ಬಾಂಗ್ಲಾದೇಶದ ಮಧ್ಯಂತರ ಸರಕಾರ ಮತ್ತೆ ಹಿಂದೂದ್ವೇಷಿ ಹೇಳಿಕೆ
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶ ಸರಕಾರವು ಪೊಲೀಸ್ ವರದಿಯನ್ನು ಆಧರಿಸಿ, “ಕಳೆದ ವರ್ಷ ಆಗಸ್ಟ್ 4 ರಿಂದ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ನಡೆದ ಹೆಚ್ಚಿನ ಘಟನೆಗಳು ‘ರಾಜಕೀಯ ಸ್ವರೂಪದ್ದಾಗಿವೆ’ ಮತ್ತು ಧಾರ್ಮಿಕ ಸ್ವರೂಪದ್ದಾಗಿರಲಿಲ್ಲ” ಎಂದು ಹೇಳಿದೆ. ಪೊಲೀಸರು ಧಾರ್ಮಿಕ ಹಿಂಸಾಚಾರದ ಬಗ್ಗೆ ನೇರ ದೂರುಗಳನ್ನು ಪಡೆಯಲು ಮತ್ತು ಅಲ್ಪಸಂಖ್ಯಾತ ಸಮುದಾಯಗಳೊಂದಿಗೆ ಸಂಪರ್ಕವನ್ನು ಕಾಯ್ದುಕೊಳ್ಳುವುದು. ಸಹಾಯವಾಣಿ ಸಂಖ್ಯೆಯನ್ನು ಸ್ಥಾಪಿಸಲಾಗಿದೆ ಮತ್ತು ವಾಟ್ಸಾಪ್ ಸಂಖ್ಯೆಯನ್ನು ಸಹ ಪ್ರಸಾರ ಮಾಡಲಾಗಿದೆ.
ಮಧ್ಯಂತರ ಸರಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರ ಪ್ರಸರ ಮಾಧ್ಯಮ ವಿಭಾಗವು,
1. ‘ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರೈಸ್ತ ಯುನಿಟಿ ಕೌನ್ಸಿಲ್’ ಇತ್ತೀಚೆಗೆ ಮಾಡಿದ ದಾವೆಯ ನಂತರ ಪೊಲೀಸ್ ತನಿಖೆಯನ್ನು ಪ್ರಾರಂಭಿಸಿತ್ತು. ಪದಚ್ಯುತ ಪ್ರಧಾನಿ ಶೇಖ್ ಹಸೀನಾ ದೇಶ ತೊರೆಯುವ ಒಂದು ದಿನ ಮೊದಲು ಅಂದರೆ ಆಗಸ್ಟ್ 5, 2024 ರಂದು, 2 ಸಾವಿರದ 10 ಧಾರ್ಮಿಕ ಹಿಂಸಾಚಾರದ ಘಟನೆಗಳು ನಡೆದವು. ಇವುಗಳಲ್ಲಿ ಒಟ್ಟು 1 ಸಾವಿರದ 769 ಘಟನೆಗಳು ದಾಳಿಗಳು ಮತ್ತು ವಿಧ್ವಂಸಕ ಕೃತ್ಯಗಳ ರೂಪದಲ್ಲಿ ವರದಿ ಮಾಡಲಾಗಿದೆ.
2. ಈ ಆರೋಪಗಳ ಆಧಾರದ ಮೇಲೆ ಪೊಲೀಸರು ಇದುವರೆಗೆ 62 ಪ್ರಕರಣಗಳನ್ನು ದಾಖಲಿಸಿದ್ದಾರೆ ಮತ್ತು ತನಿಖೆಯ ಆಧಾರದ ಮೇಲೆ ಕನಿಷ್ಠ 35 ಅಪರಾಧಿಗಳನ್ನು ಬಂಧಿಸಿದ್ದಾರೆ. ಪೊಲೀಸ್ ತನಿಖೆಯಲ್ಲಿ 1 ಸಾವಿರದ 234 ಘಟನೆಗಳು ‘ರಾಜಕೀಯ ಸ್ವರೂಪ’ದ್ದಾಗಿದ್ದು, 20 ಘಟನೆಗಳು ಧಾರ್ಮಿಕ ಸ್ವರೂಪದ್ದಾಗಿದ್ದವು ಮತ್ತು ಕನಿಷ್ಠ 161 ದಾವೆಗಳು ಸುಳ್ಳು ಎಂದು ಕಂಡುಬಂದಿದೆ. ಒಟ್ಟು 115 ಪ್ರಕರಣಗಳು ದಾಖಲಾಗಿದ್ದು, ಕನಿಷ್ಠ 100 ಜನರನ್ನು ಬಂಧಿಸಲಾಗಿದೆ.
3. ದೇಶದಲ್ಲಿ ಯಾವುದೇ ಧಾರ್ಮಿಕ ದಾಳಿಗಳ ಬಗ್ಗೆ ನಾವು ಶೂನ್ಯ ಸಹಿಷ್ಣುತಾ ನೀತಿಯನ್ನು ಹೊಂದಿದ್ದೇವೆ ಮತ್ತು ಅಪರಾಧಿಗಳನ್ನು ಬಂಧಿಸಲು ಪೊಲೀಸರಿಗೆ ಆದೇಶಿಸಲಾಗಿದೆ. ಸಂತ್ರಸ್ತರಿಗೆ ನಷ್ಟಪರಿಹಾರವನ್ನೂ ಘೋಷಿಸಿದೆ.
🚨 Attacks on Hindus in Bangladesh are being justified as political in nature. 🤯
The interim Government of Bangladesh has made another anti-Hindu statement, revealing the country’s extremist I$l@mic stance. 🌟
Other religious communities no longer have any rights or existence… pic.twitter.com/TlE6HerP2g
— Sanatan Prabhat (@SanatanPrabhat) January 12, 2025
ಸಂಪಾದಕೀಯ ನಿಲುವುಬಾಂಗ್ಲಾದೇಶ ಈಗ ಕಟ್ಟರ ಇಸ್ಲಾಮಿಕ್ ರಾಷ್ಟ್ರವಾಗಿದೆ. ಇತರ ಧರ್ಮಗಳು ಇನ್ನು ಮುಂದೆ ಅಲ್ಲಿ ಯಾವುದೇ ಹಕ್ಕುಗಳು ಅಥವಾ ಅಸ್ತಿತ್ವ ಇರುವುದಿಲ್ಲ. ಆದ್ದರಿಂದ, ಅವು ಅವರ ವಿರುದ್ಧ ನಡೆದ ದೌರ್ಜನ್ಯಗಳಾಗಿದ್ದರೂ ಸಹ, ಅದು ವಿವಿಧ ಕಾರಣಗಳಿಗಾಗಿ ಬೆಂಬಲಿಸುತ್ತಾರೆ, ಇದು ಮತ್ತೊಮ್ಮೆ ಸ್ಪಷ್ಟವಾಗಿದೆ ! |