Khalistani Terrorist Pannun Issues New Threat : ‘ರಷ್ಯಾ ಮತ್ತು ಅಮೇರಿಕಾದಲ್ಲಿರುವ ಭಾರತೀಯ ರಾಯಭಾರಿಗೆ ಪಾಠ ಕಲಿಸುತ್ತೇನೆ!’ – ಖಲಿಸ್ತಾನಿ ಗುರುಪತ್ವಂತ್ ಸಿಂಗ್

ಅಮೇರಿಕಾ ಪ್ರಾಯೋಜಿತ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನಿಂದ ಹೊಸ ಬೆದರಿಕೆ

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕ ಪ್ರಾಯೋಜಿತ ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನು ವಿಡಿಯೋವೊಂದನ್ನು ಪ್ರಸಾರ ಮಾಡಿ ಫುನಃ ಬೆದರಿಕೆ ಹಾಕಿದ್ದಾನೆ. ಅವನು, ‘ಖಲಿಸ್ತಾನಿಗಳ ವಿರುದ್ಧ ಹೋರಾಟ ನಡೆಸಲು ಭಾರತಕ್ಕೆ ರಷ್ಯಾದಿಂದ ನೆರವು ಸಿಗುತ್ತಿದೆ. ರಷ್ಯಾ ಭಾರತಕ್ಕೆ ಖಲಿಸ್ತಾನದ ಬಗ್ಗೆ ರಹಸ್ಯ ಮಾಹಿತಿ ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಸಂಘಟನೆ ರಷ್ಯಾವನ್ನೂ ಗುರಿಯಾಗಿಸುತ್ತದೆ. ರಷ್ಯಾ ಮತ್ತು ಅಮೇರಿಕೆಯಲ್ಲಿರುವ ಭಾರತದ ರಾಯಭಾರಿ ವಿನಯ ಕ್ವಾತ್ರಾ ಅವರಿಗೆ ತಕ್ಕ ಪಾಠ ಕಲಿಸಲಾಗುವುದು. ರಷ್ಯಾ ಭಾರತಕ್ಕೆ ಸಹಾಯ ಮಾಡದಂತೆ ತಡೆಯಲು ಖಲಿಸ್ತಾನಿ ಉತ್ತರ ಅಮೇರಿಕ, ಯುರೋಪಿಯನ್ ಯೂನಿಯನ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿರುವ ರಷ್ಯಾದ ರಾಜತಾಂತ್ರಿಕರ ಮೇಲೆ ದಾಳಿ ನಡೆಸಲಿದ್ದಾರೆ’, ಎಂದು ಹೇಳಿದ್ದಾನೆ.

1. ಅಮೇರಿಕದಲ್ಲಿರುವ ಭಾರತದ ರಾಯಭಾರಿ ವಿನಯ ಮೋಹನ್ ಕ್ವಾತ್ರಾ ರಷ್ಯಾದ ಅಧಿಕಾರಿಗಳೊಂದಿಗೆ ಹೆಚ್ಚು ಮಾತನಾಡುತ್ತಿದ್ದಾರೆ ಎಂದು ಪನ್ನುಗೆ ಅನಿಸುತ್ತದೆ. ಕ್ವಾತ್ರಾ ವಾಷಿಂಗ್ಟನ್‌ನಲ್ಲಿದ್ದಾರೆ ಮತ್ತು ರಷ್ಯಾದ ರಾಜತಾಂತ್ರಿಕರು ಮತ್ತು ವಾಣಿಜ್ಯ ರಾಯಭಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ. ಅವರಿಗೆ ರಷ್ಯಾದ ಏಜೆನ್ಸಿಗಳಿಂದ ಖಲಿಸ್ತಾನ್ ಪರ ಸಿಖ್ಖರ ಬಗ್ಗೆ ಮಾಹಿತಿ ಸಿಗುತ್ತಿದೆ. ಈ ಮಾಹಿತಿ ಆಧರಿಸಿ ಸಿಖ್ಖರನ್ನು ಗುರಿಯಾಗಿಸಲಾಗುತ್ತಿದೆ. ವಿನಯ ಕ್ವಾತ್ರಾ ಭಾರತ-ರಷ್ಯಾ ಮೈತ್ರಿಯ ಮುಖವಾಗುತ್ತಿದ್ದಾರೆ. ಖಲಿಸ್ತಾನಿಗಳ ಪಟ್ಟಿಯಲ್ಲಿ ಕ್ವಾತ್ರಾ ಹೆಸರು ಅಗ್ರಸ್ಥಾನದಲ್ಲಿದೆ. ರಷ್ಯಾ ಭಾರತಕ್ಕೆ ಬೆಂಬಲ ನೀಡುವುದನ್ನು ನಿಲ್ಲಿಸದಿದ್ದರೆ ಅವರ ಹಾನಿ ಆಗುವುದು.

2. ಕಳೆದ ವಾರದಲ್ಲಿ ಖಲಿಸ್ತಾನ್ ಧ್ವಜಗಳನ್ನು ಹಿಡಿದುಕೊಂಡು ಬಂದ ಜನರು ನ್ಯೂಯಾರ್ಕ್ (ಅಮೇರಿಕಾ) ಮತ್ತು ಟೊರೊಂಟೊ (ಕೆನಡಾ) ನಲ್ಲಿರುವ ರಷ್ಯಾದ ವಾಣಿಜ್ಯ ರಾಯಭಾರ ಕಚೇರಿ ಮುಂದೆ ಪ್ರತಿಭಟಿಸಿದ್ದರು. ಈ ವೇಳೆ ಭಾರತ ವಿರೋಧಿ ಘೋಷಣೆಗಳನ್ನು ಕೂಗಲಾಗಿತ್ತು.

ಸಂಪಾದಕೀಯ ನಿಲುವು

ಪನ್ನು ಅಮೇರಿಕೆಯ ಅನ್ನದ ಋಣ ತೀರಿಸಲು ಹವಣಿಸುತ್ತಿರುವುದು ಗಮನಕ್ಕೆ ಬರುತ್ತಿದೆ !