿಂದೂ ಯುವಕನ ಬೈಕ್ ಆಕಸ್ಮಿಕವಾಗಿ ಮುಸ್ಲಿಂ ಹುಡುಗನಿಗೆ ಡಿಕ್ಕಿ ಹೊಡೆದಿದೆ. ಇದಾದ ನಂತರ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದು, ನಂತರ ದಾಳಿ ನಡೆಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.

ಚರ್ಚೆಯ ನಂತರ ಸಮಸ್ಯೆ ಬಗೆಹರಿದಿದ್ದರೂ, ಸಂಜೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಆ ಪ್ರದೇಶಕ್ಕೆ ಬಂದು ದಾಳಿ ಮಾಡಿದರು. ಅವರು ಮಹಿಳೆಯರು ಮತ್ತು ಮಕ್ಕಳನ್ನು ಸಹ ಬಿಡಲಿಲ್ಲ. ಈ ದಾಳಿಯಲ್ಲಿ ಜೈದ್ ರೆನ್, ಹಮೀದ್ ರೆನ್, ಸುಫ್ಯಾನ್ ಅನ್ಸಾರಿ, ಇಸ್ರಾರ್, ಮಜೀದ್, ಸದ್ದಾಬ್, ಮೊಹಮ್ಮದ್ ಕೈಫ್, ಸಾಹಿಲ್, ಮೊಹಮ್ಮದ್ ಅನಸ್ ಮತ್ತು ಮೊಹಮ್ಮದ್ ಅಕಿಬ್ ಸೇರಿದಂತೆ 40-50 ಜನರು ಭಾಗಿಯಾಗಿದ್ದಾರೆ ಎಂದು ಹಿಂದೂಗಳು ಆರೋಪಿಸಿದ್ದಾರೆ. “ಆಕ್ರಮಣಕಾರಿ ಮುಸ್ಲಿಮರು, ‘ತಮ್ಮ ಸರಕಾರ (ಸಮಾಜವಾದಿ ಪಕ್ಷ/ಇಂಡಿ ಮೈತ್ರಿಕೂಟ) ಅಧಿಕಾರಕ್ಕೆ ಬಂದ ನಂತರ, ಹಿಂದೂಗಳನ್ನು ಕೊಂದು ಅವರ ಕುತ್ತಿಗೆ ಕತ್ತರಿಸುವುದಾಗಿ’, ಬೆದರಿಕೆ ಹಾಕಿದರು ಹಾಗೂ ಅವರ ಕೂದಲನ್ನು ಸಹ ಕತ್ತರಿಸಿ ಮಸೀದಿಯಲ್ಲಿ ಇಡಲಾಗುವುದು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಂಪಾದಕೀಯ ನಿಲುವು

ಈ ಬೆದರಿಕೆಯ ಬಗ್ಗೆ ಸಮಾಜವಾದಿ ಪಕ್ಷ ಮತ್ತು ಇಂಡಿ ಮೈತ್ರೀಕೂಟದ ನಾಯಕರು ಏನಾದರೂ ಹೇಳುತ್ತಾರೆಯೇ ? ಈ ಬೆದರಿಕೆ ಹಿಂದೂಗಳ ನರಮೇಧ ನಡೆಸುವವರ ಹಿಂದೆ ಯಾವ ರಾಜಕೀಯ ಪಕ್ಷವಿದೆ ಎಂಬುದನ್ನು ತೋರಿಸುತ್ತದೆ !