Jharkhand School Punishment To Girl Students : ಜಾರ್ಖಂಡ್‌ನ ಮಿಷನರಿ ಶಾಲೆಯೊಂದರಲ್ಲಿ 80 ವಿದ್ಯಾರ್ಥಿನಿಯರನ್ನು ಶರ್ಟ್ ತೆಗೆದು ‘ಬ್ಲೇಜರ್‌’ ಹಾಕಿಸಿ ಮನೆಗೆ ಕಳುಹಿಸಲಾಯಿತು !

  • ಪೆನ್ನಿನಿಂದ ಶರ್ಟ್ ಮೇಲೆ ಬರೆದಿದ್ದರಿಂದ ಶರ್ಟ್ ತೆಗೆಯಲು ಹೇಳಲಾಯಿತು

  • ಜಿಲ್ಲಾಧಿಕಾರಿಯಿಂದ ತನಿಖೆಗೆ ಆದೇಶ

(ಬ್ಲೇಜರ್ ಎಂದರೆ ಶರ್ಟ್ ಮೇಲೆ ಧರಿಸುವ ಜಾಕೆಟ್)

ಧನಬಾದ (ಜಾರ್ಖಂಡ್) – ಇಲ್ಲಿನ ಕಾರ್ಮೆಲ್ ಶಾಲೆಯ 10 ನೇ ತರಗತಿಯ 80 ವಿದ್ಯಾರ್ಥಿನಿಗಳಿಗೆ ಶರ್ಟ್ ತೆಗೆಯುವಂತೆ ಅನಿವಾರ್ಯಗೊಳಿಸಲಾಯಿತು ಎಂದು ಆರೋಪಿಸಲಾಗಿದೆ. ಶಾಲೆಯ ಪ್ರಾಂಶುಪಾಲರ ಆದೇಶದ ಮೇರೆಗೆ ನಡೆದಿದೆ ಎಂದು ಆರೋಪಿಸಲಾಗಿದೆ. ಇದಾದ ನಂತರ, ಅವರನ್ನು ಶರ್ಟ್ ಬದಲಿಗೆ ‘ಬ್ಲೇಜರ್’ ಹಾಕಿಸಿ ಮನೆಗೆ ಕಳುಹಿಸಲಾಯಿತು. ಈ ಘಟನೆ ಜನವರಿ 9, 2024 ರಂದು ನಡೆದಿದೆ. ಪೋಷಕರ ದೂರಿನ ಮೇರೆಗೆ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ. ಆದರೆ, ಶಾಲೆಯ ಪ್ರಾಂಶುಪಾಲರು ಈ ಆರೋಪಗಳನ್ನು ಆಧಾರರಹಿತ ಎಂದು ಕರೆದಿದ್ದು, “ಶಾಲೆಯಲ್ಲಿ ಈ ರೀತಿಯ ಏನೂ ನಡೆದಿಲ್ಲ” ಎಂದು ಹೇಳಿದ್ದಾರೆ. ಧನಬಾದ್ ಶಾಸಕಿ ರಾಗಿಣಿ ಸಿಂಗ್ ಕೂಡ ಈ ವಿಷಯದಲ್ಲಿ ಶಾಲೆಯನ್ನು ಟೀಕಿಸಿದ್ದಾರೆ.

10 ನೇ ತರಗತಿಯ ಪರೀಕ್ಷೆಗಳ ನಂತರ, ವಿದ್ಯಾರ್ಥಿಗಳು ‘ಪೆನ್ ಡೇ’ ಆಚರಿಸುತ್ತಿದ್ದರು ಮತ್ತು ಪೆನ್ನುಗಳಿಂದ ಪರಸ್ಪರ ಶರ್ಟ್‌ಗಳ ಮೇಲೆ ಬರಹಗಳನ್ನು ಬರೆಯುತ್ತಿದ್ದರು. ಆದ್ದರಿಂದ, ಅವರ ಶರ್ಟ್‌ಗಳನ್ನು ತೆಗೆಯಲು ಹೇಳಲಾಗಿದೆ ಎಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಮಿಷನರಿ ಶಾಲೆಗಳಲ್ಲಿ ವಿವಾದಗಳು ಏಕೆ ಆಗುತ್ತಿರುತ್ತವೆ, ಎಂಬುದರ ವಿಚಾರ ಮಾಡಿ ಸರಕಾರವು ಅವುಗಳ ಮೇಲೆ ನಿರ್ದಿಷ್ಟವಾಗಿ ನಿಯಂತ್ರಿಸಲು ಒಂದು ಇಲಾಖೆಯನ್ನು ಸ್ಥಾಪಿಸುವುದು ಈಗ ಅಗತ್ಯವಾಗಿದೆ !