ನವ ದೆಹಲಿ – ಕಾಂಗ್ರೆಸ್‌ನ ಸಂಸದೆ ಪ್ರಿಯಾಂಕ ವಾಡ್ರಾ ‘ಪ್ಯಾಲೆಸ್ಟೈನ್’ ಎಂದು ಬರೆದಿರುವ ಕೈಚೀಲ ತೆಗೆದುಕೊಂಡು ಸಂಸತ್ತಿಗೆ ಬಂದಿದ್ದರು. ಅವರ ಈ ಛಾಯಾಚಿತ್ರ ಬೆಳಕಿಗೆ ಬಂದಿದೆ. ಪ್ರಿಯಾಂಕ ವಾಡ್ರಾ ಇವರು ‘ಪ್ಯಾಲೆಸ್ಟೈನ್’ಗೆ ಬೆಂಬಲ ನೀಡುವುದು ಇದೇನು ಮೊದಲಲ್ಲ. ಇತ್ತೀಚಿಗೆ ಅವರು ಭಾರತದಲ್ಲಿನ ಪ್ಯಾಲೆಸ್ಟೈನ್ ನ ರಾಯಭಾರಿ ಅಬೇದ ಎಲರಾಜೆಗ್ ಅಬೂ ಜಾಝರ್ ಇವರನ್ನು ಭೇಟಿ ಮಾಡಿದ್ದರು. ವೈನಾಡ್ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕ ವಾಡ್ರಾ ಇವರ ಗೆಲುವಿನ ಕುರಿತು ಪ್ಯಾಲೆಸ್ಟೈನ್ ನ ರಾಯಭಾರಿ ಅಬೂ ಜಾಝರ್ ಇವರು ಅವರನ್ನು ಅಭಿನಂದಿಸಿದ್ದರು. ರಾಯಭಾರಿ ಅಬೂ ಜಾಝರ್ ಇವರ ಜೊತೆಯ ಭೇಟಿಯಲ್ಲಿ ಪ್ರಿಯಾಂಕ ಮಾಡ್ರಾ ಇವರು ಪ್ಯಾಲೆಸ್ಟೈನ್ ಗೆ ಬೆಂಬಲ ಸೂಚಿಸಿದ್ದರು. ಅವರು, ‘ನಾನು ಬಾಲ್ಯದಿಂದಲೂ ಪ್ಯಾಲೆಸ್ಟೈನ್ ನ ಹಿತಕ್ಕಾಗಿ ಬದುಕುತ್ತಿದ್ದೇನೆ ಮತ್ತು ಅವರ ನ್ಯಾಯದ ಮೇಲೆ ವಿಶ್ವಾಸವಿದೆ’, ಎಂದು ಹೇಳಿದರು.
Priyanka Vadra arrives in Parliament carrying a bag inscribed with ‘Palestine’!
❓ Will Priyanka Vadra, who expresses sympathy for #Palestine, ever raise her voice for #KashmiriHindus or Hindus in Bangladesh? 🕉️🗣️#Congress #Wayanad pic.twitter.com/gsaxIKPb4i
— Sanatan Prabhat (@SanatanPrabhat) December 16, 2024
ಸಂಪಾದಕೀಯ ನಿಲುವುಪ್ಯಾಲೆಸ್ಟೈನ್ ಬಗ್ಗೆ ಸಹಾನುಭೂತಿ ಇರುವ ಪ್ರಿಯಾಂಕ ವಾಡ್ರಾ ಎಂದಾದರೂ ಕಾಶ್ಮೀರಿ ಹಿಂದುಗಳ ಬಗ್ಗೆ ಬಾಂಗ್ಲಾದೇಶದಲ್ಲಿನ ಹಿಂದುಗಳ ಬೆಂಬಲದ ಬಗ್ಗೆ ಏನಾದರೂ ಮಾತನಾಡುವರೇ ? |