ಡೊನಾಲ್ಡ ಟ್ರಂಪ್ ಅಧ್ಯಕ್ಷರಾಗುವುದಕ್ಕೂ ಮುನ್ನ ಭಾರತೀಯ ವಿದ್ಯಾರ್ಥಿಗಳು ಅಮೇರಿಕಾಗೆ ಹಿಂದಿರುಗಬೇಕು !

ಅಮೇರಿಕಾದಲ್ಲಿನ ವಿಶ್ವವಿದ್ಯಾಲಯಗಳಿಂದ ಕರೆ

ವಾಷಿಂಗ್ಟನ್ – ಜನವರಿ 20 ರಂದು ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗುವ ಮೊದಲು ಭಾರತೀಯರು ಸೇರಿದಂತೆ, ವಿದೇಶಿ ವಿದ್ಯಾರ್ಥಿಗಳು ತಮ್ಮ ಚಳಿಗಾಲದ ರಜೆಗಳನ್ನು ಮುಗಿಸಿ ಅಮೇರಿಕಾಗೆ ಹಿಂದಿರುಗಬೇಕು ಎಂದು ವಿವಿಧ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಕರೆ ನೀಡಿವೆ. ಇದು ಸಂಭಾವ್ಯ ಪ್ರಯಾಣ ನಿರ್ಬಂಧಗಳನ್ನು ತಪ್ಪಿಸಲು ಮತ್ತು ದೇಶವನ್ನು ಪ್ರವೇಶಿಸುವಲ್ಲಿ ಆಗುವ ಕಠಿಣ ತಪಾಸಣೆಯಿಂದ ಮುಕ್ತರಾಗುವ ಉದ್ದೇಶದಿಂದ ಈ ರೀತಿ ಕರೆ ನೀಡಲಾಗಿದೆಯೆಂದು ವಿದ್ಯಾರ್ಥಿಗಳಿಗೆ ಹೊರಡಿಸಲಾದ ಸೂಚನೆಗಳಲ್ಲಿ ಹೇಳಲಾಗಿದೆ. ಡೊನಾಲ್ಡ ಟ್ರಂಪ್ ಅಧಿಕಾರಕ್ಕೆ ಪುನರಾಗಮಿಸಿದಾಗ ಜನರಿಗೆ ಅಮೇರಿಕಾಗೆ ಹೋಗುವುದು ಕಷ್ಟಸಾಧ್ಯವಾಗುವುದೆಂದು ತಿಳಿಯಲಾಗುತ್ತಿದೆ.

1. ಅಮೆರಿಕದ ಇತಿಹಾಸದಲ್ಲಿ ಅಕ್ರಮ ವಲಸಿಗರನ್ನು ಹಿಂದಕ್ಕೆ ಕಳುಹಿಸಲು ಅತ್ಯಂತ ದೊಡ್ಡ ಸಾಮೂಹಿಕ ಅಭಿಯಾನವನ್ನು ನಡೆಸುವುದಾಗಿ ಟ್ರಂಪ ಎಚ್ಚರಿಕೆಯನ್ನು ನೀಡಿದ್ದಾರೆ.

2. ಸಕ್ರಮ ವೀಸಾ ಹೊಂದಿರುವ ಭಾರತೀಯ ವಿದ್ಯಾರ್ಥಿಗಳ ಮೇಲೆ ಇದರಿಂದ ಯಾವುದೇ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಇದ್ದರೂ ಅಪಾಯಕ್ಕೆ ಒಳಪಡಬೇಡಿ ಎಂದು ವಿಶ್ವವಿದ್ಯಾಲಯ ಆಡಳಿತವು ಹೇಳಿದೆ.

3. ಟ್ರಂಪ್ ಅವರ ಪುನರಾಗಮನದ ಮೊದಲು ಕೆಲವು ಶೈಕ್ಷಣಿಕ ಸಂಸ್ಥೆಗಳು ತಮ್ಮ ಅಧ್ಯಯನ ಕಾರ್ಯಕ್ರಮವನ್ನು ಬದಲಾಯಿಸಿವೆ. ಓರೆಗನ್ ರಾಜ್ಯದ ಸಾಲೆಮ್ ನಲ್ಲಿನ ವಿಲಾಮೆಟ್ ವಿಶ್ವವಿದ್ಯಾಲಯದ ಡೇಟಾ ವಿಜ್ಞಾನದಲ್ಲಿನ ಸ್ನಾತಕೋತ್ತರ ವಿದ್ಯಾರ್ಥಿಯು ಮಾತನಾಡಿ, ಅವರ ತರಗತಿಗಳು ಸಾಮಾನ್ಯವಾಗಿ ವರ್ಷದ ಮೊದಲ ವಾರದ ನಂತರ ಆರಂಭವಾಗುತ್ತವೆ; ಆದರೆ ಈ ಬಾರಿ ಹೊಸ ಶೈಕ್ಷಣಿಕ ಸೆಷನ್ ಜನವರಿ 2 ರೀದ ಆರಂಭವಾಗುತ್ತಿದೆ ಎಂದು ಹೇಳಿದ್ದಾನೆ.