|
ಪ್ರಯಾಗರಾಜ, ಜನವರಿ 12 (ಸುದ್ದಿ) – ತೀರ್ಥರಾಜ ಪ್ರಯಾಗರಾದಲ್ಲಿರುವ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪವಿತ್ರ ತ್ರಿವೇಣಿ ಸಂಗಮದ ದಡದಲ್ಲಿ ಜನವರಿ 13 ರಿಂದ ಮಹಾಕುಂಭ ಪರ್ವವು ಆರಂಭವಾಗಲಿದೆ. ಜನವರಿ 13 ರಂದು ಮಹಾಕುಂಭಮೇಳದ ಮೊದಲನೇ ಸ್ನಾನ ನಡೆಯಲಿದ್ದು, ಜನವರಿ 14 ರಂದು ಮೊದಲ ಅಮೃತ ಸ್ನಾನ ನಡೆಯಲಿದೆ. ಫೆಬ್ರವರಿ 26 ರವರೆಗೆ ನಡೆಯಲಿರುವ ಮಹಾಕುಂಭಪರ್ವದಲ್ಲಿ ಭಾರತದ ಎಲ್ಲಾ 13 ಅಖಾಡಗಳ ಸಾಧು-ಸಂತರು, ಆಚಾರ್ಯ ಮಹಾಮಂಡಲೇಶ್ವರರು, ಮಹಾಮಂಡಲೇಶ್ವರರು, ಮಹಂತರು ಮುಂತಾದವರೊಂದಿಗೆ, ದೇಶ ವಿದೇಶಗಳಿಂದ ಅಸಂಖ್ಯಾತ ಸಾಧು-ಸಂತರು ಭಾಗವಹಿಸಲಿದ್ದಾರೆ. ಎಲ್ಲಾ 13 ಆಖಾಡಗಳ ಪೇಶವಾಯಿ ಅಂದರೆ ನಗರಪ್ರವೇಶ ನಡೆದಿದೆ. ಈ ವರ್ಷದ್ದು ಮಹಾಕುಂಭಮೇಳವಾಗಿದ್ದರಿಂದ, ಸಾಧು-ಸಂತರೊಂದಿಗೆ ಎಲ್ಲ ಭಕ್ತರಲ್ಲಿ ಅಪಾರ ಉತ್ಸಾಹವಿದೆ. ಈ ಮಹಾಕುಂಭಮೇಳವು ವಿಶ್ವದಲ್ಲೇ ಅತಿ ದೊಡ್ಡ ಉತ್ಸವವಾಗಿರುವುದರಿಂದ, ಪೊಲೀಸರು ಮತ್ತು ಆಡಳಿತವು ಭಾವಿಕರಿಗೆ ಭಾರಿ ಪ್ರಮಾಣದಲ್ಲಿ ಸೌಲಭ್ಯಗಳನ್ನು ಒದಗಿಸಿದೆ.
ಸಿಂಗರಿಸಲ್ಪಟ್ಟಿದೆ ಪ್ರಯಾಗರಾಜ ನಗರ !
ಮಹಾಕುಂಭಮೇಳದ ನಿಮಿತ್ತ ಸಂಪೂರ್ಣ ಪ್ರಯಾಗರಾಜ ನಗರವು ಅಲಂಕೃತಗೊಂಡಿದೆ. ನಗರದ ಮತ್ತು ಕುಂಭಕ್ಷೇತ್ರದ ಎಲ್ಲಾ ಪ್ರವೇಶದ್ವಾರಗಳಲ್ಲಿ ದೊಡ್ಡ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ. ರೈಲು ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳು ಹಾಗೆಯೇ ಇತರ ಸ್ಥಳಗಳನ್ನೂ ಅಲಂಕರಿಸಲಾಗಿದೆ. ಎಲ್ಲೆಡೆ ಮಾರ್ಗವನ್ನು ಸೂಚಿಸುವ ಕಮಾನುಗಳನ್ನು ನಿರ್ಮಿಸಲಾಗಿದೆ. ಈ ವರ್ಷದ ಮಹಾಕುಂಭಪರ್ವದ ಪ್ರಮುಖ ಆಕರ್ಷಣೆ ಅಂದರೆ ನಗರದಾದ್ಯಂತ ಗೋಡೆಗಳ ಮೇಲೆ ಬಿಡಿಸಲಾದ ಹಿಂದೂಗಳ ಪ್ರಾಚೀನ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳನ್ನು ಬಿಂಬಿಸುವ ವರ್ಣಚಿತ್ರಗಳು. ಹೆದ್ದಾರಿ ಮತ್ತು ನಗರದಲ್ಲಿರುವ ಎಲ್ಲಾ ವಿದ್ಯುತ್ ಕಂಬಗಳ ಮೇಲೆ ಆಕರ್ಷಕ ದೀಪಗಳನ್ನು ಅಳವಡಿಸಲಾಗಿದ್ದು, ಪ್ರತಿ ಕಂಬದ ಮೇಲೆ ಶಂಖ, ಚಕ್ರ, ಸ್ವಸ್ತಿಕ ಇತ್ಯಾದಿ ಶುಭಚಿಹ್ನೆಗಳನ್ನು ಇರಿಸಲಾಗಿದೆ.
ಭವ್ಯ-ದಿವ್ಯವಾದ ಮಹಾಕುಂಭಪರ್ವದ ಭವ್ಯ-ದಿವ್ಯ ಸಿದ್ಧತೆಯು ಹೀಗಿದೆ ನೋಡಿ !1. ಸಂಗಮದ ದಡದಲ್ಲಿ 20 ಕಿ.ಮೀ. ಪ್ರದೇಶದಲ್ಲಿ ಕುಂಭಮೇಳ ಇದೆ ! |
ಈ ವರ್ಷದ ಕುಂಭಪರ್ವದಿಂದ, ‘ಶಾಹಿ ಸ್ನಾನ’ವನ್ನು ‘ಅಮೃತ ಸ್ನಾನ’ ಎಂದು ಕರೆಯಲಾಗುವುದು !
‘ಶಾಹಿ ಸ್ನಾನ’ ಎಂಬ ಪದವು ಮೊಘಲರ ಕಾಲದಿಂದ ಬಳಕೆಯಾಗುತ್ತಿತ್ತು. ಕೆಲವು ತಿಂಗಳ ಹಿಂದೆ, ಅಖಾಡ ಪರಿಷತ್ತು ಗುಲಾಮಗಿರಿಯ ಸಂಕೇತ ಎಂದು ಹೇಳಿ ಈ ವರ್ಷದ ಕುಂಭಪರ್ವದಿಂದ ‘ಶಾಹಿ ಸ್ನಾನ’ವನ್ನು ‘ಅಮೃತ ಸ್ನಾನ’ ಎಂದು ಸಂಬೋಧಿಸುವ ನಿರ್ಣಯ ತೆಗೆದುಕೊಂಡಿತು. ಇದು ಈ ವರ್ಷದ ಪ್ರಯಾಗರಾಜಿನಲ್ಲಿ ನಡೆಯಲಿರುವ ಮಹಾಕುಂಭಪರ್ವದಿಂದ ಆರಂಭವಾಗಿದೆ.
ಅಮೃತ ಮತ್ತು ಪರ್ವ ಸ್ನಾನದ ದಿನಾಂಕ :
|
ಪೊಲೀಸರಿಂದ ಬಿಗಿ ಭದ್ರತಾವ್ಯವಸ್ಥೆ!
|
ಪ್ರಯಾಗರಾಜ್ – ಈ ವರ್ಷದ ಮಹಾಕುಂಪರ್ವಕ್ಕೆ 40 ಕೋಟಿ ಭಕ್ತರು ಬರುವ ಸಾಧ್ಯತೆಯನ್ನು ಗಮನದಲ್ಲಿಟ್ಟು, ಉತ್ತರಪ್ರದೇಶ ಪೊಲೀಸರೂ ಇಡೀ ಕುಂಭಪರ್ವದ ಭದ್ರತೆಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಮಹಾಕುಂಭಪರ್ವಕ್ಕಾಗಿ ಪೊಲೀಸರು ಏಳು ಹಂತದ ಭದ್ರತಾ ವ್ಯವಸ್ಥೆಯನ್ನು ಮಾಡಿದ್ದು, ಸುಮಾರು 60 ಸಾವಿರ ಪೊಲೀಸರ ಪಡೆಯನ್ನು ನಿಯೋಜಿಸಲಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 13 ತಾತ್ಕಾಲಿಕ ಪೊಲೀಸ್ ಠಾಣೆಗಳು, 23 ಪೊಲೀಸ್ ಚೌಕಿಗಳು, ಹಾಗೆಯೇ 8 ವಲಯಗಳು ಮತ್ತು 18 ಸೆಕ್ಟರಗಳನ್ನು ರಚಿಸಲಾಗಿದೆ. ಇದರೊಂದಿಗೆ, ಅರೆಸೈನಿಕ ಪಡೆಗಳು, ಸಶಸ್ತ್ರ ಪೊಲೀಸ್ ಪಡೆಗಳು, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ತಂಡಗಳು, ರಾಷ್ಟ್ರೀಯ ವಿಪತ್ತು ಪ್ರತಿಸ್ಪಂದನೆ ತಂಡ ಮುಂತಾದ ತಂಡಗಳನ್ನು ಸಹ ನಿಯೋಜಿಸಲಾಗಿದೆ. ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಿಂದ ಕುಂಭಮೇಳಕ್ಕೆ ಬರುವ ಭಕ್ತರಿಗಾಗಿ ವಿಶೇಷ ಪೊಲೀಸ್ ಭದ್ರತಾ ವ್ಯವಸ್ಥೆ ಇರಲಿದೆ. ಭದ್ರತೆಯ ದೃಷ್ಟಿಯಿಂದ ಅಂತರರಾಷ್ಟ್ರೀಯ ಮತ್ತು ಅಂತರರಾಜ್ಯ ಪ್ರವಾಸಿಗರ ಪರಿಶೀಲನೆ ನಡೆಸಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದರು. ಇದರೊಂದಿಗೆ ಎ.ಐ. ಆಧಾರಿತ ಸಿಸಿಟಿವಿ ಕ್ಯಾಮೆರಾಗಳು, ಡ್ರೋನಗಳು ಮತ್ತು ಆಂಟಿ-ಡ್ರೋನ್ ವ್ಯವಸ್ಥೆಗಳನ್ನು ಸಹ ಬಳಸಲಾಗುವುದು. ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಮೇಲೂ ಪೊಲೀಸರು ನಿಗಾ ಇಡಲಿದ್ದಾರೆ.
ಸೇನಾಪಡೆಯ ವ್ಯವಸ್ಥೆ ಹೀಗಿರಲಿದೆ
ಝೋನ (ವಿಭಾಗ) 8, ಸೆಕ್ಟರ್ 18, 60 ಸಾವಿರ ಪೊಲೀಸ್ ಸಿಬ್ಬಂದಿ, 13 ತಾತ್ಕಾಲಿಕ ಪೊಲೀಸ್ ಠಾಣೆಗಳು, 44 ಶಾಶ್ವತ ಪೊಲೀಸ್ ಠಾಣೆಗಳು, 23 ತಾತ್ಕಾಲಿಕ ಪೊಲೀಸ್ ಚೌಕಿಗಳು, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ 21 ಪಡೆಗಳು, 2 ಮೀಸಲು ಪಡೆಗಳು, ಪ್ರಾಂತೀಯ ಸಶಸ್ತ್ರ ಪಡೆಗಳ 5 ತಂಡಗಳು, ರಾಷ್ಟ್ರೀಯ ವಿಪತ್ತು ಪ್ರತಿಸ್ಪಂದನ ಪಡೆಯ 4 ತಂಡಗಳು, 12 ತಪಾಸಣಾ ತಂಡಗಳು ಮತ್ತು ಬಾಂಬ್ ಪತ್ತೆ ಮತ್ತು ವಿಲೇವಾರಿ ದಳಗಳ 4 ತಂಡಗಳ ಪಡೆಯು ಇರಲಿದೆ.