|
(ಮೌಲಾನಾ ಎಂದರೆ ಇಸ್ಲಾಮಿನ ಅಧ್ಯಯನಕಾರರು)
(ಮುಫ್ತಿ ಎಂದರೆ ಷರಿಯಾ ಕಾನೂನಿನ ಪ್ರಕಾರ ನ್ಯಾಯವನ್ನು ನೀಡುವವರು)
ಬರೇಲಿ (ಉತ್ತರ ಪ್ರದೇಶ) – ಬರೇಲಿ ನಗರದ ಬೀದಿ ದೀಪದ ಕಂಬಗಳ ಮೇಲೆ ತ್ರಿಶೂಲಗಳನ್ನು ಅಳವಡಿಸಿದ್ದರಿಂದ ಅಸಮಾಧಾನ ವ್ಯಕ್ತಪಡಿಸಿರುವ ಆಲ್ ಇಂಡಿಯಾ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಮುಫ್ತಿ ಶಹಾಬುದ್ದೀನ್ ರಿಜ್ವಿ ಇವರು, ‘ಮಹಾನಗರಪಾಲಿಕೆಯು ಕೇವಲ ಒಂದು ಧರ್ಮವನ್ನು ಬೆಂಬಲಿಸುತ್ತಿದೆ’, ಎಂದು ಆರೋಪಿಸಿದರು. ರಿಜ್ವಿ ಅವರು ‘ತ್ರಿಶೂಲದ ಪಕ್ಕದಲ್ಲಿ ಹಸಿರು ಬಾವುಟ ಹಚ್ಚುತ್ತೇವೆ’, ಎಂದು ಎಚ್ಚರಿಸಿದ್ದಾರೆ.
Maulana Mufti Shahabuddin Razvi, National President of All India Muslim Jamaat, objects to Tridents (Trishul) installed on streetlights by the Municipal Corporation in Bareilly (Uttar Pradesh)
Issues a warning to install a green flag above the tridents.
The fact that Mu$l!ms… pic.twitter.com/dsAPyuWK9b
— Sanatan Prabhat (@SanatanPrabhat) December 16, 2024
ಮೌಲಾನಾ ಬರೇಲವಿಯವರು ನೀಡಿರುವ ಮನವಿಯಲ್ಲಿ,
1. ಮಹಾನಗರಪಾಲಿಕೆಯು ನಗರ ಸೌಂದರ್ಯಗೊಳಿಸುವ ಉತ್ತಮ ಕೆಲಸ ಮಾಡುತ್ತಿದೆ; ಆದರೆ ವಿದ್ಯುತ್ ಕಂಬಗಳು, ರಸ್ತೆ ಡಿವೈಡರ್ ಇತ್ಯಾದಿಗಳಲ್ಲಿ ತ್ರಿಶೂಲಗಳನ್ನು ಅಳವಡಿಸಿ ವಿಶಿಷ್ಟ ಧರ್ಮದ ಪ್ರಚಾರ ಮತ್ತು ಪ್ರಸಾರ ಮಾಡುವ ಮೂಲಕ ನಗರದ ಘನತೆಯನ್ನು ಹಾಳು ಮಾಡುತ್ತಿದ್ದಾರೆ. (ತ್ರಿಶೂಲ ಹಾಕುವುದರಿಂದ ನಗರದ ಘನತೆಗೆ ಹೇಗೆ ಧಕ್ಕೆಯಾಗುತ್ತದೆ? ಹಿಂದೂಗಳ ಧಾರ್ಮಿಕ ಸಂಕೇತದ ಬಗ್ಗೆ ಈ ರೀತಿ ಹೇಳಿಕೆ ನೀಡಿದ್ದಕ್ಕಾಗಿ ಅವರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣ ದಾಖಲಿಸಿ ಜೈಲಿಗೆ ಹಾಕಬೇಕು ! – ಸಂಪಾದಕರು) ಇತರ ಧರ್ಮಗಳನ್ನು ಗುರುತಿಸಲು ತ್ರಿಶೂಲದೊಂದಿಗೆ ಕೆಲವು ವಿಷಯಗಳನ್ನು ಸೇರಿಸಿದರೆ ಮುಸ್ಲಿಮರಿಂದ ಆಕ್ಷೇಪವಿರುವುದಿಲ್ಲ. ಸರಕಾರಿ ಆಸ್ತಿಯ ಮೇಲೆ ಕೇವಲ ಒಂದೇ ಧರ್ಮದ ಗುರುತನ್ನು ಅಳವಡಿಸಿದನ್ನು ಪ್ರತಿಯೊಬ್ಬ ವ್ಯಕ್ತಿಯೂ ವಿರೋಧಿಸುತ್ತಾನೆ.
2. ನಮ್ಮ ದೇಶ ‘ಪ್ರಜಾಪ್ರಭುತ್ವ ದೇಶ’ವಾಗಿದೆ, ಅದು ಯಾವುದೇ ನಿರ್ದಿಷ್ಟ ಧರ್ಮದ ಅನುಯಾಯಿಗಳ ದೇಶವಲ್ಲ. (ಹಿಂದೂಗಳ ಧರ್ಮದ ಪ್ರಕಾರ ಸರಕಾರ ಏನನ್ನಾದರೂ ಮಾಡಿದಾಗ, ಮುಸ್ಲಿಮರಿಗೆ ಭಾರತ ‘ಜಾತ್ಯತೀತ ದೇಶ’ ಎಂದು ನೆನಪಾಗುತ್ತದೆ; ಆದರೆ ತಮ್ಮದೇ ಧರ್ಮಕ್ಕಾಗಿ ವಿವಿಧ ಬೇಡಿಕೆಗಳನ್ನು ಮಾಡುವಾಗ ಅವರಿಗೆ ಈ ವಿಷಯ ನೆನಪಿಗೆ ಬರುವುದಿಲ್ಲ ? – ಸಂಪಾದಕರು) ಸಂವಿಧಾನವು ಎಲ್ಲರಿಗೂ ಗೌರವವನ್ನು ನೀಡುವ ಬಗ್ಗೆ ತಿಳಿಸುತ್ತದೆ.(ಇದಕ್ಕಾಗಿಯೇ ದೇಶದಲ್ಲಿ ಸಮಾನ ನಾಗರಿಕ ಕಾನೂನನ್ನು ಮಾಡಬೇಕೆಂದು ಮೌಲಾನಾ ಈಗ ಒಪ್ಪಿಕೊಳ್ಳಬೇಕು ! – ಸಂಪಾದಕರು) ಮಹಾನಗರಪಾಲಿಕೆಯು ಒಂದೇ ಧರ್ಮವನ್ನು ಪ್ರತಿಪಾದಿಸಿದರೆ ಅದು ಎಲ್ಲರ ಮನಸ್ಸು ನೋಯಿಸುತ್ತದೆ. (ಕಳೆದ 8 ದಶಕಗಳಿಂದ ಭಾರತದಲ್ಲಿ ಒಂದು ಧರ್ಮದ ಪ್ರಚಾರದಿಂದ ಹಿಂದೂಗಳಿಗೆ ನೋವಾಗುತ್ತಿರುವುದನ್ನು ಮೌಲಾನಾ ಅವರಿಗೆ ಕಾಣಿಸಲಿಲ್ಲವೇ ? – ಸಂಪಾದಕರು) ಮಹಾನಗರಪಾಲಿಕೆಯಾಗಿರಲಿ ಅಥವಾ ಯಾವುದೇ ಸರಕಾರಿ ಆಸ್ತಿಯಾಗಿರಲಿ, ಅದರ ಮೇಲೆ ಎಲ್ಲಾ ಧರ್ಮದ ಅನುಯಾಯಿಗಳಿಗೆ ಅಧಿಕಾರವಿದೆ. (ತಮ್ಮ ಅನುಕೂಲಕ್ಕೆ ಅನುಗುಣವಾಗಿ ಅಂಶಗಳನ್ನು ನೆನಪಿಸಿಕೊಳ್ಳುವ ಮುಸ್ಲಿಂ ಧರ್ಮಗುರುಗಳು ! – ಸಂಪಾದಕರು)
3. ಮಹಾನಗರಪಾಲಿಕೆಯ ಮೇಯರ್ ಡಾ. ಉಮೇಶ ಗಾಯತಮ ಅವರನ್ನು ಮುಸ್ಲಿಮರು ಇಷ್ಟಪಡುತ್ತಾರೆ. ಅವರು ಭಾಜದ ಮೊದಲ ವ್ಯಕ್ತಿಯಾಗಿದ್ದು, ಅವರಿಗೆ ಮುಸ್ಲಿಮರೂ ಮತವನ್ನು ಹಾಕುತ್ತಾರೆ. ಅವರು ಪಕ್ಷಪಾತ ಧೋರಣೆ ಅನುಸರಿಸಬಾರದು. ಪ್ರಧಾನಿ ನರೇಂದ್ರ ಮೋದಿಯವರ ‘ಸಬಕಾ ಸಾಥ್, ಸಬಕಾ ವಿಕಾಸ್, ಸಬಕಾ ವಿಶ್ವಾಸ್’ ಘೋಷಣೆಯಂತೆ ನಾವು ನಡೆದುಕೊಳ್ಳಬೇಕು. ಒಂದು ನಿರ್ದಿಷ್ಟ ಧರ್ಮದ ಪ್ರಚಾರದ ಸೂತ್ರವಿದ್ದರೆ, ಇತರ ಧರ್ಮದ ಅನುಯಾಯಿಗಳ ಬಗ್ಗೆ ಡಾ. ಉಮೇಶ ಗಾಯತಮ್ ಮೇಲೆ ಅವಿಶ್ವಾಸ ಮೂಡಬಹುದು. (ಮುಸ್ಲಿಮನೊಬ್ಬ ಉನ್ನತ ಸ್ಥಾನಕ್ಕೆ ಬಂದಾಗ ಮೊದಲು ತನ್ನ ಸ್ವಂತ ಧರ್ಮ ಮತ್ತು ಧರ್ಮ ಬಾಂಧವರ ಬಗ್ಗೆ ಯೋಚಿಸುತ್ತಾನೆ, ಅದರ ಬಗ್ಗೆ ಮೌಲಾನಾ ಏಕೆ ಮಾತನಾಡುವುದಿಲ್ಲ ? – ಸಂಪಾದಕರು)
ಸಂಪಾದಕೀಯ ನಿಲುವು
|