ಬಾಬರನು ಅಯೋಧ್ಯೆಯಲ್ಲಿ ಏನು ಮಾಡಿದ್ದನೋ, ಅದೇ ಸಂಭಲ್‌ನಲ್ಲಿ ನಡೆದಿದೆ, ಅದೇ ಬಾಂಗ್ಲಾದೇಶದಲ್ಲೂ ಆಗುತ್ತಿದೆ ! – ಯೋಗಿ ಆದಿತ್ಯನಾಥ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ಪಷ್ಟ ಸಂದೇಶ

ಅಯೋಧ್ಯೆ (ಉತ್ತರ ಪ್ರದೇಶ) – 500 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ಬಾಬರ್‌ನ ಜನರು ಏನು ಮಾಡಿದರು ಎಂಬುದು ನಿಮಗೆ ನೆನಪಿದೆಯೇ ? (ಶ್ರೀರಾಮ ಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಯಿತು) ಸಂಭಲ್‌ನಲ್ಲಿಯೂ ಅದೇ ಸಂಭವಿಸಿದೆ. (ಜಾಮಾ ಮಸೀದಿಯನ್ನು ಹರಿಹರ ದೇವಸ್ಥಾನದ ಮೇಲೆ ನಿರ್ಮಿಸಲಾಯಿತು. ಬಾಂಗ್ಲಾದೇಶದಲ್ಲಿ ಅದೇ ಆಗುತ್ತಿದೆ. (ಹಿಂದೂಗಳ ದೇವಾಲಯಗಳನ್ನು ಧ್ವಂಸ ಮಾಡಲಾಗುತ್ತಿದೆ) ಈ ಮೂರು ಅಂಶಗಳ ಸ್ವರೂಪ ಮತ್ತು ಡಿ.ಎನ್.ಎ. (ಡಿಯೋಕ್ಸಿರೈಬೋನ್ಯೂಕ್ಲಿಕ್ ಆಮ್ಲ) ಒಂದೇಯಾಗಿದೆ. ಬಾಂಗ್ಲಾದೇಶದಲ್ಲಿ ಇದು ನಡೆಯುತ್ತಿದೆ ಎಂದು ಯಾರಿಗಾದರೂ ಅನ್ನಿಸಿದರೆ, ಅದೇ ಅಂಶಗಳು ಇಲ್ಲಿಯೂ ಸಂಭವಿಸಲು ಕಾಯುತ್ತಿವೆ, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಲ್ಲಿ ಹೇಳಿದರು. ಇಲ್ಲಿ 4 ದಿನಗಳ ರಮಾಸಣ ಮೇಳದ ಉದ್ಘಾಟನೆಯ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಸರಯೂ ದಡದಲ್ಲಿರುವ ರಾಮಕಥಾ ಉದ್ಯಾನದಲ್ಲಿ ಡಿಸೆಂಬರ್ 5 ರಿಂದ 8 ರವರೆಗೆ ಜಾತ್ರೆ ನಡೆಯುತ್ತಿದೆ.

ಸಂಪಾದಕೀಯ ನಿಲುವು

ಮತಾಂಧ ಮನಸ್ಥಿತಿಯ ಜನರಿಗೆ ಎಂದಿಗೂ ಭ್ರಾತೃತ್ವ ನಿರ್ಮಾಣ ಆಗುವುದಿಲ್ಲ ಏಕೆಂದರೆ ಸರ್ವಧರ್ಮ ಸಮಭಾವ ಇರುವುದಿಲ್ಲ. ಅಂತಹವರಿಗೆ ಅವರ ಸ್ಥಾನವನ್ನು ತೋರಿಸುವದಕ್ಕಾಗಿ ಹಿಂದೂಗಳು ಯಾವಾಗಲೂ ಎಚ್ಚರವಾಗಿರುವುದು ಅವಶ್ಯಕವಾಗಿದೆ !